Author: admin

ಪಟಿಯಾಲ: 1988 ರ ರೋಡ್ ರೇಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಸೋಮವಾರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಿಧು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ ಭಾರೀ ಭದ್ರತೆಯಲ್ಲಿ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ನವಜೋತ್ ಸಿಧು ಜೈಲಿನಲ್ಲಿ ವಿಶೇಷ ಆಹಾರಕ್ರಮವನ್ನು ಬಯಸಿದ್ದಾರೆ ಎಂದು ಕ್ರಿಕೆಟಿಗ-ರಾಜಕಾರಣಿಯ ವಕೀಲ ಎಚ್ ಪಿಎಸ್ ವರ್ಮಾ ಅವರು ಹೇಳಿದ್ದಾರೆ. ವೈದ್ಯರ ತಂಡ ಆಸ್ಪತ್ರೆಯಲ್ಲಿ ನವಜೋತ್ ಸಿಧು ಅವರ ವಿವರವಾದ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತದೆ ಎಂದು ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಅಣೆಕಟ್ಟೆಯನ್ನು ಏರಲು ಯತ್ನಿಸುತ್ತಿದ್ದ 20 ವರ್ಷದ ಯುವಕನೊಬ್ಬ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ನೀರು ಕೆಳಗೆ ಹರಿಯುತ್ತಿದ್ದಂತೆ ಯುವಕ ಅಣೆಕಟ್ಟಿನ ಗೋಡೆಯನ್ನು ಹತ್ತುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅನೇಕ ಜನರು ಅಪಾಯಕಾರಿ ಸಾಧನೆಯನ್ನು ನೋಡುತ್ತಿರುವುದನ್ನು ಕಾಣಬಹುದು. ಅವನು ಸುಮಾರು 25 ಅಡಿ ಎತ್ತರವನ್ನು ತಲುಪಿದ ನಂತರ, ಅವನು ಜಾರಿ ಬೀಳುತ್ತಾನೆ ಮತ್ತು ಹತ್ತಿರದಲ್ಲಿ ಕಾಯುತ್ತಿದ್ದವರು ಬೊಬ್ಬೆ ಹೊಡೆಯುತ್ತಿರುವುದು ಕಂಡು ಬಂದಿದೆ. ಈ ಗೋಡೆಯು ಸುಮಾರು 50 ಅಡಿ ಎತ್ತರವಿದೆ ಎಂದು ಹೇಳಲಾಗಿದೆ. ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ಗೋಡೆಯನ್ನು ಏರಲು ಪ್ರಯತ್ನಿಸಿದ ಯುವಕನ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ, ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ದಕ್ಷಿಣಕನ್ನಡ:  ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ (66) ಅನಾರೋಗ್ಯದಿಂದ ತಡರಾತ್ರಿ ಸಿಂಗಪುರದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಿಂಗಾಪುರಕ್ಕೆ ಚಿಕಿತ್ಸೆಗೆ ತೆರಳಿದ್ದರು. ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಚಾರ್ಯರಾಗಿ‌ ಹಲವು ವರ್ಷಗಳ ಕಾಲ ಡಾ.ಯಶೋವರ್ಮ ಸೇವೆ ಸಲ್ಲಿಸಿದ್ದರು. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವು ಸಮ್ಮೇಳನಗಳನ್ನು ನಡೆಸಿದ್ದರು.  ಮೃತರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ವಿ.ಹೆಗ್ಗಡೆಯವರ ಸಹೋದರರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಗುಬ್ಬಿ: ಪಟ್ಟಣದ ಸ್ವಚ್ಛತೆಗೆ ಎಲ್ಲರೂ ಕೂಡ ಕೈಜೋಡಿಸಬೇಕು ಇದರಿಂದ ಪಟ್ಟಣವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬಹುದು  ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಕರೆ  ನೀಡಿದರು. ಪಟ್ಟಣದ ವಿನಾಯಕ ನಗರದಲ್ಲಿ ಹೈನುಗಾರಿಕೆ ಮಾಡುತ್ತಿರುವ ಕುಟುಂಬವೊಂದು ಮನೆಯ ಪಕ್ಕದಲ್ಲಿಯೇ ಸಗಣಿ ತಿಪ್ಪೆಯನ್ನು ಹಾಕಿದ್ದರು.  ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ತಿಪ್ಪೆ ದುರ್ವಾಸನೆಯಿಂದ ಕೂಡಿದ್ದರಿಂದ ನಾಗರೀಕರು ತಿಪ್ಪೆಯನ್ನು ತೆಗೆಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೂಡಲೇ ಕ್ರಮವಹಿಸಿ ಮಾತನಾಡಿದ ಅವರು , ಎಲ್ಲರ ಸಹಕಾರದಿಂದ ಸ್ವಚ್ಛ ಪರಿಸರವನ್ನು ನಿರ್ಮಿಸಬೇಕಾಗಿದೆ. ತಮ್ಮ ಮನೆಯ ಮುಂದೆ ಹಿಂದೆ ಸ್ವಚ್ಛತೆಯನ್ನು ಕಾಪಾಡಿ ಕೊಂಡಾಗ ರೋಗರುಜಿನಗಳಿಂದ  ದೂರವಿರಬಹುದು  ಹಾಗಾಗಿ ವಿನಾಯಕ ನಗರದಲ್ಲಿ ಹಾಕಿದಂತಹ  ತಿಪ್ಪೆಯನ್ನು ಅಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಅಲ್ಲಿನ ಜನರಿಗೆ ಸಮಸ್ಯೆ ಆಗದಂತೆ ಪಟ್ಟಣ ಪಂಚಾಯಿತಿ ಕ್ರಮವಹಿಸಿದೆ  ಎಂದರು. ತಿಪ್ಪೆ ಹಾಕಿದ್ದ ರೈತ ಕುಟುಂಬಕ್ಕೂ ಸಹ ಪರಿಸರದ ಬಗ್ಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಬಗ್ಗೆ ಮಾಹಿತಿಯನ್ನು ನೀಡಿ ಅವರಿಂದ ಮತ್ತೊಮ್ಮೆ ಇಲ್ಲಿ ತಿಪ್ಪೆ ಆಗದಂತೆಮನವಿ ಮಾಡಿದ್ದೇನೆ ಎಂದು ತಿಳಿಸಿದರು. ವರದಿ: ಮಂಜುನಾಥ್, ಗುಬ್ಬಿ…

Read More

ತುಮಕೂರು: ಟಿಪ್ಪು ಓರ್ವ ದೇಶ ಭಕ್ತ. ಅವರು ಮತಾಂಧ ಆಗಿದ್ದರೆ ಹಿಂದೂ ದೇವಾಲಯಗಳು ಉಳಿಯುತ್ತಿತ್ತಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಡಿವಾಳ-ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು,  ನಮಗೆ ಗಾಂಧಿ ಹೇಳಿರುವ ಹಿಂದೂವಾದ ಬೇಕು. ಗೋಡ್ಸೆ ಹೇಳಿರುವ ಹಿಂದೂವಾದ ಬೇಡ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಾನು ಅಲ್ಪಸಂಖ್ಯಾತರ ಪರ ಮಾತಾಡಿದ್ರೆ ಈ ಸಂಘ ಪರಿವಾರವರು ನನಗೆ ನೀನೇನು ಮುಸ್ಲಿಂ ಜಾತಿಗೆ ಹುಟ್ಟಿದವನಾ? ಎಂದು ಕೇಳುತ್ತಾರೆ. ಧರ್ಮ ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸ ಸಂಘಪರಿವಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ. ನಾನೂ ಕೂಡ ಹಿಂದೂ, ನನ್ನ ಅಪ್ಪ ಕೂಡ ಹಿಂದೂ. ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ. ಹಿಂದೆ ಗೋಮಾಂಸ ತಿಂತೀರಾ ಎಂದು ನನಗೆ ಕೇಳಿದ್ದರು. ಆ ವೇಳೆ ಆಹಾರ ನಮ್ಮ ಹಕ್ಕು ಅದನ್ನು ಕೇಳುವರು ನೀವ್ಯಾರು ಅಂತಾ ಕೇಳಿದ್ದೆ ಎಂದು ಅವರು ಹೇಳಿದರು. ಬಿನ್ ಲಾಡನ್ ಹೇಳಿರುವ ಇಸ್ಲಾಂ ಧರ್ಮ ಬೇಡ. ಪೈಗಂಬರ್ ಹೇಳಿರುವ…

Read More

ಗುಬ್ಬಿ:  ಅಂಚೆ ಕಚೇರಿಯ ವಾಹನ,  ಓಮಿನಿ ಹಾಗೂ ಕಾರುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಹೇರೂರು ಗ್ರಾಮದ ಸಮೀಪ ಸಿಐಟಿ ಕಾಲೇಜು ಬಳಿ ನಡೆದಿದೆ. ಗಾಯಾಳುಗಳು ತಿಪಟೂರು ತಾಲೂಕಿನ ನೋವಿನಕೆರೆ ಹೋಬಳಿಯ ಧರ್ಮ ಗೌಡನಪಾಳ್ಯ ಗ್ರಾಮದಲ್ಲಿ ಎಂದು ತಿಳಿದು ಬಂದಿದೆ. ತುಮಕೂರಿನಿಂದ ನೊಣವಿನಕೆರೆ ಕಡೆಗೆ ಧಾವಿಸುತ್ತಿದ್ದ ಓಮಿನಿ,  ತಿಪಟೂರಿನಿಂದ ತುಮಕೂರಿನ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ವರದಿ: ಮಂಜುನಾಥ್ , ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು: ನಮ್ಮೆಲ್ಲರ ಜಾತಿ ಒಂದೆ. ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಾರಿದರು. ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಇಂದು ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಪೌರ ಕಾರ್ಮಿಕರಿಗೆ ತಮ್ಮ ಕೈಯ್ಯಾರೆ ಭೋಜನ ಉಣಬಡಿಸಿದರು. ಇದೇ ವೇಳೆ ಇಸ್ಲಾಂ ಧರ್ಮ ಗುರುಗಳ ತಟ್ಟೆಯಿಂದ ತುತ್ತು ತೆಗೆದುಕೊಂಡು ಸ್ವೀಕರಿಸಿದರಲ್ಲದೇ ದಲಿತ ಸ್ವಾಮೀಜಿಗೆ ಕೈತುತ್ತು ತಿನ್ನಿಸಿ, ತಾವೂ ಕೈ ತುತ್ತು ತಿನ್ನುವ ಮೂಲಕ ಸಹೋದರತೆ ಮೆರೆದರು. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ನಮ್ಮ ತುಮಕೂರು ವರದಿ:  ದೇಶದಲ್ಲಿ ಭೀತಿ ಸೃಷ್ಟಿಸುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸಮಾಜವನ್ನು ಒಡೆಯಬೇಕೆನ್ನುವ ದುರುದ್ದೇಶ ಇಲ್ಲಿ ಅಡಗಿದೆ. ಸಮುದಾಯಗಳ ನಡುವೆ ಸೌಹಾರ್ದಯುತ ವಾತಾವರಣ ಸೃಷ್ಟಿಸಲು ಕಾಂಗ್ರೆಸ್‌ ಸಾಕಷ್ಟು ಕೆಲಸ ಮಾಡಿದೆ. ಈ ಸಮುದಾಯಗಳನ್ನು ಅಭಿವೃದ್ಧಿ ಮಾಡಲು ಕಾಂಗ್ರೆಸ್  ಪಕ್ಷ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಅಮಾನಿಕೆರೆಯಲ್ಲಿರುವ ಗಾಜಿನಮನೆಯಲ್ಲಿ  ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಲ್ಪಸಂಖ್ಯಾತರ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಸಮುದಾಯಗಳನ್ನು ಅಭಿವೃದ್ಧಿ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ  ಎಂದರು. ಇತ್ತೀಚೆಗೆ ದೇಶದಲ್ಲಿ ಭೀತಿ ಸೃಷ್ಟಿಸುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸಮಾಜವನ್ನು ಒಡೆಯಬೇಕೆನ್ನುವ ದುರುದ್ದೇಶ ಇದರಲ್ಲಿ ಅಡಗಿದೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಸಯ್ಯದ್‌ ನಾಸೀರ್‌ ಹುಸೇನ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ  ಸಲೀಂ ಅಹ್ಮದ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನೂ ರಾಜ್ಯ ರಾಜ್ಯ ಮಡಿವಾಳರ ಸಂಘ  ತುಮಕೂರಿನಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,  ಮಡಿವಾಳ ಸಮುದಾಯದ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆ ಬಸವರಾಜ್ ಹಾಸ್ಪಿಟಲ್‌ ರಸ್ತೆಯಲ್ಲಿರುವ ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಿವಂಗತ ರಾಜೀವ್ ಗಾಂಧಿಯವರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ  ಮಾಜಿ ಸಚಿವರಾದ ಡಿ.ಸುಧಾಕರ್, ಈ ಹಿರಿಯೂರು ತಾಲ್ಲೂಕಿನಲ್ಲಿ,10 ವರ್ಷಗಳ ಕಾಲ ಎಲ್ಲಾ ವರ್ಗದ ಜನರಿಗೆ ನನ್ನ  ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನ್ನ ಆಡಳಿತ ಅವಧಿಯಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಆದಂತಹ  ಅಭಿವೃದ್ದಿ ಕಾರ್ಯಗಳು ಇನ್ನೂ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಹಿರಿಯೂರು ತಾಲ್ಲೂಕಿಗೆ ನನ್ನ  ಆಡಳಿತ ಅವಧಿಯಲ್ಲಿ ಆದಂತ ಕೋಟ್ಯಾಂತರ ರೂ.ಗಳ ಚೆಕ್ ಡ್ಯಾಂಗಳು, ಮುರಾರ್ಜಿ ಶಾಲೆಗಳು, ರಸ್ತೆ ಅಭಿವೃದ್ದಿ ಕೆಲಸಗಳನ್ನ ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ನಾನು ಮೂಲತಃ ರಾಜಕಾರಣಿಯಲ್ಲ. ನಾನು ರಾಜಕೀಯ ಮಾಡಲೂ ಬಂದಿಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡಲು ಬಂದಿರುವ ವ್ಯಕ್ತಿ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಎಲ್ಲಾರೂ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಂಜನಾ ಹಾಗೂ ಸೃಷ್ಠಿ ವಿ.ಆರ್. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ನಮ್ಮ ಹಿರಿಯೂರು ತಾಲ್ಲೂಕಿಗೆ , ಜಿಲ್ಲೆಗೆ , ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ. ಸಂಜನಾ  ರಾಷ್ಟ್ರೀಯ ಅಕಾಡೆಮಿ ಸ್ಕೂಲ್ ನ ವಿದ್ಯಾರ್ಥಿನಿಯಾಗಿದ್ದು, ಸೃಷ್ಠಿ ವಿ ಆರ್ ಅವರು ಮಸ್ಕಲ್ ಗ್ರಾಮದ ಬೀಮನಬಂಡೆ ಯಜ್ಞ ವಾಲ್ಕ್ಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಸಂಜನಾ ಮತ್ತು ಸಂಜನಾ ತಾಯಿ ಸಂಜನಾ ಹಾಗೂ ಸೃಷ್ಠಿ ವಿ ಆರ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಕನಸು ಕಂಡಿದ್ದರು. ಅವರ ಕನಸು ಶಾಲಾ ಶಿಕ್ಷಕರ ಸಹಕಾರ ಹಾಗೂ ಕುಟುಂಬಸ್ಥರ ಪ್ರೋತ್ಸಾಹದೊಂದಿಗೆ ಇಂದು ನೆರವೇರಿದೆ. ಇನ್ನೂ ತಮ್ಮ ಸಾಧನೆಯ ಕುರಿತಾಗಿ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಸಂಜನಾ ಹಾಗೂ ಸೃಷ್ಠಿ ವಿ ಆರ್ ಅವರು, ವಾರ್ಷಿಕ ಪರೀಕ್ಷೆ ರೀತಿಯಲ್ಲಿಯೇ ಆಗಾಗ ಕಿರುಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ…

Read More