Subscribe to Updates
Get the latest creative news from FooBar about art, design and business.
- ಯುವಕರಿಗೆ ತಂತ್ರಜ್ಞಾನ ವ್ಯಸನವಾಗಿದೆ: ಪ್ರೊ.ಎಂ.ವೆಂಕಟೇಶ್ವರಲು
- ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ
- ಜನವರಿ 6ರಿಂದ ಮಧ್ಯಂತರ ವಿದ್ಯುತ್ ವ್ಯತ್ಯಯ
- ನರೇಗಾ ಹಬ್ಬ 2025: ತುಮಕೂರು ಜಿಲ್ಲೆಗೆ 3 ಪ್ರಶಸ್ತಿ
- ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
- ಅದ್ದೂರಿಯಾಗಿ ನೆರವೇರಿದ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
- 26 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಡೆಂಗ್ಯೂ ಜ್ವರದಿಂದ ಬಾಲಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ ಪ್ರತಿಭಟನೆ
Author: admin
ಪಾವಗಡ: ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಎನ್.ಹಳ್ಳಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕಂಡರೆ ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವ ಪರಿಸ್ಥಿತಿ ತಲೆದೋರಿದ್ದು ಶಿಕ್ಷಣ ಸಚಿವರಾದ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಒದಗಿ ಬಂದಿದ್ದು ಮಕ್ಕಳ ಜೀವ ಭಯದಿಂದ ಪಾಠ ಕೇಳುವಂತಗಿದ್ದು ಈ ಕೂಡಲೇ ಶಾಲೆಗೆ ಕೊಠಡಿಗಳನ್ನು ಒದಗಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಅಗ್ರಹಿಸಿದ್ದಾರೆ. ಈ ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದು 1 ರಿಂದ 7 ನೇ ತರಗತಿಗೆ ಕೇವಲ ಮೂರು ಕೊಠಡಿಗಳಿದ್ದು ಇನ್ನುಳಿದ ಮೂರು ಕೊಠಡಿಗಳು ದುಸ್ಥಿತಿಯಲ್ಲಿದ್ದು ಪ್ರಾಣ ಭಯದಿಂದ ಪಾಠ ಪ್ರವಚನಗಳು ಕೇಳುವಂತಾಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದಂತ ಶಾಲೆ ಇಂದು ಇಂತಹ ದುರಸ್ತಿ ಒದಗಿ ಬಂದಿದ್ದು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ಜನಪ್ರತಿನಿದಿಗಳ ಗಮನಕ್ಕೆ ಬಂದರು ಸಹ ದುರಸ್ತಿ ಕಾಣುತ್ತಿಲ್ಲ, ಲೋಕ ಸಭಾ ಸದಸ್ಯರ ನಿಧಿ , ಶಾಶಕರ ನಿದಿ ಅಥವಾ ಜಿಲ್ಲಾ ಪಂಚಾಯಿತಿ ಯಾವದಾದೊರಂದು…
ಹೆಚ್.ಡಿ.ಕೋಟೆ: ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸ್ವಾಮಿ ವಿವೇಕಾನಂದರ ಯೂಥ್ ಮೂವ್ ಮೆಂಟ್ ಸಹಯೋಗದೊಂದಿಗೆ ಮಳೆ ನೀರು ಸಂಗ್ರಹಣಾ ಘಟಕವನ್ನು ನಿರ್ಮಿಸಲಾಯಿತು. ಡಾ ಜಿ ಎಸ್ ಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವಾಮಿ ವಿವೇಕಾನಂದ ಸ್ಮಾರಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲೆಯ ಅವರಣದಲ್ಲಿ ಘಟಕದಲ್ಲಿ ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಿ ಕೊಂಡು ನೀರನ್ನು ಮಿತಿಯಾಗಿ ಬಳಸಿ ಹಾಗೂ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಾಲವನ್ನು ಹೆಚ್ಚಿಸಿ. ಹರಿಯುವ ನೀರನ್ನು ನಿಲ್ಲಿಸಿ ನಿಂತ ನೀರನ್ನು ಇಂಗಿಸಿ ಎಂದು ಸಲಹೆ ನೀಡಿದರು. ಗ್ರಾಮದ ಯಾಜಮಾನ ಹೂವನಾಯಕ ಮಾತನಾಡಿ, ನಮ್ಮ ಊರಿನ ಶಾಲೆಯಲ್ಲಿ ಮಳೆ ನೀರು ಹರಿಯುತ್ತಿತ್ತು. ಅದಕ್ಕೆ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ರವರು ನಮ್ಮ ಊರಿನ ಶಾಲೆಗೆ ಮಳೆ ಸಂಗ್ರಹಣಾ ಘಟಕವನ್ನು ನಿರ್ಮಾಣ ಮಾಡುತ್ತೀವಿ ಎಂದು ಮುಂದೆ ಬಂದರು. ನೀರನ್ನು ಸಂಗ್ರಹಣಾ ಮಾಡಿದರೆ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಮತ್ತು ಅಂತರ್ಜಾಲದಲ್ಲಿ…
ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಎಚ್ ಡಿ ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಕಾನೂನು ಸೇವಗಳು ಅರಿವು ಬಗ್ಗೆ ಆರೋಗ್ಯಾಧಿಕಾರಿ ರವಿಕುಮಾರ್ ಜಾಗೃತಿ ಮೂಡಿಸಿದರು. ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೇಯೂರು, ಗ್ರಾಮ ಪಂಚಾಯತಿಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಆರೋಗ್ಯಾಧಿಕಾರಿ, ಮಾನಸಿಕ ಕಾಯಿಲೆ ಹಾಗೂ ವಿಕಲಚೇತನರ ಸಮಸ್ಯೆ ಹೊಂದಿರುವವರು ಕಾನೂನಿನಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ ಹಾಗೂ ಪ್ರತಿಯೊಬ್ಬ ವಿಕಲಚೇತನರು UD id ಕಾರ್ಡ್ ಗಳನ್ನು ತಪ್ಪದೆ ಪಡೆದುಕೊಳ್ಳಿ. ಶೇಕಡ 70ರಷ್ಟು ವಿಕಲಚೇತನ ಇರುವವರು ಸರ್ಕಾರದಿಂದ ಸಿಗುವ ಉಚಿತವಾದ ಸೌಲಭ್ಯ ಪಡೆದುಕೊಳ್ಳಿ ಹಾಗೂ ಎಲ್ಲಾ ವಿಕಲಚೇತನರು ಆರೋಗ್ಯ ಕಾರ್ಡ್ ನ್ನು ಪಡೆದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಪ್ರತಿ 2ನೇ ಶುಕ್ರವಾರ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ಮನೋರೋಗ ತಜ್ಞರು…
ಗುಬ್ಬಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ) ಗುಬ್ಬಿ ತಾಲೂಕು ತುಮಕೂರು ಜಿಲ್ಲೆವತಿಯಿಂದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಮಾರ್ಕಂಡೇಯ ಮುನಿ ಸ್ವಾಮಿಗಳಿಗೆ ನುಡಿನಮನ ಕಾರ್ಯಕ್ರಮವು ಗುಬ್ಬಿ ತಾಲೂಕು ಕಸಬಾ ಹೋಬಳಿ ರಂಗನಾಥಪುರ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ನಿಟ್ಟೂರು ರಂಗಸ್ವಾಮಿ ಗುಬ್ಬಿ ತಾಲೂಕು ಸಂಚಾಲಕರಾದ ಚೇಳೂರುಶಿವನಂಜಪ್ಪ ತಾಲೂಕು ಸಂಘಟನಾ ಸಂಚಾಲಕರಾದ ಕಡಬ ಶಂಕರ್, ನಟರಾಜು ಕುಂದರನಹಳ್ಳಿ ಶ್ರೀರಂಗಪ್ಪ ಬಸವರಾಜು ಮಾರಸಶೆಟ್ಟಿಹಳ್ಳಿ ಬಸವರಾಜು ಕಚೆನಹಳ್ಳಿ ಈಶ್ವರ ಅದಲಗೆರೆ ದೊಡ್ಡಯ್ಯ ಮಡೇನಹಳ್ಳಿ ಶಿಕ್ಷಕರಾದ ಕಲ್ಲೂರು ಶಿವಣ್ಣನವರು ಇತರೆಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಸಬಾ ಹೋಬಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೋಬಳಿ ಸಂಚಾಲಕರಾಗಿ ಬಸವರಾಜು ಮಡೇನಹಳ್ಳಿ ಸಂಘಟನಾ ಸಂಚಾಲಕರಾಗಿ ಮಹಾದೇವ್ ಅಮ್ಮನಘಟ್ಟ ಪುಟ್ಟರಾಜು ರಂಗನಾಥಪುರ ನರಸಿಂಹಮೂರ್ತಿ ಕೊಡಗಿಹಳ್ಳಿ ಮಹಾದೇವಯ್ಯ ಕಾಳೇನಹಳ್ಳಿ ಗಂಗರಾಜು ಲಕ್ಕೆನಹಳ್ಳಿ ರಾಘವೇಂದ್ರ ಲಕ್ಕೇನಹಳ್ಳಿ ನರಸಿಂಹಮೂರ್ತಿ ರಂಗನಾಥಪುರ ರಂಗರಾಜು ಲಕ್ಕೆನಹಳ್ಳಿ ರಂಗಸ್ವಾಮಿ…
ಕೋಡಿಹಳ್ಳಿಕೆರೆ: ಬೈಕ್ ನಲ್ಲಿ ಬರುತ್ತಿದ್ದ ಯುವಕನೋರ್ವ ಮೂರ್ಛೆ ಹೋದ ಘಟನೆ ನಡೆದಿದ್ದು, ಈ ವೇಳೆ ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಅವರು ಮಾನವೀಯತೆ ಮೆರೆದು ಯುವಕನನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಬೆಳಿಗ್ಗೆ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಬರುತ್ತಿರುವಾಗ ಕೋಡಿಹಳ್ಳಿ ಕೆರೆಯ ಬಳಿ ಬೈಕಿನಲ್ಲಿ ಬರುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದುದನ್ನು ಗಮನಿಸಿದ ಜಯಪ್ರಕಾಶ್ ಅವರು ತಕ್ಷಣವೇ ಸ್ಥಳಿಯರ ಸಹಾಯ ಪಡೆದು, ತಮ್ಮ ಕಾರಿನಲ್ಲಿಯೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು, ಯುವಕನಿಗೆ ಪ್ರಜ್ಞೆ ಬರುವವರೆಗೂ ಆತನ ಜೊತೆಗೆ ಇದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮೈಸೂರಿನ ಮಂಡೆನಹಳ್ಳಿ ನಿವಾಸಿ ಶ್ರೀನಿವಾಸ ಎಂಬ ಯುವಕನನ್ನು ಇಲ್ಲಿನ ಹಂಪಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಜಯಪ್ರಕಾಶ್ ಅವರು ಯುವಕನಿಗೆ ಪ್ರಜ್ಞೆ ಮರಳುವ ತನಕ ಅಲ್ಲೇ ಇದ್ದು, ಬಳಿಕ ಆರೋಗ್ಯ ವಿಚಾರಿಸಿ ಸ್ಥಳದಿಂದ ತೆರಳಿದ್ದಾರೆ. ವರದಿ: ಚಂದ್ರ ಹಾದನೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ತಾಲೂಕಿನ ಹೈರಿಗೆ ಗ್ರಾಮದ, ಗ್ರಾಮ ಪಂಚಾಯತಿಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗಳಾದ ಡಾ.ಟಿ.ರವಿಕುಮಾರ್ ರವರು, ಜೀವಿಕ ಸಂಸ್ಥೆಯ ಉಮೇಶ್ ಹಾಗೂ ವಿಕಲಚೇತನರ ತಾಲೂಕು ಸಂಯೋಜಕರಾದ ಮಹಾದೇವಯ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ್, ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರು ನಾಗೇಂದ್ರ, ರವಿರಾಜ್, ಲಕ್ಷ್ಮೀ ಭಟ್, ಪ್ರತಾಪ್ ಪಂಚಾಯತಿ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು, ಮಾನಸಿಕ ಕಾಯಿಲೆ ಮತ್ತು ವಿಕಲಚೇತನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಬಗ್ಗೆ ಜನರಿಗೆ…
ತುಮಕೂರು: 30 ವರ್ಷಗಳ ಕಾಲ ಕನ್ನಡ ಉಪನ್ಯಾಸಕನಾಗಿ ಕೆಲಸದ ಜೊತೆಗೆ ಬೋಧನೆ ಮಾಡಿಕೊಂಡು ಬಂದಿದ್ದು, ನಂಬರ್ 21ರಂದು ನಡೆಯುವ ಕಸಾಪದ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಪಿಯುಸಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆಎಸ್ ಸಿದ್ದಲಿಂಗಪ್ಪ ನವರು ತಿಳಿಸಿದರು. ತಿಪಟೂರು ಜಯದೇವ ವಿದ್ಯಾರ್ಥಿನಿಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಗುಬ್ಬಿ ತಾಲೂಕು ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದೆ. ವಾರ್ಷಿಕವಾಗಿ ಸದಸ್ಯರು ಸಮ್ಮೇಳನವನ್ನು ನಡೆಸುವುದು ಕನ್ನಡ ವಿದ್ಯಾರ್ಥಿಗಳು ಉಪನ್ಯಾಸಕರು ರನ್ನು ಕೈಜೋಡಿಸಿ ಪ್ರತಿ ಗ್ರಾಮದ ನಿತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಜೊತೆಗೆ ಹೋಬಳಿ ತಾಲೂಕು ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದರು. ರಾಮನಗರದಲ್ಲಿರುವ ಜನಪದ ಲೋಕದಂತೆ ತುಮಕೂರು ಜಿಲ್ಲೆಯಲ್ಲಿ ಕನ್ನಡ ಕಲಾ ಗ್ರಾಮವನ್ನು ಸ್ಥಾಪಿಸುವ ಮೂಲಕ ಜಿಲ್ಲೆಯ ಸಾಹಿತಿಗಳು ಬರಹಗಾರನನ್ನು ನೆನಪಿಸುವಂತೆ ನಾನು ಮಾಡುತ್ತೇನೆ ಎಂದು ಅವರು ಹೇಳಿದರು. ಈ ವೇಳೆ ಹೊನ್ನವಳ್ಳಿ ಪ್ರಾಂಶುಪಾಲರಾದ ಶಿವಕುಮಾರ್ ದಯಾನಂದ್ ಶಿಕ್ಷಕರು ಕಂಟಲಗೆರೆ ನಾಗರಾಜು ಮತ್ತಿತರು ಇದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್…
ಹೆಚ್ ಡಿ ಕೋಟೆ: ಆಂಬ್ಯುಲೆನ್ಸ್ ಸೇವೆ ಇಲ್ಲದೆ ಬೊಮ್ಮಲಾಪುರ ಹಾಡಿಯ ಬಾಣಂತಿ ರಂಜಿತಾ ಅವರು ಹೆರಿಗೆಗಾಗಿ ಒಂದು ಕಿ.ಮೀ ದೂರದ ತನಕ ನಡೆದಿರುವ ಘಟನೆ, ಪತ್ರಿಕೆಯಲ್ಲಿ ವರದಿಯಾದ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ” ಟಿ. ರವಿಕುಮಾರ್ ಮತ್ತು ತಂಡದವರು, ಇಂದು ರಂಜಿತಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು ಬೊಮ್ಮಲಾಪುರ ಹಾಡಿಯ ರಸ್ತೆಗೆ 300 ಮೀಟರ್ ನಷ್ಟು ಜಲ್ಲಿ- ಕಲ್ಲುಗಳನ್ನು ಹಾಕಿರುವುದರಿಂದ ಆಂಬ್ಯುಲೆನ್ಸ್ ಮನೆಯ ತನಕ ಬರಲು ಸಾಧ್ಯವಾಗಿರಲಿಲ್ಲ ಎಂದರು. ನಡೆದುಕೊಂಡು ಬಂದಂತಹ ರಂಜಿತಾ ಅವರನ್ನು ಗ್ರಾಮದ ಜನತೆ ಹಾಗೂ ಆಶಾಕಾರ್ಯಕರ್ತೆಯರ ಸಹಕಾರದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಯಿತು ಎಂದು ಹೇಳಿದರು. ತಾಯಿ ಮತ್ತು ಮಗುವಿನ ಆರೋಗ್ಯವನ್ನು ವಿಚಾರಿಸಿ, ತಾಯಿಗೆ ರಕ್ತ ಕಡಿಮೆಯಾಗಿರುವುದರಿಂದ ರಕ್ತ ಪರೀಕ್ಷೆ ಮಾಡುವಂತೆ ಸ್ಥಳೀಯ ವೈದ್ಯಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಆಶಾಕಾರ್ಯಕರ್ತೆಯರು ಹಾಗೂ ಇನ್ನಿತರರು ಇದ್ದರು. ವರದಿ: ಚಂದ್ರ ಹಾದನೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ:…
ಕೊರಟಗೆರೆ: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಅವ್ಯವಸ್ಥೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ದೀಪಾವಳಿ ಪ್ರಯುಕ್ತ ಸರಣಿ ರಜಾ ಇರುವ ಕಾರಣ ತಮ್ಮ ಮನೆಗಳಿಗೆ ತೆರೆಳಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಅವ್ಯವಸ್ಥೆ ಬಗ್ಗೆ ತಂದೆ ತಾಯಿಗಳಿಗೆ ತಿಳಿಸಿದ ಪರಿಣಾಮ ವಿವಿಧ ತಾಲ್ಲೂಕುಗಳಿಂದ ಪೋಷಕರು ಮಕ್ಕಳೊಂದಿಗೆ ಆಗಮಿಸಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ನಡೆಸಿ ವಾಗ್ವಾದಕ್ಕೆ ಇಳಿದಿದ್ದಾರೆ. ಶಾಲೆಯಲ್ಲಿನ ಅವ್ಯವಸ್ಥೆ, ಅಭದ್ರತೆ, ಹುಳು ಬಿದ್ದಿರುವ ಊಟ, ಪ್ರಾಂಶುಪಾಲರು ಭೋದಕವರ್ಗದ ಕಿತ್ತಾಟ ಸೇರಿದಂತೆ ಹಲವು ಸಾಲು ಸಾಲು ದೂರುಗಳ ಕೇಳಿ ಬಂದಿವೆ. ವಿದ್ಯಾರ್ಥಿ ನಿಲಯದ ತಾತ್ಕಾಲಿಕ ಭದ್ರತಾ ಸಿಬ್ಬಂದಿ ಲೋಕೇಶ್ ಅನಗತ್ಯವಾಗಿ ಹೆಣ್ಣು ಮಕ್ಕಳ ಕೊಠಡಿಗೆ ಬಾಗಿಲು ತಟ್ಟಿ ಮುನ್ಸೂಚನೆ ನೀಡದೇ ವಿನಾಕಾರಣ ಬಂದು ತೊಂದರೆ ನೀಡುತ್ತಿರುವುದನ್ನು ಹೆಣ್ಣುಮಕ್ಕಳು ಒಕ್ಕೊರಳಿನಲ್ಲಿ ಖಂಡಿಸಿದರು. ಇಷ್ಟೆಲ್ಲ ಸಮಸ್ಯೆಗಳಿದ್ದರೂ…
ತಿಪಟೂರು: ತಿಪಟೂರು ತಾಲ್ಲೂಕಿನ ಹೋನವಳಿ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುಗದಹಳ್ಳಿ ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಅಭಿವೃದ್ಧಿಗೆ 100000 ರೂ. ಗಳ ಮಂಜೂರಾತಿಯ ಚೆಕ್ಕನ್ನು ಮತ್ತು ರಾಮಮಂದಿರಕ್ಕೆ 65000 ರೂ.ಗಳನ್ನು ಸರ್ಕಾರದ ವತಿಯಿಂದ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವರಾದ ಬಿಸಿ ನಾಗೇಶ್ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಸದಸ್ಯರು ಉಮಾ ಶಂಕರ್ ಗುರುಗದಹಳ್ಳಿ ಮತ್ತು ಉಮೇಶ್ ಸದಸ್ಯರು ಗುರುಗದಹಳ್ಳಿ ಮತ್ತು ಗ್ರಾಮಸ್ಥ ಮುಖಂಡರು ಹಾಜರಿದ್ದರು ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700