Subscribe to Updates
Get the latest creative news from FooBar about art, design and business.
- ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
- ಸಾಹಿತ್ಯ, ಜೀವನ ಬೇರೆ ಬೇರೆ: ಎಸ್.ದಿವಾಕರ್
- ಅಕ್ಕಿರಾಂಪುರ ಗ್ರಾ.ಪಂ. ಸದಸ್ಯರಿಂದ ರಾಜಿನಾಮೆ ಪರ್ವ: ಕಂದಾಯ ವಸೂಲಾತಿ ಪುಸ್ತಕಗಳೇ ಇಲ್ವಂತೆ
- ವಿಶೇಷ ಪ್ರಕರಣದಡಿ ಗಂಗರಾಜುಗೆ ನಿವೇಶನ ಭಾಗ್ಯ
- ಮಟ್ಕಾ ಜೂಜಾಟ ಮೇಲೆ ಪೊಲೀಸರಿಂದ ದಾಳಿ: ಆರೋಪಿ ವಿರುದ್ಧ ಕಾನೂನು ಕ್ರಮ
- ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ಇಂದು ಲೋಕೋಪಯೋಗಿ ಇಲಾಖೆಯ ಸುಮಾರು 6 ಕೋಟಿ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆ..
- ಸೈಬರ್ ಸುರಕ್ಷತೆಗೆ ಪರಿಣಾಮಕಾರಿ ತಾಂತ್ರಿಕ ವ್ಯವಸ್ಥೆ ಬೇಕು, ತುಮಕೂರು ನಗರ ತಾಂತ್ರಿಕವಾಗಿ ಸುರಕ್ಷತೆಯಲ್ಲಿದೆ: ಬಿ.ಅಶ್ವಿಜಾ
Author: admin
ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯು ಭಾರತದ ಆನ್‌ಲೈನ್ ಪಾವತಿ ಪೋರ್ಟಲ್‌ಗಳ ಮೇಲೆಯೂ ಕಣ್ಣು ಹಾಕಿದ್ದ. ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ಮತ್ತು ಆಹಾರ ವಿತರಣೆ ಸಂಸ್ಥೆ ‘ಜೊಮ್ಯಾಟೊ’ವನ್ನೂ ಹ್ಯಾಕ್ ಮಾಡಲು.ಶ್ರೀಕಿ ಮತ್ತು ಆತನ ಗೆಳೆಯ ರಾಬಿನ್ ಖಂಡೇಲ್ ವಾಲ್ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಇವರಿಂದ ವಶಪಡಿಸಿಕೊಳ್ಳಲಾದ ಒಂದು ಹಾರ್ಡ್‌ಡಿಸ್ಕ್‌ನಲ್ಲಿ ಇಂತಹ ಮಾಹಿತಿ ಸಿಕ್ಕಿದೆ. 16 ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದಕ್ಕೆ ಸಂಬಂಧಿಸಿದ ಮಾಹಿತಿಯು ಈ ಹಾರ್ಡ್‌ಡಿಸ್ಕ್‌ನಲ್ಲಿ ಇದೆ ಎಂಬುದು ಸೈಬರ್ ವಿಧಿವಿಜ್ಞಾನ ಸಂಸ್ಥೆಯು ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ಆನ್‌ಲೈನ್ ಪಾವತಿ ಪೋರ್ಟಲ್‌ಗಳಾದ ಕ್ಯಾಷ್‌ಫ್ರೀ, ಪೇಯುಮನಿ, ಪೋಕರ್ ಸೈಟ್‌ಗಳಾದ ಪಿಪಿಪೋಕರ್ ಕ್ಲಬ್, ಕಾಲಿಂಗ್‌ಸ್ಟೇಷನ್, ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ಎಫ್‌ಸಿಸಿಇ.ಜೆಪಿ ಈ ಪಟ್ಟಿಯಲ್ಲಿ ಇವೆ. ತನ್ನ ವೆಬ್‌ಸೈಟ್‌ಗೆ ಕನ್ನ ಹಾಕಿ 1.7 ಕೋಟಿ ಬಳಕೆದಾರರ ಮಾಹಿತಿ ಕಳ್ಳತನ ಮಾಡಲಾಗಿದೆ ಎಂದು ಜೊಮ್ಯಾಟೊ ಸಂಸ್ಥೆಯು 2017ರ ಮೇಯಲ್ಲಿ ಹೇಳಿತ್ತು. ಶ್ರೀಕಿಯ ಪಟ್ಟಿಯಲ್ಲಿ ಜೊಮ್ಯಾಟೊ ಕೂಡ ಇತ್ತು ಎಂಬ ಬಗ್ಗೆ ಜೊಮ್ಯಾಟೊ ಸಂಸ್ಥೆಯಿಂದ ಪ್ರತಿಕ್ರಿಯೆ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ ಎನ್ನಲಾಗಿದೆ. ನಿಮ್ಮ…
ಪ್ರತಿ ವರ್ಷ ಲಕ್ಷಾಂತರ ಮಂದಿ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುತ್ತಾರೆ. ಯುಪಿಎಸ್ ಸಿ ಪರೀಕ್ಷೆಯನ್ನು ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಗೆ ಹಲವು ಮಂದಿ ಕೋಚಿಂಗ್ ಪಡೆದುಕೊಳ್ಳುತ್ತಾರೆ, ಕೆಲವೇ ಕೆಲವರು ಮಾತ್ರ ಸ್ವಯಂ ಕಲಿಕೆಯಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ, ಕೆಲವರಿಗೆ ಪರೀಕ್ಷೆ ಪಾಸ್ ಆಗಲು ವರ್ಷಗಳೇ ತಾಗುವುದು ಇದೆ ಕೆಲವೇ ಕೆಲವು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಮೊದಲನೇ ಬಾರಿಗೆ ಪಾಸ್ ಆಗುತ್ತಾರೆ. ಇಂತಹದೇ ಸಾಧನೆ ಮಾಡಿದವರು ಅನನ್ಯಾ ಸಿಂಗ್. ಐಎಎಸ್ ಪರೀಕ್ಷೆಯಲ್ಲಿ ಮೊದಲನೇ ಬಾರಿಗೆ ತೇರ್ಗಡೆ ಹೊಂದಿರುವ 22 ವರ್ಷದ ಈಕೆಯ ಹೆಸರು ಅನನ್ಯಾ ಸಿಂಗ್. ಪ್ರಯಾಗ್ ರಾಜ್ ನಿವಾಸಿ. ಯುಪಿಎಸ್ಸಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಈಕೆ ಒಂದು ಉತ್ತಮ ಉದಾಹರಣೆ. ಯುಪಿಎಸ್ಸಿ ಪರೀಕ್ಷೆಯನ್ನು ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಗೆ ಹಲವು ಮಂದಿ ಕೋಚಿಂಗ್ ಪಡೆದುಕೊಳ್ಳುತ್ತಾರೆ, ಕೆಲವೇ ಕೆಲವರು ಮಾತ್ರ ಸ್ವಯಂ ಕಲಿಕೆಯಿಂದ ಯುಪಿಎಸ್ಸಿ ಪರೀಕ್ಷೆ…
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದ ಮೀನುಗಾರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆಯಿಂದ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಈ ಬಾರಿ ಅನಿರೀಕ್ಷಿತ ಮಳೆಯಾಗುತ್ತಿದೆ. ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗಲಿದೆ. ಮಳೆಯಿಂದ ಹಲವು ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಮಳೆ ನಿಂತ ತಕ್ಷಣ ಕೆಲಸ ಮಾಡಲು ಸೂಚನೆ ಕೊಟ್ಟಿದ್ದೇನೆ. ತಗ್ಗು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ. ಎನ್ ಡಿಆರ್ಎಫ್ ತಂಡಕ್ಕೂ ಸೂಚನೆ…
ಕೊರಟಗೆರೆ: ತಾಲ್ಲೂಕು ಥರಟಿ ಗ್ರಾಮದ ಕೆರೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದ್ದು, ಸ್ಥಳೀಯರ ನೆರವಿನೊಂದಿಗೆ ಕೆರೆಯಲ್ಲಿದ್ದ ಮೃತದೇಹವನ್ನು ಮೇಲೆತ್ತಲಾಗಿದೆ. ಇಲ್ಲಿನ ನಿವಾಸಿ ಧರ್ಮಯ್ಯ ಎಂಬವರ ಪುತ್ರ ನಾಗರಾಜು ಎಂಬವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಆದರೆ ಈ ಸಾವು ಹೇಗೆ ಸಂಭವಿಸಿತು ಎನ್ನುವುದು ಇನ್ನೂ ತಿಳಿದು ಬಂದಿಲ್ಲ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೊರಟಗೆರೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನವೆಂಬರ್ 29ರಂದು ನಡೆಸಲು ಉದ್ದೇಶಿಸಲಾಗಿದ್ದ ರಾಜ್ಯಮಟ್ಟದ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಪರೀಕ್ಷೆಯನ್ನು ಆತುರದಲ್ಲಿ ನಡೆಸಲಾಗುತ್ತಿದೆ, ಯಾವುದೇ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳದೆ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ನ ಬಿಜೆಪಿ ಸದಸ್ಯರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪರೀಕ್ಷೆ ಮುಂದೂಡುವ ಬಗ್ಗೆ ಚರ್ಚೆಗಳಾಗಿವೆ. ಮುಂದೂಡುವ ಸಾಧ್ಯತೆಗಳಿವೆ. ಈ ಬಗ್ಗೆ ಗುರುವಾರ ಸ್ಪಷ್ಟವಾದ ನಿರ್ಧಾರ ಕೈಗೊಂಡು ಸುತ್ತೋಲೆ ಹೊರಡಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಆರ್.ಸ್ನೇಹಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಹುಣಸೆಹಳ್ಳಿ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡರವರು ಇಂದು ಹುಣಸೆಹಳ್ಳಿ ಪಂಚಾಯತ್ ನಾರಾಯಣ ಪುರ ಚೆಕ್ ಡ್ಯಾಮ್ ತುಂಬಿದ್ದು ಗಂಗಾಪೂಜೆ ಮಾಡಿ ಭಾಗಿನ ಅರ್ಪಿಸಿದರು. ಇದೇ ವೇಳೆ ಗ್ರಾಮಸ್ಥರು ಅದ್ದೂರಿ ಸ್ವಾಗತದೊಂದಿಗೆ ಮಹಿಳೆಯರು ಆರತಿ ಬೆಳಗುವ ಮುಖಾಂತರ ಶಾಸಕರಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರು ಹನುಮಂತರಾಯಪ್ಪ, ಗ್ರಾ.ಪಂ.ಸದಸ್ಯರು ಆನಂದಪ್ಪ, ಹರೀಶ್, ಮೋಹನ್ ಗೌಡ, ಶಶಿದರ್, ನಾಗರಾಜ್, ಹುಣಸೆಹಳ್ಳಿ ಮಾಜಿ ಗ್ರಾ.ಪಂ. ಅಧ್ಯಕ್ಷರು ನಾಗರಾಜ್, ಟ್ರಜರಿ ನಾಗರಾಜ್,ಪ್ರಕಾಶ್ ಗೌಡ, ಮದ್ದೇವಳ್ಳಿ ನಾಗರಾಜ್, ಚಂಗಾವರ ಮಾರಣ್ಣ, ಹೊಸೂರು ಗ್ರಾ.ಪಂ.ಸದಸ್ಯ ಪ್ರಕಾಶ್, ಹೊಸೂರು ಕರಿಯಣ್ಣ ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಕಗ್ಗೆರೆ ತಪ್ಪೋ ಕ್ಷೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಕಾರ್ಯಗಾರ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ತಿಪಟೂರಿನ ಈ ಸಂಜೆ ಪತ್ರಿಕೆ ಹಿರಿಯ ಪತ್ರಕರ್ತರಾದ ಹಾಗೂ ಕಿರುತೆರೆ ನಟ ದಯಾ ಸಾಗರ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಸಿ.ಮಾಧುಸ್ವಾಮಿ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ತುಮಕೂರು ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಶಾಸಕ ಮಸಾಲೆ ಜಯರಾಮ್ ಹಾಜರಿದ್ದರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಹೆಚ್.ಡಿ,ಕೋಟೆ: ಹಂಸಲೇಖರವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವ ಸಂಸದ ಪ್ರತಾಪಸಿಂಹ ಮತ್ತು ಮೀರಾ ರಾಘವೇಂದ್ರ ವಿರುದ್ಧ ಕೋಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರವರಿಂದ ಮಿನಿ ವಿಧಾನಸೌಧ ಪ್ರತಿಭಟನೆ ನಡೆಸಿತು. ಹೆಚ್.ಡಿ.ಕೋಟೆ ತಾಲ್ಲೂಕಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ಕೋಟೆ ಮತ್ತು ಸರಗೂರು ತಾಲ್ಲೂಕು ಸಮಿತಿದಿಂದ ಪ್ರತಿಭಟನೆ ನಡೆಸಿದರು. ಡಾ.ಹಂಸಲೇಖರಂತಹ ಸಾಧಕನೊಬ್ಬ ಬಹಿರಂಗವಾಗಿ ದಲಿತರ ಪರ ಮಾತನಾಡಿರುವುದು ಶೇಕಡ 2% ಜನವಿರುವ ಶಿಷ್ಯ ವೃಂದಕ್ಕೆ ನೋವುವಾಗಿದೆ ಅಷ್ಟೇ . ಆದರೂ ಸಹ ಹಂಸಲೇಖ ರವರು ಈಗಾಗಲೇ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಆದರೂ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಿರುವುದು ದುರಂತ ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಚಾ.ಶಿವಕುಮಾರ್ ಹೇಳಿದರು. ಹಂಸಲೇಖ ಅವರನ್ನು ತೇಜೋವಧೆ ಮಾಡುವ ಮೂಲಕ ಅಶಾಂತಿ ಉಂಟು ಮಾಡುತ್ತಿರುವ ಸಂಸದ ಪ್ರತಾಪಸಿಂಹ ಹಾಗೂ ಮೀರಾ ರಾಘವೇಂದ್ರ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ಸಂಚಾಲಕರಾದ ಸಣ್ಣಕುಮಾರ್ ಒತ್ತಾಯಿಸಿದರು. ನಾದಬ್ರಹ್ಮ ಮಹಾ ಮಾನವತಾವಾದಿ…
ತುಮಕೂರು: ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ವತಿಯಿಂದ ತುಮಕೂರು ಸರಸ್ವತಿಪುರಂ ನಲ್ಲಿ ಪುನೀತ್ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಪ್ಪು ನೆನಪಿಗಾಗಿ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರ ಗೀತೆಗಳು ಹಾಡಲಾಯಿತು. ಗುಲಾಮಗಿರಿ ಚಿತ್ರದ ನಾಯಕ ಟೈಗರ್ ನಾಗ್ ಅವರು “ಆ.. ದೇವರ ಹಾಡಿದು ನಮ್ಮಂತೆ ಎಂದು ಇರದು” ಎಂಬ ಗೀತೆ ಹಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮ ಸಂಸ್ಥಾಪಕ ಆನಂದ್, ಟೈಗರ್ ನಾಗ್, ಸುರೇಶ್, ಮಂಜುನಾಥ, ಸೂಪೀಯ, ಅರುಂಧತಿ ಲಾಲ್, ದಿನೇಶ್ ರಾಜ್, ರಂಗಣ್ಣ ಮೊದಲಾದವರು ಈ ಸಂದರ್ಭದಲ್ಲಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ ಮೆಂಟ್ ವೊಂದರ ಎರಡು ಫ್ಲ್ಯಾಟ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಫ್ಲ್ಯಾಟ್ ಗಳು ಹೊತ್ತಿ ಉರಿದಿವೆ. ಎಲೆಕ್ಟ್ರಾನಿಕ್ ಸಿಟಿಯ ವಸುಂಧರಾ ಲೇಔಟ್ ನ ಅಪಾರ್ಟ್ ಮೆಂಟ್ ನಲ್ಲಿ ವಿ ಮ್ಯಾಕ್ಸ್ ಚಾಲೇಟ್ ಅಪಾರ್ಟ್ ಮೆಂಟ್ ನಲ್ಲಿ ಈ ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ನ ಎರಡು ಫ್ಲ್ಯಾಟ್ ಗಳು ಬೆಂಕಿಗಾಹುತಿಯಾಗಿವೆ. ಫ್ಲ್ಯಾಟ್ ನಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700