Subscribe to Updates
Get the latest creative news from FooBar about art, design and business.
- ಜೆಡಿಎಸ್ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಕೆ.ಎಂ.ಕೃಷ್ಣನಾಯಕ ಕರೆ
- ಹಿಂದೆ ಜಾರಿಯಲ್ಲಿದ್ದ ಮೀಸಲಾತಿ ಮುಂದುವರಿಸಿ: ಮಾ. 24 ರಂದು ಬೆಂಗಳೂರು ಚಲೋ: ತಿಪ್ಪೇಸ್ವಾಮಿ
- ಕಸಾಪ ಭವನಕ್ಕೆ ಜಾಗ ನೀಡಿ: ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ
- ಸಚಿವ ಶಿವರಾಜ್ ತಂಗಡಗಿಗೆ ದಿಢೀರ್ ಎದೆನೋವು: ತುಮಕೂರಿನ ಆಸ್ಪತ್ರೆಗೆ ದಾಖಲು
- ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ
- ಸಿದ್ದರಬೆಟ್ಟ ಶ್ರೀ ಮಠದ 20ನೇ ವರ್ಷದ ವಾರ್ಷಿಕೋತ್ಸವ: ಜೂನ್ 21ಕ್ಕೆ ಅದ್ಧೂರಿ ಕಾರ್ಯಕ್ರಮ, ಡಾ. ವೀರೇಂದ್ರ ಹೆಗ್ಗಡೆಯವರಿಗೆ ‘ಸಿದ್ಧ ಶ್ರೀ’ ಪ್ರಶಸ್ತಿ
- ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ದಾಳಿಂಬೆ ಬೆಳೆ ನಷ್ಟ | ರೈತರ ಸಂಕಷ್ಟ ಆಲಿಸಿದ ಚಿದಾನಂದ್ ಎಂ.ಗೌಡ
- ಮಾ. 24 ರಂದು ತುರುವೇಕೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ಕುಂದು ಕೊರತೆ ಸಭೆ
Author: admin
ಕೊರಟಗೆರೆ : ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದ ಮಾಜಿ ಸೈನಿಕ ಗಿರಿಯಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ತಮ್ಮ 75ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ. ಗಿರಿಯಪ್ಪನವರು ಸುಮಾರು 20 ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ತಮ್ಮ ಸೈನಿಕ ಸೇವೆಯನ್ನು ಸಲ್ಲಿಸಿದ್ದರು. ಕೆಲವು ತಿಂಗಳ ಹಿಂದೆ ವಯೋಸಹಜ ಕಾಯಿಲೆಗಳಿಗೆ ತುತ್ತಾದ ಅವರು ಇಂದು ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ತಾಲ್ಲೂಕಿನ ಮಾಜಿ ಸೈನಿಕರು ಹಾಗೂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಮ್ಮತುಮಕೂರು ಜೊತೆಗೆ ಮಾತನಾಡಿದ ತಾಲೂಕಿನ ಮಾಜಿ ಸೈನಿಕರು, ದೇಶದ ಸೇವೆಯನ್ನು ಮಾಡಿದ ನಮಗೆ ಸರ್ಕಾರದಿಂದ ನೀಡಬೇಕಿರುವ ಸೌಲಭ್ಯಗಳನ್ನು ನೀಡದೆ ಅವಮಾನಿಸುತ್ತಿರುವುದು ನಮಗೆ ಬೇಸರ ತಂದಿದೆ. ಆದ್ದರಿಂದ ಇನ್ನು ಮುಂದೆಯಾದರೂ ಸರ್ಕಾರ ನಮಗೆ ನೀಡಬೇಕಾದ ಗೌರವ ಮತ್ತು ಮೂಲಭೂತ ಸೌಕರ್ಯಗಳನ್ನ ನೀಡಬೇಕೆಂದು ಆಗ್ರಹಿಸಿದರು. ವರದಿ: ಮಂಜುಸ್ವಾಮಿ.ಎಂ.ಎನ್.,…
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕರಾದ ಎಂ.. ವೀರಭದ್ರಯ್ಯ ಮತ್ತು ತುಮಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಹಾಲಿನ ಡೈರಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ನಂತರ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ಹಾಲಿನ ಡೈರಿ ಪ್ರಾರಂಭಮಾಡಿದ ಉದ್ದೇಶವೇ ಬೇರೆ ಆಗಿತ್ತು. ರೈತರ ಮನೆಗಳಲ್ಲಿ ನಾಟಿ ಸೀಮೆ ಹಸುಗಳಿಂದ ಕರಿತಕ್ಕಂತಹ ಹಾಲನ್ನು ಮೊದಲು ಮನೆ ಬಳಕೆಗೆ ಉಪಯೋಗಿಸಿ ನಂತರ ಉಳಿಕೆ ಹಾಲನ್ನು ಡೈರಿಗೆ ಹಾಕಲಾಗುತ್ತಿತ್ತು. ಆದರೆ ಈಗ ಹಂಗಲ್ಲ ಮನೆಗಳಲ್ಲಿ ಸರಿಯಾಗಿ ಹಾಲು ಉಪಯೋಗಿಸದೆ ಸಂಪೂರ್ಣ ಹಾಲನ್ನು ಡೈರಿಗೆ ಹಾಕಲಾಗುತ್ತಿದೆ ಇದರಿಂದ ಮನೆ ಮಕ್ಕಳ ಪೌಷ್ಠಿಕತೆಗೆ ಹಾನಿಯಾಗುತ್ತಿದೆ. ಆದ್ದರಿಂದ ಮನೆ ಮಕ್ಕಳ ಪೌಷ್ಟಿಕತೆಯ ಬಗ್ಗೆ ಕಾಳಜಿವಹಿಸಿ ಎಂದು ಅವರು ಸಲಹೆ ನೀಡಿದರು. ರೈತರಿಗೆ ಹೈನುಗಾರಿಕೆ ಅನ್ನೋದು ಒಂದು ರೀತಿಯಲ್ಲಿ ಶ್ರೀರಕ್ಷೆ ಇದ್ದಹಾಗೆ. ರೈತರಿಗೆ ವಾರಕ್ಕೊಮ್ಮೆ ಬಟವಾಡಿ ರೂಪದಲ್ಲಿ ನೇರವಾಗಿ ಹಣ ಸಿಗುತ್ತದೆ ಇದರಿಂದ ಜೀವನ ನಿರ್ವಹಣೆಗೆ ಅಲ್ಪ ಮಟ್ಟದಲ್ಲಿ ಸಹಾಯವಾಗುತ್ತದ ಎಂದು ತಿಳಿಸಿದರು. ಶಾಸಕರಾದ…
ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್ ನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ರಾಜ್ಯದ ಹಲವು ಲೋಕಾಯುಕ್ತ ತಂಡ ಧಿಡೀರ್ ದಾಳಿ ನಡೆಸಿದೆ. ಕಲಬುರಗಿ, ಬೀದರ್, ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ಬೀದರನ ಹುಮ್ನಾಬಾದ್, ಬೆಂಗಳೂರಿನ ಅತ್ತಿಬೆಲೆ ಆರ್ ಟಿ ಓ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಕರಡು ಮಸೂದೆಯಲ್ಲಿ ಉಲ್ಲೇಖಿಸಲಾದ ನಿಬಂಧನೆಯನ್ನು ಆನ್‌ಲೈನ್ ಗುರುತಿನ ವಂಚನೆಯ ಪಿಡುಗನ್ನು ನಿಭಾಯಿಸುವ ಪ್ರಯತ್ನದಲ್ಲಿ ಸಿದ್ಧಪಡಿಸಲಾಗಿದೆ. ಸೈಬರ್ ವಂಚನೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ, ಗುರುತಿನಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಂಬಂಧಿತ ಸ್ಥಳಗಳಲ್ಲಿ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಸಂವಹನ ಇಲಾಖೆ ಕರಡು ಮಸೂದೆಯಲ್ಲಿ ತಿಳಿಸಿದೆ. ಭಾರತೀಯ ದೂರಸಂಪರ್ಕ ಮಸೂದೆ 2022 ರ ಕರಡಿನಲ್ಲಿ ಬರೆದಿರುವಂತೆ ಮೆಟಾ ಒಡೆತನದ ವಾಟ್ಸಾಪ್, ಝೂಮ್ ಮತ್ತು ಗೂಗಲ್ ಡ್ಯುಯೋವನ್ನು ಟೆಲಿಕಾಂ ಪರವಾನಗಿಯ ವ್ಯಾಪ್ತಿಗೆ ತರಲು ಕೇಂದ್ರವು ಪ್ರಸ್ತಾಪಿಸಿದೆ. ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಮಾನ್ಯತೆ ಪಡೆದ ವರದಿಗಾರರನ್ನು ಭಾರತದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಪತ್ರಿಕಾ ಸಂದೇಶಗಳಿಗೆ ಅಡ್ಡಿಪಡಿಸುವುದರಿಂದ ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ. ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ…
ನವದೆಹಲಿ: ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಂನಲ್ಲಿ ಗರಿಷ್ಠ ಹಣ ಸಂಪಾದನೆ ಮಾಡುವ ವಿಶ್ವದ ಅಗ್ರ 15 ಸೆಲೆಬ್ರಿಟಿಗಳಲ್ಲಿ ಕೊಹ್ಲಿ ಒಬ್ಬರು ಎನ್ನಿಸಿದ್ದಾರೆ.ಕೊಹ್ಲಿ ಅವರು ಇನ್ಸ್ಟಾಗ್ರಾಂನಲ್ಲಿ 21 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಹೋಪರ್ ಎಚ್ಕ್ಯೂ ಬಿಡುಗಡೆ ಮಾಡಿರುವ ಅಂಕಿ& ಅಂಶಗಳ ಪ್ರಕಾರ, ಕ್ರಿಶ್ಚಿಯಾನೊ ರೊನಾಲ್ಡೊ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದಾರೆ. ಅವರು ಪ್ರತಿ ಪ್ರಾಯೋಜಿತ ಪೋಸ್ಟ್ಗೆ 19.5 ಕೋಟಿ ರೂ. ಪಡೆಯುತ್ತಾರೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿರುವ ಅಗ್ರ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲೂಕಿನ ಮಣಿಕ್ಕಾರ್ ಅಂಚೆಯ ಬೆಳ್ಳಾರಿ ಗ್ರಾಮದ ನೆಟ್ಟಾರು ಹೌಸ್ ನಿವಾಸಿಯಾದ ಶ್ರೀಮತಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಹಿರಿಯ ಸಹಾಯಕ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವಂತೆ ಆದೇಶಿಸಿದ್ದಾರೆ. ಜುಲೈ 26 ರಂದು ದಕ್ಷಿಣ ಕನ್ನಡದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹಂತಕರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದು, ಇದು ಇಡೀ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಈ ವೇಳೆ ಪ್ರವೀಣ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ ಬೊಮ್ಮಾಯಿ ಕುಟುಂಬಕ್ಕೆ ಸರ್ಕಾರದ ಹುದ್ದೆಯನ್ನ ಕೊಡುವ ಭರವಸೆ ನೀಡಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಬೆಳಗಾವಿ : ಗಂಟುರೋಗದಿಂದ ದನಗಳು ಮೃತಪಟ್ಟರೆ ಪಟ್ಟರೆ 20 ಸಾವಿರ ರೂ.ಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಜಾನುವಾರುಗಳ ಗಂಟುರೋಗ ಸಮಸ್ಯೆ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಸರಕಾರದ ಗಮನ ಸೆಳೆದಿದ್ದರು. ಸಮಸ್ಯೆ ತೀರಾ ಗಂಭೀರವಾಗಿದ್ದು, ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕು. ಜಾನುವಾರುಗಳು ಮೃತಪಟ್ಟರೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದರು. ಸಮಸ್ಯೆ ಗಂಭೀರತೆಯನ್ನು ಅವರು ತೆರೆದಿಟ್ಟಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಕ್ಷ್ಮೀ ಹೆಬ್ಬಾಳಕರ್ ರೈತರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ಭರಿಸುವ ಮತ್ತು ಇದಕ್ಕಾಗಿ ವಿಶೇಷ ತಂಡವನ್ನು ಕಳಿಸುವ ಭರವಸೆ ನೀಡಿದ್ದಕ್ಕಾಗಿ ಸಹ ಮುಖ್ಯಮಂತ್ರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಬಿಡೆನ್ ಸರ್ಕಾರ ಭಾರತೀಯ ಟೆಕ್ಕಿಗಳಿಗೆ ಗುಡ್ ನ್ಯೂಸ್ ನೀಡುತ್ತಿದೆ. ನೀವು.. 7 ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿದ್ದೀರಾ.. ನೀವು H-1B ವೀಸಾದಲ್ಲಿ IT ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಾ.. ಗ್ರೀನ್ ಕಾರ್ಡ್.. ನೀವು ಅಮೇರಿಕನ್ ಪೌರತ್ವವನ್ನು ಪಡೆಯಬಹುದು. ಇದಕ್ಕಾಗಿ ವಲಸೆ ಕಾಯಿದೆಯಲ್ಲಿ (ಯುಎಸ್ ಇಮಿಗ್ರೇಷನ್ ಆಕ್ಟ್) ತಿದ್ದುಪಡಿಗಳನ್ನು ಸೇರಿಸಲಾಗಿದೆ. ಕೆಲವು ವರ್ಗಗಳಲ್ಲಿ ಕೆಲಸ ಮಾಡುವ ಭಾರತೀಯ ತಾಂತ್ರಿಕ ವೃತ್ತಿಪರರಿಗೆ ಅನುಕೂಲವಾಗುವಂತೆ ನಿಬಂಧನೆಗಳನ್ನು ತಿದ್ದುಪಡಿ ಮಾಡಲು US ಸೆನೆಟ್‌ನಲ್ಲಿ ಮಸೂದೆಯನ್ನು ಪರಿಚಯಿಸಲಾಗಿದೆ. ಇದರ ಪ್ರಕಾರ ಸತತ ಏಳು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೆ ಗ್ರೀನ್ ಕಾರ್ಡ್ ಪಡೆಯಲು ಅರ್ಹರು. ಈ ಮಸೂದೆಯನ್ನು ಸೆನೆಟರ್ ಅಲೆಕ್ಸ್ ಪಡಿಲ್ಲಾ ಪ್ರಸ್ತಾಪಿಸಿದರು ಮತ್ತು ಇತರ ಸೆನೆಟರ್‌ಗಳಾದ ಎಲಿಜಬೆತ್ ವಾರೆನ್, ಬೆನ್ರಾಯ್ ಲುಜಾನ್ ಮತ್ತು ಡಿಕ್ ಡರ್ಬಿನ್ ಅವರು ಬೆಂಬಲಿಸಿದರು. US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಕಾಂಗ್ರೆಸ್‌ನ ಜೋ ಲೌಗ್‌ಗ್ರೆನ್ ಈ ಮಸೂದೆಯನ್ನು ಮಂಡಿಸಿದರು. ಜೋ ಲೌಗ್ರೆನ್ ಪ್ರಸ್ತುತ ವಲಸೆಯ ಮೇಲಿನ ಹೌಸ್ ಉಪಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.…
ಲಕ್ನೋ: ಒಬ್ಬ ವ್ಯಕ್ತಿ ಒಂದು ವರ್ಷದಿಂದ ಸ್ಟೀಲ್ ಚಮಚ ತಿನ್ನುತ್ತಿದ್ದಾನೆ. ಹೊಟ್ಟೆ ನೋವಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವರ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆದಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೊಪ್ಪದ ಗ್ರಾಮದ 32 ವರ್ಷದ ವಿಜಯ್ ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದ ಕುಟುಂಬಸ್ಥರು ಅವರನ್ನು ಮುಜರಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯ್ ನನ್ನು ಪರೀಕ್ಷಿಸಿದ ವೈದ್ಯರು ಎಕ್ಸ್ ರೇ ಮೂಲಕ ಆತನ ಹೊಟ್ಟೆಯಲ್ಲಿ ಸ್ಟೀಲ್ ಸ್ಪೂನ್ ಗಳು ಪತ್ತೆಯಾಗಿವೆ. ಕಾರ್ಯಾಚರಣೆಯ ನಂತರ ಅವರ ಹೊಟ್ಟೆಯಿಂದ 62 ಚಮಚಗಳನ್ನು ತೆಗೆಯಲಾಯಿತು. ಏತನ್ಮಧ್ಯೆ, ವೈದ್ಯರು ವಿಜಯ್ ಅವರನ್ನು ಚಮಚ ತಿನ್ನುತ್ತಿದ್ದೀರಾ ಎಂದು ಕೇಳಿದರು. ಕಳೆದೊಂದು ವರ್ಷದಿಂದ ಸ್ಪೂನ್ ತಿನ್ನುತ್ತಿದ್ದೇನೆ ಎಂದರು. ಸುಮಾರು ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ವಿಜಯ್ ಅವರ ಹೊಟ್ಟೆಯಲ್ಲಿದ್ದ 62 ಸ್ಟೀಲ್ ಸ್ಪೂನ್ ಗಳನ್ನು ಹೊರತೆಗೆಯಲಾಗಿದೆ ಎನ್ನಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಚಾಮರಾಜನಗರ : ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ನಮ್ಮ ಭಾರತ್ ಜೋಡೋ ಯಾತ್ರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಸಮಾವೇಶದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ , ಯಾರಿಂದಲೂ, ಯಾತ್ರೆಯನ್ನು ನಿಲ್ಲಿಸಲು ಆಗುವುದಿಲ್ಲ. ಭಾರತ್ ಜೋಡೋ ಉದ್ದೇಶ ಭಾಷಣ ಮಾಡುವುದಕ್ಕೆ ಅಲ್ಲ. ಬಿಜೆಪಿಯವರು ವಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜೊತೆ ಇಡೀ ದೇಶದ ಜನರು ಇದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ನಿರುದ್ಯೋಗ ಇದೆ ಎಂದು ರಾಹುಲ್ ಗಾಂಧಿ ಹೇಳಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಾವು ಪಾದಯಾತ್ರೆ ಮಾಡುತ್ತೇವೆ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತದ ವಿರುದ್ಧ ನಮ್ಮ ಪ್ರತಿಭಟನೆ ನಡೆಯುತ್ತದೆ, ಈ ಪಾದಯಾತ್ರೆಯಲ್ಲಿ ಯಾವುದೇ ದ್ವೇಷ, ಹಿಂಸೆ ಇಲ್ಲ, ಎಲ್ಲಾ ಧರ್ಮದ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಯಾರಿಂದ ಕೂಡ ಈ ಜೋಡೋ ಯಾತ್ರೆ ನಿಲ್ಲಿಸಲು ಆಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.…