Subscribe to Updates
Get the latest creative news from FooBar about art, design and business.
- ಯುವಕರಿಗೆ ತಂತ್ರಜ್ಞಾನ ವ್ಯಸನವಾಗಿದೆ: ಪ್ರೊ.ಎಂ.ವೆಂಕಟೇಶ್ವರಲು
- ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ
- ಜನವರಿ 6ರಿಂದ ಮಧ್ಯಂತರ ವಿದ್ಯುತ್ ವ್ಯತ್ಯಯ
- ನರೇಗಾ ಹಬ್ಬ 2025: ತುಮಕೂರು ಜಿಲ್ಲೆಗೆ 3 ಪ್ರಶಸ್ತಿ
- ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
- ಅದ್ದೂರಿಯಾಗಿ ನೆರವೇರಿದ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
- 26 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಡೆಂಗ್ಯೂ ಜ್ವರದಿಂದ ಬಾಲಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ ಪ್ರತಿಭಟನೆ
Author: admin
ಸರಗೂರು: ಪುನೀತ್ ರಾಜಕುಮಾರ್ ಅವರ ಮೂರನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಗ್ರಾಮದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ನಮನ ಸಲ್ಲಿಸಿದರು. ಹೆಚ್ ಡಿ ಕೋಟೆ ತಾಲ್ಲೂಕಿನ ಆನಗಟ್ಟಿ ಗ್ರಾಮದಲ್ಲಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರವರ ಫೋಟೋ ಗೆ ಪೂಜೆ ಮಾಡಿ, ಮೇಣದ ಬತ್ತಿ ದೀಪ ಬೆಳಗಿಸಿ, ಹಾಲುತುಪ್ಪ ಕಾರ್ಯದ ಪ್ರಯುಕ್ತ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ನಿನ್ನೆ ಬೆಳಿಗ್ಗೆ ಮೂರನೇ ದಿನ ಕಾರ್ಯದ ಪುನೀತ್ ಪೋಟೋಗೆ ಹಾಲನ್ನು ಹಾಕಿ ಹಾಗೂ ಹೂವಿನ ಹಾರ ಹಾಕಿ ಮೇಣದ ಬತ್ತಿ ದೀಪ ಬೆಳಗಿಸಿ ಶಾಂತಿ ಸಂಕೇತವಾಗಿ ಪುನೀತ್ ರಾಜಕುಮಾರ್ ರವರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅಚರಿಸಿದ್ದರು. ಗ್ರಾಮದ ಪುನೀತ್ ರಾಜಕುಮಾರ್ ಅಭಿಮಾನಿಗಳು ಬಳಗವತಿಯಿಂದ ಹಾಗೂ ಗ್ರಾಮಸ್ಥರು ಸೇರಿ ಮಾಡಲಾಯಿತು. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ ಎಂದು ಇದೇ ವೇಳೆ ಅಭಿಮಾನಿಗಳು ಘೋಷಣೆ ಕೂಗಿದರು.
ಗುರುಗದಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವದಿಂದಲೂ ದೇಶದ ಬಗ್ಗೆ ಚಿಂತನೆ ಮಾಡುತ್ತಾ ಬೆಳೆದು ಬಂದಿರುವ ಪಕ್ಷವಾಗಿದೆ ಎಂದು ಮಾಜಿ ಶಾಸಕ ಕೆ ಷಡಕ್ಷರಿ ಹೇಳಿದರು. ತಿಪಟೂರು ತಾಲೂಕಿನ ಹೋನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮದ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗಾಂಧಿ ನಡೆಗೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶೇಕಡ 90ಕ್ಕೂ ಅಧಿಕ ಪಾಲು ಕಾಂಗ್ರೆಸ್ ಸರ್ಕಾರದ್ದು ಎಂದು ಅವರು ಹೇಳಿದರು. ಬಿಜೆಪಿ ಖಾಸಗೀಕರಣ, ಬೆಲೆ ಏರಿಕೆಗೆ ಆದ್ಯತೆ ನೀಡಿದೆಯೇ ಹೊರತು ಜನರನ್ನು ಆರ್ಥಿಕವಾಗಿ ಸದೃಢನಾಗಿರುವ ಯಾವುದೇ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ಸಮುದಾಯಗಳು ಇಂದಿಗೂ ಕಷ್ಟದಲ್ಲಿವೆ ಅವರಿಗೆ ಸಹಕಾರ ನೀಡುವ ಬದಲು ಬೆಲೆ ಏರಿಕೆ ಬಿಸಿ ನೀಡಿ ಕುಟುಂಬ ನಿರ್ವಹಣೆ ಮಾಡಲಾಗದೆ ಜನಸಾಮಾನ್ಯರು ಬೀದಿಗೆ ಬರುವಂತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ತಾಲೂಕಿನಲ್ಲಿ ಕಳೆದ ಬಾರಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಈ ಬಾರಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ನಮ್ಮ…
ಗುಬ್ಬಿ: ಕಳ್ಳರು ಎರಡು ಅಂಗಡಿಗಳ ಬೀಗ ಮುರಿದು ಹಣ ದೋಚಿದ ಘಟನೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಂಗಳವಾರ ಮಧ್ಯ ರಾತ್ರಿ ನಡೆದಿದ್ದು, ಈ ವೇಳೆ ಪೊಲೀಸರು ಹಾಗು ಸ್ಥಳೀಯರು ಕಳ್ಳರನ್ನು ಹಿಡಿಯಲು ನಡೆಸಿದ ಯತ್ನ ವಿಫಲವಾಗಿದೆ. ರಾತ್ರಿ ಕಳ್ಳರು ಅಂಗಡಿಗಳಿಂದ ಹಣ ದೋಚುತ್ತಿರುವುದನ್ನು ಕಂಡು ಗಸ್ತಿನಲ್ಲಿದ್ದ ಪೊಲೀಸರು ಕಳ್ಳರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಾರ್ವಜನಿಕರೊಬ್ಬರು ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಗುಂಡು ಹಾರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ. ಪೊಲೀಸರು ಸಾರ್ವಜನಿಕರು ಹಿಡಿಯುವ ಮುನ್ನವೇ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನೂ ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸರಗೂರು: ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ವತಿಯಿಂದ ಸ್ಮರಣೆ ನಡೆಸಲಾಯಿತು. ತಾಲ್ಲೂಕಿನ ಹಾದನೂರು ಗ್ರಾಪಂ ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾದನೂರು ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳು ಮೊಂಬತ್ತಿಯನ್ನು ಹಿಡಿದು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳು ಅಪ್ಪು ಬಗ್ಗೆ ಅಭಿಮಾನಿಗಳು ಮಾಡಿನಾಡಿ ಅವರು ಮಾಡಿರುವ ಸಾಮಾಜಿಕ ಸೇವೆಯನ್ನು ನೆನಪು ಮಾಡಿ ಕಣ್ಣೀರು ಹಾಕಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು, ಗೌರವ ಶಿಕ್ಷಕರಾದ ಸಿದ್ದಯ್ಯ, ಸ್ವಾಮಿ, ಪಾಪಣ್ಣ, ಮದನ್, ಸಿದ್ದರಾಜು, ಗ್ರಾಪಂ ಸದಸ್ಯ ಶಿವರಾಜ್ ಅರಸು, ಜವರಪ್ಪ, ಜವರ ಶೇಷ್ಷಯ್ಯ ಮೊದಲಾದವರು ಇದ್ದರು.
ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ರವರು ಇಂದು ಅರಸಾಪುರ ಗ್ರಾ.ಪಂ ಬೈರೇನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಬೂತ್ ಸಮಿತಿ ರಚನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ವೆಂಕಟಾಚಲಯ್ಯ, ಕೆಪಿಸಿಸಿ ಕಾರ್ಯದರ್ಶಿಗಳಾದ ದಿನೇಶ್ ಬಿ.ಎಸ್., ಪ.ಪಂ. ಸದಸ್ಯರಾದ ಬಲರಾಮಯ್ಯ,ಕೆ.ಎಂ.ಎಫ್. ನಿರ್ದೇಶಕರಾದ ಚಂದ್ರಶೇಖರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ ಮತ್ತು ಅರಕರೆ ಶಂಕರ್,ಮಾಜಿ ತಾ.ಪಂ ಅಧ್ಯಕ್ಷರಾದ ರಾಮಯ್ಯ,ಮಾಜಿ ಉಪಾಧ್ಯಕ್ಷರಾದ ಬಿ.ಎಚ್.ವೆಂಕಟಪ್ಪ,ಅರಸಾಪುರ ಗ್ರಾ.ಪಂ ಅಧ್ಯಕ್ಷರಾದ ರಾಮಕೃಷ್ಣಯ್ಯ,ಮಾಜಿ ತಾ.ಪಂ ಸದಸ್ಯರಾದ ಈರಣ್ಣ, ಮುಖಂಡರಾದ ಚಂದ್ರಶೇಖರ್ ಗೌಡ, ಆನಂದ್, ಮಜರ್ ಪಾಷಾ,ರುದ್ರ ಪ್ರಸಾದ್,ಮಂಜಣ್ಣ,ವಿನಯ್ ಕುಮಾರ್,ಉಮಾಶಂಕರ್,ರಾಮಕೃಷ್ಣ,ಹಾಗೂ ಗ್ರಾ.ಪಂ ಸದಸ್ಯರು,ಮುಖಂಡರು ಭಾಗವಹಿಸಿದ್ದರು. ಸಿದ್ದೇಶ್.Ns.ನೇಗಲಾ ಲ.. ಕೊರಟಗೆರೆ ವರದಿ.
ತುಮಕೂರು: ಬೆಲೆ ಏರಿಕೆಯಾದಂತಹ ಸಂದರ್ಭದಲ್ಲಿಯೂ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಗೆ 30 ಸಾವಿರ ಮುನ್ನಡೆ ಸಿಕ್ಕಿರುವುದು ಆಶ್ಚರ್ಯವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಚುನಾವಣಾ ಫಲಿತಾಂಶದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿಯಲ್ಲಿ ನಮ್ಮ ಪಕ್ಷಕ್ಕೆ ಅಷ್ಟೊಂದು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಪರಿಶೀಲನೆ ಮಾಡುತ್ತೇವೆ ಎಂದು ಅವರು ಹೇಳಿದರು. ಇನ್ನೂ ಹಾನಗಲ್ ಕ್ಷೇತ್ರ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಾದರೂ ಅಲ್ಲಿ ನಾವು ಗೆದ್ದಿರುವುದು ಸಂತಸ ತಂದಿದೆ ಎಂದು ಜಿ.ಪರಮೇಶ್ವರ್ ಹರ್ಷ ವ್ಯಕ್ತಪಡಿಸಿದರು.
ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮತ್ತೋರ್ವ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದು, ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಶ್ರೀನಿವಾಸ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪುನೀತ್ ನಿಧನದ ಸುದ್ದಿ ಕೇಳಿ ಶ್ರೀನಿವಾಸ್ ಬೆಂಗಳೂರಿಗೆ ಬಂದಿದ್ದರು. ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅವರ ಅಂತಿಮ ದರ್ಶನ ಪಡೆದು ಮನೆಗೆ ವಾಪಸ್ ಆಗಿದ್ದರು ಎನ್ನಲಾಗಿದೆ. ಮನೆಗೆ ತಲುಪಿದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಎದೆನೋವಿನಿಂದಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಭರತ್ ಎಂಬವರು ಆತ್ಮಹತ್ಯೆಗೆ ಶರಣಾದ ಘಟನೆ ಕೂಡ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಹೀಗಾಗಿ ಜಿಲ್ಲೆಯಲ್ಲಿ ಇಬ್ಬರು ಪುನೀತ್ ಅಭಿಮಾನಿಗಳು ಸಾವನ್ನಪ್ಪಿದ್ದಾರೆ.
ತುಮಕೂರು: ಸಾಹಿತಿಗಳು ಶ್ರೇಷ್ಠತೆಯ ವ್ಯಸನದಿಂದ ಹೊರಬರ ಬಂದು ಜನಸಾಮಾನ್ಯರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಕೆಲಸ ಮಾಡಬೇಕು ಎಂದು ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಸಲಹೆ ನೀಡಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಯುವಜನರು, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದರು. ದೊಡ್ಡದೊಡ್ಡ ಸಾಹಿತಿಗಳು, ವಿಮರ್ಶಕರಿಗೆ ಜನಸಾಮಾನ್ಯರು ಲೆಕ್ಕಕ್ಕೇ ಇಲ್ಲ. ಸಾಮಾನ್ಯರ ಅಭಿರುಚಿ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದ್ದು, ಮಹಿಳಾ ಸಾಹಿತ್ಯವನ್ನು ಅವಗಣನೆಯಿಂದ ನೋಡುತ್ತಿದ್ದಾರೆ ಎಂದು ಸಂಧ್ಯಾ ರೆಡ್ಡಿ ವಿಷಾದ ವ್ಯಕ್ತಪಡಿಸಿದರು. ಕನಕ, ಬಸವ, ಅಂಬೇಡ್ಕರ್, ವಾಲ್ಮೀಕಿ ಜಯಂತಿಗಳನ್ನು ಸರ್ಕಾರಗಳು ಮಾಡುತ್ತವೆ. ಆಯಾ ಜಾತಿಯ ಮುಖಂಡರು, ಶಾಸಕರನ್ನು ಕರೆಸಿ ಪ್ರಶಸ್ತಿ ಕೊಡಿಸಿ ಕಾರ್ಯಕ್ರಮ ಮುಗಿಸುವುದರಿಂದ ಯಾರಿಗೂ ಮಹನೀಯರ ಕುರಿತು ಮಾಹಿತಿ ತಿಳಿಯುವುದಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡಂತೆ ಕಾರ್ಯಕ್ರಮ ನಡೆಸುತ್ತಾರೆ. ಅವರನ್ನು ಜಾತಿಗೆ ಸೀಮಿತಗೊಳಿಸಿ ಅರ್ಥಹೀನವಾಗಿ ಜಯಂತಿ ಆಚರಿಸುತ್ತಿದ್ದು, ಇದು…
ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಕೋಡಿಪಾಳ್ಯ ಗ್ರಾಮದಲ್ಲಿ ನಟ ಅಭಿಮಾನಿ ಭರತ್ (30) ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ. ಪುನೀತ್ ಅಭಿಮಾನಿಯಾಗಿದ್ದು, ಅವರ ಸಾವನ್ನು ನೋಡಲಾಗುತ್ತಿಲ್ಲ. ಪುನೀತ್ ಹೋದ ಜಾಗಕ್ಕೆ ನಾನು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ ಭರತ್ ಗಾರೆ ಕೆಲಸ ಮಾಡಿಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತನ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಬ್ಬಿ: ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಲು ಮುಂದಾದ ಘಟನೆ ನಡೆದಿದೆ. ದಿನಾಂಕ 30 /10/2021 ರ ಶನಿವಾರ ದಂದು ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಗ್ರಾಮ ಪಂಚಾಯ್ತಿ ಬಂದ ಅನುದಾನವನ್ನು ಯಾವ ಯಾವ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ ಎಂಬ ಮಾಹಿತಿಯನ್ನು ಕೇಳಿದರೆ, ಇದಕ್ಕೆ ಸಮಂಜಸವಲ್ಲದ ಉತ್ತರ ನೀಡಿದ ಗ್ರಾ.ಪಂ. ಅಧ್ಯಕ್ಷರ ನಡೆಗೆ ಸಭೆಯಲ್ಲಿದ್ದ ಸದಸ್ಯರೆಲ್ಲರೂ ಕೆಂಡಾಮಂಡಲವಾಗುವಂತ ನಿದರ್ಶನ ಸಭೆಯಲ್ಲಿ ನಡೆಯಿತು . ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಬ್ಲಾಕ್ ನಿಂದ ಚುನಾಯಿತ ಮಹಿಳಾ ಸದಸ್ಯರಾದ ಪದ್ಮರವರು ಪಂಚಾಯಿತಿ ಅಭಿವೃದ್ಧಿಗೆಂದು 6 ಲಕ್ಷದ 80 ಸಾವಿರ ಹಣವನ್ನು ಬಳಕೆ ಮಾಡಿರುವುದರ ಬಗ್ಗೆ ರಸಿದಿ ಸಮೇತವಾಗಿ ಖರ್ಚು ವೆಚ್ಚದ ಮಾಹಿತಿಯನ್ನು ಕೇಳಿದಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯ ನಿರ್ವಹಿಸುವ ಸಲಕರಣೆಗಳನ್ನು ನೀಡುವ ಖಾಸಗಿ ಹಾರ್ಡ್ವೇರ್ ಅಂಗಡಿ ಮಾಲಿಕನನ್ನು ಕರೆಸಿ ವಿಚಾರಿಸಿದಾಗ ನಾನು ನಮ್ಮ ಅಂಗಡಿಯಲ್ಲಿ ಖರೀದಿ ಮಾಡಿರುವ…