Author: admin

ಸರಗೂರು: ಚಿಕ್ಕದೇವಮ್ಮನ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಸರಗೂರು ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ತಪ್ಪಲಿನಲ್ಲಿರುವ ಹಾಲುಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರ ಸ್ಥಳದಲ್ಲೇ ಹಾಡು ಹಗಲಿನಲ್ಲೇ ಮದ್ಯ ಮಾರಾಟ ಮಾಡುತ್ತಿರುವ ಘಟನೆ ನಡೆದಿದೆ.  ಚಾಮೇಗೌಡನಹುಂಡಿ ಗ್ರಾಮದ ಕುಮಾರ್ ಎಂಬಾತ  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಚಿಕ್ಕದೇವಮ್ಮನ ಬೆಟ್ಟಕ್ಕೆ ಆಗಮಿಸುವ  ಭಕ್ತರಿಗೆ ಮದ್ಯ ಮಾರಾಟ ಮಾಡುತ್ತಿದ್ದಾನೆ ಎನ್ನಲಾಗಿದೆ.  ಇದನ್ನು ಪ್ರಶ್ನಿಸಲು ಹೋದ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬಟ್ಟೆ ಬಿಚ್ಚಿ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ  ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಭಾನುವಾರ, ಮಂಗಳವಾರ, ಶುಕ್ರವಾರ ಬೆಟ್ಟಕ್ಕೆ ಹೆಚ್ಚಾಗಿ ಭಕ್ತರು ಆಗಮಿಸುತ್ತಾರೆ.  ಇಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ನಾನಾ ರೀತಿಯ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಕೂಡಲೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ…

Read More

ಪಾವಗಡ: ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯ ಘಟಕದಿಂದ ಪಾವಗಡ ತಾಲ್ಲೂಕು ಘಟಕ ರಚಿಸಲಾಯಿತು. ಪಾವಗಡ ತಾಲ್ಲೂಕಿನ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೋಟಗುಡ್ಡ ಪಾಂಡುರಂಗ ಯಾದವ್ ಅವರನ್ನು ನೇಮಿಸಲಾಯಿತು. ರಾಜ್ಯಾಧ್ಯಕ್ಷರಾದ ಸುಧಾಕರ್ ಯಾದವ್,  ಸಂಸ್ಥಾಪಕ ಅಧ್ಯಕ್ಷರಾದ ಹರಿಕೃಷ್ಣಯಾದವ್, ಪ್ರಧಾನ ಕಾರ್ಯದರ್ಶಿ ಸುನಿಲ್ ಯಾದವ್,  ಕಾರ್ಮಿಕ ಘಟಕದ ವೇಣು ಯಾದವ್, ಗೌರವ ಅಧ್ಯಕ್ಷರಾದ ಕೆಂಚಮ್ಮನಹಳ್ಳಿ ಗೋಪಾಲ್,  ರಾಜ್ಯ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಯಾದವ್, ರಾಜ್ಯ ಕಾರ್ಯದರ್ಶಿಯಾಗಿ ದಿವ್ಯ ತೇಜ ಯಾದವ್, ಮಹಿಳಾ ಘಟಕದ ಪದಾಧಿಕಾರಿಗಳುˌಹಾಗೂ ಯಾದವ ಮುಖಂಡರಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾದ ಮೈಲಾರರೆಡ್ಡಿ ಮತ್ತು ಪುರಸಭೆ ಸದಸ್ಯರಾದ ಕೋಳಿ ಬಾಲಾಜಿ, ಆರ್ಲಹಳ್ಳಿ ರಘುವೀರ್ ರೆಡ್ಡಿ, ˌತಾಲ್ಲೂಕು ಯಾದವ ಹಿರಿಯ ಮುಖಂಡರು ಹಾಗೂ ಯುವ ಮುಖಂಡರುಗಳು   ಉಪಸ್ಥಿತರಿದ್ದರು. ವರದಿ: ನಾಗರಾಜ ದೇವರಹಟ್ಟಿ, (ಕಸಬಾ ಹೋಬಳಿ )ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಪಂಜಾಬ್‌ ನ ಅಮೃತಸರದ ಖಾಸಾ ಬಿಎಸ್‌ಎಫ್ ಪ್ರದೇಶದಲ್ಲಿ ಭಾನುವಾರ (ಮಾರ್ಚ್ 6) ನಡೆದ ಘಟನೆಯಲ್ಲಿ ಐವರು ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ.ಬಿಎಸ್‌ಎಫ್ ಜವಾನ ಸತ್ತೆಪ್ಪ (Ct Satteppa S K) ಎಂಬುವವವರು ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಐವರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ ಸತ್ತೆಪ್ಪ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ. 6 ಯೋಧರ ಮೇಲೆ ಗುಂಡಿನ ದಾಳಿ: ಅಮೃತಸರದ (Amritsar) ಬಿಎಸ್‌ಎಫ್ ಶಿಬಿರದಲ್ಲಿ ಸಿಬ್ಬಂದಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ಯೋಧರನ್ನು ಗುರುನಾನಕ್ ದೇವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯಲ್ಲಿ 6 ಯೋಧರು ಗುಂಡು ಹಾರಿಸಿದ್ದು, ಈ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ.ಬಿಎಸ್‌ಎಫ್ ಜವಾನ ಗುಂಡಿನ ದಾಳಿ ನಡೆಸಿದ್ದು ಏಕೆ? ಬಿಎಸ್‌ಎಫ್ ಯೋಧರ ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ…

Read More

ವಿಜಾಪುರ ಜಿಲ್ಲೆ: ಕೊಲ್ಹಾರತಾಲ್ಲೂಕು  ಕೊಲ್ಹಾರ ಪಟ್ಟಣದ ಮುಳುಗಡೆ ಸಂತ್ರಸ್ತರಿಗೆ ನಿವೇಶನಗಳ ವಿತರಣೆ  ಹಾಗೂ ಪರಿಹಾರ ವಿತರಣೆಯಲ್ಲಿ ಪುನರ್ವಸತಿ ಅಧಿಕಾರಿಗಳಿಂದ ಅನ್ಯಾಯವಾಗಿದೆ ಎಂದು ಕೊಲ್ಹಾರ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮೀತಿ ಅಧ್ಯಕ್ಷ ಸಿದ್ದಪ್ಪ ಬಾಲಗೊಂಡ ಹೇಳಿದರು. ಪಟ್ಟಣದ ಉಪ್ಪಾಸೆಪ್ಪ ದೇವಸ್ಥಾನದಲ್ಲಿ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಸರಕಾರಕ್ಕಾಗಿ ನಾವುಗಳು ಮಾಡಿರುವ ತ್ಯಾಗ ಅಪಾರವಾದದ್ದು ಪುನರ್ವಸತಿ ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.  ಸಂತ್ರಸ್ತರಿಗೆ ಪೂರ್ಣ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ,  ಸರ್ವರು ಈ ಹೋರಾಟಕ್ಕೆ ಕೈಜೋಡಿಸಬೇಕು. ಈ ಹಿಂದೆ ಕೊಲ್ಹಾರ ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ಹೋರಾಟ ಹಮ್ಮಿಕೊಳ್ಳುವ ಮೂಲಕ ಹೇಗೆ ಯಶಸ್ವಿಯಾದೆವೋ, ಅದೇ ರೀತಿ ಈ ಹೋರಾಟಕ್ಕೂ ಸರ್ವರು ಕೈಜೋಡಿಸುವ ಮೂಲಕ ನಮ್ಮ ಹಕ್ಕುಗಳನ್ನು  ಪಡೆದುಕೊಳ್ಳೋಣ ಎಂದು ಹೇಳಿದರು. ಕೊಲ್ಹಾರ ಸಂತ್ರಸ್ತರ ಜೊತೆಗೆ ಪಟ್ಟಣದಲ್ಲಿ…

Read More

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಭಾರತ ತಂಡ ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಟೆಸ್ಟ್ ಗೆಲುವಿನೊಂದಿಗೆ ನಾಯಕನಾಗಿ ಕೂಡ ಶುಭಾರಂಭ ಮಾಡಿದ್ದಾರೆ. ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ರವೀಂದ್ರ ಜಡೇಜಾಗೆ ಈ ಪಂದ್ಯವು ತುಂಬಾ ವಿಶೇಷವಾಗಿತ್ತು, ಜಡೇಜಾ ಅವರು ಅಂತರರಾಷ್ಟ್ರೀಯ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡಿದರು, ನಂತರ ವಿರಾಟ್ ಕೊಹ್ಲಿ (Virat Kohli) ತಮ್ಮ ವೃತ್ತಿಜೀವನದಲ್ಲಿ 100 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕನಾಗಿಯೂ ಅಂತಹ ದಾಖಲೆಯನ್ನು ಮಾಡಿದ್ದಾರೆ, ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ (Mahendra SIngh Dhoni) ಕೂಡ ಅವರ ಹೆಸರಿನಲ್ಲಿ ಈ ದಾಖಲೆ ಮಾಡಲು ಸಾಧ್ಯವಾಗಲಿಲ್ಲ. ಮತ್ತೊಂದು ವಿಶೇಷ ದಾಖಲೆ ನಿರ್ಮಿಸಿದ ರೋಹಿತ್ : ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ತಂಡವೂ…

Read More

ದೇಶದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿ BSNL ಇತ್ತೀಚಿಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ನಿಮಗೆ ಅತಿ ಕಡಿಮೆ ದರದಲ್ಲಿ ಹೆಚ್ಚಿನ ವೇಗದ ಡೇಟಾವನ್ನು ನೀಡಲಾಗುತ್ತಿದೆ. ವಾಸ್ತವವಾಗಿ, BSNL ಇತ್ತೀಚೆಗೆ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ, ಅಲ್ಲಿ ನಿಮಗೆ 329 ರೂ.ಗೆ 1,000GB ಡೇಟಾ ಮತ್ತು ಇತರ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ.. BSNL 329 ರೂ.ಗೆ ಹಲವು ಪ್ರಯೋಜನಗಳು ಪ್ರಸ್ತುತ, BSNL ನ ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲಾನ್(BSNL Broadband Plan) ಬಗ್ಗೆ ಮಾತನಾಡಲಾಗುತ್ತಿದೆ, ಇದರ ಬೆಲೆ 329 ರೂ. ಈ ಯೋಜನೆಯಲ್ಲಿ, ನಿಮಗೆ 1TB ಅಂದರೆ 1,000GB ಡೇಟಾವನ್ನು 20Mbps ವೇಗದಲ್ಲಿ 329 ರೂಪಾಯಿಗಳಿಗೆ ನೀಡಲಾಗುತ್ತಿದೆ. ಇದಲ್ಲದೆ, ಈ ಯೋಜನೆಯಲ್ಲಿ ನಿಮಗೆ ಉಚಿತ ಫಿಕ್ಸೆಡ್ ಲೈನ್ ಧ್ವನಿ ಕರೆ ಸಂಪರ್ಕದ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಈ ಬ್ರಾಡ್‌ಬ್ಯಾಂಡ್ ಯೋಜನೆಯ ಮೊದಲ ತಿಂಗಳ ಬಿಲ್‌ನಲ್ಲಿ ನಿಮಗೆ 90% ರಿಯಾಯಿತಿ ನೀಡಲಾಗುವುದು…

Read More

ಇತ್ತೀಚೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆ(Harsha Murder Case)ಯಾದ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಭೇಟಿ ನೀಡಿದರು. ಹರ್ಷ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಿಎಸ್​ವೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹರ್ಷ(Bajrang Dal Activist) ಕುಟುಂಬಸ್ಥರಿಗೆ ಬಿಎಸ್ ವೈ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಭಜರಂಗದಳ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ನಡೆದಿರುವುದು ಖಂಡನೀಯ. ಹಿಂದೂ ಸಮಾಜದ ಮುಖಂಡನಾಗಿ ಬೆಳೆಯುತ್ತಿದ್ದ ಹರ್ಷನ ಬೆಳವಣಿಗೆಯನ್ನು ಸಹಿಸಲಾಗದೆ ಕೊಲೆ ಮಾಡಲಾಗಿದೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಸಂಘಟನಾ ಕೆಲಸ ಮಾಡುತ್ತಿದ್ದ ಹರ್ಷರನ್ನು ಕೊಲೆ ಮಾಡಿರುವುದು ದುಃಖದ ವಿಷಯವೆಂದು ಬಿಎಸ್​ವೈ(Former CM BSY) ಬೇಸರ ವ್ಯಕ್ತಪಡಿಸಿದರು. ಹರ್ಷನ ಕುಟುಂಬ(Harsha Family) ಸದಸ್ಯರಿಗೆ ಸಾಂತ್ವನ ಹೇಳುವುದುನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ‍್ಯವಿಲ್ಲ. ಪರಿಹಾರವೆಂದು ಎಷ್ಟೇ ಹಣ ಕೊಟ್ಟರೂ ಅದು ನೆಪಮಾತ್ರ. ಹೋದ ಅಮೂಲ್ಯ ಜೀವ ಮತ್ತೆ ಬರುವುದಿಲ್ಲ.…

Read More

24 ರ ಯುವಕನೋರ್ವ ಮತ್ತು 77 ರ ವಯಸ್ಸಿನ ಮಹಿಳೆಯನ್ನು ವರಿಸಿದ (Marriage) ಘಟನೆ ನಡೆದಿದೆ. ತಮ್ಮ ಸಂಬಂಧವನ್ನು ತಪ್ಪು ಎಂದು ಅನೇಕರು ಕರೆದರೂ ಅವರು ಮುಜುಗರ ಪಟ್ಟಿಲ್ಲ ಎಂದು ಇವರು ಹೇಳಿದ್ದಾರೆ. ಅಕ್ಟೋಬರ್ 2015 ರಲ್ಲಿ ಮದುವೆಯಾದ 53 ವರ್ಷಗಳ ವಯಸ್ಸಿನ (Wedding) ಅಂತರವಿರುವ ಈ ದಂಪತಿಗಳು ತಮ್ಮ ಮದುವೆ “ಅತ್ಯುತ್ತಮ” ಮತ್ತು “ಸ್ಥಿರವಾಗಿದೆ” ಎಂದು ಹೇಳಿದ್ದಾರೆ.2015 ರಲ್ಲಿ ಅಲ್ಮೆಡಾ ಎಂಬ ವೃದ್ಧೆ ಅವರ ಮಗನ ಅಂತ್ಯಕ್ರಿಯೆಯಲ್ಲಿ (Funeral) ಗ್ಯಾರಿ ಎಂಬ ಯುವಕನನ್ನು ಭೇಟಿಯಾದರು. ಆ ನಂತರ ಇವರಿಬ್ಬರು ಎರಡು ವಾರಗಳ ಬಳಿಕ ವಿವಾಹವಾದರು. ಆ ಸಮಯದಲ್ಲಿ, ಗ್ಯಾರಿ ಕೇವಲ 17 ವರ್ಷ ವಯಸ್ಸಿನವರಾಗಿದ್ದರು. “ನಾವು ಯಾವಾಗಲೂ ಅತ್ಯುತ್ತಮವಾದ, ಸ್ಥಿರವಾದ ದಾಂಪತ್ಯವನ್ನು ಹೊಂದಿದ್ದೇವೆ” ಎಂದು ಗ್ಯಾರಿ ಹೇಳುತ್ತಾರೆ. ಇವರಿಬ್ಬರ ನಡುವೆ 53 ವರ್ಷಗಳ ವಯಸ್ಸಿನ ಅಂತರವಿದೆ. ಗ್ಯಾರಿ ಮತ್ತು ಅಲ್ಮೆಡಾ (Gary & Almeda) ಅವರ ದಾಂಪತ್ಯ ಜೀವನ ಸಂತಸದಿಂದ ತುಂಬಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಅಮಿರಾ ಕಡಲ್‌ ನ ಹರಿ ಸಿಂಗ್ ಹೈ ಸ್ಟ್ರೀಟ್ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗ್ರೆನೇಡ್ (Granade Attack) ಅನ್ನು ಎಸೆದಿದ್ದಾರೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಒಬ್ಬ ಪೊಲೀಸ್ ಸೇರಿದಂತೆ 24 ಜನರು ಗಾಯಗೊಂಡಿದ್ದಾರೆ. “ಸಂಜೆ 4:20ರ ಸುಮಾರಿಗೆ, ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗ್ರೆನೇಡ್‌ನಿಂದ ದಾಳಿ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ (Maharaja Hari Singh Hospital) ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರನ್ನು (Terror Attack) ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದರೆ. ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್…

Read More

ಸಿರಾ: ಉಕ್ರೇನ್​ ನಲ್ಲಿ ಎಂಬಿಬಿಎಸ್​​​ನ ಓದುತ್ತಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಬಂದು ತಲುಪಿದ್ದಾರೆ.  ಮಕ್ಕಳು ಆಗಮಿಸುತ್ತಿದ್ದಂತೆಯೇ ಪೋಷಕರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಸಿರಾ ನಗರದ ವಿದ್ಯಾರ್ಥಿನಿ ನಗರದ ಪ್ರಿಯಾಂಕ ಮತ್ತು ಮತ್ತೊಬ್ಬ ವಿದ್ಯಾರ್ಥಿ ಸಿರಾ ನಗರದ ಸಪ್ತಗಿರಿ ಬಡಾವಣೆಯ ತ್ರಿಶಾಂಕ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಮಕ್ಕಳ ಆಗಮನದಿಂದ ಪೋಷಕರು ತೀವ್ರ ಸಂತದ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ದೇಶದ ವಿವಿಧ ವಿವಿಯಲ್ಲಿ ಎಂಬಿಬಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುದ್ಧ ಭೀತಿ ಆವರಿಸಿದಾಗ ಪೋಷಕರ ಒತ್ತಾಯಕ್ಕೆ ಮಣಿದು ಉಕ್ರೇನ್ ​ನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಲ್ಲಿಂದ. ಸಿರಾಕ್ಕೆ ವಾಪಸ್ ಆಗಮಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಉಕ್ರೇನ್ ದೇಶದಿಂದ ಮರಳಿ ಸುರಕ್ಷಿತವಾಗಿ ಮನೆಗೆ ತಲುಪಿರುವ ವಿದ್ಯಾರ್ಥಿಗಳ ಮನೆಗೆ ಕೇಂದ್ರ ಸಚಿವರಾದ  ನಾರಾಯಣಸ್ವಾಮಿ,  ಶಾಸಕ ಡಾ.ರಾಜೇಶ್ ಗೌಡ, ತಹಶೀಲ್ದಾರ್ ಮಮತಾ ಮತ್ತಿತರರು ಭೇಟಿ ನೀಡಿದರು.  ಮುಂದಿನ ವಿದ್ಯಾಭ್ಯಾಸದ ಕುರಿತು ಸರ್ಕಾರದಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು  ಇದೇ ಸಂದರ್ಭದಲ್ಲಿ ನೀಡಿದರು.  ವರದಿ: ಎ.ಎನ್. ಪೀರ್…

Read More