ಚಿತ್ರದುರ್ಗ: ಹೊಸದುರ್ಗ ಮಾಜಿ ಶಾಸಕರು ವಾಣಿ ವಿಲಾಸ ಸಾಗರ ಅಣೆಕಟ್ಟೆಯ ಕೋಡಿಯನ್ನು 124 ಅಡಿಗೆ ಇಳಿಸುವ ಬಗ್ಗೆ ಮಾತನಾಡಿದ್ದು ಖಂಡನೀಯ, ವಾಣಿ ವಿಳಾಸ ಸಾಗರ ನಮ್ಮ ಜೀವನಾಡಿ ಯಾವುದೇ ಕಾರಣಕ್ಕೂ ಕೋಡಿ ಇಳಿಸಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಬ್ಯಾಡರಹಳ್ಳಿ ಶಿವಕುಮಾರ್ ಹೇಳಿದರು.
ಹೊಸದುರ್ಗದ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪನವರು ವಾಣಿ ವಿಲಾಸ ಸಾಗರ ಅಣೆಕಟ್ಟೆ ಕೋಡಿ ಇಳಿಸುವ ವಿಚಾರವಾಗಿ ನೀಡಿದ ಹೇಳಿಕೆ ವಿಚಾರವಾಗಿ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿನ ವಾಣಿ ವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶದ ಧರ್ಮಪುರ ಹೋಬಳಿಯ ತೊರೆ ಓಬೇನಹಳ್ಳಿ, ಬಿದರಕೆರೆ, ಅಂಬಲಗೆರೆ, ಬ್ಯಾಡರಹಳ್ಳಿ, ಐನಾಳ್ಳಿ , ಗ್ರಾಮದ ರೈತರು ತೊರೆ ಓಬೇನಹಳ್ಳಿ ವೇದಾವತಿ ನದಿ ದಂಡೆಯ ಮೇಲಿರುವ ಈಶ್ವರ ದೇವಸ್ಥಾನದ ಸಮೀಪ ಸಭೆ ಸೇರಿ ಖಂಡನೆ ವ್ಯಕ್ತಪಡಿಸಿದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾಡರಹಳ್ಳಿ ಶಿವಕುಮಾರ್, ವಿದೇಶ ಪ್ರವಾಸದಲ್ಲಿರುವ ಹಾಲಿ ಶಾಸಕರಾದ ಕೆ.ಪೂರ್ಣಿಮಾ ಶ್ರೀನಿವಾಸ್ ರವರು ಪತ್ರಿಕೆ ಹೇಳಿಕೆ ನೀಡಿ ಯಾವುದೇ ಕಾರಣಕ್ಕೂ ಕೋಡಿ ಇಳಿಸಲು ಬಿಡುವುದಿಲ್ಲ ಮತ್ತು ಅವರ ಬಿ.ಜಿ.ಗೋವಿಂದಪ್ಪ ನವರು ರಾಜಕೀಯ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಬಾರದು ಎಂದು ಹೇಳಿರುವುದು ಸ್ವಾಗತಾರ್ಹ ಎಂದರು.
ಅಂಬಲಗೆರೆ ರಾಘು ಮಾತನಾಡಿ, ಐತಿಹಾಸಿಕ ವಿ.ವಿ.ಸಾಗರ ಕೋಡಿ ಇಳಿಸುವ ವಿಚಾರವಾಗಿ ಹೊಸದುರ್ಗದ ಮಾಜಿ ಶಾಸಕರ ಹೇಳಿಕೆಯನ್ನು ಖಂಡಿಸುತ್ತೇವೆ, ಹೊಸದುರ್ಗದ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಲಿ ಎಂದ ಅವರು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಹೊಸದುರ್ಗದ ರೈತರಿಗೆ ಆಗಿರುವ ನಷ್ಟ ಕುರಿತು ಸದನದಲ್ಲಿ ಮಾತನಾಡಿದ್ದಾರೆ ಎಂದರು.
ಬಿದರಿಕೆರೆ ಗ್ರಾಮದ ರೈತರಾದ ರಂಗಸ್ವಾಮಿ ಮಾತನಾಡಿ, ಕೋಡಿ ಇಳಿಸುವ ವಿಚಾರವಾಗಿ ಹೊಸದುರ್ಗದ ಮಾಜಿ ಶಾಸಕರ ಹೇಳಿಕೆ ಖಂಡನೀಯ ಹಾಗೂ ಆ ಸಭೆಯಲ್ಲಿ ಹಿರಿಯೂರು ಮಾಜಿ ಶಾಸಕರಾದ ಡಿ.ಸುಧಾಕರವರು ಇದ್ದು, ಅವರು ತಾಲ್ಲೂಕಿನ ಹಿತಾಸಕ್ತಿಯ ದೃಷ್ಟಿಯಿಂದ ಆ ಹೇಳಿಕೆಯನ್ನು ಅಲ್ಲಿಯೇ ಖಂಡಿಸಬೇಕಿತು. ಆ ಕೆಲಸವನ್ನು ಅವರು ಮಾಡಲಿಲ್ಲ. ರೈತರು ಆಕ್ರೋಶ ವ್ಯಕ್ತಪಡಿಸಿದ ನಂತರ ಮೊನ್ನೆ ಹೇಳಿಕೆ ನೀಡುವ ನಾಟಕ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಪ್ರಕಾಶ್, ಈಶ್ವರಗೆರೆ ತೊರೆ ಓಬೇನಹಳ್ಳಿ ಗ್ರಾಮದ ಶ್ರೀನಿವಾಸ್, ರಂಗನಾಥ , ತಿಪ್ಪೇಸ್ವಾಮಿ , ಆರ್.ಅಶೋಕ್, ಆರ್.ರಾಮು, ಹೆಚ್.ಟಿ.ಮಲ್ಲಯ್ಯ , ರಾಘು ಜಿ.ಎನ್, ಸಣ್ಣರಂಗಪ್ಪ, ಆರ್.ತಿಮ್ಮರಾಜ್ , ರಾಮಜ್ಜ, ಗಿರಿಯಪ್ಪ, ವಿ ಎಸ್ ಎಸ್ ಎನ್ ಸದಸ್ಯರು, ಬಿದರ ಕೆರೆ ಗ್ರಾಮದ ಬಸವರಾಜ ಹಳ್ಳಿಕಾರ್ , ರಂಗನಾಥ್ ಎಂ., ಚಂದ್ರಪ್ಪ, ಅವಿನಾಶ್, ಐನಾಳ್ಳಿ ಪ್ರಕಾಶ್, ಬ್ಯಾಡರಹಳ್ಳಿ ಗ್ರಾಮದ ಈಶ್ವರ್ ಯಾದವ್, ಅಂಬೇಡ್ಕರ್ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್ ಸಾಮಾಜಿಕ ಕಾರ್ಯಕರ್ತರಾದ ದೇವರಾಜ್ ನಾಗಣ್ಣ, ರಾಮಚಂದ್ರ ಕಸವನಹಳ್ಳಿ ,ಮೋಹನ್ ಗೌಡ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz