ಔರಾದ್: ತಾಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು. ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವರ್ಷದ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳನ್ನು ಪಂಡಿತ್ ಸಿಂದೆ ಹಾಗೂ ಗ್ರಾಮ ಆಡಳಿತಾಧಿಕಾರಿ ಜಗನಾಥ್ ಸಿಂದೆ ಅವರು ಸನ್ಮಾನಿಸಿ, ಕಾಣಿಕೆ ನೀಡಿ ಗೌರವಿಸಿದರು.
ಸನ್ಮಾನಿತ ವಿದ್ಯಾರ್ಥಿಗಳು:
ಪಿಯುಸಿ ವಿಭಾಗ: ದರ್ಶನ್ (ತಂದೆ: ಗುಂಡಪ್ಪ) ಮತ್ತು ನವನಾಥ್ (ತಂದೆ: ಸಂಜು).
ಎಸ್ಎಸ್ಎಲ್ಸಿ ವಿಭಾಗ: ಪ್ರಿಯಾಂಕಾ (ತಂದೆ: ದೌಲಪ್ಪ) ಮತ್ತು ಅರುಣ್ (ತಂದೆ: ರಾಜು).
ಕಾರ್ಯಕ್ರಮದಲ್ಲಿ ದತ್ತಾತ್ರಿ ಸಿಂದೆ, ರಾಮಪ್ಪ ವಡಗಾವಕರ, ಸಂತೋಷ್ ಮೇತ್ರೆ, ವಿಜಯಕುಮಾರ್ ಮೇತ್ರೆ, ಶರಣಪ್ಪ ಸಾಧುರೆ, ಕಮಲಮ್ಮ ಸಂತಪುರೆ, ರಾಗಿಣಿ, ಭಾರತಿ ಸಿಂದೆ, ವಿಜಯಲಕ್ಷ್ಮೀ ಸಿಂದೆ, ಗುಂಡಪ್ಪ ಗೊಧೆ, ಸಂಜು ಮೇತ್ರೆ, ಸಂಜು ಬೆಪಾರಿ, ಸುಧಾಕರ್ ಮೊಗಲಪ್ಪ ದೊಡ್ಡೆ, ಸಂಜು ನಾಗುರೆ ಹಾಗೂ ರಘುನಾಥ ಸಿಂದೆ ಸೇರಿದಂತೆ ಗ್ರಾಮದ ಹಿರಿಯರು ಮತ್ತು ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


