Author: admin

ಉಕ್ಕು, ಜವಳಿ ವ್ಯಾಪಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 58 ಕೋಟಿ ರೂಪಾಯಿ ನಗದು ಸೇರಿದಂತೆ 390 ಕೋಟಿ ರೂಪಾಯಿಗಳ ಅಕ್ರಮ ಸಂಪತ್ತನ್ನು ವಶ ಪಡಿಸಿಕೊಂಡಿದೆ. ಮಹಾರಾಷ್ಟ್ರದ ನಾಸಿಕ್ ಘಟಕ ಆಗಸ್ಟ್ ಮೊದಲ ವಾರದಲ್ಲಿ ಜಲನ್ ಮತ್ತು ಔರಂಗಬಾದ್ ನಗರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ 390 ಕೋಟಿ ರೂಪಾಯಿ ಸಂಪತ್ತನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ 32ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ 260ಕ್ಕೂ ಹೆಚ್ಚು ಅಧಿಕಾರಿಗಳು, ಐದು ತಂಡಗಳಾಗಿ, ಸುಮಾರು 13 ಗಂಟೆ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ರಾಷ್ಟ್ರಪ್ರಶಸ್ತಿ ಪುರಸ್ಕøತ, ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಸರ್ಕಾರವು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ. ಸುಬ್ಬಣ್ಣ ಅವರು ನಿನ್ನೆ ನಿಧನರಾಗಿದ್ದು, ಮೃತರ ಗೌರವಾರ್ಥ ಪೊಲೀಸ್ ಗೌರವಗಳೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕನಿಷ್ಟ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್-19ರ ಮಾರ್ಗಸೂಚಿಗಳನ್ನು ಪಾಲಿಸಿ ನೆರವೇರಿಸಲು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥ್ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್ ಮತ್ತಿತರ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಬೆಂಗಳೂರು : ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ. ಇದು ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಎಸಿಬಿ ರದ್ದು ಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಂತೋಷ ಹೆಗ್ಡೆ, ಅದರೆ ಲೋಕಾಯುಕ್ತಕ್ಕೆ ಅಧಿಕಾರವನ್ನು ನೀಡಬೇಕು.. ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಅಧಿಕಾರಿಗಳ ನೇಮಕದಲ್ಲೂ ಕೂಡ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಬಾರದು. ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಲೋಕಾಯುಕ್ತಕ್ಕೆ ಕೆವಲ ಅಧಿಕಾರ ನೀಡೋದಲ್ಲ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಬೇಕು. ಹಾಗೇ ಲೋಕಾಯುಕ್ತರು ಕೊಟ್ಟ ಜವಾಬ್ದಾರಿ ಚನ್ನಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರ ಸೌಲಭ್ಯ ವನ್ನು ಕೂಟ್ಟ ನಂತರ ಉತ್ತಮವಾಗಿ ನಿರ್ವಹಿಸಬೇಕು. ಇಲ್ಲವಾದ್ರೇ ನಾನೇ ವಿರೋಧ ಮಾಡುತ್ತೇನೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ನಿಗ್ರಹದಳ ಲೋಕಾಯುಕ್ತ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಈ ಮೂಲಕ ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ…

Read More

ಜಿಲ್ಲೆಯಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 52 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 5ರಂದು ಜಾದವ್‍ ನಗರದಲ್ಲಿ ಒಂದು ಚಿರತೆ ಪತ್ತೆಯಾಗಿತ್ತು, ಗಾಲ್ ಮೈದಾನದಲ್ಲಿ ಮತ್ತೊಂದು ಚಿರತೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಗರದ 22 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದು, ಇಂದು ಕೂಡ ಮುಂದುವರೆಸಲಾಗಿದೆ. ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿವಾಪುರ್, ಮಸಗುಪ್ಪೆ ಗ್ರಾಮದ 30 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಧರ್ಮಟ್ಟಿ ಗ್ರಾಮದ ತೋಟದ ಮನೆಗೆ ನುಗ್ಗಿದ ಚಿರತೆ ಮೇಕೆಯನ್ನು ಹೊತ್ತೊಯ್ದಿತ್ತು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ. ಇಲ್ಲಿಯವರೆಗೂ ಚಿರತೆಗಳು ಪತ್ತೆಯಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ. ಅಲ್ಲದೆ, ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ 52 ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ…

Read More

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಲುಷಿತ ಆಹಾರ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸುಗಂಧ ಗ್ರಾಮದ ಡೊಗಾಚಿಯಾ ಪ್ರದೇಶದ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಅತಿಸಾರದ ಲಕ್ಷಣಗಳು ಕಂಡುಬಂದಿವೆ. ಪಾನಿಪುರಿ ತಿಂದವರಿಗೆಲ್ಲ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಘಟನೆ ಕುರಿತು ಮಾಹಿತಿ ಪಡೆದ ನಂತರ ಆರೋಗ್ಯ ಇಲಾಖೆಯ ವಿಶೇಷ ತಂಡಗಳನ್ನು ಕಳುಹಿಸಿ ರೋಗಿಗಳಿಗೆ ಔಷಧಗಳನ್ನು ನೀಡಲಾಯಿತು. ತೀವ್ರ ಅಸ್ವಸ್ಥರಾಗಿದ್ದವರನ್ನು ತಂಡ ಗುರುತಿಸಿ ಆಸ್ಪತ್ರೆಗೆ ದಾಖಲಿಸಿದೆ. ರಸ್ತೆಯ ಅಂಗಡಿಯಲ್ಲಿ ಪಾನಿಪುರಿ ತಿಂದು ಅಸ್ವಸ್ಥರಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಮತ್ತು ಮಕಲ್ತಾಲ್ ಪ್ರದೇಶಗಳಿಗೆ ಸೇರಿದವರು ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಲಕ್ನೋ: ಯುಪಿಯ ಬಂದಾ ಜಿಲ್ಲೆಯಲ್ಲಿ ಧಾರುಣ ಘಟನೆ ನಡೆದಿದೆ. ಗುರುವಾರ ಯಮುನಾ ನದಿಯಲ್ಲಿ ದೋಣಿ ಮುಳುಗಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ದೋಣಿಯಲ್ಲಿ ಸುಮಾರು 36 ಮಂದಿ ಪ್ರಯಾಣಿಸುತ್ತಿದ್ದಾಗ ಅದು ಮಗುಚಿ ಬಿದ್ದಿದೆ. ಬೋಟ್ ಮಾರ್ಕಾ ಘಾಟ್‌ನಿಂದ ಫತೇಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರೊಂದಿಗೆ ರಾಖಿ ಆಚರಿಸಲು ಮಹಿಳೆಯರು ತಮ್ಮ ಗ್ರಾಮಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ದೋಣಿಯಲ್ಲಿದ್ದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೋಣಿ ಅವಘಡದಲ್ಲಿ ನಾಪತ್ತೆಯಾದ ಆರು ಮಂದಿಯನ್ನು ರಕ್ಷಿಸಲಾಗಿದೆ. ಉಳಿದವರು ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಪರಿಹಾರ ಕಾರ್ಯಕ್ರಮಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೋಲ್ಕತ್ತಾ: ಪತಿ-ಪತ್ನಿ ಸೇರಿ ನಾಲ್ವರು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಬಳಿ ಈ ದುಷ್ಕೃತ್ಯ ನಡೆದಿದೆ. ದೇಬ್ರಾಜ್ ಘೋಷ್ ಮತ್ತು ಅವರ ಸಹೋದರ ದೇಬಾಸಿಸ್ ಘೋಷ್ ತಮ್ಮ ಕುಟುಂಬಗಳೊಂದಿಗೆ ಹೌರಾದಲ್ಲಿ ಪೂರ್ವಿಕರ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಎರಡು ಕುಟುಂಬಗಳು ಆಸ್ತಿ ವಿಚಾರದಲ್ಲಿ ಆಗಾಗ ಜಗಳ ಮಾಡುತ್ತಿದ್ದರು ಈ ನಡುವೆ ಬುಧವಾರವೂ ಈ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದೆ. ಕುಡಿಯುವ ನೀರಿನ ವಿಚಾರವಾಗಿ ಪಲ್ಲವಿ ಮತ್ತು ರೇಖಾ ನಡುವೆ ಜಗಳ ಆರಂಭವಾಗಿದೆ. ಇದು ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ದೇಬ್ರಾಜ್ ಘೋಷ್ ಮತ್ತು ಆತನ ಪತ್ನಿ ಪಲ್ಲವಿ ದೇಬಾಸಿಸ್ ಘೋಷ್, ಆತನ ಪತ್ನಿ ರೇಖಾ, ಅವರ 13 ವರ್ಷದ ಮಗಳು ಮತ್ತು ಅವರ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡವರೆಲ್ಲ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು…

Read More

ಕೋಲ್ಕತ್ತಾ: ಬಂಗಾಳದ ಆಡಳಿತಾರೂಢ ತೃಣಮೂಲ ನಾಯಕರನ್ನೇ ಟಾರ್ಗೆಟ್ ಮಾಡಿರುವ ಇಡಿ ಇದೀಗ ಐಪಿಎಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದೆ. ಗುರುವಾರ ಎಂಟು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜ್ಞಾನವಂತ್ ಸಿಂಗ್ (ಎಡಿಜಿ, ಸಿಐಡಿ), ಕೋಟೇಶ್ವರ ರಾವ್, ಎಸ್ ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್ ಮತ್ತು ತಥಾಗತ ಬಸು ನೋಟಿಸ್ ಪಡೆದವರಲ್ಲಿ ಸೇರಿದ್ದಾರೆ. ಕಳೆದ ವರ್ಷವೂ ನೋಟಿಸ್ ಪಡೆದ 8 ಅಧಿಕಾರಿಗಳ ಪೈಕಿ ಏಳು ಮಂದಿಗೆ ಇಡಿ ನೋಟಿಸ್ ಜಾರಿ ಮಾಡಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮಧುಗಿರಿ: ಪಟ್ಟಣದ 19 ವಾರ್ಡ್ ನಲ್ಲಿ ನಾಲ್ಕು ದಿನಗಳ ಮುಂಚೆ ಶಾಸಕ ಎಂ.ವಿ.ವೀರಭದ್ರಯ್ಯರವರು ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದರು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಶುದ್ಧ ನೀರಿನ ಘಟಕವನ್ನು ಸರಿಯಾಗಿ ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು ಅದೇ ನೀರು ಶುದ್ದಿಯಾಗಿ ಬರುತ್ತಿದೆ. ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ಆ ನೀರನ್ನು ಕುಡಿಯುತ್ತಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ಹೋಗಿ ಸ್ವತಃ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ದಿಯಾಗಿ ಬರುವುದು ಕಂಡುಬಂದಿದೆ. ಈ ಬಗ್ಗೆ ಆಕ್ರೋಶಗೊಂಡ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಆರಂಭವಾಗಿದ್ದು, ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಶುದ್ಧ ನೀರು ಬರುತ್ತಿದೆ. ಸರಿಯಾದ ಕಾಮಗಾರಿ ಮಾಡದೆ, ನೆಲದಲ್ಲಿ ನೀರಿನ ಸಂಪು ನಿರ್ಮಿಸಲಾಗಿದ್ದು, ಅದರಲ್ಲಿ ಕಸಕಡ್ಡಿ ಕೊಳಚೆ ನೀರು…

Read More

ಪಾಟ್ನಾ: ಇಡಿ ಅಧಿಕಾರಿಗಳು ತಮ್ಮ ಮನೆಗೆ ಬಂದು ಕಚೇರಿ ತೆರೆಯಬಹುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬಿಹಾರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರೀಯ ಮಾಧ್ಯಮ ಚಾನೆಲ್ ಎನ್‌ ಡಿಟಿವಿಗೆ ವಿಶೇಷ ಸಂದರ್ಶನ ನೀಡಿದರು. ‘ನಿಮ್ಮ ಚಾನೆಲ್ (ಎನ್‌ಡಿಟಿವಿ) ಮೂಲಕ ನಾನು ಇಡಿ, ಆದಾಯ ತೆರಿಗೆ ಇಲಾಖೆ, ಸಿಬಿಐಗೆ ಆಹ್ವಾನ ನೀಡುತ್ತಿದ್ದೇನೆ. ಅವರು ನನ್ನ ಮನೆಯಲ್ಲಿ ಕಚೇರಿಗಳನ್ನು ತೆರೆಯಬಹುದು . ಇಡಿ, ಸಿಬಿಐ ಬಿಜೆಪಿ ಪಕ್ಷದ ಸೆಲ್‌ನಂತೆ ಕೆಲಸ ಮಾಡುತ್ತಿವೆ ಎಂದರು. ನಿತೀಶ್ ಜೊತೆ ಕೈಜೋಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೂರ್ವ ಯೋಜನೆಯ ಭಾಗವಾಗಿ ಭೇಟಿಯಾಗಲಿಲ್ಲ, ಆದರೆ ಅದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಹೇಳಿದರು. ನಿತೀಶ್ ಅವರು ಬಿಜೆಪಿಯೊಂದಿಗೆ ಇರುವವರೆಗೂ ಅನಾನುಕೂಲವಾಗಿದ್ದಾರೆ ಎನ್ನಲಾಗಿದೆ. 2024ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಸ್ಪರ್ಧಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ. ‘ಮೋದಿ ಪ್ರಧಾನಿಯಾದಾಗ.. ನಿತೀಶ್ ಏಕೆ ಆಗಬಾರದು?’ ಎಂದರು. ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಈ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಪಡಿಸಬೇಕು.…

Read More