Subscribe to Updates
Get the latest creative news from FooBar about art, design and business.
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
- ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ
- ತುಮಕೂರು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
- ಸಾಗುವಳಿದಾರ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಆರೋಪ; ಕೆಪಿಟಿಸಿಎಲ್ ಖಾಸಗೀಕರಣಕ್ಕೆ ತೀವ್ರ ಆಕ್ರೋಶ
- ಕದ್ದ ಹಣದಲ್ಲಿ ದಂಪತಿ ಮೋಜು–ಮಸ್ತಿ: ಕೊನೆಗೂ ಕುಣಿಗಲ್ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಜೋಡಿ!
- ಏಕಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ಜಾಗೃತಿ ಹಾಗೂ ಆರೋಗ್ಯ ಶಿಕ್ಷಣ
- ಸರಗೂರು: ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
Author: admin
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ನಡೆದ ಎಲ್ಲಾ ನೇಮಕಾತಿ ಪರೀಕ್ಷೆಗಳು ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಾಕ್ಷಿಯಾಗಿವೆ. ಇದರ ನೇರ ಪರಿಣಾಮ ಅನುಭವಿಸಿದ್ದು ನಮ್ಮ ನಾಡಿನ ಲಕ್ಷಾಂತರ ಉದ್ಯೋಗಕಾಂಕ್ಷಿ ಯುವಕರು. ಇದನ್ನು ತಡೆಗಟ್ಟಲು, ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಅನೇಕ ಕ್ರಮಗಳ ಅನಿವಾರ್ಯತೆಯಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿನ ಭ್ರಷ್ಟಾಚಾರವನ್ನ ತಡೆಯಲು ಸದನದಲ್ಲಿಂದು ಖಾಸಗಿ ಮಸೂದೆಯನ್ನ ಜಾರಿಗೆ ತರಲು ಸಭಾಪತಿಗಳಿಗೆ ಸಲ್ಲಿಸಿದ್ದೇನೆ. ಇದರ ಅವಶ್ಯಕತೆ ಲೂಟಿ ಹೊಡೆಯಲೇ ಬಂದಿರುವ ಸರ್ಕಾರಕ್ಕೆ ಇಲ್ಲದಿರಬಹುದು, ಆದರೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನಮ್ಮ ಯುವಕರಿಗೆ, ಸುಗಮ ಹಾಗೂ ಸ್ಪೂರ್ತಿ ತುಂಬಿದ ಆಡಳಿತ ಬಯಸುತ್ತಿರುವ ಜನ ಸಾಮಾನ್ಯರಿಗೆ ಖಂಡಿತ ಇದೆ ಎಂದು ಅವರು ಹೇಳಿದ್ದಾರೆ. ನಮ್ಮ ನಾಡಿನ ಯುವಕರಿಗೆ ನ್ಯಾಯಯುತವಾಗಿ ಉದ್ಯೋಗ ಕಲ್ಪಿಸಲು ಸರ್ವ ಪ್ರಯತ್ನಗಳನ್ನೂ ನಾನು ನನ್ನ ಕ್ಷಮತೆ ಮೀರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ‘ಕಾಂಗ್ರೆಸ್ ವಿಷನ್ 2023’ ವೆಬ್ ಸೈಟ್ ಅನ್ನು ಗುರುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ ಅವರು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಪ್ರೋ. ರಾಧಾಕೃಷ್ಣ, ಮಧು ಬಂಗಾರಪ್ಪ, ಸಮಿತಿಯ ಸದಸ್ಯರಾದ ಹುಸೇನ್ ಹಾಗೂ ರಾಜು ಗೌಡ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ‘ನಾವು ಆಡಳಿತಕ್ಕೆ ಬಂದರೆ ಜನರಿಗೆ ಏನು ಕೊಡುತ್ತೇವೆ ಎಂಬ ಭರವಸೆಗಳನ್ನು ತಿಳಿಸುವುದು ಬಹಳ ಮುಖ್ಯ. ಆ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಬಾರಿ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತಿಳಿಸುತ್ತದೆ. ನಾವು ಕೊಟ್ಟ ಭರವಸೆಗಳು ಈಡೇರಿಸುವ ಭರವಸೆಗಳು. ನಾವು ಕೊಡುವ ಭರವಸೆ ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ವಿಭಿನ್ನವಾಗಿ ನಡೆದುಕೊಳ್ಳುತ್ತದೆ. 2013ರಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುವ ಮುನ್ನ ರಾಜ್ಯದ ಜನತೆಗೆ 160 ಭರವಸೆಗಳನ್ನು ನೀಡಿದ್ದೆವು. ಆ…
ಬೆಳಗಾವಿ : ಕಳಸಾ ಬಂಡೂರಿ ಯೋಜನೆಗೆ ಅಂತಿಮವಾಗಿ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ದೊರೆತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 1988ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಅಂದಿನ ಮುಖ್ಯಮಂತ್ರಿ ರಾಣೆ ಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರ ಗೋವಾದಲ್ಲಿ ಬಂದ ಸರ್ಕಾರಗಳು ಇದನ್ನು ಕಾರ್ಯಗತಗೊಳಿಸದೆ ವಿರೋಧಿಸಿದ್ದರು. ಒಟ್ಟಾರೆ ಮಹದಾಯಿ ಯೋಜನೆಗೆ ಮೊದಲು ಚಿಂತನೆ ಮಾಡಿದ್ದು ಬದಾಮಿ ಶಾಸಕ ಬೆಟಗೇರಿ ಹಾಗೂ ಆರ್.ಟಿ. ದೇಸಾಯಿಯವರು. ಬೆಟಗೇರಿ ಯವರು ಬದಾಮಿಯಿಂದ ಪಾದಯಾತ್ರೆ ಮಾಡಿದ್ದರು. ನಂತರ ಕರ್ನಾಟಕಕ್ಕೆ ನೀರು ಮತ್ತು ಅವರಿಗೆ ವಿದ್ಯುತ್ ನೀಡುವುದು ಎಂದಾಗಿತ್ತು. ಇದು ಮೂಲ ಕೆಪಿಸಿ ಆರಂಭಿಸಿದ ಯೋಜನೆ. ನಂತರ ನಮಗೆ ನೀರಿನ ಕೊರತೆಯಾಗುತ್ತಿತ್ತು ಎಂದರು. ಮಲಪ್ರಭಾ ನದಿ ಕಾಕಂಬಿಯಲ್ಲಿ ಹುಟ್ಟಿ, ಮಹದಾಯಿ ನದಿಗೆ ತಿರುವು ನೀಡಬೇಕೆಂದು ನಿರ್ಧಾರವಾಗಿತ್ತು. ಮುಂದೆ ವಿರೋಧ ಎದುರಾದಾಗ ನಂತರ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿತ್ತು. ಹೆಚ್.ಕೆ.ಪಾಟೀಲ ಅವರು ಆಗ ನೀರಾವರಿ ಸಚಿವರಾಗಿದ್ದರು. ಅದಕ್ಕೂ…
ಹಣದ ಮೌಲ್ಯವನ್ನು ತಿಳಿದುಕೊಳ್ಳಲು ಮಕ್ಕಳನ್ನು ಬೆಳೆಸುವುದು ಅತ್ಯಗತ್ಯ. ಆದರೆ ಮಕ್ಕಳಲ್ಲಿ ಉಳಿತಾಯದ ಹವ್ಯಾಸವನ್ನು ಹೇಗೆ ಬೆಳೆಸಬೇಕು. ಅನೇಕರು ಮುಖ್ಯವಾಗಿ ಪಾಕೆಟ್ ಮನಿ ಇತ್ಯಾದಿಗಳನ್ನು ಪಾವತಿಸದೆ ಮಾಡುತ್ತಾರೆ. ಆದರೆ ಇದು ಪರಿಣಾಮಕಾರಿ ಮಾರ್ಗವಲ್ಲ. ಎಲ್ಲಾ ಹೂಡಿಕೆಗಳನ್ನು ಕೇವಲ ಗಳಿಸುವವರ ಹೆಸರಿನಲ್ಲಿ ಹೂಡಿಕೆ ಮಾಡುವ ಬದಲು ಸಂಗಾತಿಯ ಮತ್ತು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೇ ಮಕ್ಕಳಿಗೆ ಪಾಕೆಟ್ ಮನಿ ನೀಡಬೇಕು. ಈ ಬಗ್ಗೆ ಪೆಂಟಾಡ್ ಸೆಕ್ಯುರಿಟೀಸ್ ನ ಸಿಇಒ ನಿಖಿಲ್ ಗೋಪಾಲಕೃಷ್ಣನ್ ಟ್ವೆಂಟಿಫೋರ್ ಗೆ ಮಾತನಾಡಿ, ಮಕ್ಕಳಲ್ಲಿ ಉಳಿತಾಯದ ಹವ್ಯಾಸವನ್ನು ಬೆಳೆಸಲು ಇದು ಉತ್ತಮ ಮಾರ್ಗವಾಗಿದೆ. ಮಕ್ಕಳು ತಮ್ಮ ಪಾಕೆಟ್ ಮನಿಯಲ್ಲಿ ಶೇಕಡಾ 10ರಷ್ಟು ಉಳಿಸಲು ಹೇಳಬೇಕು ಎನ್ನುತ್ತಾರೆ. ಕೆಲವು ವರ್ಷಗಳ ನಂತರ ಈ ಅಲ್ಪ ಹಣ ಲಕ್ಷಗಳಾಗಬಹುದು. ಜೀರೋ ಬ್ಯಾಲೆನ್ಸ್ ಮಾತ್ರ ನೋಡುವ ಅಭ್ಯಾಸವಿರುವ ಮಕ್ಕಳು ಆರು ಬ್ಯಾಂಕ್ ಬ್ಯಾಲೆನ್ಸ್ ಕಂಡರೆ ಎಚ್ಚೆತ್ತುಕೊಳ್ಳುತ್ತಾರೆ. ಉಳಿತಾಯ ಕಡಿಮೆಯಾಗಬಾರದು ಎಂಬುದು ಅವರ ಮನದಾಳದಲ್ಲಿರುತ್ತದೆ. ತುರ್ತು ನಿಧಿಯನ್ನು ಸಂಗ್ರಹಿಸಲು ಮಕ್ಕಳಿಗೆ ತರಬೇತಿ ನೀಡಬಹುದು. ಮಕ್ಕಳಿಗೆ ನೂರು…
ಮೊಟ್ಟೆಯ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಹಾಗಂತ ಅತೀಯಾಗಿ ಸೇವನೆ ಮಾಡಿದ್ರೆ, ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆ ಮುಖ್ಯವಾದ ಕಾರಣಗಳೇನು ಅನ್ನೋದನ್ನು ತಿಳಿಯೋಣ. ಮೊಟ್ಟೆಯಲ್ಲಿ ಬಿಳಿ ಹಾಗೂ ಹಳದಿ ಬಣ್ಣದ ಎರಡು ಅಂಶಗಳಿವೆ. ಬಿಳಿ ಭಾಗವು ಪ್ರೋಟೀನ್ ಆಗಿದ್ದರೆ, ಹಳದಿ ಬಣ್ಣವು ಕೊಲೆಸ್ಟ್ರಾಲ್ ಆಗಿದೆ. ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ 4 ರಿಂದ 5 ಗ್ರಾಂ ಪ್ರೋಟೀನ್ ಸಿಗುತ್ತದೆ. ಹಳದಿ ಭಾಗದಲ್ಲಿ 6 ಗ್ರಾಂನಷ್ಟು ಕೊಬ್ಬು ಮತ್ತು ಸುಮಾರು ಒಂದು ಗ್ರಾಂ ಪ್ರೋಟೀನ್ ಇರುತ್ತದೆ. ಒಂದು ಮೊಟ್ಟೆಯನ್ನು ತಿಂದರೆ 5 ರಿಂದ 6 ಗ್ರಾಂ ಪ್ರೋಟೀನ್ ಮತ್ತು 6 ಗ್ರಾಂ ಕೊಬ್ಬು ಸಿಗುತ್ತದೆ. ಒಂದು ಮೊಟ್ಟೆಯಲ್ಲಿರೋ ಹಳದಿ ಭಾಗವು 95 ಮಿಗ್ರಾಂ ಕೊಲೆಸ್ಟ್ರಾಲ್ ನ್ನು ಹೊಂದಿದೆ. ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ ಕೊಲೆಸ್ಟ್ರಾಲ್ ಸೇವನೆ 200 ಮಿಲಿಗ್ರಾಂಗಿಂತಲೂ ಕಡಿಮೆ ಇರಬೇಕು. ಆದರೆ ಪ್ರತಿ ದಿನ 5ಕ್ಕಿಂತ ಹೆಚ್ಚು ಬಿಳಿ ಹಾಗೂ ಹಳದಿ ಭಾಗವನ್ನು ಸೇರಿಸಿ ಮೊಟ್ಟೆ ಸೇವನೆ ಮಾಡುವುದು ಅಪಾಯಕಾರಿಯಾಗಿದೆ. ಪ್ರತಿದಿನ 5…
ಜನವರಿ ವೇಳೆಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ. ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದೆ, ಏಷ್ಯಾದಲ್ಲಿ ವ್ಯಾಪಕವಾಗಿ ಹರಡಿದ ಕೋವಿಡ್ 30-35 ದಿನಗಳ ನಂತರ ಭಾರತದಲ್ಲಿ ಕೋವಿಡ್ ಅಲೆ ಸಂಭವಿಸಿದೆ. ಹತ್ತು ದಿನಗಳ ಹಿಂದೆ ಚೀನಾದಲ್ಲಿ ಹೊಸ ಕೋವಿಡ್ ಅಲೆ ತನ್ನ ಎಲ್ಲಾ ಉಗ್ರತೆಯಿಂದ ಹರಡಿತು. ಹೀಗಾಗಿ ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ. ಚೀನಾದಲ್ಲಿ ಕೋವಿಡ್ ಎರಡು ಕಾರಣಗಳಿಂದ ಹರಡಿತು. ಒಂದು, ನೈಸರ್ಗಿಕ ಸೋಂಕಿಗೆ ಜನರು ಒಡ್ಡಿಕೊಳ್ಳುವುದು ತುಂಬಾ ಕಡಿಮೆ. ಇನ್ನೊಂದು ಕಡಿಮೆ ವ್ಯಾಕ್ಸಿನೇಷನ್ ದರಗಳು.ಆದರೆ ಬಿಎಫ್ 7 ನಿಂದ ಭಾರತಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೈರಾಲಜಿಸ್ಟ್ ಗಂಗಾದೀಪ್ ಕಾಂಗ್ ಹೇಳುತ್ತಾರೆ. ಭಾರತದಲ್ಲಿ ಈಗಾಗಲೇ ಅನೇಕ ಓಮಿಕ್ರಾನ್ ರೂಪಾಂತರಗಳಿವೆ. ಇವೆಲ್ಲವುಗಳಿಂದ ಭಾರತೀಯ ಜನರು ನಿರೋಧಕರಾಗಿದ್ದಾರೆ. ಮತ್ತು ಭಾರತದಲ್ಲಿ 90 ಪ್ರತಿಶತ ಜನರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಕೋವಿಡ್‌ನ ಹೊಸ…
ಬೆಳಗಾವಿ : ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿರುವ ಅವೈಜ್ಞಾನಿಕ ರಸ್ತೆ ಹಂಪ್ಸ್ ಗಳನ್ನು ಎಲ್ಲರ ಸಹಕಾರದೊಂದಿಗೆ ತೆಗೆಸಲು ಕ್ರಮ ವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು. ವಿಧಾನ ಮಂಡಳದಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ ಪ್ರಮುಖ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಹಂಪ್ಸ್ ಗಳನ್ನು ಹಾಕಲಾಗಿದ್ದು ಅವುಗಳಿಗೆ ಬಣ್ಣ ಬಳಿಯುವುದಾಗಲಿ, ಸೂಚನಾ ಫಲಕವಾಗಲಿ ಇಲ್ಲದಿರುವದರಿಂದ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಅನೇಕ ಗ್ರಾಮಗಳಲ್ಲಿ ಗ್ರಾಮಸ್ಥರ ಒತ್ತಾಯದಿಂದ ರಸ್ತೆಗಳನ್ನು ಹಂಪ್ಸ್ ಗಳನ್ನು ಹಾಕಲಾಗಿರುತ್ತದೆ. ಎಷ್ಟೋ ಕಡೆ ಶಾಸಕರ ಒತ್ತಾಯದಿಂದಲೂ ರಸ್ತೆ ಹಂಪ್ಸ್ ಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ಅವುಗಳನ್ನು ತೆಗೆಯಿಸಲು ಪ್ರಯತ್ನಿಸಲಾಗುವುದು ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ವೀರ್ ಸಾವರ್ಕರ್ ಫೋಟೋ ಬಳಕೆ ವಿಚಾರ ಗಲಾಟೆ, ಹೋರಾಟಕ್ಕೆ ಕಾರಣವಾಗಿತ್ತು. ಅಲ್ಲದೆ ಇತ್ತೀಚೆಗೆ ಬಿಜೆಪಿ ಸರ್ಕಾರ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ ಮಾಡಿತ್ತು.ಈ ಬಗ್ಗೆ ಪರೋಕ್ಷವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಸದ್ಯ ಈಗ ಹಿಂಡಲಗಾ ಜೈಲಿನಲ್ಲಿಯೂ ಕೂಡ ಸಾವರ್ಕರ್ ಭಾವಚಿತ್ರವನ್ನು ಅಳವಡಿಕೆ ಮಾಡಲಾಗಿದೆ. ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸಿದ್ದಾರೆ. ಇನ್ನು ವೀರ್ ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. 1950ರ ಜುಲೈ 13ರಂದು ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ 2022-23ನೇ ಸಾಲಿನ ಪೂರಕ ಬಜೆಟ್ 8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡಿಸಿದ್ದಾರೆ.ಇನ್ನು, ರಾಜ್ಯ ಸಾರ್ವತ್ರಿಕ ಚುನಾವಣೆ ಎದುರಿಗೆ ಇದ್ದು ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ತಾತ್ಕಾಲಿಕ ಬಜೆಟ್ ಮಂಡಿಸಿದ್ದಾರೆ. ಡಿಸಾಸ್ಟರ್ ರೆಸ್ಪಾನ್ಸ್ ಫಂಡ್ಗೆ 1,396 ಕೋಟಿ ರೂ. ಮೀಸಲು, ನರೇಗಾ ಯೋಜನೆಗೆ 750 ಕೋಟಿ ರೂಪಾಯಿ ಮೀಸಲು, ಈಕ್ವಿಟಿ ಖರೀದಿಗೆ 500 ಕೋಟಿ ರೂ, ಜನರಲ್ ಅಸೆಂಬ್ಲಿ ಚುನಾವಣೆಗೆ 300 ಕೋಟಿ ರೂಪಾಯಿ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕೀಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, ಐದು ಮೆಗಾ ಹಾಸ್ಟೆಲ್ಗಳ ನಿರ್ಮಾಣಕ್ಕೆ 200 ಕೋಟಿ ರೂ. ಹಾಗೂ ಬಿಬಿಎಂಪಿಗೆ ಎರಡು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಒಂದು ಕೋಳಿ ಸಾಮಾನ್ಯವಾಗಿ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಆದರೆ ಉತ್ತರಾಖಂಡ ರಾಜ್ಯದ ಕೋಳಿಯೊಂದು 12 ಗಂಟೆಗಳಲ್ಲಿ ಏಕಕಾಲಕ್ಕೆ 31 ಮೊಟ್ಟೆಗಳನ್ನು ಇಟ್ಟಿದೆ. ಅಲ್ಮೋರಾ ಜಿಲ್ಲೆಯ ಬಸೋತ್ ಗ್ರಾಮದ ಗಿರೀಶ್ ಚಂದ್ರ ಬುಧಾನಿ ಕೋಳಿ ಸಾಕಿದ್ದಾರೆ. ಈ ಕೋಳಿ ಸಾಮಾನ್ಯವಾಗಿ ದಿನಕ್ಕೆ ಎರಡು ಮೊಟ್ಟೆಗಳನ್ನು ಇಡುತ್ತದೆ. ಆದರೆ ಇದೇ ತಿಂಗಳ 25ರಂದು ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯೊಳಗೆ 31 ಮೊಟ್ಟೆ ಇಟ್ಟಿವೆ ಎಂದು ಗಿರೀಶ್ ತಿಳಿಸಿದರು. ಗಿರೀಶ್ ಅವರ ಮನೆಗೆ ಬಂದ ಪಶುಸಂಗೋಪನೆ ಅಧಿಕಾರಿಗಳು ವಿವರ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. ಇದರಿಂದ ನೋಡಲು ಗಿರೀಶ್ ಮನೆಗೆ ಹಲವರು ಬರುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy