Subscribe to Updates
Get the latest creative news from FooBar about art, design and business.
- 26 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಡೆಂಗ್ಯೂ ಜ್ವರದಿಂದ ಬಾಲಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ ಪ್ರತಿಭಟನೆ
- ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
- ಸಾಹಿತ್ಯ, ಜೀವನ ಬೇರೆ ಬೇರೆ: ಎಸ್.ದಿವಾಕರ್
- ಅಕ್ಕಿರಾಂಪುರ ಗ್ರಾ.ಪಂ. ಸದಸ್ಯರಿಂದ ರಾಜಿನಾಮೆ ಪರ್ವ: ಕಂದಾಯ ವಸೂಲಾತಿ ಪುಸ್ತಕಗಳೇ ಇಲ್ವಂತೆ
- ವಿಶೇಷ ಪ್ರಕರಣದಡಿ ಗಂಗರಾಜುಗೆ ನಿವೇಶನ ಭಾಗ್ಯ
- ಮಟ್ಕಾ ಜೂಜಾಟ ಮೇಲೆ ಪೊಲೀಸರಿಂದ ದಾಳಿ: ಆರೋಪಿ ವಿರುದ್ಧ ಕಾನೂನು ಕ್ರಮ
- ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
Author: admin
ತುಮಕೂರು: ಬ್ಯಾಂಕ್ ನ ವಾಚ್ ಮ್ಯಾನ್ ನನ್ನು ಭೀಕರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ತುಮಕೂರಿನ ನಾಗವಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಬ್ಯಾಂಕ್ ನಲ್ಲಿದ್ದ ಹಣವನ್ನು ದರೋಡೆಕೋರರು ದೋಚಿದ್ದಾರೆ ಎಂದು ತಿಳಿದು ಬಂದಿದೆ. 55 ವರ್ಷ ವಯಸ್ಸಿನ ಸಿದ್ದಪ್ಪ ಹತ್ಯೆಗೀಡಾದ ವಾಚ್ ಮ್ಯಾನ್ ಆಗಿದ್ದು, ಇವರು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬ್ಯಾಂಕ್ ದರೋಡೆ ಮಾಡುವ ಉದ್ದೇಶದಿಂದ ಬಂದ ದರೋಡೆಕೋರರು ಸಿದ್ದಪ್ಪ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಎಎಸ್ ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳದ ಸುಳಿವಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಸುಳಿವಿಗಾಗಿ ಪೊಲೀಸರು ಜಾಲಾಡುತ್ತಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಸರಗೂರು: ಸರಗೂರು ತಾಲೂಕು ಹಳೆಹೆಗ್ಗುಡಿಲು ಗ್ರಾಮದ ರಾಮಚಂದ್ರ ನಾಯಕರವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಈಗ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನು ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯ ಇರುವುದಾಗಿ ಅವರ ತಾಯಿ ಮತ್ತು ಅಣ್ಣಾ ನಾಗರಾಜು ತಿಳಿಸಿರುತ್ತಾರೆ. ಸರ್ವಧರ್ಮ “ಸಮಾಜ ಸೇವೆಗಾಗಿ ಹೃದಯವಂತರು” ಸೇವಾ ಸಂಸ್ಥೆಯ ವತಿಯಿಂದ ಆಹಾರ ಸಾಮಾಗ್ರಿಗಳನ್ನು ಮತ್ತು ಆರ್ಥಿಕ ಹಣಕಾಸು ಸಹಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸರ್ವಧರ್ಮ ಚಿಕ್ಕದೇವ್ ಹೆಗ್ಗಡಾಪುರ, ಪ್ರಧಾನ ಕಾರ್ಯದರ್ಶಿ ಮಹದೇವರಾಜ್ ಚೌಡಹಳ್ಳಿ, ಚಂದ್ರಹಾದನೂರು, ಸತೀಶ್ ಮಾಚನಾಯಕನಹಳ್ಳಿ, ವಿನೋದ್ ರಾಜ್ ಕೆ.ಎಂ ಹಳ್ಳಿ, ಚೆನ್ನನಾಯಕ, ರವಿ ನಾಯಕ ಸೇರಿದಂತೆ ಇತರರು ಹಾಜರಿದ್ದರು. ರಾಮಚಂದ್ರ ಅವರು ಕುಟುಂಬಕ್ಕೆ ಆಧಾರವಾಗಿದ್ದರು. ಆದರೆ ಅವರ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಇದರಿಂದಾಗಿ ಅವರ ಕುಟುಂಬ ಇದೀಗ ಆರ್ಥಿಕವಾಗಿ ಕೂಡ ಬಹಳ ಕಷ್ಟದಲ್ಲಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ಎರಡೂ ಕಿಡ್ನಿ ವೈಫಲ್ಯವಾಗಿದೆ…
ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹಿರಿಯ ಸಹೋದರಿ ನಾಗರತ್ನಮ್ಮನವರು ಇಂದು ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ಗಂಟೆಗೆ ಪರಮೇಶ್ವರ ಅವರ ತುಮಕೂರಿನ ಸಿದ್ಧಾರ್ಥ ನಗರ(ಗೊಲ್ಲಹಳ್ಳಿ) ನಿವಾಸದ ಪಕ್ಕದ ಜಮೀನಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ‘ಮಕ್ಕಳ ದಿನಾಚರಣೆ’ ಅಂಗವಾಗಿ ನಗರದ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಇಂದು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ ಟಿ. ವಿದ್ಯಾರ್ಥಿಗಳು ಕಲಿಯುವ ಕಾಲೇಜು ಆವರಣವನ್ನು ಹಳೆಯ ವಿದ್ಯಾರ್ಥಿಗಳು ತಮ್ಮ ರಜಾ ದಿನವನ್ನು ಉಪಯೋಗಿಸಿಕೊಂಡು ಶ್ರಮದಾನ ಮಾಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇನ್ನೂ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರು ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಬಗೆಗಿನ ಕಾಳಜಿ, ಅಭಿಮಾನ ಮತ್ತು ಗೌರವದಿಂದ ಇಂದು ಶ್ರಮದಾನ ಮಾಡುವ ಮೂಲಕ ಒಂದು ಪುಣ್ಯದ ಕಾರ್ಯವನ್ನು ಮಾಡಿದ್ದೀರಿ. ಈ ಸಂಸ್ಥೆಯ ಬೆಳವಣಿಗೆಗೆ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಅವರು ಮಾತನಾಡಿ, ಹಳೆಯ ಸಂಘದ ವತಿಯಿಂದ ಕಾಲೇಜಿನ ನಿವೇಶನ ಪಡೆಯಲು ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.ನಮ್ಮ ಕರೆಯನ್ನು ಬೆಂಬಲಿಸಿ ಈ ಕಾಲೇಜಿನ ಅಭಿವೃದ್ಧಿಗೆ ತಮ್ಮೆಲ್ಲರ…
ತುಮಕೂರು: ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನ. 16ರಂದು ನಡೆಯುವ ಸಮಾವೇಶದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮಾಜಿ ಶಾಸಕ ಅಬ್ದುಲ್ ಜಬ್ಬಾರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುದಾಫೀರ್ ಅಹಮದ್ ಖಾನ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಅರಮನೆ ಮೈದಾನದ ನಲಪಾಡ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಐಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪಗಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಮುಖಂಡರು, ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ, ಅವಕಾಶಗಳು, ಅಧಿಕಾರ ದೊರೆತಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಇದಕ್ಕೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ನೀಡಿದ ಮತಗಳೇ ಸಾಕ್ಷಿ ಎಂದರು. ಸಿ.ಎಂ. ಇಬ್ರಾಹಿಂ ಯಾವ ಉದ್ದೇಶಕ್ಕೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಎಲ್ಲಾ ಸಂದರ್ಭಗಳಲ್ಲೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತರೆ,…
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜಡೆಯ ಗ್ರಾಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗ್ರಾಮದ ಮುಂಭಾಗ ಪುನೀತ್ ಅವರ ಬೃಹತ್ ಭಾವಚಿತ್ರವಿರುವ ಫ್ಲೆಕ್ಸ್‌ಗೆ ಹೂವಿನ ಹಾರ, ಬಾಳೆಕಂದು ಕಟ್ಟಿ ಹಣ್ಣು, ಸಿಹಿ ತಿನಿಸುಗಳನ್ನಿಟ್ಟು ಗ್ರಾಮಸ್ಥರು ಪೂಜಿಸಿದರು. ಅಂಗವಿಕಲ ಮಕ್ಕಳಿಗೆ ಸಹಾಯಧನ ವಿತರಿಸಿ ಮಾತನಾಡಿದ ಮುಖಂಡ ಶಂಕರಲಿಂಗಪ್ಪ, ‘ಚಿಕ್ಕವಯಸ್ಸಿನಲ್ಲೇ ಅತ್ಯುತ್ತಮ ಬಾಲ ನಟನಾಗಿ ಹೆಸರು ಮಾಡಿದ್ದ ಪುನೀತ್ ಅವರು ಅತ್ಯಂತ ಜನಪ್ರಿಯ ನಟ. ನಮ್ಮೆಲ್ಲರ ಹೆಮ್ಮೆ ಪುತ್ರನಾಗಿದ್ದರು. ಆದರೆ, ಚಿಕ್ಕ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡ ಅಭಿಮಾನಿಗಳು ದುಃಖತಪ್ತರಾಗಿದ್ದಾರೆ’ ಎಂದರು. ನೂರಾರು ಅಭಿಮಾನಿಗಳಿಗೆ ಅನ್ನ ಅಂತರ್ಪಣೆ ಜರುಗಿತು. ಮುಖಂಡರಾದ ಶಿವರಾಮಯ್ಯ, ರಂಗರಾಜು, ಶಿಕ್ಷಕ ಕೃಷ್ಣಮೂರ್ತಿ, ನಂದೀಶ, ಮಹೇಶ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅಭಿಮಾನಿಗಳು ಪಾಲ್ಗೊಂಡಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಯಾರನ್ನೂ ಬಿಡುವುದಿಲ್ಲ. ಸರ್ಕಾರ ಅಂಥವರನ್ನು ಬಲಿ ಹಾಕೇ ಹಾಕುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ. ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಬಂಧನಕ್ಕೊಳಪಡಿಸುತ್ತೇವೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ನಾಯಕರ ಬಳಿ ದಾಖಲೆಗಳಿದ್ದರೆ ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನೀಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಿಡುವುದಿಲ್ಲ. ಇಬ್ಬರು ಇದ್ದಾರೆ, ಮೂವರು ಇದ್ದಾರೆ ಎಂದು ಹೇಳುವುದು ಬೇಡ. ಪ್ರಕರಣದಲ್ಲಿ ಭಾಗಿಯಾದವರ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ವರದಿ: ಮಂಜು ಗುರುಗದಹಳ್ಳಿ ತಿಪಟೂರು: ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹಾಲುಕುರಿಕೆ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ 30 ವರ್ಷ ವಯಸ್ಸಿನ ಭಾರತಿ ಎಂಬವರು ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಎನ್ನಲಾಗಿರುವ ದಿವಾಕರ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ 11 ಗಂಟೆಯ ಸುಮಾರಿಗೆ ಭಾರತಿ ಅವರು ಮಕ್ಕಳಿಗೆ ಸಿಹಿ ಹಂಚುತ್ತಿದ್ದ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದು ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಭಾರತಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕಪಕ್ಕದವರು ತಡೆಯಲು ಮುಂದಾದಾಗ ಚಾಕು ತೋರಿಸಿ ಬೆದರಿಸಿದ್ದಾನೆ. ಇದೇ ವೇಳೆ ಅಂಗನವಾಡಿಯ ಹಿಂಭಾಗಕ್ಕೆ ಭಾರತಿ ಅವರನ್ನು ಎಳೆದೊಯ್ದು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಘಟನೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಣ್ಣೆದುರೇ ಇಂತಹದ್ದೊಂದು ಘಟನೆ ನಡೆದಿದ್ದು, ಸ್ಥಳೀಯರನ್ನು ಕ್ಯಾರೇ ಮಾಡದೇ…
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಸಹಾಯಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾರತಿ (30) ಎಂಬವರನ್ನು ಅದೇ ಗ್ರಾಮದ ಮೃತಳ ಪತಿಯ ಅಕ್ಕನ ಮಗನಾದ ದಿವಾಕರ್ (25) ಎಂಬುವನು ಅಂಗನವಾಡಿ ಕಟ್ಟಡದ ಹಿಂಭಾಗ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ನಡೆದ ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಘಟನೆಯನ್ನು ನೋಡಿದ್ದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲ ಸಾರ್ವಜನಿಕರು ಈ ಘಟನೆಯನ್ನು ನೋಡಿದ್ದು, ಕಾಪಾಡಲೆಂದು ಹೋಗುವಾಗ ನಿಮ್ಮನ್ನು ಕೊಲೆ ಮಾಡುತ್ತಾನೆ ಎಂದು ಬೆದರಿಕೆ ಹಾಕಿ, ಓಡಿ ಹೋಗಿರುತ್ತಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ನಡೆದ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಆಗಮಿಸಿದ್ದು, ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಹೊನ್ನಾಳಿ: ಮದುವೆ ಊಟ ಮಾಡಿದ ನೂರಾರು ಮಂದಿ ವಾಂತಿಭೇದಿ ಸಮಸ್ಯೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಹಳೇದೇವರಹೊನ್ನಾಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದಲ್ಲಿ ಶುಕ್ರವಾರ ಜರಗಿದ್ದ ಮದುವೆಯಲ್ಲಿ ಮಧ್ಯಾಹ್ನ ಊಟ ಮಾಡಿದ್ದ 500ಕ್ಕೂ ಅಧಿಕ ಜನರಲ್ಲಿ 140ಕ್ಕೂ ಹೆಚ್ಚು ಮಂದಿಗೆ ಮಧ್ಯರಾತ್ರಿ ಯಿಂದ ಆರೋಗ್ಯ ಸಮಸ್ಯೆ ಶುರುವಾಗಿದೆ. ಅಸ್ವಸ್ಥರನ್ನು ಶನಿವಾರ ಬೆಳಗ್ಗೆ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ತೀವ್ರ ಅಸ್ವಸ್ಥಗೊಂಡ ಹತ್ತು ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ ತಿಳಿಸಿದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಪೂರಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರು ಪೇರಾಗಿರಬಹುದು ಎಂದು ಚಿಕಿತ್ಸೆ ನೀಡುತ್ತಿರುವ ಡಾ.ಕೆ. ವಿದ್ಯಾ ತಿಳಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700