Author: admin

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭಯೋತ್ಪಾದನೆಯ ಭಾರಿ ಸಂಚು ಬಯಲಾಗಿದೆ. ಜಿಲ್ಲೆಯಲ್ಲಿ ಎರಡು ಅನುಮಾನಾಸ್ಪದ ದೋಣಿಗಳು ಪತ್ತೆಯಾಗಿದ್ದು, ದೋಣಿಗಳಲ್ಲಿ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸಧ್ಯ ಈ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾಯಗಢದಲ್ಲಿ ಮೊದಲನೆಯ ದೋಣಿಯನ್ನು ಶ್ರೀವರ್ಧನ್ ತೆಹಸಿಲ್‌ನ ಹರಿಹರೇಶ್ವರ ಬೀಚ್‌ನಲ್ಲಿ ಮತ್ತು ಎರಡನೆಯದು ಭರನ್ ಖೋಲ್ ದಡದಲ್ಲಿ ಪತ್ತೆಯಾಗಿವೆ.ಹರಿಹರೇಶ್ವರ ಕಡಲತೀರದಲ್ಲಿ ಪತ್ತೆಯಾದ ಬೋಟ್‌ನಲ್ಲಿ 3 ಎಕೆ-47 ಪತ್ತೆಯಾಗಿದ್ದು, ಇನ್ನೊಂದು ಬೋಟ್‌ನಲ್ಲಿ ಲೈಫ್ ಜಾಕೆಟ್‌ಗಳು ಮತ್ತು ಕೆಲವು ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.  ಸದ್ಯ ಈ ಬೋಟ್ ಗಳ ಮಾಲೀಕರು ಯಾರು, ಇಲ್ಲಿಗೆ ಹೇಗೆ ತಲುಪಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಭದ್ರತಾ ಕಂಪನಿಯೊಂದಿಗೆ ಸಂಪರ್ಕ? ಪ್ರಾಥಮಿಕ ಮಾಹಿತಿ ಪ್ರಕಾರ ಇದು ಒಮಾನ್ ದೇಶದ ಭದ್ರತಾ ಬೋಟ್ ಆಗಿದ್ದು, ರಾಯಗಢ ಕರಾವಳಿಗೆ ಬಂದಿದೆ. ಇದೀಗ ನಿರುಪಯುಕ್ತವಾಗಿರುವ ಈ ಬೋಟ್‌ನಿಂದ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಪೊಲೀಸರು…

Read More

ಕೈ ಚೀಲಕ್ಕೆ 20 ರೂ. ವಸೂಲಿ ಮಾಡಿ ಭಾರೀ ಮುಜುಗರಕ್ಕೀಡಾದ ದೈತ್ಯ ಐಕಿಯಾ! ಐಕಿಯಾ ಲೋಗೋ ಹೊಂದಿರುವ ಕ್ಯಾರಿ ಬ್ಯಾಗ್‌ಗೆ 20 ರೂ. ಶುಲ್ಕ ವಿಧಿಸಿದ್ದ ಹೈದರಾಬಾದ್‌ನ ಐಕಿಯಾ ಮಳಿಗೆಗೆ ಗ್ರಾಹಕ ನ್ಯಾಯಾಲಯ 6,000 ರೂ. ದಂಡ ವಿಧಿಸಿದೆ. 35 ವರ್ಷ ವಯಸ್ಸಿನ ಸಿಕಂದರಾಬಾದ್‌ನ ಕಾನೂನು ವಿದ್ಯಾರ್ಥಿ ಕೆವಿನ್ ಸುಕೀರ್ತಿ ಅವರು 2020ರ ಜನವರಿಯಲ್ಲಿ ಹೈದರಾಬಾದ್‌ನ ಐಕಿಯಾ ಮಳಿಗೆಗೆ ಭೇಟಿ ನೀಡಿ 1071 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಈ ವೇಳೆ ಐಕಿಯಾ ತನ್ನದೇ ಹೆಸರಿರುವ ಕೈ ಚೀಲವನ್ನು ನೀಡಿ ಅದಕ್ಕೆ 20 ರೂ. ವಸೂಲಿ ಮಾಡಿತ್ತು. ಇದರ ವಿರುದ್ಧ ಕೆವಿನ್‌ ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ಕ್ಯಾರಿ ಬ್ಯಾಗ್‌ಗೆ 20 ರೂ. ಶುಲ್ಕ ವಿಧಿಸಿದ್ದರಿಂದ ಗ್ರಾಹಕರು “ಸೇವೆಯ ಕೊರತೆಯಿಂದ ಮಾನಸಿಕ ನೋವನ್ನು ಅನುಭವಿಸಿದ್ದಾರೆ.” ಮತ್ತು ಗ್ರಾಹಕರ ವೆಚ್ಚದಲ್ಲಿ ಐಕಿಯಾ ತನ್ನ ಬ್ರ್ಯಾಂಡ್‌ನ ಹೆಸರನ್ನು ಜಾಹೀರಾತು ಮಾಡುವುದು ಅನೈತಿಕ ವ್ಯಾಪಾರ…

Read More

ಭಾರತೀಯ ಜನತಾ ಪಕ್ಷವು ಭಾರತ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಒಂದು ವೇಳೆ, ಭಾರತ ಹಿಂದೂ ರಾಷ್ಟ್ರವಾದರೆ ಇಂದು ಪಾಕಿಸ್ತಾನಕ್ಕೆ ಬಂದಿರುವ ಸ್ಥಿತಿಯೇ ನಾಳೆ ಭಾರತಕ್ಕೆ ಬರುತ್ತದೆ ಎಂದು ರಾಜಸ್ಥಾನ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಎಚ್ಚರಿಕೆ ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡುತ್ತಿರುವ ಅಶೋಕ್ ಗೆಹ್ಲೋಟ್, ಕೇವಲ ಧರ್ಮದ ಆಧಾರದ ಮೇಲೆ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಸದಾ ಕಾಲ ಯತ್ನಿಸುತ್ತಿದೆ ಎಂದು ಕಿಡಿ ಕಾರಿದರು. ಬಿಜೆಪಿ ಆಡಳಿತದ ಗುಜರಾತ್ ರಾಜ್ಯಕ್ಕೆ 2 ದಿನಗಳ ಭೇಟಿಗೆ ಆಗಮಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಸಭೆ, ಸಮಾಲೋಚನೆ ನಡೆಸಿದರು. ಮುಂದಿನ 3 ತಿಂಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ಎದುರಾಗಲಿದ್ದು, ಸಿದ್ದತೆಯ ಕುರಿತು ಅಶೋಕ್ ಗೆಹ್ಲೋಟ್ ಪರಾಮರ್ಶೆ ನಡೆಸಿದರು. ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕರ ಜೊತೆಗಿನ ಸಭೆ…

Read More

ಆನೆಗಳು ಬುದ್ಧಿವಂತ ಪ್ರಾಣಿಗಳು. ಭಾವನೆಗಳನ್ನು ತೋರಿಸುವ ಬುದ್ಧಿವಂತ ಜೀವಿಗಳು. ಇದೀಗ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆನೆಯೊಂದು ತನ್ನ ಆವರಣದೊಳಗೆ ಆಕಸ್ಮಿಕವಾಗಿ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುತ್ತದೆ. ಈ ವಿಡಿಯೋದಲ್ಲಿನ ಘಟನೆ ಚೀನಾದ ಶಾಂಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಇದನ್ನು Instagram ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ 1.3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆನೆಯು ತನ್ನ ಸೊಂಡಿಲಿನಿಂದ ಆಕಸ್ಮಿಕವಾಗಿ ತನ್ನ ಆವರಣದೊಳಗೆ ಬೀಳಿಸಿದ ಮಗುವಿನ ಶೂ ಅನ್ನು ಎತ್ತಿ ಕೊಡುತ್ತದೆ. ಆನೆಯು ತನ್ನ ಸೊಂಡಿಲಿನ ಸಹಾಯದಿಂದ ಶೂ ಅನ್ನು ಹಿಂದಿರುಗಿಸುತ್ತದೆ, ಅಲ್ಲಿ ಒಬ್ಬ ವ್ಯಕ್ತಿಯು ಈ ಹೃದಯ ಸ್ಪರ್ಶಿ ದೃಶ್ಯವನ್ನು ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಪಾದರಕ್ಷೆಯನ್ನು ಹಿಂತಿರುಗಿಸಿದ ನಂತರ, ಆನೆಯು ಮಗು ಹುಲ್ಲು ಕೊಡುವವರೆಗೂ ಕಾಯುತ್ತದೆ. ಮಗು ಹುಲ್ಲನ್ನು ನೀಡಿದ ಬಳಿಕ ತನ್ನ ಸೊಂಡಿಲನ್ನು ಹಿಂತೆಗ್ದುಕೊಳ್ಳುತ್ತದೆ. ಪೂರ್ವ ಚೀನಾದಲ್ಲಿನ ಮೃಗಾಲಯದ ಆವರಣದಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ವಿಡಿಯೋ 1.22 ಲಕ್ಷಕ್ಕೂ…

Read More

ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ‌ ಮೆಟ್ರೋದ ಎರಡನೇ ಹಂತದ ಕಾಮಗಾರಿ ವೇಗವನ್ನ ಪಡೆದುಕೊಂಡಿದೆ. ಗೊಟ್ಟಗೆರೆ ನಾಗವಾರ ಮಾರ್ಗವಾಗಿ ನಡೆಯುತ್ತಿರುವ ಸುಮಾರು 13 ಕಿ.ಮೀ ಸುರಂಗ ಕಾರ್ಯ ನಡೆಯುತ್ತಿದ್ದು 2022 ಫೆಬ್ರವರಿ 2ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿದ್ದ ವಿಂಧ್ಯಾ ಹೆಸರಿನ ಟಿಬಿಎಂ ಮಿಷನ್ ಗುರುವಾರ ಬೆಳಗ್ಗೆ 10:30ಕ್ಕೆ ತನ್ನ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿದೆ. 6 ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ್ದ ವಿಂಧ್ಯಾ; ಕೊರೊನಾದ ಬಳಿಕ ವೇಗದ ಮಿತಿ ಹೆಚ್ಚಿಸಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ನಮ್ಮ‌ ಮೆಟ್ರೋ ನಿಗಮ ಪಣತೊಟ್ಟಿದೆ. ಹೀಗಾಗಿ ಕಳೆದ ಫೆಬ್ರವರಿ 2ರಂದು ಸುರಂಗ ಪ್ರವೇಶಿದ್ದ ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನ ಕೊರೆದು ಪ್ಯಾಟರಿ ಟೌನ್ ಬಳಿ ಹೊರ ಬಂದಿದೆ. ಗೊಟ್ಟಿಗೆರೆಯಿಂದ ನಾಗವಾರದವರೆಗೆ 13 ಕಿ.ಮೀ ಸುರಂಗ ಕಾರ್ಯ: ಎರಡನೇ ಹಂತದ…

Read More

ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದ ಎಂಟು ಯೂಟ್ಯೂಬ್ ಚಾನೆಲ್‌ ಗಳನ್ನು ಬ್ಲಾಕ್ ಮಾಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ. ಇವುಗಳಲ್ಲಿ 7 ಭಾರತೀಯ ಚಾನಲ್‌ಗಳು ಮತ್ತು ಒಂದು ಪಾಕಿಸ್ತಾನಿ ಚಾನೆಲ್ ಸೇರಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೀಡಿರುವ ಮಾಹಿತಿ ಪ್ರಕಾರ, ‘ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 8 ಯೂಟ್ಯೂಬ್ ಚಾನೆಲ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬ್ಲಾಕ್ ಮಾಡಿದೆ. ಐಟಿ ನಿಯಮಗಳ ಪ್ರಕಾರ, 2021 ರ ಅಡಿಯಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ ಯೂಟ್ಯೂಬ್ ನ್ಯೂಸ್ ಚಾನಲ್‌ ಗಳನ್ನು ಬ್ಲಾಕ್ ಮಾಡಿದೆ. ಬ್ಯಾನ್ ಮಾಡಲಾದ ಯೂಟ್ಯೂಬ್ ಚಾನೆಲ್‌ಗಳು 114 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದವು, ಹಾಗೂ 85 ಲಕ್ಷ 73 ಸಾವಿರ ಸಬ್ಸ್ಕ್ರೈಬ್ ಹೊಂದಿದ್ದವು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಬೆಳಗಾವಿ : ಪಾಪಿ ಪತಿ ಚಾಕುವಿನಿಂದ ಪತ್ನಿಯ ಕತ್ತು ಕೋಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಶಬಾನಾ(28) ಹತ್ಯೆಗೈದು ಆರೋಪಿ ಪತಿ ಮೆಹಬೂಬ್ ಸಾಬ್ ಸವದತ್ತಿ ಠಾಣೆಗೆ ಶರಣಾಗಿದ್ದಾನೆ. ಬೀಡಿ ಗ್ರಾಮದ ಶಬಾನಾ ಜೊತೆ ಮುನವಳ್ಳಿ ನಿವಾಸಿ ಮೆಹಬೂಬ್‌ಸಾಬ್ ವಿವಾಹವಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶಬಾನಾ ಪತಿಯಿಂದ ದೂರವಾಗಿ, ತನ್ನ ಒಂಬತ್ತು ವರ್ಷದ ಮಗ, ಆರು ವರ್ಷದ ಮಗಳ ಜೊತೆ ಪ್ರತ್ಯೇಕವಾಗಿ ಶಬಾನಾ ಸವದತ್ತಿಯ ಅಯ್ಯಪ್ಪಸ್ವಾಮಿ ನಗರದಲ್ಲಿ ವಾಸವಿದ್ದಳು. ಇಂದು ಬೆಳಗ್ಗೆ ಮನೆಗೆ ಆಗಮಿಸಿ ಶಬಾನಾ ಜೊತೆ ಪತಿ ಮೆಹಬೂಬ್‌ಸಾಬ್ ಗಲಾಟೆ ಮಾಡಿಕೊಂಡಿದ್ದ. ಬಳಿಕ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದು ಪೊಲೀಸ್ ಠಾಣೆಗೆ ಆರೋಪಿ ಮೆಹಬೂಬ್‌ಸಾಬ್ ಶರಣಾಗಿದ್ದಾನೆ. ಸಧ್ಯ ಪೊಲೀಸರು ಶಬಾನಾ ಕುಟುಂಬಸ್ಥರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಶಬಾನಾ ಕುಟುಂಬಸ್ಥರು ಬೀಡಿ ಗ್ರಾಮದಿಂದ ಸವದತ್ತಿಗೆ ಆಗಮಿಸುತ್ತಿದ್ದಾರೆ. ಸವದತ್ತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಳಗಾವಿ: ಶಾಲಾ ಆವರಣದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ವಿದ್ಯಾರ್ಥಿಗಳು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಗುಂಪೊಂದು ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಚಂದರಗಿ – ಕಟಕೋಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಫೈನಲ್ ಪಂದ್ಯದ ವೇಳೆ ಪಾಯಿಂಟ್ಸ್ ವಿಚಾರಕ್ಕೆ ಗಲಾಟೆ ನಡೆದಿದೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪಂದ್ಯವನ್ನು ರದ್ದುಗೊಳಿಸಿ ಪೊಲೀಸರು ವಿದ್ಯಾರ್ಥಿಗಳನ್ನ ಅಲ್ಲಿಂದ ಓಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹುಬ್ಬಳ್ಳಿ: ಮಹಿಳೆಯೊಬ್ಬರ ಕಣ್ಣಿನ ಕೆಳಗೆ ಸಿಲುಕಿದ್ದ ಮುರಿದ ಟೂತ್ ಬ್ರಶ್ ವೊಂದನ್ನು ಹೊರ ತೆಗೆಯುವಲ್ಲಿ ಹುಬ್ಬಳ್ಳಿ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ 28 ವರ್ಷದ ಮಹಿಳೆಯ ಕಣ್ಣಿನಲ್ಲಿ ಮುರಿದ 7 ಇಂಚಿನ ಟೂತ್ ಬ್ರಶ್ ಕಣ್ಣಿನ ಕೆಳಗೆ ಸಿಲುಕಿತ್ತು.ಹಾವೇರಿ ಜಿಲ್ಲೆ ಹಾನಗಲ್ ಬಳಿಯ ಹಿರೂರು ಗ್ರಾಮದ ಗೃಹಿಣಿ ವಿನೋದಾ ತಳವಾರ (28) ಅವರ ನಾಲ್ಕು ವರ್ಷದ ಮಗಳು ಆಗಸ್ಟ್ 14 ರಂದು ಬೆಳಗ್ಗೆ ಹಲ್ಲು ಉಜ್ಜುವಾಗ ಇದ್ದಕ್ಕಿದ್ದಂತೆ ಟೂತ್ ಬ್ರಶ್, ಆಕೆಯ ತಾಯಿಯ ಎಡಗಣ್ಣಿನ ಕೆಳಗೆ ಸಿಲುಕಿದೆ. ನಂತರ ಕುಟುಂಬ ಸದಸ್ಯರು ಅದನ್ನು ತೆಗೆಯಲು ಪ್ರಯತ್ನಿಸಿದಾಗ ಮುರಿದಿದೆ.ಕೂಡಲೇ ಅವರು ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಮುಖದ ಸಿಟಿ ಸ್ಕ್ಯಾನ್, ಸಿಟಿ ಆಂಜಿಯೋಗ್ರಾಮ್ ಮಾಡಿದಾಗ ಕಣ್ಣಿನ ಕೆಳಗೆ ಬ್ರಶ್ ಸಿಲುಕಿರುವುದು ತಿಳಿದುಬಂದಿದೆ.ಸ್ಕ್ಯಾನ್ ವರದಿ ತನಿಖೆ ವೇಳೆ ಎಡಗಣ್ಣು ಸಂಪೂರ್ಣವಾಗಿ…

Read More

ಬೆಳಗಾವಿ : ನಗರದ ಚನ್ನಮ್ಮ ವೃತ್ತದಲ್ಲಿರುವ ವಿಶ್ವರಾಜ ಸುಗರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಇಂಗ್ಲೀಷ್ ಬರಹ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಚನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ರಾಜ್ ಶುಗರ್ಸ್ ಲಿಮಿಟೆಡ್ ಇಂಗ್ಲಿಷ್ ಬರಹ ತೆಗೆದು ಕನ್ನಡದಲ್ಲಿ ಬರೆಯಬೇಕು ಎಂದು ಪ್ರತಿಭಟಿಸಿದರು. ರಾಜಕಾರಣಿಗಳ ಸುಗರ್ ಫ್ಯಾಕ್ಟರಿ ಹೆಸರುಗಳನ್ನ ಅಳವಡಿಸಿ ರಾಜಕಾರಣ ಮಾಡುತ್ತಿದ್ದಾರೆ. ಆದಕಾರಣ ರಾಣಿ ಚೆನ್ನಮ್ಮ ವೃತನಲ್ಲಿ ಚನ್ನಮ್ಮನ ಹೆಸರಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಜಿಲ್ಲಾ ಅಧ್ಯಕ್ಷ ದೀಪಕ್ ಬುರಲಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಬಾಳಪ್ಪ ಗುಡುಗೇನಟ್ಟಿ ಹಾಗೂ ಎರಡು ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತದನಂತರ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿರುವ ಕಾರ್ಯಕರ್ತರನ್ನು ಒತ್ತಾಯ ಪೂರ್ವಕವಾಗಿ ಕಡೆ ಬಜಾರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More