Subscribe to Updates
Get the latest creative news from FooBar about art, design and business.
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
- ಅಪ್ರಾಪ್ತೆ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರನ ಬಂಧನ
- ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
- ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ: ಡಾ.ಜಿ.ಪರಮೇಶ್ವರ್
- ಚಿಕ್ಕನಾಯಕನಹಳ್ಳಿ: ತುಳುನಾಡಿನ ಪಂಜುರ್ಲಿ ದೈವಕ್ಕೆ ಭಕ್ತಿ ಸಮರ್ಪಣೆ
Author: admin
ಅಸ್ಸಾಂ:ವ್ಯಕ್ತಿಯೊಬ್ಬ ಸಹ ಗ್ರಾಮಸ್ಥರೊಬ್ಬರ ತಲೆ ಕಡಿದ ಬಳಿಕ ಕತ್ತರಿಸಿದ ತಲೆಯನ್ನು ತೆಗೆದುಕೊಂಡು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಸೋನಿಪುರ ಜಿಲ್ಲೆಯಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಹೇಮ್ರಾಮ್ ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನದಂದು ಸ್ಥಳೀಯವಾಗಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ ಇಬ್ಬರು ಸ್ನೇಹಿತರು ಆ ಪಂದ್ಯದ ಮೇಲೆ ಹಣ ಮಿಲಾಯಿಸಿದರು. ಪಂದ್ಯದಲ್ಲಿ ಸೋತವರು ವಿಜೇತರಿಗೆ 500 ರೂ ಕೊಡಬೇಕು. ಈ ವೇಳೆ ಬೆಟ್ ಗೆದ್ದ ವ್ಯಕ್ತಿ ತನಗೆ 500 ಕೊಡುವಂತೆ ಕೇಳಿದನು. ಆದರೆ ಇನ್ನೊಬ್ಬ ವ್ಯಕ್ತಿ ಹಣ ನೀಡಲು ನಿರಾಕರಿಸಿದ್ದಾನೆ. ಆದರೆ ಪದೇ ಪದೇ ಬೆಟ್ಟಿಂಗ್ ಹಣ ಕೇಳಿದಾಗ ಕೋಪಗೊಂಡ ಆರೋಪಿಯು ತನ್ನ ಬಳಿಯಿದ್ದ ಮಚ್ಚಿನಿಂದ ಹೇಮ್ರಾಮ್ ಎಂಬ ವ್ಯಕ್ತಿಯ ತಲೆಯನ್ನು ಕಡೆದಿದ್ದಾನೆ. ತಲೆಯೊಂದಿಗೆ 25 ಕಿಲೋಮೀಟರ್ ನಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಮಾರ್ ಕುಟುಂಬದ ಸದಸ್ಯರು ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವರನಟ ಡಾ. ರಾಜ್ ಕುಮಾರ್ ಸಮಾಧಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಘವೇಂದ್ರ ರಾಜ್ ಕುಮಾರ್ ಅವರು ಸಿಎಂ ಜೊತೆ ಚರ್ಚೆ ನಡೆಸಿದರು. ಇದಕ್ಕೆ ಸಂಬಂಧಪಟ್ಟಂತೆ ಸಿದ್ಧಪಡಿಸಲಾಗಿರುವ ಯೋಜನೆಯ ಪಿಪಿಟಿಯನ್ನು ಸಿಎಂ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು. ಈ ಕುರಿತು ಸಿಎಂ ಸಂಬಂಧ ಪಟ್ಟ ಅಧಿಕಾರಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ರೌಡಿಶೀಟರ್ ನಿಂದ ಮಹಿಳಾ ಹೆಡ್ ಕಾನ್ಸ್ ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವಿನುತಾ(45) ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್. ಆರೋಪಿ ರೌಡಿಶೀಟರ್ ಶೇಕ್ ಶರೀಫ್(25) ಕೃತ್ಯವೆಸಗಿದ್ದಾನೆ. ಇತ್ತೀಚೆಗೆ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮತ್ತೆ ಕೊಲೆಗೆ ಸಂಚುರೂಪಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಆತನನ್ನು ಠಾಣೆಗೆ ಕರೆದುಕೊಂಡು ಬರಲು ಆಗಸ್ಟ್ 5 ರಂದು ಹೆಡ್ ಕಾನ್ಸ್ ಟೇಬಲ್ ವಿನುತಾ ಮತ್ತು ಸಿಬ್ಬಂದಿ ಹೋಗಿದ್ದಾರೆ. ಆತ ಜ್ಯೋತಿ ನಗರದಿಂದ ರೆಡ್ಡಿಪಾಳ್ಯಕ್ಕೆ ಹೋಗಿರುವ ಮಾಹಿತಿ ಸಿಕ್ಕಿದ್ದು, ರಾತ್ರಿ 9:30ಕ್ಕೆ ಠಾಣೆಗೆ ಕರೆದುಕೊಂಡು ಹೋಗಲು ಪೊಲೀಸ್ ಸಿಬ್ಬಂದಿ ಮುಂದಾದಾಗ ಡ್ರ್ಯಾಗರ್ ನಿಂದ ಇರಿದು ಪರಾರಿಗೆ ಯತ್ನಿಸಿದ್ದಾನೆ. ಸ್ಥಳೀಯರ ನೆರವಿನಿಂದ ಆರೋಪಿಯನ್ನು ಹಿಡಿದು ಪೋಲಿಸ್ ಠಾಣೆಗೆ ಕರೆ ತರಲಾಗಿದೆ. ಗಾಯಗೊಂಡ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, ಹೆಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಟರ್ಕಿ : ಟರ್ಕಿಯ ಕಾಂತಾರ್ ಹಳ್ಳಿಯಲ್ಲಿ ಲಿಟಲ್ ಎಸ್ಇ ಎಂಬ 2 ವರ್ಷದ ಬಾಲಕಿ ಮನೆಯ ಹಿಂದಿನ ವಾರಂಡದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲೇ ಇದ್ದ. ಹಾವು ಬಾಲಕಿಯನ್ನು ಕಚ್ಚಿದೆ. ಆಗ ಬಾಲಕಿ ಆ ಹಾವಿನ ಬಾಲವನ್ನು ತಿರುಗಿ ಕಚ್ಚುವ ಮೂಲಕ ಹಾವನ್ನು ಕೊಂದಿದ್ದಾಳೆ. ಬಾಲಕಿ ಹಾವವನ್ನು ಕಚ್ಚಿದ ನಂತರ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ತುಟಿ ಅಂಚಿನಲ್ಲಿ ಹಾವಿನ ರಕ್ತ ಮತ್ತು ಬಾಯಿಯಲ್ಲಿ ಹಾವಿನ ತುಂಡನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಕೂಡಲೇ ಬಾಲಕಿಯ ತಂದೆ-ತಾಯಿಯನ್ನು ಕರೆದಿದ್ದಾರೆ. ಬಾಲಕಿಯ ಅವಸ್ತೆ ಕಂಡು ತಂದೆ-ತಾಯಿ ಕೂಡ ಆಶ್ಚರ್ಯಗೊಂಡಿದ್ದಾರೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿಯನ್ನು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು ಎಂದು UNILAD ವರದಿ ತಿಳಿಸಿದೆ. ಬಾಲಕಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಬೆಳಗಾವಿ : ಶ್ರೀಶೈಲ ಯಮನಪ್ಪ ಹಿಕ್ಕಡಿ ಇವರು ವಿಜಯಪುರ ಹಾಲಿ ಮಾದಾಪಟ್ಟಣ, ಜಿಗಣ ಹೋಬಳಿ, ಆಣೆಕಲ್ಲ ತಾಲೂಕಿನ, ಜಿಲ್ಲಾ ಬೆಂಗಳೂರು ನಗರ ಇವರ ಮಗಳು ಜ್ಯೋತಿ ಶ್ರೀಶೈಲ ಹಿಕ್ಕಡಿ ಇವಳು ತಮ್ಮೂರಾದ ವಿಜಯಪುರದಿಂದ ಬೆಳಗಾವಿಗೆ ಬಂದು ಈಗ 15 ದಿವಸಗಳಿಂದ ಬೆಳಗಾವಿ ಜಿಲ್ಲೆ ಬೆಳಗಾವಿ ರಥಗಲ್ಲಿಯಲ್ಲಿರುವಹ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು, ಆಗಷ್ಟ 12 ರಂದು ಸಾಯಂಕಾಲ 5 ಗಂಟೆಗೆ ಮನೆಯಲ್ಲಿ ಏನೂ ಹೇಳದೇ, ಕೇಳದೇ ಮನೆಯಿಂದ ಹೊರಗೆ ಹೋಗಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. ವಯಸ್ಸು 20 ವರ್ಷ, 4 ಪೂಟ 8 ಇಂಚ ಎತ್ತರ, ದುಂಡು ಮುಖ, ನೆಟ್ಟನೆಮೂಗು, ಸಡಪಾತಳ ಮೈಕಟ್ಟು, ಗೋದಿಗೆಂಪು ಮೈಬಣ್ಣ, ನೇರಳೆ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುತ್ತಾಳೆ, ಪಿಯುಸಿ ದ್ವೀತಿಯ ವರ್ಷ ಶಿಕ್ಷಣವನ್ನು ಕಲಿತಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ. ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ…
ಮೊಟ್ಟೆಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್, ಫಾಸ್ಫರಸ್, ಫೋಲೇಟ್ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ. ಮೊಟ್ಟೆ ಸೇವನೆಯ ಅನುಕೂಲ- ಅನಾನುಕೂಲಗಳು: ತೂಕ ನಷ್ಟದ ಬಗ್ಗೆ ಯೋಚಿಸುವವರು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳ ಬಗ್ಗೆ ಒಲವು ಹೊಡ್ನಿರುತ್ತಾರೆ. ಅಂತಹವರಿಗೆ ಮೊಟ್ಟೆ ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ. ಏಕೆಂದರೆ, ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಗಳ ಜೊತೆಗೆ ಉತ್ತಮ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ. ಪೌಷ್ಠಿಕ ತಜ್ಞರ ಪ್ರಕಾರ, ಮೊಟ್ಟೆ ಡಯಟ್ ತೂಕ ಕಳೆದುಕೊಳ್ಳಲು ಮಾತ್ರವಲ್ಲ ಉತ್ತಮ ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಮೊಟ್ಟೆ ಡಯಟ್ ಆರೋಗ್ಯಕ್ಕೆ ನಿಜವಾಗಿಯೂ ಉತ್ತಮವೇ? ಇದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಯಿರಿ. ಮೊಟ್ಟೆ ಡಯಟ್ ಅನುಕೂಲಗಳು: ಮೊಟ್ಟೆ ಡಯಟ್ ಅನ್ನು ಫ್ಯಾಡ್ ಡಯೆಟ್ ಎಂದೂ ಕರೆಯುತ್ತಾರೆ. ತ್ವರಿತ ತೂಕ ನಷ್ಟಕ್ಕೆ ನೀವು ಇದನ್ನು ಅನುಸರಿಸಲು ಯೋಜಿಸುತ್ತಿದ್ದರೆ, ನೀವು ಪ್ರತಿದಿನ ಕನಿಷ್ಠ 6 ಮೊಟ್ಟೆಗಳನ್ನು ಸೇವಿಸಬೇಕು ಎಂದು ಹೇಳಾಗುತ್ತದೆ. ಇದರೊಂದಿಗೆ, ಕ್ಯಾಲೋರಿ ಅಥವಾ ಕಾರ್ಬೋಹೈಡ್ರೇಟ್…
ಮಡಿಕೇರಿ: ಮಂಗಳಮುಖಿಯಾದ ಕಾರಣ ಬಾಡಿಗೆಗೆ ಮನೆ ಸಿಗುತ್ತಿಲ್ಲ. ಜಿಲ್ಲಾಡಳಿತಕ್ಕೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರೆ, ದಯಾಮರಣಕ್ಕೆ ಅವಕಾಶ ಕೊಡಿ ಎನ್ನುತ್ತಾ ಮಂಗಳಮುಖಿಯೊಬ್ಬರು ಕೊಡಗು ಜಿಲ್ಲಾಡಳಿತವನ್ನು ಕೇಳಿಕೊಳ್ಳುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಮಡಿಕೇರಿಯಲ್ಲಿ ವಾಸ ಮಾಡುತ್ತಿರುವ ಮಂಗಳಮುಖಿ ರಿಹಾನ ಈ ದಯನೀಯ ಬೇಡಿಕೆ ಇಟ್ಟವರು. ಮಡಿಕೇರಿಯಲ್ಲಿ ಭಿಕ್ಷಾಟನೆ ನಡೆಸಿ ಜೀವನೋಪಾಯ ಕಂಡುಕೊಂಡಿರುವ ಮಂಗಳಮುಖಿ ರಿಹಾನ ಬಳಿ ವಾಸ್ತವ್ಯಕ್ಕೆ ಯೋಗ್ಯ ಮನೆಯಿಲ್ಲ. ಬಾಡಿಗೆ ಮನೆ ಪಡೆಯಲು ನಾನು ಮಂಗಳಮುಖಿಯಾಗಿರುವುದೇ ಅಡ್ಡಿಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಮನೆ ಸಿಗದ ಕಾರಣ ಹಲವು ದಿನಗಳಿಂದ ಲಾಡ್ಜ್ ನಲ್ಲಿ ರೂಮ್ ಮಾಡಿ ನಿಲ್ಲುತ್ತಿದ್ದೇವೆ. ಲಾಡ್ಜ್ ಗೆ ಪ್ರತಿದಿನ 400ರೂ. ಬಾಡಿಗೆ ನೀಡಬೇಕು. ದುಬಾರಿ ಮೊತ್ತದ ಬಾಡಿಗೆ ನೀಡಿ ಸಾಕಾಗಿದೆ. ಭಿಕ್ಷಾಟನೆ ಮಾಡಿ ಅಷ್ಟು ಹಣ ಭರಿಸಲು ಸಾಧ್ಯವಿಲ್ಲ. ದುಡಿದ ಹಣವನ್ನೆಲ್ಲ ಲಾಡ್ಜ್ ಗೆ ನೀಡಿ ಊಟ ತಿಂಡಿಗೂ ಕಷ್ಟವಾಗಿದೆ ಎಂದು ಆಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಾಡಿಗೆ ಮನೆ ಸಿಗದಿರುವ ಹಿನ್ನೆಲೆಯಲ್ಲಿ ಈ ಹಿಂದೆಯೇ…
ತುಮಕೂರು: ವಿಶೇಷಚೇತನರಿಗೆ ಸರಕಾರ ನೀಡುವ ತ್ರಿಚಕ್ರವಾಹನ ಸೌಲಭ್ಯ ಕೇವಲ ತೋರಿಕೆಗೆ ಮಾತ್ರ ಎಂಬಂತಿದ್ದು, ಬೇಡಿಕೆಗೆ ಅನುಗುಣವಾಗಿ ವಾಹನ ವಿತರಣೆ ಆಗುತ್ತಿಲ್ಲ. ಬೇಡಿಕೆಯಲ್ಲಿ ಸುಮಾರು ಶೇ.70ರಷ್ಟು ಫಲಾನುಭವಿಗಳಿಗೆ ತ್ರಿಚಕ್ರವಾಹನ ಭಾಗ್ಯ ಕರುಣಿಸಲಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಪೂರೈಕೆಯಾಗುವ ತ್ರಿಚಕ್ರವಾಹನಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆ. ಹೀಗಾಗಿ ಅರ್ಹ ಫಲಾನುಭವಿಗಳು ನಿರಾಸೆ ಅನುಭವಿಸಿದಂತಾಗುತ್ತಿದೆ. ಯಾವಾಗ ಶುರು? ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯ ನೀಡಲಾಗುತ್ತಿದೆ. 2014-15ನೇ ಸಾಲಿನಿಂದ ತ್ರಿಚಕ್ರವಾಹನ ವಿತರಣೆ ಮಾಡಲಾಗುತ್ತಿದೆ. ಎಷ್ಟೆಷ್ಟು ವಿತರಣೆ ? 2017-18ರಲ್ಲಿ 88, 2018-19ರಲ್ಲಿ 128 ತ್ರಿಚಕ್ರವಾಹನಗಳನ್ನು ಜಿಲ್ಲೆಯಲ್ಲಿ ವಿತರಣೆ ಮಾಡಲಾಗಿತ್ತು. 2019-20ರಲ್ಲಿ ಒಂದೇ ಒಂದು ತ್ರಿಚಕ್ರವಾಹನವನ್ನೂ ನೀಡಿರಲಿಲ್ಲ. 2020-21ನೇ ಸಾಲಿನಲ್ಲಿ ನೀಡಿದ್ದು 18 ತ್ರಿಚಕ್ರವಾಹನಗಳನ್ನು ಮಾತ್ರ. 2021-22ನೇ ಸಾಲಿನಲ್ಲಿ75 ತ್ರಿಚಕ್ರವಾಹನಗಳನ್ನು ನೀಡಲಾಗಿದೆ. ಪ್ರತಿವರ್ಷ 500-600 ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಎಲ್ಲಾ ದಾಖಲೆಗಳು ಸರಿಯಿರುವ 180-200 ಅರ್ಜಿಗಳು ಸಿಂಧುವಾಗುತ್ತವೆ. ಆ ಫಲಾನುಭವಿಗಳಿಗೂ ತ್ರಿಚಕ್ರವಾಹನ ಸೌಲಭ್ಯ ಒದಗಿಸಿಲ್ಲ. ಫಲಾನುಭವಿಗಳು ಯಾರು? ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯತೆಯನ್ನು ಹೊಂದಿರುವವರು. ಕಾಲಿನ ಸಮಸ್ಯೆ…
ಶಿವಮೊಗ್ಗ: ಜಿಲ್ಲೆಯಲ್ಲಿ ನಿಷೇಧಾಜ್ಞೆ ನಡುವೆಯೂ ಬಜರಂಗದಳ ಕಾರ್ಯಕರ್ತನ ಮೇಲೆ ಕಾರ್ಯಕರ್ತನ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ಭದ್ರಾವತಿ ನಗರದ ನೆಹರೂ ಬಡವಾಣೆಯಲ್ಲಿ ಘಟನೆ ನಡೆದಿದೆ. ಕಾರ್ಯಕರ್ತನ ಸುನೀಲ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಕೂದಲೆಳೆಯ ಅಂತರದಲ್ಲಿ ಸುನೀಲ್ ಪಾರಾಗಿದ್ದಾರೆ. ಗಾಯಾಳು ಸುನೀಲ್ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಚ್ಚಿ ಅಲಿಯಾಸ್ ಮುಬಾರಕ್ ಸೇರಿ ಮೂವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯೋಕಾಗದೇ ಫಿಲ್ಮಿ ಸ್ಟೈಲ್ ಪ್ಲ್ಯಾನ್ ಮಾಡಿ ಯಾರಿಗೂ ಗೊತ್ತಾಗದಂತೆ ಆಕೆಯ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ದೂರು ನೀಡಿದ ಪತಿಯ ಕೃತ್ಯ ತನಿಖೆಯಿಂದ ಬಯಲಾಗಿದೆ. ಹೌದು, ಮೊದಲೇ ಪ್ಲ್ಯಾನ್ ಹಾಕಿ, ಪತ್ನಿಯ ಕೊಲೆ ಮಾಡಿ ಬಳಿಕ ಮಡಿವಾಳ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾನೆ. ಆದರೆ ಅನುಮಾನಗೊಂಡ ಪೊಲೀಸರು ಆತನನ್ನೇ ವಿಚಾರಣೆ ನಡೆಸಿದಾಗ ಖತರ್ನಾಕ್ ಪ್ಲ್ಯಾನ್ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಬೆಂಗಳೂರಿನ ಮಡಿವಾಳದ ಪೃಥ್ವಿರಾಜ್, ಜ್ಯೋತಿಯನ್ನು 8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಬಳಿಕ ನಿರಂತರವಾಗಿ ಜಗಳವಾಡುತ್ತಿದ್ದರಿಂದ ಪೃಥ್ವಿರಾಜ್ ಟಾರ್ಚರ್ ತಡೆಯಲಾಗದೇ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಮೊದಲೇ ಯೋಜಿಸಿದ ಪ್ಲ್ಯಾನ್‌ನಂತೆ ಪೃಥ್ವಿರಾಜ್ ತನ್ನ ಹಾಗೂ ಪತ್ನಿಯ ಮೊಬೈಲ್ ಫೋನ್‌ಗಳನ್ನು ಮನೆಯಲ್ಲಿಯೇ ಇರಿಸಿ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದ. ಆಗಸ್ಟ್ 2 ರಂದು ಹೆಂಡತಿಯನ್ನು ಉಡುಪಿಯ ಮಲ್ಪೆ ಬೀಚ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಸಮುದ್ರದಲ್ಲಿ ಮುಳುಗಿಸಿ ಆಕೆಯ ಕೊಲೆ ಮಾಡುವುದು ಪೃಥ್ವಿರಾಜ್‌ನ ಪ್ಲ್ಯಾನ್ ಆಗಿತ್ತು.…