Author: admin

ಸರಗೂರು: ತಾಲ್ಲೂಕಿನ ರಾಷ್ಟ್ರೀಯ ಹಬ್ಬದ ಆಡಳಿತ ವತಿಯಿಂದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು. ತಹಸೀಲ್ದಾರ್ ಚೆಲುವರಾಜು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ತಹಸೀಲ್ದಾರ್ ಚೆಲುವರಾಜು ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಮೂರು ದಿನಗಳ ಕಾಲ ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದರು. ಜಾಥಾದಲ್ಲಿ ತಾಲ್ಲೂಕಿನ ಅಧಿಕಾರಿಗಳು, ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಚೆಲುವರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಕಬಿನಿ ಉಪಾವಿಭಾಗ ನೀರಾವರಿ ಇಲಾಖೆ ಅಧಿಕಾರಿ ಉಷಾ.ಪಪಂ ಮುಖ್ಯಾಧಿಕಾರಿ ಬಿ.ಜಿ. ಸತೀಶ್, ಕೃಷಿ ಇಲಾಖೆ ಅಧಿಕಾರಿ ಮಹೇಶ್ ಕುಮಾರ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮಲ್ಲೇಶ್, ಪಪಂ ಸದಸ್ಯರು ಎಸ್ ಎಲ್ ರಾಜಣ್ಣ, ಶ್ರೀನಿವಾಸ್, ಹೇಮವತಿರಮೇಶ್, ವಿರೇಶ್, ದಿವ್ಯನವೀನ್, ಚೈತ್ರಸ್ವಾಮಿ, ಉಮಾರಾಮಚಂದ್ರ, ಚಲುವಕೃಷ್ಣ, ಉಪತಹಸೀಲ್ದಾರ್…

Read More

ಮಧುಗಿರಿ: ಇತಿಹಾಸ ಪ್ರಸಿದ್ಧ ಏಷ್ಯಾದ ಪ್ರಥಮ ಏಕಶಿಲಾ ಬೆಟ್ಟದಲ್ಲಿ 12 ಬೆಟಾಲಿಯನ್ ಕೆ ಎಸ್ ಆರ್ ಪಿ ತಂಡ ಮತ್ತು ಮಧುಗಿರಿಯ ತಾಲೂಕು ಆಡಳಿತ ಅಧಿಕಾರಿಗಳ ತಂಡ ಇಂದು ಮಧುಗಿರಿ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರೀಯತೆಯ ಭಕ್ತಿಯನ್ನು ತೋರಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜವನ್ನು ಎತ್ತರದ ಪ್ರದೇಶದಲ್ಲಿ ಹಾರಿಸುವುದು ದೇಶದ ಹೆಮ್ಮೆ ಮತ್ತು ತಿರಂಗ ಧ್ವಜದ ಗೌರವ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಬಗ್ಗೆ ಮಾತನಾಡಿದ ಕೆ ಎಸ್ ಆರ್ ಪಿ 12ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಹರೀಶ್, ನಮ್ಮ 12ನೇ ಬೆಟಾಲಿಯನ್ ಪ್ರತಿವಾರವೂ ಒಂದೊಂದು ಟ್ರಕ್ಕಿಂಗ್ ಪ್ರದೇಶಗಳಿಗೆ ಹೋಗುತ್ತೇವೆ. ಅದರಂತೆ ಇಂದು ಸ್ವತಂತ್ರ ಮಹೋತ್ಸವದ ಅಂಗವಾಗಿ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಏರಿ ತಿರಂಗ ಧ್ವಜವನ್ನು ಕೇಂದ್ರ ಸರ್ಕಾರದ ಆಗ್ನೇಯದ ಅತಿ ಎತ್ತರದಲ್ಲಿ ಹಾರಿಸಿದ್ದು  ಖುಶಿ ತಂದಿದೆ. ಇದರ ಸಾರಥ್ಯವನ್ನು ವಹಿಸಿದ್ದ ಹಾಗೂ ನಮ್ಮೆಲ್ಲರಿಗೂ ಇಂತಹ ಅವಕಾಶವನ್ನು ಕೊಟ್ಟಿದ್ದಕ್ಕೆ ಅಸಿಸ್ಟೆಂಟ್ ಕಮಂಡೆಂಟ್ ಪಟೇಲ್ ಬಿಸಿ…

Read More

ಅಪಾರ್ಟ್ ವೊಂದರ ಹತ್ತನೇ ಮಹಡಿಯಿಂದ ಸಾಫ್ಟ್ವೇರ್ ಕಂಪನಿ ಉದ್ಯೋಗಿ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ತ್ರಿದೀಪ್(30) ಮೃತಪಟ್ಟ ಸಾಫ್ಟ್ವೇರ್ ಕಂಪನಿ ಉದ್ಯೋಗಿ. ಬೆಳ್ಳಂದೂರಿನ ಗ್ರೀನ್ ಶೋಭಾ ಡೈಸಿ ಅಪಾರ್ಟ್ಮೆಂಟ್ನಲ್ಲಿ ತ್ರಿದೀಪ್ ವಾಸವಾಗಿದ್ದರು. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ತ್ರಿದೀಪ್ 10ನೇ ಮಹಡಿಯಿದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಕಲಿ ಮದ್ಯಸೇವನೆಯಿಂದ ಆರು ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಭೂಲ್ಪುರ್ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಭೂಲ್ಪುರ್ ನಿವಾಸಿಗಳಾದ ಕಾಮೇಶ್ವರ್ ಮಹತೋ, ರಾಮ್ಜೀವನ್, ರೋಹಿತ್ ಸಿಂಗ್, ಕಾಪುಸಿಂಗ್, ಗರ್ಕಾವೋದಾ ಗ್ರಾಮದ ಮಹಮ್ಮದ್ ಅಲ್ಲಾವುದ್ದೀನ್ ಖಾನ್ ಎಂದು ಗುರುತಿಸಲಾಗಿದೆ. ನಕಲಿ ಮದ್ಯಸೇವನೆಯಿಂದ ಇನ್ನೂ ಹಲವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಚ್ಚನಪುರ ಗ್ರಾಮದ ಮಹಿಳೆಯಿಂದ ಮದ್ಯ ಖರೀದಿಸಿ ಸೇವನೆ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿತ್ತು ಎಂದು ರಾಮನಾಥ್ ಎಂಬುವವರು ತಿಳಿಸಿದ್ದು, ತಕ್ಷಣ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಇದು ಎರಡನೆ ಅವಘಡವಾಗಿದ್ದು, ಆ.4ರಂದು ಬೆಳ್ಳಿ ಮತ್ತು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿ ಹಳ್ಳಿಗಳಲ್ಲಿ ಮದ್ಯ ಸೇವಿಸಿ 13 ಜನ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿದ್ದರು. ಏ.2016ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಸಲಾಗಿತ್ತು.ಈ ನಡುವೆ ನಕಲಿ ಮದ್ಯದ…

Read More

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಳಿಯ ಹಾಗೂ ಉದ್ಯಮಿ ದಿವಂಗತ ಸಿದಾರ್ಥ್ ಅವರ ಪುತ್ರ ಅಮಾತ್ರ್ಯ ಹೆಗ್ಡೆ ಅವರನ್ನು ರಾಜಕೀಯಕ್ಕೆ ಕರೆತರುವ ಚರ್ಚೆಗಳು ನಡೆಯುತ್ತಿವೆ.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗನಾಗಿರುವ ಅಮಾತ್ರ್ಯ ಸದ್ಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ತಂದೆಯವರು ಸ್ಥಾಪಿಸಿದ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅವರ ತಾತ ಮತ್ತು ಮಾವ ಪ್ರಭಾವಿಗಳಾಗಿರುವುದರಿಂದ ಸೂಕ್ತ ಕಾಲದಲ್ಲಿ ರಾಜಕೀಯ ಪ್ರವೇಶ ಪಡೆದು ನೆಲೆ ಕಂಡುಕೊಳ್ಳುವುದು ಅಗತ್ಯ ಎಂಬ ಸಲಹೆಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅಮಾತ್ರ್ಯ ಅವರು ಯಾವ ಪಕ್ಷದಿಂದ ರಾಜಕೀಯ ರಂಗ ಪ್ರವೇಶ ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.ಬಿಜೆಪಿಯಿಂದ ರಾಜಕೀಯ ಆರಂಭಿಸುವುದಾದರೆ ಚಿಕ್ಕಮಗಳೂರು ಅಥವಾ ಮಂಡ್ಯ ಜಿಲ್ಲೆಗಳಲ್ಲಿ ಕಣಕ್ಕಿಳಿಯುವ ಬಗ್ಗೆ ವದಂತಿಗಳು ಹಬ್ಬಿವೆ. ಡಿ.ಕೆ.ಶಿವಕುಮಾರ್ ಅವರು ಅಳಿಯನನ್ನು ಮಂಡ್ಯದಿಂದಲೇ ಕಣಕ್ಕಿಳಿಸುವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ನ ಪ್ರಬಲ ಕೋಟೆಯಾಗಿರುವ ಮಂಡ್ಯದಲ್ಲಿ ಕಳೆದ ಲೋಕಸಭೆ…

Read More

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮರಾಠ ಸಮುದಾಯದ ಮುಖಂಡ ಹಾಗೂ ಶಿವಸಂಗ್ರಾಮ್ ಮುಖ್ಯಸ್ಥ ವಿನಾಯಕ್ ಮೇಟೆ ಸಾವನ್ನಪ್ಪಿದ್ದಾರೆ. ಅಪಘಾತದ ಹೊಡೆತಕ್ಕೆ ಅವರ ಕಾರು ನಜ್ಜುಗುಜ್ಜಾಗಿದೆ. ಮಡಪ್ ಸುರಂಗದ ಬಳಿ ಮಾಜಿ ವಿಧಾನಪರಿಷತ್ ಸದಸ್ಯ (MLC) ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಿಜೆಪಿಯ ಮಿತ್ರ ಪಕ್ಷವಾದ ಶಿವಸಂಗ್ರಾಮ್‌ನ ಮುಖ್ಯಸ್ಥರನ್ನು ಅಪಘಾತದ ನಂತರ ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಿನಾಯಕ್ ಮೇಟೆಯವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆ ರಾಮ್ ಡೋಬ್ಲೆ ಎಂಬುವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ತಲುಪಿದ್ದಾರೆ. ಮಹಾರಾಷ್ಟ್ರದ…

Read More

ಮಾನ್ಸೂನ್‌ನ 2ನೇ ಹಂತದಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾದಲ್ಲಿ ಉಂಟಾಗಿರುವ ಆಳವಾದ ಕಡಿಮೆ ಒತ್ತಡದ ಪರಿಣಾಮ ಬಂಗಾಳಕೊಲ್ಲಿಯಿಂದ ಆರ್ದ್ರ ಗಾಳಿ ಉತ್ತರ ಭಾರತವನ್ನು ತಲುಪುತ್ತಿದೆ. ಈ ಗಾಳಿಯಿಂದಾಗಿ ಆಗಸ್ಟ್ 14ರಂದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಇತ್ಯಾದಿಗಳಲ್ಲಿ ಮಳೆಯಾಗಲಿವೆ ಎಂದು ಹೇಳಲಾಗಿದೆ. ಈ ರಾಜ್ಯದಲ್ಲಿ ರೆಡ್ ಅಲರ್ಟ್ ಇಂದು ಒಡಿಶಾದಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಇಲ್ಲಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಗ್ರೀನ್ ಅಲರ್ಟ್ ಇದೆ. ಮೋಡ ಕವಿದ ವಾತಾವರಣವಿರುವುದರಿಂದ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ಹಿಮಾಚಲ…

Read More

ನವದೆಹಲಿ: ಭಾರತೀಯ ಬಿಲಿಯನೇರ್ ಉದ್ಯಮಿ, ಹೂಡಿಕೆದಾರ ‘ಬಿಗ್ ಬುಲ್’ ಖ್ಯಾತಿಯ ರಾಕೇಶ್ ಜುಂಜುನ್ವಾಲಾ ಅವರು 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಜುಲೈ 5, 1960ರಂದು ಜನಿಸಿದ ಜುಂಜುನ್ವಾಲಾ ಬಾಂಬೆಯಲ್ಲಿ ರಾಜಸ್ಥಾನಿ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಆದಾಯ ತೆರಿಗೆ ಆಯುಕ್ತರಾಗಿದ್ದರು. ರಾಕೇಶ್‌ ಅವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದುಕೊಂಡಿದ್ದರು. ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಗೆ ಸೇರಿಕೊಂಡರು. ರಾಕೇಶ್ ಜುಂಜುನ್ವಾಲಾ ಅಂದಾಜು $5.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದುವ(ಜುಲೈ 2022ರಂತೆ) ಮೂಲಕ ಭಾರತದ 36ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಕ್ರಿಯ ಹೂಡಿಕೆದಾರರಲ್ಲದೆ ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನಮಿಟ್…

Read More

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್​ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಮೀಣ್ಯಂ ದಾಳಿಗೆ ಇಂದಿಗೆ ಬರೋಬ್ಬರಿ 30 ವರ್ಷವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತಿದೆ. ದಂತಚೋರ ವೀರಪ್ಪನ್​ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್​ಟಿಎಫ್​​ನಲ್ಲಿ ಕರ್ತವ್ಯ ಮಾಡಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಈ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್​​​ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್, ವೀರಪ್ಪನ್​ ಮರಮೋಸಕ್ಕೆ ಬಲಿಯಾಗಿದ್ದರು. ಆ ದಿನವನ್ನು ಅಂದು ಎಸ್​​ಟಿಎಫ್​​ನಲ್ಲಿದ್ದ ಹಲವು ಪೊಲೀಸರು ಈಗಲೂ ನೆನೆಯುತ್ತಾರೆ. ಎಸ್​ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದಿತ್ತು. ಆದರೆ ಆತ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್, ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್​​​​​ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಹಠಕ್ಕೆ ಬಿದ್ದಿದ್ದ ವೀರಪ್ಪನ್​, ಕಮಲ ನಾಯ್ಕ್ ಎಂಬುವವನ ಮೂಲಕ ದಾಳಿ…

Read More