Author: admin

ಬಾಗಲಕೋಟೆ: ಸಿಎಂ ಬಸವರಾಜ ಬೊಮ್ಮಾಯಿ ವೀಕ್ ಲೀಡರ್ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೆ.ಎಸ್‌ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ರಾಜಕೀಯದಲ್ಲಿ ಸಿದ್ದರಾಮಯ್ಯನಂಥ ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ ಎಂದು ಕಿಡಿಕಾರಿದ್ದಾರೆ.ಕಾಂಗ್ರೆಸ್​ನಲ್ಲಿ ಯಾರ ನೇತೃತ್ವ ಕ್ಷೇತ್ರ ಗೊತ್ತಿಲ್ಲ, ಜನರು ಓಟ್ ಕೊಟ್ಟು ಗೆಲ್ಲಿಸಿಲ್ಲ. ಆಗಲೇ ನಾನೇ ಮುಖ್ಯಮಂತ್ರಿ ಅಂತಿದ್ದೀರಿ. ರಾಜಕಾರಣದಲ್ಲಿ ಇಂಥ ದ್ರೋಹಿ ಯಾರೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ವೀಕ್​ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು.. ಯಾವಾಗಲೂ ಯಾರು ವೀಕ್​ ಅಂತಾ ಹೇಳ್ತಾರೋ ಅವರೇ ವೀಕ್. ಒಂದು ಬಾರಿ ಬಾದಾಮಿ, ಮತ್ತೊಮ್ಮೆ ಕೋಲಾರ, ವರುಣಾ ಅಂತೀರಿ. ನಿಮಗೆ ನಿಮ್ಮ ಅಪ್ಪ-ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಹಾಲಿವುಡ್‌ನ ಖ್ಯಾತ ನಟ, ಡ್ಯಾನ್ಸರ್ ಹಾಗೂ ಡಿಜೆ ಸ್ಟೀಫನ್ ಬಾಸ್ ನಿಧನರಾಗಿದ್ದಾರೆ. ಸ್ಟೀಫನ್ ಬಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 13 ರಂದು, ಅವರ ಮೃತ ದೇಹ ಹೋಟೆಲ್ ಕೋಣೆಯಲ್ಲಿ ಪತ್ತೆಯಾಗಿದೆ. ಸ್ಟೀಫನ್, ‘ದಿ ಎಲೈನ್ ಡಿ ಜೋನ್ಸ್’ ‘So You Think You Can Dance ನಂತಹ ಪ್ರದರ್ಶನಗಳಿಂದ ಹೆಸರುವಾಸಿಯಾಗಿದ್ದರು. ಸ್ಟೀಫನ್ ನಿಧನಕ್ಕೆ ಅಭಿಮಾನಿಗಳು, ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಾಲಕಿ ಮೇಲೆ ಆಸಿಡ್ ಎರಚಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಸಂಸದ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಅವರು, ನಾನು ಈ ಥರಹದ ಪ್ರಾಣಿಗಳಲ್ಲಿ (ಆರೋಪಿಗಳಲ್ಲಿ) ಅಪಾರ ನೋವಿನ ಭಯ ಹುಟ್ಟುಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಷೇಧಿಸಿದ್ದರೂ ಮಾರುಕಟ್ಟೆಯಲ್ಲಿ ಆಸಿಡ್ ಲಭ್ಯತೆ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಮನೋರಂಜನ್ ಪ್ರಭಾಕರ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ. 70ರ ದಶಕದ ಆರಂಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಅವರು ಸುಮಾರು 800ಕ್ಕೂ ಹೆಚ್ಚು ಸಂಗೀತ ಆಲ್ಬಂ ಹೊರತಂದಿದ್ದಾರೆ. ‘ಜನ ಮೆಚ್ಚಿದ ಮಗ’, ‘ಕಿಲಾಡಿ ಗಂಡು’, ‘ಅಶೋಕ ಚಕ್ರ’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದರು. 2003 ರಲ್ಲಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್ ಅಕಾಡೆಮಿ ಪ್ರಾರಂಭ ಮಾಡಿ ಅನೇಕರಿಗೆ ಸಂಗೀತ ಹೇಳಿಕೊಡುತ್ತಿದ್ದರು. ಇವರು ಕಳೆದ ರಾತ್ರಿ ಅಗಲಿದ್ದಾರೆ.ಚಿತ್ರರಂಗದ ಅನೇಕ ಕಲಾವಿದರು, ಹಾಗೂ ಇವರ ಸಂಗೀತ ವಿದ್ಯಾರ್ಥಿಗಳು ಕಂಬನಿ ಮಿಡಿದ್ದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರಿಗೆ ‘ಕನ್ನಡ ಕಲಾಭೂಷಣ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ಸಿನಿಮಾರಂಗದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಕನ್ನಡ ಗೆಳೆಯರ ಬಳಗ ಸಮಿತಿ ಈ ಪ್ರಶಸ್ತಿ ಪ್ರದಾನ ಮಾಡಿದೆ. ಚಿರು ಸಹೋದರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಚಿರು 2020ರ ಜೂನ್ 7ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರವಾಗಿ ನೀಡಲಾದ ಪ್ರಶಸ್ತಿಯನ್ನು ಸಹೋದರ ಹಾಗೂ ನಟ ಧ್ರುವ ಸರ್ಜಾ ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.ಪ್ರಶಸ್ತಿ ಕಾರ್ಯಕ್ರಮದಲ್ಲಿ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಅಧ್ಯಕ್ಷ ಕೃಷ್ಣೇಗೌಡ್ರು, ಪ್ರದೀಪ್, ಪ್ರಶಾಂತ್ ಮತ್ತು ತಂಡ ಹಾಜರಿದ್ರು. ಇನ್ನು ಸಂಸದರಾದ ತೇಜಸ್ವಿ ಸೂರ್ಯ, ಡಿಕೆ ಸುರೇಶ್ ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಮಿಳು ನಟ ಉದಯನಿಧಿ ಸ್ಟಾಲಿನ್ ಸಿನಿಮಾ ರಂಗಕ್ಕೆ ವಿದಾಯ ಘೋಷಿಸಿದ್ದಾರೆ. ದಶಕ ಕಾಲ ಸಿನಿ ರಂಗದಲ್ಲಿ ಮಿಂಚಿದ ಆತ, ತಮಿಳುನಾಡಿನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಂತರ ಮಾತನಾಡಿ, ‘ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ. ಕಮಲ್ ಹಾಸನ್ ನಿರ್ಮಿಸುತ್ತಿರುವ ಚಿತ್ರದಲ್ಲೂ ನಟಿಸುವುದಿಲ್ಲ. “ಮಾಮನ್ನನ್” ನನ್ನ ಕೊನೆಯ ಚಿತ್ರ. ಉದಯನಿಧಿ ನಾಯಕನಾಗಿ ನಟಿಸಿದ ಹಲವು ಚಿತ್ರಗಳು ಡಬ್ ಆಗಿದ್ದು, ಹಲವು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಇವರು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಾಜಕೀಯವಾಗಿ ಯಶಸ್ಸು ಕಂಡಿದ್ದಾರೆ. ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತು ಕೇಳಿಬಂದಿದ್ದವು. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ತೋರಿಸಿಲ್ಲ. ಹೀಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಸ್ತಾಪಕ್ಕೆ ಬಹುತೇಕ ತೆರೆಬಿದ್ದಿದೆ. ಇನ್ನು ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ , ಸಂಪುಟ ವಿಸ್ತರಣೆ ಸಂಬಂಧ ತಾವು ಪ್ರಸ್ತಾಪಿಸಿದ್ದು, ಅದರ ಅವಶ್ಯಕತೆ ಏನಿದೆ. ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ತಿಳಿಸುವುದಾಗಿ ವರಿಷ್ಠರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುವ ವಿವಿಧ ಇಲಾಖೆಯ ಸರ್ಕಾರಿ ನೌಕರರು, ಕಡ್ಡಾಯವಾಗಿ ಇಲಾಖಾ ಗುರುತಿನ ಚೀಟಿ ಧರಿಸಿ, ಕಾರ್ಯಕಲಾಪಗಳಲ್ಲಿ ಭಾಗಿಯಾಗುವಂತೆ ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಕಾರ್ಯಕಲಾಪದಲ್ಲಿ ಭಾಗವಹಿಸುವಂತ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಕರ್ನಾಟಕ ಸರ್ಕಾರ ಸಚಿವಾಲಯದಿಂದ ನೀಡಲಾಗುವ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿ ಹಾಜರಾಗುವಂತೆ ತಿಳಿಸಿದೆ. ಇನ್ನೂ ಭದ್ರತೆಯ ಹಿನ್ನಲೆಯಲ್ಲಿ ಪ್ರವೇಶಕ್ಕೆ ಸರ್ಕಾರಿ ನೌಕರರು ಗುರುತಿನ ಚೀಟಿಯನ್ನು ಧರಿಸಿದ್ದರೇ ಮಾತ್ರವೇ ಪ್ರವೇಶಕ್ಕೆ ಅನುಮತಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಪ್ರಮುಖ ಆರೋಪಿಯನ್ನು ಗೋಕಾಕ್​ ನಗರ ಪೊಲೀಸರು ಬಂಧಿಸಿದ್ದಾರೆ. ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಪಾಟೀಲ ಬಂಧಿತ ಆರೋಪಿ. ಗದಗಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ರವಾನಿಸಿದ ಆರೋಪ ಕೇಳಿಬಂದಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನವಣೆ ಪುತ್ರ ಸುಮಿತ್‌ಕುಮಾರ್‌ನನ್ನು ಈಗಾಗಲೇ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಪ ಪ್ರಾಚಾರ್ಯ ಮಾರುತಿ ಪುತ್ರನ ಜೊತೆಗೆ ಡೀಲ್ ಕುದುರಿಸಿದ್ದ ಸೋಮನಗೌಡ ಅಭ್ಯರ್ಥಿಗಳಿಂದ 7.10 ಲಕ್ಷ ರೂ. ಪಡೆದು ಅದರಲ್ಲಿ 4.50 ಲಕ್ಷ ರೂ. ಸುಮಿತ್‌ಕುಮಾರ್‌ಗೆ ನೀಡಿದ್ದ ಎಂದು ತಿಳಿದುಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ದೀನದಯಾಳ ಅಂತ್ಯೋದಯ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ 03 ಹುದ್ದೆಗಳನ್ನು ಸೃಜಿಸಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಹತೆ: ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಮಿತಿಯ ನಿರ್ಣಯವೇ ಅಂತಿಮವಾಗಿದ್ದು ಹುದ್ದೆಯ ಹೆಸರು ಸಮುದಾಯ ಸಂಪನ್ಮೂಲ ವ್ಯಕ್ತಿ, ಒಟ್ಟು ಹುದ್ದೆಗಳ ಸಂಖ್ಯೆ 3 (ಮೂರು), ಗೌರವಧನ ಮಾಸಿಕ ರೂ. 8000, ಟಿಎ ಗರಿಷ್ಟ ರೂ. 2000 ನೀಡಲಾಗುವುದು, ಕನಿಷ್ಠ ಪಿಯುಸಿ ತೇರ್ಗಡೆಯಾಗಿರಬೇಕು, ಒಂದು ವೇಳೆ ಹೆಚ್ಚುವರಿ ವಿಧ್ಯಾರ್ಹತೆ ಹೊಂದಿದ್ದಲ್ಲಿ ಅಂತಹ ಸದಸ್ಯರಿಗೂ ಸಹ ಆಧ್ಯತೆ ನೀಡಲಾಗುವುದು ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು), ನಿಪ್ಪಾಣ ನಗರಸಭೆ ಡೇ-ನಲ್ಮ್ ಯೋಜನೆಯಡಿ ರಚಿಸಿದ ಸ್ವ-ಸಹಾಯ ಸಂಘದಲ್ಲಿ ಕನಿಷ್ಟ 3 ವರ್ಷದಿಂದ ಸದಸ್ಯೆರಾಗಿರಬೇಕು/ಪ್ರದೇಶದ ಮಟ್ಟದ ಒಕ್ಕೂಟದ ಸದಸ್ಯರಾಗಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು, ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು  ಬಾಕಿದಾರರಾಗಿರಬಾರದು. ಆಸಕ್ತ…

Read More