Author: admin

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಸವರ್ಣೀಯರ ವಿರೋಧದ ನಡುವೆಯೇ ದಲಿತರು ದೇವಾಲಯ ಪ್ರವೇಶಿಸುವ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ತೊಳಸಮ್ಮ ದೇವಾಲಯವಿದ್ದು, ಈವರೆಗೆ ದಲಿತರ ಪ್ರವೇಶವಾಗಿರಲಿಲ್ಲ. ಅಲ್ಲದೆ  ದೇವಾಲಯದ ಗೊಡೆಗೆ ಮುಜರಾಯಿ ಇಲಾಖೆಯಿಂದ ಅಂಟಿಸಿದ್ದ ಸೂಚನಾ ಫಲಕ ಅಳಿಸಿ ಹಾಕುವ ಪ್ರಯತ್ನವನ್ನು ಗ್ರಾಮದ ಕೆಲವು ಕಿಡಿಗೇಡಿಗಳು ಮಾಡಿದ್ದರು. “ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮದ ಬೇಧವಿಲ್ಲದೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಲಾಗಿದೆ” ಎಂದು ಹಾಕಲಾಗಿದ್ದ ಸೂಚನಾ ಫಲಕದಲ್ಲಿ ‘ಜಾತಿ, ಜನಾಂಗ’ ಇತ್ಯಾದಿ ಪದಗಳನ್ನು ಅಳಿಸಿ ಹಾಕಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿರುವ ಕಂದಾಯ ನಿರೀಕ್ಷಕ ನಾಗಭೂಷಣ್  ಗ್ರಾಮ ಲೆಕ್ಕಾಧಿಕಾರಿ ಶಶಿ ಕುಮಾರ್‌ ಗ್ರಾಮದ ದಲಿತರು ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಸವರ್ಣೀಯ ಯುವಕರು ಯತ್ನಿಸಿದರು. ಇದರಿಂದ ಹೆದರಿದ ದಲಿತರು, ದೇವಾಲಯ ಪ್ರವೇಶಿಸಲು ಹಿಂದೇಟು ಹಾಕಿದರು. ಆದರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ ಒಬ್ಬರೇ…

Read More

ಸರಗೂರು: ತಾಲ್ಲೂಕಿನ ಕೆ.ಬೆಳತೂರು ಗ್ರಾಮದಲ್ಲಿ ದಿವಂಗತ ಚಿಕ್ಕಮಾದು ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ  ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ನಡೆಸಲಾಯಿತು. ಕೆ.ಬೆಳತೂರು ಬಸ್ ನಿಲ್ದಾಣದ ಬಳಿ  ದಿವಂಗತ ಚಿಕ್ಕಮಾದು ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಪುಷ್ಪರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.  ಇದಕ್ಕೂ ಮೊದಲು ಆಕಾಲಿಕ ಮರಣ ಹೊಂದಿದ ಅಪ್ಪು ಅವರಿಗೆ 2 ನಿಮಿಷಗಳ ಕಾಲ ಮೌನಚಾರಣೆ ಮಾಡಲಾಯಿತು. ದಿವಂಗತ ಚಿಕ್ಕಮಾದು ಅವರ ನೆನಪಿನಾರ್ಥವಾಗಿ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಧನಸಹಾಯ ಮಾಡಿದರು.  ದಿವಂಗತ ಚಿಕ್ಕಮಾದು ಅವರು ಮಾಡಿರುವ ಸಾಧನೆಗಳ ಬಗ್ಗೆ ಚಿಕ್ಕವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆ ನಡೆಸಿ, ನೇರವೇರಿದ ಅಭಿಮಾನಿಗಳಿಗೆ ಹಂಚಿದರು.  ಇದೇವೇಳೆ ಚಿಕ್ಕಮಾದು ಅಭಿಮಾನಿ ಬಳಗದ ಮಂಜು, ಹರೀಶ್, ಪ್ರತಾಪ್, ಗೋಪಾಲ್,ಕೆಂಪ, ಪ್ರಸಾದ್ ಹಾಗೂ ಇನ್ನಿತರರು ಇದ್ದರು.

Read More

ತುಮಕೂರು: ಶ್ರೀ ಸಿದ್ಧಗಂಗಾ ಮಠದಲ್ಲಿ 10,000 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ  ಬೃಹತ್ ಉಚಿತ  ಆರೋಗ್ಯ ತಪಾಸಣೆ, ಔಷಧಿಗಳ ವಿತರಣೆ ಹಾಗೂ ಮಕ್ಕಳಿಗೆ ಕನ್ನಡಕ ವಿತರಣೆಯ  ಉದ್ಘಾಟನಾ ಕಾರ್ಯಕ್ರಮ  25-10-21 ರಿಂದ 31-10-21ರವರೆಗೆ ನಡೆಯಿತು. ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಹಾಗೂ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ 9  ರೋಟರಿ ಕ್ಲಬ್ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ  ಕಣ್ಣಿನ ಚಿಕಿತ್ಸೆ ಚರ್ಮದ ಚಿಕಿತ್ಸೆ ದಂತ ಚಿಕಿತ್ಸೆ ಹಾಗೂ ವಿನ್ಸ್ ಕೈಗಳನ್ನು ತೊಳೆಯುವ  ವಿಧಾನ ಹಾಗೂ ದೇಹದ ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಮಕ್ಕಳ ಕಲಿಕಾ ಪೂರ್ವಕವಾಗಿ ರೋಟರಿ ಯೂತ್ ಲೀಡರ್ ಶಿಪ್ ಅವಾರ್ಡ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಣ್ಣಿನ ಲೋಪ ದೋಷವುಳ್ಳ ಸಿದ್ದಗಂಗಾ ಮಠದ ಮಕ್ಕಳಿಗೆ ಉಚಿತವಾಗಿ ಕನ್ನಡಕ ವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್.ನಾಗೇಂದ್ರ ಭಾಗವಹಿಸಿದ್ದರು.  ಗೌರವ ಅತಿಥಿಗಳಾಗಿ ಆಶಾ ಪ್ರಸನ್ನಕುಮಾರ್,  ಬಾಲಾಜಿ ಡಿಸ್ಟ್ರಿಕ್ಟ್ ಕಮ್ಯುನಿಟಿ…

Read More

ತುಮಕೂರು ಗ್ರಾಮಾಂತರ: ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಹೆಬ್ಬೂರಿನ ಸಿದ್ದ ನಾಯಕನ ಪಾಳ್ಯದ ನೂತನ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸ್ಥಿರ ಬಿಂಬ ಪ್ರತಿಷ್ಠಾಪನೆ, ಹಾಗೂ ಜ್ಞಾನ ವಿಮಾನ ಗೋಪುರ ಕಳಸ ಸ್ಥಾಪನೆ, ಜೀರ್ಣೋದ್ದಾರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ದೇವರ ದರ್ಶನದ ಬಳಿಕ, ಭಕ್ತಾದಿಗಳಿಗೆ ಸ್ವತಃ ಶಾಸಕರೇ ಊಟ ಬಡಿಸಿದರು. ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ  ಶಾಸಕರ ಕುಟುಂಬದ ವತಿಯಿಂದ ವೈಯಕ್ತಿಕವಾಗಿ 2,50,000 (ಎರಡೂವರೆ ಲಕ್ಷ) ಧನಸಹಾಯ  ನೀಡಿದರು. ತುಮಕೂರು ಸಿದ್ದಗಂಗಾ ಮಠ ಬಿಟ್ಟರೆ ಪ್ರತಿನಿತ್ಯ ಅನ್ನದಾಸೋಹ ಮಾಡುವ ಕುಟುಂಬ ಚನ್ನಿಗಪ್ಪ ರವರ ಕುಟುಂಬವಾಗಿದ್ದು, ಅದರಂತೆಯೇ ಮೂರು ದಿನಗಳ ಕಾಲ ನಡೆದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಊಟದ ವ್ಯವಸ್ಥೆಯನ್ನು ಸ್ವತಃ ಶಾಸಕರೇ ಕಲ್ಪಿಸಿದ್ದರು.  ವರದಿ:  ಸಿದ್ದೇಶ್.N,S.ನೇಗಲಾಲ. ತುಮಕೂರು.

Read More

ಛಲವಾದಿ ಆದಿಜಾಂಭವ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘ ನವೆಂಬರ್ 2ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು 11 ಗಂಟೆಗೆ ನಡೆಸಲಾಯಿತು. 31 ಜನ  ಸದಸ್ಯರು ತಿಳಿಸಿದ ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಯಿತು. ಛಲವಾದಿ ಆದಿಜಾಂಭವ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ  ಸಮುದಾಯದ ಮುಖಂಡರುಗಳಿಂದ ಸಭೆ ನಡೆಸಿದರು. ದಲಿತರಿಗೆ ಭೂಮಿ ಮತ್ತು ವಸತಿ ವಿಷಯವಾಗಿ ಚರ್ಚೆ ನಡೆಸಲಾಯಿತು, ಸಭೆಯಲ್ಲಿ ರಂಗಯ್ಯ, ರಾಮಯ್ಯ ಪಿ.ಎನ್. ರಘಣ್ಣ ಕೇಬಲ್, ಭಾನುಪ್ರಕಾಶ್ ರಾಘವೇಂದ್ರ ಸ್ವಾಮಿ, ಶಿವಾಜಿ ಜೈಪುರ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಬಂಡೆಕುಮಾರ್, ರಾಮಯ್ಯ ಟಿ.ಸಿ.,  ಮತ್ತು ಶೇಖರ್ ಉಪಸ್ಥಿತರಿದ್ದರು.

Read More

ಆಶ್ರಯವಿಲ್ಲದೆ ಜೀವಗಳಿಗೆ ಬದುಕು ಸವಾಲಾಗಿ ಬಿಡುತ್ತದೆ. ಇಡೀ ಜೀವನವೆಲ್ಲಾ ಕೆಸರಲ್ಲಿ ನಡೆಯುವ ಅನುಭವ .ಎಲ್ಲಿ ತಪ್ಪು ಹೆಜ್ಜೆ ಇಟ್ಟರು ಜಾರಿ ಬೀಳುವ ಭಯ. ಸಂಬಂಧಗಳು ಗಟ್ಟಿಯಾಗಿ ನಿಲ್ಲುವ ಬದಲಿಗೆ ಕಿತ್ತು ಹೋಗುವ ಸಂಭವವೇ ಹೆಚ್ಚು. ಆಗ ನನಗೆ 18ರ ಪ್ರಾಯ .ಬಹಳ ಪ್ರಯಾಸದಿಂದ 10 ನೇ ತರಗತಿ ಮುಗಿಸಿದ್ದೆ. ಅಪ್ರಬುದ್ಧ ವಯಸ್ಸು. ಕನಸು ಕಾಣುವ ಹಂಬಲ ಎಲ್ಲರಂತೆ ಓದು ಮುಂದುವರಿಸುವ ಆಸೆ. ಕಂಡ ಕನಸೆಲ್ಲಾ ನನಸಾಗುವುದು ಸುಲಭದ ಮಾತಲ್ಲ. ಇಸ್ಲಾಮಿನ ಶಿಕ್ಷಣ ಪಡೆದಿದ್ದ ತಂದೆಯವರು ಊರಿನ ಮಸೀದಿಯಲ್ಲಿ ಮೌಲವಿಗಳಾಗಿ ಸೇವೆಸಲ್ಲಿಸುತ್ತಿದ್ದರು. ಆಗ ಅವರಿಗೆ ತಿಂಗಳ ಸಂಬಳದ ರೂಪದಲ್ಲಿ 40 ರೂಪಾಯಿ ಊರಿನ ಹಿರಿಯರು ವಂತಿಗೆ ರೂಪದಲ್ಲಿ ಕೊಡುತ್ತಿದ್ದರು. ನಿಗದಿತ ಹಣ ಸರಿಯಾಗಿ ತಲುಪಿದ್ದು ಕಾಣಲಿಲ್ಲ. ತಿಂಗಳೆಲ್ಲಾ ಊರಿನ ಉಸಾಬರಿ ಮಾಡಿದರೂ ಕೊಡುವ ದುಡ್ಡು 4 ದಿನಕ್ಕೆ ಸಾಕಾಗುತ್ತಿರಲಿಲ್ಲ. ಗುಡಿಸಲ ಬದುಕು ಮೂರಾಬಟ್ಟೆ ಎಂಬಂತೆ ಬಡತನ ಕಿತ್ತು ತಿನ್ನುತ್ತಿತ್ತು. ಮಕ್ಕಳಿಂದ ತುಂಬಿದ ಸಂಸಾರ. ಮೂರು ಗಂಡು ನಾಲ್ಕು ಹೆಣ್ಣು ಮಕ್ಕಳು. ತಂದೆ-ತಾಯಿ ಸೇರಿ…

Read More

ಸರಗೂರು: ಡಿಬಿ ಕುಪ್ಪೆ ಗ್ರಾಮದ ವ್ಯಾಪ್ತಿಯ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ಮಾಜಿ ಶಾಸಕ ಚಿಕ್ಕಣ್ಣ ಹೇಳಿದರು ಸರಗೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಬಿ ಕುಪ್ಪೆ, ಆನೆ ಮಾಳ, ಮಚ್ಚೂರು ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ ಇದು ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿದೆ ಕೂಡಲೇ ಹಕ್ಕು ಪತ್ರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಜತೆ ಚರ್ಚಿಸಿದ್ದೇನೆ. ಮನವಿ ಪತ್ರವನ್ನು ನೀಡಿದ್ದೇನೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡಲು ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು ಯುವ ಮುಖಂಡ ಜಯಪ್ರಕಾಶ್. ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜೇಂದ್ರ. ನಾಗನಾಯಕ. ಪುರಸಭೆ ಸದಸ್ಯ ಹರೀಶ್ ಗೌಡ.ರಾಜೇಗೌಡ.ಎನ್ ಡಿ ರಾಜಣ್ಣ. ಇನ್ನಿತರರು ಇದ್ದರು.

Read More

ಹೆಚ್ ಡಿ ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಬಿನಿಗೆ ತೆರಳಿ ಬಾಗಿನ ಸಮರ್ಪಿಸಿದರು. ಮುಖ್ಯಮಂತ್ರಿಯಾದ ಮೊದಲನೆ ವರ್ಷವೆ ಬಾಗಿನ ಅರ್ಪಿಸುವ ಅವಕಾಶ ಬಸವರಾಜ ಬೊಮ್ಮಾಯಿವರಿಗೆ ಒದಗಿಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಲವು ಸಚಿಬರು ಹಾಗೂ ಶಾಸಕರೊಡನೆ ಕಪಿಲೆಗೆ ಬಾಗಿನ ಸಮರ್ಪಿಸಿದರು ನಂತರ ಮಾತನಾಡಿದ ಅವರು ರೈತರ ಮೊಗದಲ್ಲಿ ಮಂದಹಾಸ ಮೂಡಬೇಕದರೆ  ಕೆರೆ ಕಟ್ಟೆಗಳು ತುಂಬಿ ಹರಿಯಬೇಕು ಈ ವರ್ಷ  ಉತ್ತಮ ಮಳೆಯಾಗಿದ್ದು ಕಬಿನಿ ಅಣೆಕಟ್ಟು ತುಂಬಿದ್ದು ರೈತರ ಮುಖದಲ್ಲಿ ಸಂತೋಷ ಮೂಡಿದೆ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಶಕ್ತಿ ಹೆಚ್ ಡಿ ಕೋಟೆ  ವನಸಿರಿ ನಾಡಿಗಿದೆ ಮುಂದೆ ಕಬಿನಿಯಲ್ಲಿ  ಉತ್ತಮ  ಉದ್ಯಾನ ನಿರ್ಮಾಣ ಮಾಡಲು ನನ್ನ ಸಹಕಾರ ಇದ್ದೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್,  ಕೊಳ್ಳೆಗಾಲ ಶಾಸಕ ಎನ್ ಮಹೇಶ್, ನಂಜನಗೂಡು ಶಾಸಕ ಹರ್ಷವರ್ದನ್ ಸೇರಿದಂತೆ ಇತರೆ …

Read More

ತುಮಕೂರು: ನಗರದ ಸ್ಟೇಶನ್ ರಸ್ತೆಯ “ಸಮೃದ್ಧಿ ಗ್ರ್ಯಾಂಡ್” ಹೊಟೇಲ್ ನಲ್ಲಿ ಜಿ.ಎಲ್.ನಟರಾಜು ಅವರ ಸಾರಥ್ಯದ “ನಮ್ಮ ತುಮಕೂರು” ಡಿಜಿಟಲ್ ಮಾಧ್ಯಮವು ಸೋಮವಾರ(01-11-2021) ಲೋಕಾರ್ಪಣೆಯಾಯಿತು ಕನ್ನಡ ರಾಜ್ಯೋತ್ಸವ ಶುಭ ದಿನದಂದು ಸಂಜೆ ನಡೆದ  ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಕರಿಯಣ್ಣ ಮಾತನಾಡಿ,  ಮಾಧ್ಯಮಗಳು ಯಾವುದೇ ಮುಲಾಜಿಗೆ ಒಳಗಾಗಿ ಪರರ ಆಧೀನವಾಗಬಾರದು ಮತ್ತು ಗ್ರಾಮೀಣ ಪ್ರದೇಶದ ಶೋಷಿತರು, ನೊಂದವರ ಧ್ವನಿಯಾಗಬೇಕು. ನಟರಾಜುರವರ “ನಮ್ಮ ತುಮಕೂರು” ಮಾಧ್ಯಮ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ ಎಂದು ಶುಭಕೋರಿದರು. ಇನ್ನೋರ್ವ ಮುಖ್ಯ ಅತಿಥಿ ಸಾಹಿತಿ ಎನ್.ನಾಗಪ್ಪನವರು ಮಾತನಾಡಿ, ಹಸಿರು ಬೆಳೆದು ಅನ್ನ ನೀಡುವ ರೈತರ ಉಸಿರು ಉಳಿಸಲು, ರೈತರ ಅಭಿವೃದ್ಧಿಗೆ ಮಾಧ್ಯಮ ಬೆಳಕು ಚೆಲ್ಲಲಿ. ಈ ನಿಟ್ಟಿನಲ್ಲಿ “ನಮ್ಮ ತುಮಕೂರು” ಮಾಧ್ಯಮದ ಮೂಲಕ ನಟರಾಜು ಕೆಲಸ ಮಾಡುವಂತಾಗಲಿ ಎಂದು ಹಾರೈಸಿದರು. ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರಿ ಅವರು ಮಾತನಾಡಿ, ನಟರಾಜು ಅವರು ತಮ್ಮ ವಿದ್ಯಾರ್ಥಿ…

Read More

ಬೆಂಗಳೂರು: ಶ್ರೀಲಂಕಾ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನ.6ರವರೆಗೆ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನ.2ರಂದ 6ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊ ಅಲರ್ಟ್‌ ಮುಂದುವರಿಸಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದೇ 3ರಿಂದ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇದೇ 6ರಿಂದ ಮಳೆ ಹೆಚ್ಚಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದೆ. ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಬಹುದು.

Read More