Subscribe to Updates
Get the latest creative news from FooBar about art, design and business.
- ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ರಾಯಭಾರಿ, ಮಹಿಳಾ ಸಬಲೀಕರಣವೇ ಈ ಬಾರಿಯ ‘ಥೀಮ್’
- ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ: ಸಿಎಂ ಸಿದ್ದರಾಮಯ್ಯ
- ಹಾವೇರಿ: 7ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ, ಚಹಾ ಕುಡಿದು ಹೋದ ಕಳ್ಳರು!
- ಕೊರಟಗೆರೆ: ಜಿ.ಎಂ.ಕಾಮರಾಜ್ ಪಶ್ಚಿಮ ರೈಲ್ವೆ ಬೋರ್ಡ್ ನಿರ್ದೇಶಕರಾಗಿ ಆಯ್ಕೆ
- ಭ್ರಷ್ಟಾಚಾರ ಆರೋಪ: ಶ್ರವಣೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ತಮಟೆ ಚಳವಳಿ
- ಚಿರತೆ ದಾಳಿಯಿಂದಾಗಿ ಮಹಿಳೆ ಸಾವು: ದಾಳಿ ನಡೆದ 24 ಗಂಟೆ ಒಳಗೆ ಚಿರತೆ ಸೆರೆ
- ತಿಪಟೂರು: ಡಿಸೆಂಬರ್ 24ರಂದು ‘ಸಾಂಸ್ಕೃತಿಕ ವೈಭವ’ ಬೃಹತ್ ಕಾರ್ಯಕ್ರಮ
- ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Author: admin
ತುಮಕೂರು: ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಭೀಮಸಂದ್ರದಲ್ಲಿ ನಡೆದಿದ್ದು, ಘಟನೆಗೆ ಹಳೆಯ ವೈಷಮ್ಯ ಕಾರಣ ಎನ್ನಲಾಗಿದೆ. ಭೀಮಸಂದ್ರ ದ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಂಗರಾಜು ಎಂಬವರ ಮೇಲೆ ಕಿರಣ್ ಎಂಬಾತ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ. ಕೃತ್ಯದ ಬಳಿಕ ಆರೋಪಿಯು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಕುಣಿಗಲ್: ಉಪನೋಂದಣಾಧಿಕಾರಿ ಕಚೇರಿ ಕಿಟಕಿಯ ಸರಳು ಮುರಿದು, ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ತಡ ರಾತ್ರಿ ಕುಣಿಗಲ್ ನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಕಚೇರಿ ಒಳಗೆ ನುಗ್ಗಿದ ಕಳ್ಳರು ಬಿರು ಒಡೆದು ಕಳ್ಳತನಕ್ಕೆ ಯತ್ನಿಸಿದ್ದು, ನಗದು ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸಾಗಿದ್ದಾರೆ. ಗುರುವಾರ ಬೆಳಗ್ಗೆ ಕಚೇರಿಗೆ ಉಪನೋಂದಣಾಧಿಕಾರಿ ಯಶೋಧ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ, ಪ್ರಕರಣ ದಾಖಲಿಸಲಾಗಿದೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತಿಪಟೂರು: ಬೈಕ್ ಗೆ ಬೊಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಲ್ಲಿರುವ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಹಾಲ್ಕುರಿಕೆ ಗ್ರಾಮದ ವಾಸಿ ಸುಮಾರು 38ವರ್ಷ ವಯಸ್ಸಿನ ಮಂಜುನಾಥ್ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಮಂಜುನಾಥ್ ಅವರ ಪತ್ನಿಗೆ ಅಪಘಾತದಲ್ಲಿ ಗಾಯವಾಗಿದೆ. ಅಪಘಾತದ ವೇಳೆ ಮಂಜುನಾಥ್ ಅವರ ತಲೆ ರಸ್ತೆಗೆ ಅಪ್ಪಳಿಸಿದ ಪರಿಣಾಮ ತಲೆ ಛಿದ್ರಗೊಂಡಿದ್ದು, ಘಟನೆಯ ದೃಶ್ಯ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಅಪಘಾತದ ವೇಳೆ 112 ತುರ್ತು ವಾಹನಕ್ಕೆ ಕರೆ ಮಾಡಿದರೆ, 2 ಗಂಟೆಯಾದರೂ ತುರ್ತು ವಾಹನ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಗೆ ತೆರಳಲು ಸರಿಯಾದ ವಾಹನ ಸಿಗದೇ ಮಹಿಳೆ ಸಂಕಷ್ಟಕ್ಕೀಡಾದರು. 112ತುರ್ತುವಾಹನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ವರದಿ : ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಬಾಳೆ ಹೊನ್ನೂರು ಶಾಖಾ ಮಠದ ಸಮುದಾಯ ಭವನದಲ್ಲಿ ಪುಸ್ತಕ ದಾಸೋಹ ಕಾರ್ಯಕ್ರಮ ಆಯೋಜನೆಗೊಂಡಿತ್ತು ಶ್ರೀ ಮಠದ ವಿದ್ಯಾರ್ಥಿಗಳಿಂದ ವೇದ ಮಂತ್ರ ಪಠಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುಸ್ತಕ ದಾಸೋಹ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಆಟವಿ ಶಿವಲಿಂಗ ಮಹಾ ಸ್ವಾಮಿಜೀ ಮತ್ತು ಶ್ರೀ ಶ್ರೀ ಈಶ್ವರನಂದ ಪುರಿ ಮಹಾ ಸ್ವಾಮಿಜೀ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದಿಂದ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಮತ್ತು ಕೊರಟಗೆರೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಿದ್ದರಬೆಟ್ಟದ ಕನಕ ಪೀಠದ ಪೀಠಾಧಿಪತಿಗಾಳದ ಶ್ರೀ ಈಶ್ವರನಂದ ಪುರಿ ಮಹಾ ಸ್ವಾಮೀಜಿ ಮಾತನಾಡಿ, ಪ್ರತಿ ನಿತ್ಯವು ಶ್ರೀಗಳು ವಿಭಿನ್ನ…
ತುರುವೇಕೆರೆ : ತಾಲೂಕಿನ ದಂಡಿನಶಿವರ ಹೋಬಳಿ ,ಕೊಂಡಜ್ಜಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ,ಕಲ್ಲುಬೊರನಹಳ್ಳಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಉಪಾಧ್ಯಕ್ಷ ರಾದ ಎಂ.ಆರ್ , ಶೀಲಾ ನವೀನ್ ಕುಮಾರ್ ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಲ್ಲು ಬೋರನಹಳ್ಳಿ ರವಿಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣಾಧಿಕಾರಿ ನಯೀಮ್ ಉನ್ನಿಸ್ಸಾ ರವರು ಕಲ್ಲಬೋರನಹಳ್ಳಿ ರವಿಕುಮಾರ್ ಉಪಾಧ್ಯಕ್ಷ ರೆಂದು ಘೋಷಿಸಿದರು . ರವಿ ಕುಮಾರ್ ಅವರನ್ನು ಪಂಚಾಯ್ತಿ ಅಧ್ಯಕ್ಷರಾದ ಸುಶೀಲಮ್ಮ ,ಬಸವರಾಜು , ಸದಸ್ಯರುಗಳಾದ , ಶಿವಮ್ಮ , ಕೀರ್ತಿ, ಜೀವನ್ ಗೌಡ, ಎಂ.ಆರ್.ಶೀಲಾ., ನಾಗರಾಜು , ನಾಗವೇಣಿ , ಗಂಗಾನಮ್ಮ , ಶ್ರೀನಿವಾಸ್ ಪ್ರಸಾದ್ , ಶೋಭಾ, ಮಹಾಲಿಂಗಯ್ಯ , ದೇವರಾಜು, ಜಯಲಕ್ಷ್ಮಿ., ಭಾಮಾ , ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಪೈಂಟ್ ರಂಗನಾಥ್ , ನಿರ್ದೇಶಕರಾದ ನಟರಾಜ್, ಹರಿಕಾರನಹಳ್ಳಿ ಮಂಜಣ್ಣ ಮುಂತಾದವರು ಅಭಿನಂದನೆ ಸಲ್ಲಿಸಿದರು. ಚುನಾವಣೆ ಯಲ್ಲಿ .ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಸಹಕರಿಸಿದರು , ಉಪಾಧ್ಯಕ್ಷರಾಗಿ ,…
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸುತ್ತಿದ್ದು, ಭಾರತ ನಮ್ಮ ಹೆಮ್ಮೆ ಎಂದು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ, ಇದ್ರಲ್ಲಿ ತಪ್ಪೇನಿದೆ? ಎಂದು ಸಚಿವ ಆರ್ ಅಶೋಕ್ ಕೇಳಿದ್ದಾರೆ. ಕೆ.ಎಸ್.ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನ ಸೇರಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ. ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ ಸೇರ್ಪಡೆ. ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನ ಮರು ಮರು ಸೇರ್ಪಡೆ. ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಮಾಡಿದ್ದೇವೆ ಎಂದರು. ಎಸ್.ಎಲ್.ಭೈರಪ್ಪ ಬರೆದ ಯಾವುದೇ ಪಠ್ಯ ಪುಸ್ತಕ ಇರಲಿಲ್ಲ. 9ನೇ ತರಗತಿಯ ಪಠ್ಯದಲ್ಲಿ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹವನ್ನ ಸೇರಿಸಿದ್ದೇವೆ. ಸನಾತನ ಧರ್ಮದ ಪಾಠವನ್ನ 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಮಂಜೇಶ್ವರ್ ಗೋವಿಂದ ಪೈ ಬರಹ ಮರು ಸೇರ್ಪಡೆ ಮಾಡಿದ್ದೇವೆ. ಪಂಜೆ ಮಂಗೇಶರಾಯರ ಸೀಗಡಿ ಯಾಕೆ ಒಣಗಲಿಲ್ಲ ಪಠ್ಯ ಸೇರ್ಪಡೆಯಾಗಿದೆ. ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ…
ಮಧುಗಿರಿ: ತಾಲ್ಲೂಕು ಆಡಳಿತ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಗರ್ ಹುಕುಂ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಸುರೇಶ್ ಆಚಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಬಗರ್ ಹುಕುಂ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದ್ದು, ತಾಲ್ಲೂಕಿನ ಎಲ್ಲಾ ನಾಡ ಕಛೇರಿಗಳಲ್ಲಿ ನಮೂನೆ 57 ರ ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ತಾಲ್ಲೂಕಿನ ನಾಡ ಕಛೇರಿಗಳಲ್ಲಿ ಸಾರ್ವಜನಿಕರು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ವರದಿ: ಆಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಆನೆಕೆರೆ ಗ್ರಾಮದಲ್ಲಿ , ಕರುನಾಡ ವಿಜಯ ಸೇನೆ ಮತ್ತು ಆನೆಕೆರೆ ಗ್ರಾಮ ಪಂಚಾಯ್ತಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ತುರುವೇಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಮಕೃಷ್ಣ ಟಿ.ಎಸ್., ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ವಿಜಯ ಸೇನೆ ಸಂಘಟನೆಯ ಸಹಯೋಗದೊಂದಿಗೆ ಈ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಬಳಿಕ ಮಾತನಾಡಿದ ಕರುನಾಡ ವಿಜಯ ಸೇನೆ ಸಂಘಟನೆಯ ತಾಲೂಕು ಅಧ್ಯಕ್ಷ ಎಚ್. ಎಸ್. ಸುರೇಶ್ ಬ್ರಹ್ಮ ಸಂಘಟನೆಯ ವತಿಯಿಂದ ಇನ್ನುಳಿದ ಪಂಚಾಯತಿ ನೆರವಿನೊಂದಿಗೆ ನಮ್ಮ ಸಂಘಟನೆ ಇಂತಹ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ತಾಲೂಕಿನ ಜನತೆಗೆ ಆರೋಗ್ಯ ತಮ್ಮ ಗ್ರಾಮ…
ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿಗೆ ಸೇರಿದ ನಡುವನಹಳ್ಳಿ ಗ್ರಾಮದ ಗ್ರಾಮದೇವತೆ ತುಳಸಮ್ಮ ಲಕ್ಷ್ಮೀದೇವಿ ದೇವಾಲಯದ ಮುಂಭಾಗದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ವೇಳೆ ಬಾಲಕ-ಬಾಲಕಿ ಹಾಗೂ ಅವರ ಪೋಷಕರು ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ. ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಧ್ಯಮಗಳು ಈ ಬಗ್ಗೆ ತುರುವೇಕೆರೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರೊಂದಿಗೆ ನಡುವನಹಳ್ಳಿ ಗ್ರಾಮದ ದೇವಾಲಯದ ಭೇಟಿ ನೀಡುತ್ತಿದ್ದಂತೆಯೇ ಬಾಲಕ ಬಾಲಕಿ ಸಹಿತ ಪೋಷಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೇ ವೇಳೆ ವಿವಾಹ ಕಾರ್ಯ ಮಾಡಲು ಬಂದಿದ್ದ ಅರ್ಚಕ, ಅಡುಗೆ ಭಟ್ಟನನ್ನು ಗಮನಿಸಿದ ಅಧಿಕಾರಿಗಳು ಬಾಲ್ಯ ವಿವಾಹದ ಕಾನೂನಿನ ಬಗ್ಗೆ ತಿಳಿಸಿದ್ದು, ಈ ರೀತಿಯ ಘಟನೆಗಳು ಕಂಡು ಬಂದರೆ ನಮಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಬಾಲಕ, ಬಾಲಕಿ ಹಾಗೂ ಪೋಷಕರು ಕುಣಿಗಲ್ ಮಾರ್ಗವಾಗಿ ಪರಾರಿಯಾಗಿದ್ದಾರೆನ್ನಲಾಗಿದೆ.…
ದೇಶದ ಮತ್ತೊಂದು ಅತಿ ದೊಡ್ಡ ಬ್ಯಾಂಕ್ ಹಗರಣ ಬಯಲಾಗಿದೆ. ಸುಮಾರು 34 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಈ ಹಗರಣದಲ್ಲಿ ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿ ಮತ್ತು ಅದರ ಸಹವರ್ತಿ ಕಂಪನಿಗಳ ವಿವಿಧ ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಸಿಬಿಐ ದೇಶಾದ್ಯಂತ 10 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ದಾಳಿಯ ವೇಳೆ ಹಲವು ಆಕ್ಷೇಪಾರ್ಹ ಮತ್ತು ಮಹತ್ವಪೂರ್ಣ ದಾಖಲೆಗಳ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ತಡ ರಾತ್ರಿಯವರೆಗೆ ಈ ದಾಳಿ ಮುಂದುವರೆದಿದೆ. ಇದಕ್ಕೂ ಮೊದಲು 22 ಸಾವಿರ ಕೋಟಿ ರೂ.ಗಳ ಬ್ಯಾಂಕ್ ಹಗರಣವೊಂದು ಬೆಳಕಿಗೆ ಬಂದಿದ್ದು, ಅದು ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಹಗರಣವಾಗಿತ್ತು. ಸಿಬಿಐ ವಕ್ತಾರ ಆರ್ ಸಿ ಜೋಶಿ ಪ್ರಕಾರ, ಈ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕ ವಿಪಿನ್ ಕುಮಾರ್ ಶುಕ್ಲಾ ಅವರು ಸಿಬಿಐಗೆ ಲಿಖಿತ ದೂರು ನೀಡಿದ್ದಾರೆ. ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್…