Subscribe to Updates
Get the latest creative news from FooBar about art, design and business.
- ತಿಪಟೂರಿನಲ್ಲಿ 2078ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯ ಹೆಗ್ಗಡೆಯವರ ಕೊಡುಗೆ ಅನನ್ಯ: ಡಾ. ಶ್ರೀಧರ್
- ಖಾಸಗಿ ಆಂಬುಲೆನ್ಸ್ ಸೇವೆ ಶುಲ್ಕ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗೆ ಕರವೇ ಮನವಿ
- ಕೊರಟಗೆರೆ: ಮಾದಕ ವ್ಯಸನ ತಡೆಗೆ ‘ಸ್ವಾಸ್ಥ್ಯ ಸಂಕಲ್ಪ’ ಜಾಗೃತಿ
- ಕೊರಟಗೆರೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಆರಂಭ ; ಜು.29ರವರೆಗೆ ಮನೆ-ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ–ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಹಕರಿಸಲು ಮನವಿ
- ಬೀದರ್: ರಾಡ್ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
Author: admin
ಉಕ್ರೇನ್ ನಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಉನ್ನತ ವಿದ್ಯಾಭ್ಯಾಸಕಾಗಿ ಉಕ್ರೇನ್ ಗೆ ತೆರಳಿದ್ದ ಅದೆಷ್ಟೋ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ (Ukraine)ಸಿಲುಕಿದ್ದರು. ಇದೀಗ ಆ ವಿದ್ಯಾರ್ಥಿಗಳನ್ನು ಮರಳಿ ತಾಯ್ನಾಡಿಗೆ ಕರೆ ತರುವ ಕೆಲಸ ನಡೆಯುತ್ತಿದೆ. ಇಂದು ಕೂಡಾ ಉಕ್ರೇನ್ ನಿಂದ ೩೭ ವಿದ್ಯಾರ್ಥಿಗಳ ತಂದ ಬೆಂಗಳೂರಿಗೆ ಬಂದಿಳಿದಿದೆ (Studnts returned from Ukraine). ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ (Russia Ukraine War) ಸಾರಿದ ದಿನದಿಂದ ಉಕ್ರೇನ್ ನಲ್ಲಿ ಜನರ ಸ್ಥಿತಿ ದುಸ್ತರವಾಗಿದೆ. ಈ ನಡುವೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರೆಳಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆ ತರುವ ಜವಾಬ್ದಾರಿ ಕೂಡಾ ಸರ್ಕಾರದ ಮೇಲಿತ್ತು (Studnts returned from Ukraine). ಈ ಬಗ್ಗೆ ಸರ್ಕಾರ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಅನೇಕ ವಿದ್ಯಾರ್ಥಿಗಳು ಈಗಾಗಲೇ ದೇಶಕ್ಕೆ ಮರಳಿದ್ದಾರೆ. ಇಂದು ಕೂಡಾ ರಾಜ್ಯದ ೩೭ ವಿದ್ಯಾರ್ಥಿಗಳು ವಾಪಾಸಾಗಿದ್ದಾರೆ.…
ಪಾವಗಡ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಕರ್ನಾಟಕ ರಾಜ್ಯದ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲ್ಲೂಕು ಕಸಬಾ ಹೋಬಳಿಯ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಗಿರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಭಗತ್ ಸಿಂಗ್ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಗಿರಿ ಜೂಲಪ್ಪನಹಟ್ಟಿ, ಆಲದಮರದ ಹಟ್ಟಿ, ಗ್ರಾಮಗಳ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ನಿರೀಕ್ಷಕ ಶ್ರೀ ಅಬ್ದುಲ್ ರವೂಫ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಗಾಳಿ-ಮಳೆ ಧೂಳಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಆರೋಗ್ಯದ ರಕ್ಷಣೆಗಾಗಿ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದುಡಿದು ಸಂಸಾರವನ್ನು ನಿರ್ವಹಿಸುವಂತಹ ಕಾರ್ಮಿಕ ಅನಾರೋಗ್ಯಕ್ಕೆ ತುತ್ತಾದರೆ ಕುಟುಂಬವು ಕಷ್ಟಕ್ಕೆ ತುತ್ತಾಗುತ್ತಾರೆ. ಆದ್ದರಿಂದ …
ಕೊರಟಗೆರೆ: ಪಟ್ಟಣದ ರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತುಳಸಿಕಟ್ಟೆ ವಿತರಣೆ ಮಾಡಲಾಗಿತ್ತು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾವ್ಯ ಶ್ರೀ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಸ್ವಂತ ದುಡಿಮೆಗೆ ಅನುಕೂಲವಾಗುವಂತೆ ಹೆಣ್ಣುಮಕ್ಕಳಿಗೆ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತಿದೆ ಎಂದರು. ಮದುವೆಯಾಗಿ ಗಂಡನ ಮನೆಗೆ ಬಂದಿರುವ ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರಬೇಕಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಸಂಸ್ಥೆಯ ವತಿಯಿಂದ ಅಂತಹ ಹೆಣ್ಣು ಮಕ್ಕಳು ಸ್ವಾವಲಂಬಿ ಆಗಲು ಅನೇಕ ಯೋಜನೆಗಳನ್ನು ರೂಪಿಸಿದೆ. ಅವರ ಸ್ಕೂಲಿಗಾಗಿ ಸಂಸ್ಥೆ ವತಿಯಿಂದ ಲೋನ್ ಕೂಡ ಕೊಡಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಲೋನ್ ಕೊಡುವುದರಿಂದ ಸರಿಯಾದ ಸಮಯಕ್ಕೆ ತಿರುಗಿಸುತ್ತಾರೆ ಹಾಗೆಯೇ ಆ ಹಣದಿಂದ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿ…
ಪಾವಗಡ: ತಾಲೂಕು ನಿಡಗಲ್ ಹೋಬಳಿ ಸಿಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟಿ.ಎನ್.ಕೋಟೆ ಯಲ್ಲಿ ಬೋವಿ ಕಾಲೋನಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನಡೆಯಿತು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೆಂಕಟೇಶಣ್ಣ ಮತ್ತು ಟಿ.ಎಂ.ಕೋಟೆಯ ಪ್ರಭಾಕರ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿನ್ನೇನಹಳ್ಳಿಯ ಭೋಜ ರಾಜಣ್ಣ ಮತ್ತು ಗ್ರಾಮದ ಹನುಮಂತರಾಯಪ್ಪ ಹಾಗೂ ಕೊಂಡಪ್ಪ ರವಿಕುಮಾರ್ ಪಾಳ್ಯದ ನಾಗೇಂದ್ರಪ್ಪ ಹನುಮನ ಪಾಳ್ಯದ ಶಿವಮೂರ್ತಿ ಮತ್ತು ಪ್ರಸಾದ್ ಗ್ರಾಮಸ್ಥರು ಈ ಸಂದರ್ಭ ಜೊತೆಗಿದ್ದರು. ವರದಿ: ನಂದೀಶ್ ಕೊತ್ತೂರು, ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಗುಬ್ಬಿ: ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಶಾರದಮ್ಮ ಲೇಟ್ ದೊಡ್ಡತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಯಾವುದೇ ನೋಟಿಸ್ ನೀಡದೆ, ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸುತ್ತಿದ್ದು, ಇದರಿಂದಾಗಿ ಬಡ ರೈತ ಕುಟುಂಬ ಕಂಗಾಲಾಗಿದೆ. ಇಂದು ಗುಬ್ಬಿ ವಲಯ ಅರಣ್ಯ ಅಧಿಕಾರಿ ದುರ್ಗಪ್ಪ ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯ ಬಂದೋ ಬಸ್ತ್ ಪಡೆದು ರೈತ ಅಡಿಕೆ ಮತ್ತು ತೆಂಗಿನ ಮರಗಳ ತೆರವಿಗೆ ಮುಂದಾದರು. ಈ ವೇಳೆ ರೈತ ಮಹಿಳೆ ಶಾರದಮ್ಮ ಕೋರ್ಟ್ ಗೆ ಆಫೀಲ್ ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೋರಿಸುತ್ತೇವೆ ಎಂದು ಅಂಗಲಾಚಿದರು ಅರಣ್ಯಾಧಿಕಾರಿಗಳು ಯಾವುದಕ್ಕೂ ಜಗ್ಗಲಿಲ್ಲ. ಕಳೆದ 10 ವರ್ಷಗಳ ಹಿಂದೆ ಅರಣ್ಯ ಅಧಿಕಾರಿಗಳು ಬಂದು ಸರ್ವೇ ಕಲ್ಲನ್ನು ಹಾಕಿದ್ದಾರೆ. ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಅಡಿಕೆ, ತೆಂಗು ಮರಗಳನ್ನು ಉರುಳಿಸುತ್ತಿರುವುದು ಆರಣ್ಯಧಿಕಾರಿಗಳ ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ…
ತುಮಕೂರು: ಜಿಲ್ಲೆಯಲ್ಲಿ ಭೂಮಿ ವಸತಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಎರಡು ತಲೆಮಾರುಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ, ಈವರೆಗೆ ತುಮಕೂರು ಜಿಲ್ಲಾಡಳಿತ ಸಮಸ್ಯೆ ಬಗೆ ಹರಿಸಿಲ್ಲ. ಹೀಗಾಗಿ ಮಾರ್ಚ್ 15ರಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭೂಮಿ ವಸತಿ ಹಕ್ಕಿಗಾಗಿ ಅನಿರ್ದಿಷ್ಟ ಕಾಲ ಅಹೋ ರಾತ್ರಿ ಧರಣಿ ಹಮ್ಮಿಕೊಂಡಿದೆ. ಜಿಲ್ಲೆಯ ಸಾವಿರಾರು ಭೂ ರಹಿತರು ಭೂಮಿ ಮತ್ತು ವಸತಿಗಾಗಿ ಅರ್ಜಿಗಳನ್ನು ಹಾಕಿ ಇಂದು, ನಾಳೆ ಭೂಮಿ ವಸತಿಗೆ ಸಾಗುವಳಿ, ಹಕ್ಕುಪತ್ರ ಸಿಗಬಹುದು ಎಂಬ ಆಶಾ ಭಾವನೆಯಿಂದ ಕಾಯುತ್ತಿದ್ದಾರೆ. ಅನೇಕ ಬಾರಿ ಕಛೇರಿಯಿಂದ ಕಛೇರಿಗಳಿಗೆ ಅಲೆದರೂ ಕೂಡ ಇದುವರೆಗು ಅರ್ಹರಿಗೆ ಭೂಮಿ ವಸತಿ ದೊರೆತಿಲ್ಲ. ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆಯ ಈ ಭೂಮಿ ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಹೆಚ್.ಎಸ್.ದೊರೆಸ್ವಾಮಿ ರವರ ನೇತೃತ್ವದ ಭೂಮಿ ವಸತಿ ಹೋರಾಟ ಸಮಿತಿಯಿಂದ 2018 ನೇ ಸಾಲಿನಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ,ತಾಲ್ಲೂಕು ಕಛೇರಿಗಳ…
ಸಿರಾ: ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಹೇಳಿದರು. ತುಮಕೂರು ಒಕ್ಕೂಟದ ವತಿಯಿಂದ ಜಿಲ್ಲೆಯ ಸಿರಾ ನಗರದ ಚಂಗಾವರ ರಸ್ತೆಯ ಶೀಥಲ ಕೇಂದ್ರದ ಆವರಣದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಂದಿನಿ ಕ್ಷೀರ ಭವನ ಹಾಗೂ ವಿವಿಧ ರೈತಪರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿತ್ತು. ಎಲ್ಲ ಸಹಕಾರಿ ಆಧಾರದ ಮೇಲೆ ನಡೆಸಲಾಗುತ್ತಿತ್ತು. ಗ್ರಾಮಗಳಲ್ಲಿ ಎಲ್ಲರೂ ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಸಮಾಜದ ಎಲ್ಲರೂ ಸುಖವಾಗಿರಬೇಕೆಂದು ಯೋಚನೆ ಮಾಡುತ್ತಿದ್ದರು. ಕೆರೆ ಕಟ್ಟೆಗಳನ್ನು ಎಲ್ಲರೂ ಒಟ್ಟಿಗೆ ಸೇರಿ ನಿರ್ಮಿಸುತ್ತಿದ್ದಾರೆ. ಅದರ ಆಧಾರದ ಮೇಲೆ ನಡೆದುಕೊಂಡು ಬಂದಿದೆ. ಸರಕಾರಗಳು ಸಹ ಉತ್ತಮ ಸಹಕಾರ ನೀಡುತ್ತಿವೆ ಎಂದರು. ಸಿರಾ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಸಂಘಟನೆ ಸದೃಡತೆ ಸಹಕಾರಿ ಕ್ಷೇತ್ರದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅದರ ಉದಾಹರಣೆಯಾಗಿ. ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ಉದಾಹರಣೆಯಾಗಿದೆ. ರೈತರಿಗೆ ಅನುಕೂಲಗಳ ಬಗ್ಗೆ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ.ಬಿ. ಸರ್ಕಲ್ ಬಳಿ ಇರುವ ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರಾದ ಸಮಾಜ ಸೇವಾ ರತ್ನ ಡಾ.ಎಚ್.ಪ್ರಕಾಶ್ ಬಿರಾವರ್ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಗಾಂಧಿನಗರ ಮಹಂತೇಶ್ ಅವರನ್ನು ಹಾಗೂ ಹಿರಿಯೂರು ತಾಲ್ಲೂಕು ಅಧ್ಯಕ್ಷರಾಗಿ ಸೂರಗೊಂಡನಹಳ್ಳಿ ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ಹಿರಿಯೂರು ಹಿಂದುಳಿದ ವರ್ಗಗಳ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ದರ್ಶನ್ ಅವರನ್ನು, ಹಿಂದುಳಿದ ವರ್ಗಗಳ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾಗಿ ರವಿಕುಮಾರ್ ಸೋಮೇರಹಳ್ಳಿ ರವರನ್ನು ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾಗಿ ಮಧು ಸೋಮೇರಹಳ್ಳಿ ರವರನ್ನು ಆಯ್ಕೆಮಾಡಲಾಯಿತು. ಈ ಸಭೆಯಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜು, ಉಪಾಧ್ಯಕ್ಷರುಗಳಾದ ರಾಜಣ್ಣ, ಘಾಟ್ ಚಂದ್ರಪ್ಪ, ಜಗದೀಶ್, ಯುವ ಘಟಕದ ರಾಜ್ಯ ಅಧ್ಯಕ್ಷರಾದ ಎಂ.ಡಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ(ಎಳನೀರು ವೆಂಕಟೇಶ್), ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಕರುಣ್ ಕುಮಾರ್, ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ಕಾರ್ಯದರ್ಶಿಯಾದ ದಿವಾಕರ್ ಘಾಟ್, ದಲಿತ…
ಪಾವಗಡ: ಮಹಾಶಿವರಾತ್ರಿ ಅಂಗವಾಗಿ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ, ಭಾರತಮಾತೆಯ ಮಧ್ಯಭಾಗದಲ್ಲಿ ಶಿವನ ಚಿತ್ರ ಬಿಡಿಸುವ ಮೂಲಕ ಸಾವಿರಾರು ಜನತೆಯ ಪ್ರಸಂಸೆಗೆ ಪ್ರೀತಿ ಪಾತ್ರವಾದ ಪಾವಗಡ ಪಟ್ಟಣದ ಬ್ರಾಹ್ಮಣರ ಬೀದಿಯ 70 ವರ್ಷದ ರಾಧಮ್ಮಜ್ಜಿಗೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಶಾಲು ಹೊದಿಸಿ ಗೌರವ ಪೂರಕವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಮ್ಮಜ್ಜಿ, ಕೋವಿಡ್ ಸಂಕಷ್ಟದಿಂದ ಭಾರತವನ್ನು ಪಾರು ಮಾಡುವಂತೆ ಪರಮಾತ್ಮ ಶಿವನನ್ನು ಪೂಜಿಸುವ ಕಲಾಕೃತಿಯನ್ನು ಸುಮಾರು 2 ತಿಂಗಳುಗಳಿಂದ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ ಸಾಕಷ್ಟು ಶ್ರಮ ವಹಿಸಿ ನನ್ನ ಪ್ರತಿಭೆಯನ್ನು ತೋರ್ಪಡಿಸಿದ್ದೇನೆ. ಕಲಾ ಕೃತಿಯನ್ನು ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂದು ನಮ್ಮ ನಿವಾಸಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ನನ್ನ ಪ್ರತಿಭೆಯನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿರುವುದು ನನಗೆ ತುಂಬಾ ಸಂತೋಷಕರವಾಗಿದೆ ಎಂದು ಹೇಳಿದರು. ಹೆಲ್ಪ್ ಸೊಸೈಟಿ ತಂಡಕ್ಕೆ ಇಂತಹ ಪ್ರತಿಭೆಗಳನ್ನು ಮತ್ತಷ್ಟು ಗುರುತಿಸಿ ಸೇವೆ…
ಸರಗೂರು ಮತ್ತು ಹೆಚ್ ಡಿ ಕೋಟೆ ಹೆಗ್ಗಡ ದೇವನ ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದುರವರ ಮಗಳ 2ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಮೈಸೂರಿನ ವಿಜಯ ನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ನಂತರ ದೇವಾಲಯದ ಆವರಣದಲ್ಲಿ ಜನರಿಗೆ ಊಟದ ಹಾಗೂ ಸಿಹಿಯನ್ನು ಶಾಸಕ ಅನೀಲ್ ಚಿಕ್ಕಮಾದು ಮತ್ತು ಅವರ ಧರ್ಮ ಪತ್ನಿ ಸೌಮ್ಯ ಅನೀಲ್ ಅವರು ವಿತರಣೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB