Author: admin

ಶೈಕ್ಷಣಿಕ ವರ್ಷ ವಿಸ್ತರಣೆ ಹಿನ್ನೆಲೆ ತುಮಕೂರು ವಿಶ್ವವಿದ್ಯಾಲಯದ ಪೇಯಿಂಗ್‌ ಹಾಸ್ಟೆಲ್‌ ವಿದ್ಯಾರ್ಥಿನಿಯರು 3 ದಿನಗಳಿಂದ ಊಟವಿಲ್ಲದೆ ಉಪವಾಸ ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ಸಮಸ್ಯೆ ಬಗೆಹರಿಸುವುದು ಅತ್ಯಗತ್ಯವಾಗಿದೆ. ಹೌದು, ನಗರದ ರೈಲ್ವೇ ಸ್ಟೇಷನ್‌ ರಸ್ತೆಯಲ್ಲಿರುವ ವಿವಿ ಹೆಣ್ಮಕ್ಕಳ ವಿದ್ಯಾರ್ಥಿ ನಿಲಯದ(ಪೇಯಿಂಗ್‌) ವಿದ್ಯಾರ್ಥಿಗಳು ಇಂಥದ್ದೊಂದು ಸಂಕಷ್ಟಕ್ಕೆ ಸಿಲುಕಿದ್ದು, ನೂತನ ಶಿಕ್ಷಣ ನೀತಿಯಿಂದ ಶೈಕ್ಷಣಿಕ ವರ್ಷ 1 ತಿಂಗಳು ವಿಸ್ತರಣೆಯಾಗಿರುವುದು ಅವರ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ತುಮಕೂರು ವಿವಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ 128 ವಿದ್ಯಾರ್ಥಿನಿಯರಿದ್ದು, ವಿವಿ ಕಾಲೇಜು ವಿದ್ಯಾರ್ಥಿನಿಯರಿಗೆಂದೇ ಇರುವ ಈ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕ 16,000 ರೂ. ಊಟ, ವಸತಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಈ ಬಾರಿ ಕೋವಿಡ್‌ ಕಾರಣದ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆ 10 ತಿಂಗಳಿದ್ದ ಶೈಕ್ಷಣಿಕ ವರ್ಷವು 11 ತಿಂಗಳಿಗೆ ವಿಸ್ತರಣೆಗೊಂಡಿದ್ದು, ಇದೇ ಕಾರಣ ಹೇಳಿ ಹಾಸ್ಟೆಲ್‌ ವಾರ್ಡನ್‌ ವಿದ್ಯಾರ್ಥಿನಿಯರಿಗೆ ಸುಮಾರು 3 ದಿನಗಳಿಂದ ಊಟ ನೀಡದೆ, ವಿದ್ಯಾರ್ಥಿಗಳನ್ನು ಉಪವಾಸ ಕೆಡವಿ 1 ತಿಂಗಳಿಗೆ ತಗುಲುವ…

Read More

ಬೆಳಗಾವಿ: ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಬಾಲಕಿ ಗರ್ಭ ಧರಿಸಲು ಕಾರಣನಾದ ಯುವಕನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲ್ಲೂಕಿನ ಗೌಳಿವಾಡ ಗ್ರಾಮದ ಮಲ್ಲು ಅಪ್ಪು ಪಿಂಗಳೆ (19) ಬಂಧಿತ ಆರೋಪಿ. ಅದೇ ತಾಲ್ಲೂಕಿನ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ, ಕೆಲ ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಾಲಕಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿ ಮೇಲೆ ಪೋಕ್ಸೊ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 3,546 ಕ್ಯೂಸೆಕ್ ನೀರು ಹರಿದು ಬಂದಿದೆ. ನೀರಿನ ಮಟ್ಟ 130 ಅಡಿಗೆ ಏರಿಕೆಯಾಗಿ ಗುರುವಾರ ಸಂಜೆ 6: 45 ಗಂಟೆಗೆ ಕೋಡಿ ಹರಿದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಯಲುಸೀಮೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿರುವ ದೃಶ್ಯ ವೀಕ್ಷಿಸಲು ಜನರು ಕಾತರದಿಂದ ಕಾಯುತ್ತಿದ್ದರು. ವಿ.ವಿ.ಸಾಗರ ಜಲಾಶಯ ಸುಮಾರು 88 ವರ್ಷಗಳ ನಂತರ ಭರ್ತಿಯಾಗುತ್ತಿದ್ದು, ಕೋಡಿಯ ಮೂಲಕ ನದಿಗೆ ನೀರು ಹರಿಯಲಿದೆ. ವಿವಿ ಸಾಗರ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಡ್ಯಾಂನ ಗರಿಷ್ಟ ಮಟ್ಟ ಸೆಪ್ಟೆಂಬರ್ 1ರಂದು ಸಂಜೆ ಗರಿಷ್ಠ 130 ಅಡಿಗೆ ಏರಿಕೆಯಾಗಿ ಭರ್ತಿಯಾಗಿದೆ. ಒಳಹರಿವು 4,564 ಕ್ಯೂಸೆಕ್ ಇದೆ. ಗರಿಷ್ಟ ಮಟ್ಟ 130 ಅಡಿ ತಲುಪಿದ್ದು, ಭರ್ತಿಯಾಗಿ ಕೋಡಿ ಹರಿದಿದೆ. ಹೆಚ್ಚುವರಿ ನೀರು ಕೋಡಿಯ ಮೂಲಕ ನದಿಗೆ ಹರಿಯಲಿದ್ದು, ಈಗಾಗಲೇ ನದಿಪಾತ್ರದ ಇಕ್ಕೆಲಗಳ ಹಾಗೂ ತಗ್ಗು ಪ್ರದೇಶದ ಜನಗಳಿಗೆ ತಮ್ಮ…

Read More

ತಿಪಟೂರು: ತಾಲೂಕು ಪಂಚಾಯಿತಿ ಆವರಣದಲ್ಲಿ ಜವಾಬ್ದಾರಿಯುತ ಸ್ಥಾನಕ್ಕೆ ಅನ್ಯ ಇಲಾಖೆಯ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿರುವ ಸರ್ಕಾರದ ಕ್ರಮ ಖಂಡಿಸಿ ತಿಪಟೂರು ತಾಲೂಕು ಪಂಚಾಯಿತಿ ನೌಕರರು ಸಾಂಕೇತಿಕ ಧರಣಿ ನಡೆಸಿದರು. ತಾಲೂಕು ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಮಾತನಾಡಿ, ತಾಲೂಕು ಕಾರ್ಯನಿರ್ವಾಹಕ ಹುದ್ದೆ ವಿಭಾಗ ಅಧಿಕಾರಿಗಳಿಗೆ ಸಮಾನ ಹುದ್ದೆಯಾಗಿದ್ದು, ಇಂತಹ ಹುದ್ದೆಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಕಾರ್ಯನಿರ್ವಹಿಸಿ ಅನುಭವ ಇರುವ ಅಧಿಕಾರಿಗಳನ್ನು ಪರಿಗಣಿಸದೆ, ರಾಜ್ಯ ಸರ್ಕಾರ ಹಗರಿಬೊಮ್ಮನಹಳ್ಳಿ ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಯಂತರ ಎಸ್ ಎಸ್ ಪ್ರಕಾಶ್ ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ಹೂವಿನಹಡಗಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿ, ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಸೇರಿ ಸರ್ಕಾರದ ವಿರುದ್ಧ ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಿದರು. ಬಳಿಕ ಧರಣಿ ನಿರತರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಂ ಸುದರ್ಶನಿಗೆ ಮನವಿ ಪತ್ರ ಸಲ್ಲಿಸಿದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ…

Read More

ಪಾವಗಡ:  ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಸಿ.ಕೆ.ಪುರ ಗ್ರಾಮದ ಲಕ್ಷ್ಮಮ್ಮ ಈರಣರವರ ರಾಜೀನಾಮೆಯಿಂದ ತೆರವಾಗಿದ್ದ ಸಿ.ಕೆ.ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರತ್ನಮ್ಮ ಕೊಂಡಪ್ಪರವರು ನಾಮಪತ್ರ ಸಲ್ಲಿಸಿದ್ದರು ಅಂತಿಮವಾಗಿ ರತ್ನಮ್ಮ ಕೊಂಡಪ್ಪ ರವರು 14 ಮತಗಳನ್ನು ಪಡೆದು. ಅವಿರೋಧವಾಗಿ ಆಯ್ಕೆಯಾದರು. ತಾಲ್ಲೂಕು ದಂಡಾಧಿಕಾರಿ ವರದರಾಜು ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಆನಂದ್ ರಾವ್ ಹಾಗೂ ಪ್ರಭಾಕರ್ ಟಿ.ಎನ್. ಕೋಟೆ ರವರು ಮಾತನಾಡುತ್ತಾ, ಪಂಚಾಯತಿಯಲ್ಲಿ ಒಳ್ಳೆಯ ಅಭಿವೃದ್ಧಿ  ಕೆಲಸ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು. ಈ ವೇಳೆ ಮುಖಂಡರುಗಳಾದ ಊರಿನ ಮುಖಂಡರಾದ ಸಿ.ಎನ್. ಆನಂದ್ ರಾವ್ ಎಸ್ ಎಸ್ ಕೆ ಸಂಘದ ಉಪಾಧ್ಯಕ್ಷ ಅಜಯ್ ನಾಗೇಶ್ ,  ಯರ್ರಪ್ಪ ಕೆಇಬಿ , ಆರ್ ಐ. ಶ್ರೀನಿವಾಸ್,  ವಿ.ಎ ರಾಮಲಿಂಗಪ್ಪ ,  ಪಿಡಿಒ ಸುದರ್ಶನ್,  ಎ ಎಸ್ ಐ ರಾಜೇಶ್,  ಕರಾ ವಸೂಲಿಗಾರ ನಾಗರಾಜ್,…

Read More

ಚಿತ್ರದುರ್ಗ, ಸೆಪ್ಟೆಂಬರ್ 2: ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಶರಣರ ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ‌. ಬಸವರಾಜ್ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಶಿವಮೂರ್ತಿ ಶರಣರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡವು, ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿರುವುದನ್ನು ಗಮನಿಸಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಹೆಚ್ಚು ಏರುಪೇರು ಉಂಟಾಗಿದ್ದು ಅವರನ್ನು ರಸ್ತೆ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಹೇಳಿದರು. ಶಿವಮೂರ್ತಿ ಶರಣರಿಗೆ ಎದೆನೋವು: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಶುಕ್ರವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತು. ಎದೆ ನೋವಿನಿಂದ ಬಳಲುತ್ತಿದ್ದ ಶ್ರೀಗಳಿಗೆ ಬೆಳಿಗ್ಗೆಯಿಂದಲೇ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ ಹೃದಯರೋಗ ಇರುವುದು ಹಾಗೂ ರಕ್ತದೊತ್ತಡ ಹೆಚ್ಚು ಇರುವುದರಿಂದ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಬೇಕಾಗಿದೆ. ದಾವಣಗೆರೆ ನಾರಾಯಣ ಹೃದಯದ…

Read More

ರಾಮನಗರ, ಸೆಪ್ಟೆಂಬರ್ 2: ಕಳೆದೆರಡು ವರ್ಷ ಕೋವಿಡ್ ಹಾವಳಿಯ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಗಣೇಶೋತ್ಸವ ಈ ಬಾರಿ ಕೋವಿಡ್ ಭೀತಿ ಕಡಿಮೆಯಾದ ಕಾರಣ ಜಿಲ್ಲಾದ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮೆರವಣಿಗೆ ಮಾಡಿ ವಿಸರ್ಜನೆ ಮಾಡಲು ಸಜ್ಜಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಎರಡು ದಿನ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಜಿಲ್ಲೆಯಲ್ಲಿ ಒಟ್ಟು 1492 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಬಹುತೇಕ ಗಣೇಶ ಮೂರ್ತಿಗಳನ್ನು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಶುಕ್ರವಾರ ಹಾಗೂ ಭಾನುವಾರ ವಿಸರ್ಜನೆ ಮಾಡಲು ಗಣೇಶೋತ್ಸವ ಸಮಿತಿಗಳು ಸಜ್ಜಾಗಿವೆ. ಅಲ್ಲದೇ ಜಿಲ್ಲೆಯು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾದ ಕಾರಣ ಸೆಪ್ಟೆಂಬರ್ 2 ಹಾಗೂ 04 ರ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ 02-09-2022 ರಂದು ಬೆಳಿಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಮತ್ತು ದಿನಾಂಕ 04-09-2022 ರಂದು…

Read More

ಮುರುಘಾ ಮಠದ ವಸತಿ ನಿಲಯದ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಹಾಸ್ಟೆಲ್‌ ವಾರ್ಡನ್‌ ರಶ್ಮಿಯನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯರು ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯ ನೆರವಿನೊಂದಿಗೆ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾದ 6 ದಿನಗಳಾದರೂ ಶ್ರೀಗಳ ಬಂಧನ ಮಾಡಿರುವ ಕ್ರಮವನ್ನು ಖಂಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಮಾಡಲಾಗಿತ್ತು. ಕೊನೆಗೆ ಗುರುವಾರ ರಾತ್ರಿ ಸ್ವಾಮೀಜಿಯನ್ನು ಬಂಧಿಸಲಾಗಿತ್ತು. ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸ್ವಾಮೀಜಿಗೆ ನೆರವಾಗಿರುವ ಆರೋಪ ಎದುರಿಸಿ 2ನೇ ಆರೋಪಿಯಾಗಿದ್ದ ರಶ್ಮಿಯನ್ನು ಗುರುವಾರವೇ ವಶಕ್ಕೆ ಪಡೆದು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಶುಕ್ರವಾರದಂದು ರಶ್ಮಿಯನ್ನು ಬಂಧಿಸಿರುವ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ. ಎರಡನೇ ಆರೋಪಿಯಾಗಿರುವ ರಶ್ಮಿ ಸ್ವಾಮೀಜಿಗೆ ಹಣ್ಣು ತೆಗೆದುಕೊಡುವಂತೆ ಹೇಳಿ ನಮ್ಮನ್ನು ರೂಮಿಗೆ ಕಳುಹಿಸುತ್ತಿದ್ದರು ಎಂದು ಬಾಲಕಿಯರು ವಿಚಾರಣೆ ವೇಳೆ ಆರೋಪಿಸಿದ್ದಾರೆ. ಒಟ್ಟು ಐವರ ವಿರುದ್ಧ ಪೋಕ್ಸೋ…

Read More

ನವದೆಹಲಿ : ಕರ್ನಾಟಕದ ಗ್ರಾಮೀಣ ಅಭಿವೃದ್ಧಿಗಾಗಿ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಇಲಾಖೆಯು 628 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಕೇಂದ್ರ ಹಣಕಾಸು ಇಲಾಖೆಯು ದೇಶದ ವಿವಿಧ ರಾಜ್ಯಗಳಿಗೆ ಒಟ್ಟು 4,190 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕಕ್ಕೆ 628 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಗ್ರಾಮೀಣಾ ಪ್ರದೇಶಗಳ ಸ್ವಚ್ಛತೆ, ಬಯಲು ಶೌಚಾಲಯ ಮುಕ್ತ ಯೋಜನೆಗಳ ಅನುಷ್ಠಾನಕ್ಕೆ ಬಳಸಬೇಕು. ಕುಡಿಯುವ ನೀರು, ಮಳೆ ನೀರು ಕೊಯ್ಲು ಮತ್ತು ನೀರು ಮರುಬಳಕೆಯ ಸೌಕರ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಾಷಿಂಗ್ಟನ್: ಸ್ಟಾರ್‌ಬಕ್ಸ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಹೆಸರಿಸಿದೆ. ಲಕ್ಷ್ಮಣ್ ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಓ ಹೊವಾರ್ಡ್ ಷುಲ್ಟ್ಜ್ ನಿರ್ಗಮನದ ನಂತ್ರ ಲಕ್ಷ್ಮಣ್ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸ್ವತಂತ್ರ ಸ್ಟಾರ್‌ಬಕ್ಸ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೆಲೋಡಿ ಹಾಬ್ಸನ್ ಅವರು ಲಕ್ಷ್ಮಣ್ ನರಸಿಂಹನ್ ಅವರನ್ನು ಸ್ಫೂರ್ತಿದಾಯಕ ನಾಯಕ ಎಂದು ಕರೆದಿದ್ದಾರೆ. ಸ್ಟಾರ್‌ಬಕ್ಸ್‌ನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ನಮ್ಮ ಮುಂದಿರುವ ಅವಕಾಶಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಆಯ್ಕೆಯಾಗಿದೆ’ ಎಂದು ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More