Subscribe to Updates
Get the latest creative news from FooBar about art, design and business.
- ತಿಪಟೂರಿನಲ್ಲಿ 2078ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯ ಹೆಗ್ಗಡೆಯವರ ಕೊಡುಗೆ ಅನನ್ಯ: ಡಾ. ಶ್ರೀಧರ್
- ಖಾಸಗಿ ಆಂಬುಲೆನ್ಸ್ ಸೇವೆ ಶುಲ್ಕ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗೆ ಕರವೇ ಮನವಿ
- ಕೊರಟಗೆರೆ: ಮಾದಕ ವ್ಯಸನ ತಡೆಗೆ ‘ಸ್ವಾಸ್ಥ್ಯ ಸಂಕಲ್ಪ’ ಜಾಗೃತಿ
- ಕೊರಟಗೆರೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಆರಂಭ ; ಜು.29ರವರೆಗೆ ಮನೆ-ಮನೆ ಭೇಟಿ
- ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ–ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಹಕರಿಸಲು ಮನವಿ
- ಬೀದರ್: ರಾಡ್ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ
- ಬೀದರ್ | ಹೆದ್ದಾರಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಓರ್ವ ಗಂಭೀರ ಗಾಯ
- ವೈದ್ಯರು – ಸಮಾಜದ ಜೀವನಾಡಿ
Author: admin
ಮಾಜಿ ಸಚಿವ ಜನಾರ್ದನ ರೆಡ್ಡಿ (Janardan Reddy) ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ (Kirity) ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ.ಕಿರೀಟಿ ಸ್ಟಂಟ್, ಡ್ಯಾನ್ಸ್ ಮೆಚ್ಚಿದ ಮೌಳಿ..! ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ರಾಜಮೌಳಿ (Rajamouli) ಹೀರೋ ಇಂಟ್ರೂಡಕ್ಷನ್ ಟೀಸರ್ ನೋಡಿ ಕಿರೀಟಿ ಬೆನ್ನುತಟ್ಟಿದರು. “ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ ಮಾಡಬಹುದು, ಡ್ಯಾನ್ಸ್ ಮಾಡಬಹುದು, ಇವರು ಸ್ಟಂಟ್ಸ್ ಅನ್ನೂ ಮಾಡಬಹುದು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು. ಈ ಪ್ರತಿಭೆ ಈಗ ಅದ್ಭುತ ಕೈಗಳ ಜೊತೆ ಸೇರಿಕೊಂಡಿದೆ. ಅದಕ್ಕೆ ಖುಷಿಯಾಗುತ್ತಿದೆ. ಎಂದು ರಾಜಮೌಳಿ ಹೇಳಿದ್ದಾರೆ. ಕಿರೀಟಿ ಬಗ್ಗೆ…
ಧಾರವಾಡ : ಇತ್ತೀಚೆಗೆ ಧಾರವಾಡ ಜಿಲ್ಲಾ ಅಧಿಕಾರಿಗಳ ಮನೆ ಆವರಣದಲ್ಲಿದ್ದ ಒಂದು ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಆರೋಪಿ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ತಂದೆ ಯಮನಪ್ಪ ಕಟ್ಟಿಮನಿ(31) ಆಗಿದ್ದು, ಆರೋಪಿಯನ್ನು ನಿನ್ನೆಯ ದಿನ ಮಾಲು ಸಮೇತ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಧಾರವಾಡ ಶಹರದಲ್ಲಿರುವ ಜಿಲ್ಲಾಧಿಕಾರಿಗಳ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಮತ್ತು ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿರುವ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುವ ಸಮಯದಲ್ಲಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ.ಮತ್ತು ಇಂದು ಬೆಳಿಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಮತ್ತು ಕಳ್ಳತನದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಸದರಿ ದಾಳಿಯನ್ನು ಧಾರವಾಡ (Dharwad) ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್…
ಬೆಂಗಳೂರು: ರೇವಾ ಕಾಲೇಜಿ(Reva College)ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜನಿಯರಿಂಗ್ ಸೀಟ್(Engineering Seat) ಕೊಡಿಸುವುದಾಗಿ ಯುವತಿಗೆ ವಂಚಿಸಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಷ(24) ಮತ್ತು ಚೇತನ್(27) ಬಂಧಿತ ಆರೋಪಿ(Cheating Case)ಗಳಾಗಿದ್ದಾರೆ. ಜನವರಿ 28ರಂದು ರಾಜೇಶ್ವರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನೂ ಅರೆಸ್ಟ್ ಮಾಡಲಾಗಿದೆ. ರೇವಾ ಕಾಲೇಜಿ(Engineering College)ನಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್ ಕೊಡಿಸುವುದಾಗಿ ಯುವತಿಯೊಬ್ಬರಿಗೆ ಆರೋಪಿಗಳು 1.27 ಲಕ್ಷ ರೂ. ಹಣ ಪಡೆದು ವಂಚಿಸಿದ್ದರು.ಯುವತಿಯಿಂದ ಹಣ ಪಡೆದ ಬಳಿಕ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಸದ್ಯ ಬಂಧಿತರಿಂದ 7 ಲಕ್ಷ ರೂ. ನಗದು, 120 ಗ್ರಾಂ ಒಡವೆಗಳನ್ನು ಖಾಕಿಪಡೆ ವಶಕ್ಕೆ ಪಡೆದುಕೊಂಡಿದೆ. ಹರ್ಷ ಮತ್ತು ಚೇತನ್(Fraud) ಇಬ್ಬರೂ ಏರ್ಟೆಲ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದರು. ಸಿಮ್ ಖರೀದಿಸಲು ಬರುವರ…
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಲ್ ಜೀವನ್ ಮಿಷನ್ ಯೋಜನೆಯು ಆಯಾ ಗ್ರಾಮಗಳಲ್ಲಿ ಅನುಷ್ಠಾನವಾಗಬೇಕಾದರೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತುರುವೇಕೆರೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಗೂ ಸ್ನೇಹ ಜೀವನ ಫೌಂಡೇಶನ್(ರಿ) ಗುಬ್ಬಿ ಇವರ ಸಂಯುಕ್ತಾಶ್ರಯದಲ್ಲಿಂದು ತುರುವೇಕೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ನೀರು ಮತ್ತು ನೈರ್ಮಲ್ಯ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿ ಮನೆಗೂ ನಳ ಸಂಪರ್ಕ ಒದಗಿಸಿ ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧವಾದ ನೀರನ್ನು ಒದಗಿಸುವುದು ಜಲ ಜೀವನ್ ಮಿಷನ್ ಯೋಜನೆಯ ಪ್ರಮುಖ ಉದ್ದೇಶ. ಅಲ್ಲದೇ ಸರ್ಕಾರದ ಹಲವಾರು ಯೋಜನೆಗಳು ನೀರು ಮತ್ತು ನೈರ್ಮಲ್ಯದ ವಿಚಾರವಾಗಿ ಕಾರ್ಯನಿರ್ವಹಿಸುತ್ತಿವೆ. ನೀರು ಅತ್ಯಮೂಲ್ಯವಾದುದ್ದು, ಪ್ರತಿಯೊಂದು ಹನಿ ನೀರನ್ನು ನಾವು ಶೇಖರಣೆ ಮಾಡಬೇಕು. ಅದಕ್ಕಾಗಿಯೇ ಪ್ರತಿಯೊಂದು ಮನೆಯಲ್ಲಿ ಮಳೆ ನೀರು ಕೊಯ್ಲು…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಕಣಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಣಜನಹಳ್ಳಿ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ SR ತಿಪ್ಪೇಸ್ವಾಮಿ, ನಗರ ಸಭಾ ಸದಸ್ಯರು ಈರಲಿಂಗೆಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಗೀತಾ ನಂದಿನಿ ಗೌಡ, ಯತೀಶ್ , ಬಿ.ಎಸ್. ಸದಾನಂದ,ಡಿಸಿಸಿ ST ವಿಭಾಗದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸ್ವಾಮಿ ಆರ್,ಜಿಲ್ಲಾ ಆಸಂಘಟಿತ ಕಾರ್ಮಿಕ ವಿಭಾಗ ಸಂಘಟನ ಕಾರ್ಯದರ್ಶಿ ಜೆ ವಿದ್ಯಾಧರ,ಕೃಷ್ಣಾಪುರ ಹನುಮಂತರಾಯ, SC ತಿಪ್ಪೇಸ್ವಾಮಿ, ಅರಳಿಕೆರೆ ಬಸವರಾಜ್, ಮಂಜುನಾಥ್, ಗ್ರಾ. ಪಂ. ಸದಸ್ಯರು ಗೋವಿಂದ ರಾಜು,ಶ್ರೀನಿವಾಸ್,ಇನ್ನು ಹಲವಾರು ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು . ವರದಿ: ಮುರುಳಿಧರನ್ ಆರ್., ಹಿರಿಯೂರು . ( ಚಿತ್ರದುರ್ಗ – ದಾವಣಗೆರೆ )
ಮಧುಗಿರಿ ತಾಲ್ಲೂಕು ಕೊಂಡವಾಡಿ ಗ್ರಾಮದಲ್ಲಿ ಅಂದಿನಿಂದಲೂ ನೆಲೆಗೊಂಡಿರುವ ಶ್ರೀ ಉಧ್ಬವ ಬಂಗಾರು ಕಾಟುಮ ಲಿಂಗೇಶ್ವರ ಸ್ವಾಮಿ ಜಾತ್ರೆಯು,ಪ್ರತೀ ವರ್ಷ ಶಿವರಾತ್ರಿ ಹಬ್ಬದ ಪ್ರಯುಕ್ತ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ವಾಡಿಕೆಯಂತೆ ,ಈ ಬಾರಿಯೂ ದೇವಸ್ಥಾನದ ಟ್ರಸ್ಟ್ ,ಭಕ್ತ ಮಹಾಶಯರು,ಮತ್ತು ಸಾರ್ವಜನಿಕರ ಸಹಕಾರದಿಂದ ಈ ಬಾರಿಯೂ ಜಾತ್ರೆ ಪ್ರಯುಕ್ತ ಎಲ್ಲ ವಿಧಿ ವಿಧಾನಗಳನ್ನು ಆಚರಿಸಲಾಯಿತು. ಅದರಲ್ಲಿಯೂ ವಿಶೇಷವಾಗಿ ಗುರುವಾರದಂದು ದೇವಾಲಯದ ಪ್ರಾಂಗಣದಲ್ಲಿ “ನೂರಾ ಒಂದು ಎಡೆ ” ಪೂಜೆಯನ್ನು ವಿದ್ಯುಕ್ತವಾಗಿ ಶ್ರದ್ದೆ ಮತ್ತು ಭಕ್ತಿ ಗಳಿಂದ ಆಚರಿಸಲಾಯಿತು. ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ದೂರ ದೂರುಗಳಿಂದಲೂ ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.. ಎಂತಹ ಬರಗಾಲದಲ್ಲೂ ಸಹ ಜಾತ್ರೆಯ ಆಚರಣೆಗಳು ನಿಲ್ಲದೆ ನಡೆದುಕೊಂಡು ಬಂದಿರುವುದು ಈ ಜಾತ್ರೆಯ ವಿಶೇಷ. ಗ್ರಾಮದ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ,ಮನೆಗಳನ್ನೆಲ್ಲ ಸುಣ್ಣ ಬಣ್ಣ ಮಾಡಿ ಸಿಂಗರಿಸಿಕೊಂಡು ಊರಿಗೆ ಊರೇ ಜಾತ್ರೆಯ ಸಡಗರದಲ್ಲಿ ಮುಳುಗಿತ್ತು. ಈ ದೇವಸ್ಥಾನದ ಒಕ್ಕಲು ,ಮತ್ತು ಸಕಾಲ ಕರ್ನಾಟಕ ಸರ್ಕಾರ ದ ಆಡಳಿತಾಧಿಕಾರಿಗಳೂ ಆದ…
ಪಾವಗಡ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ತುಮಕೂರು ಜಿಲ್ಲಾ ಘಟಕದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಹಾಗೂ ಗೆಲುವಿನ ನಗೆ ಬೀರಿದ ಹಿರಿಯ ಪತ್ರಕರ್ತರಿಗೆ ಇಂದು ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು ತೀವ್ರ ಕುತೂಹಲಕ್ಜೆ ಎಡೆ ಮಾಡಿ ಕೊಟ್ಟಿದ್ದ ಜಿದ್ದಾ ಜಿದ್ದಿನ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಪಾವಗಡ ತಾಲ್ಲೂಕಿನ ಹಿರಿಯ ಪತ್ರಕರ್ತ ಶ್ಯಾನ ಪ್ರಸನ್ನಮೂರ್ತಿ ಹಾಗೂ ನಿರ್ದೇಶಕರ ಸ್ಥಾನಕ್ಕೆ ಹೊಸದಿಗಂತ ಪತ್ರಿಕಾ ವರದಿಗಾರ ನಾಗೇಂದ್ರ ಅವರಿಗೆ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಶಾಲು ಹೊದಿಸಿ ಹೂಮಾಲೆ ಹಾಕಿ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸರಳ ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಗೌತಮ್ ಕ್ರಾಂತಿ, ಶ್ರೀಕಾಂತ್, ರಾಕೇಶ್, ವೆಂಕಟೇಶ್, ನರೇಶ್, ಸಾಗರ್, ಸಾಯಿ ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ.
ಗುಬ್ಬಿ:ತಾಲೂಕಿನ ಜೀಗನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಇತಿಹಾಸ ಪ್ರಸಿದ್ಧ ಕರೆಕಲ್ಲು ಶ್ರೀ ಚಿತ್ರಲಿಂಗ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಚಿತ್ರಲಿಂಗ ಸ್ವಾಮಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ಚಿತ್ರ ಲಿಂಗಸ್ವಾಮಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು ಇದೇ ಸಂದರ್ಭದಲ್ಲಿ ಜೀಗನಹಳ್ಳಿ ಗೊಲ್ಲರಹಟ್ಟಿಯ ಯಾದವ ಸಮಾಜದ ಮುಖಂಡರು ಯಜಮಾನರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹಾಜರಿದ್ದರು. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಕೊರಟಗೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಡಾ.ಜಿ.ಪರಮೇಶ್ವರ್ ಯುವಪಡೆ ಹಾಗೂ ಯುವ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ. ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಡಾ.ಜಿ.ಪರಮೇಶ್ವರ್ ಕಪ್ ಕಬಡ್ಡಿ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಗ್ರಾಮೀಣ ಪ್ರದೇಶದ ಯುವ ಕ್ರೀಡಾಪಟು ಗುರುತಿಸುವುದೇ ಕಬಡ್ಡಿ. ಹಬ್ಬದ ಕಾರ್ಯಕ್ರಮದ ಉದ್ದೇಶ, ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊರಟಗೆರೆ ಕ್ಷೇತ್ರದ ಯುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿವರ್ಷವೂ ವಿಶೇಷ ರೀತಿಯ ಕಾರ್ಯಕ್ರಮ ರೂಪಿಸುತ್ತೇನೆ ಎಂದು ತಿಳಿಸಿದರು. ಈ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ 17 ತಂಡಗಳು ಭಾಗವಹಿಸಿದ್ದು, ಮೊದಲನೆಯ ಬಹುಮಾನ ಒಂದು ಲಕ್ಷ ರೂ. ಹಾಗೂ ಪಾರಿತೋಷಕವನ್ನು ಕೊರಟಗೆರೆಯ ಎ ತಂಡ (ಹಿರಿಯರ ತಂಡ ) ಪಡೆದರು. ಎರಡನೆಯ ಬಹುಮಾನವನ್ನು ಐವತ್ತು ಸಾವಿರ ರೂ ಹಾಗೂ ಪಾರಿತೋಷಕವನ್ನು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಕೋರಾ ತಂಡ ಪಡೆದರು. ಮೂರನೆಯ ಬಹುಮಾನವನ್ನು ಕೊರಟಗೆರೆಯ…
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಈ ಸುದ್ದಿ ಆಘಾತ ನೀಡಿದೆ. ಶೇನ್ ವಾರ್ನ್ ಅವರು ತಮ್ಮ ವಿಲ್ಲಾದಲ್ಲಿ ಅಸ್ವಸ್ಥರಾಗಿದ್ದರು, ಕೂಡಲೇ ಅವರಿಗೆ ಚಿಕಿತ್ಸೆ ನೀಡಿದರೂ ಶೇನ್ ವಾರ್ನ್ (shane warne) ಅವರನ್ನು ಬದುಕಿಸಲು ಆಗಿಲ್ಲ ಎಂದು ಅಂತಾರಾಷ್ಟ್ರೀಯ ಕ್ರೀಡಾ ವಾಹಿನಿ ಸುದ್ದಿ ಪ್ರಕಟಿಸಿದೆ. ಶೇನ್ ವಾರ್ನ್ ಹೃದಯಾಘಾತಕ್ಕೆ ಬಲಿಯಾಗಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ಈವರೆಗೂ ಶೇನ್ ವಾರ್ನ್ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.ಶೇನ್ ವಾರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಆಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 708 ವಿಕೆಟ್ ಹಾಗೂ ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದು ಶೇನ್ ವಾರ್ನ್ ದಾಖಲೆ ನಿರ್ಮಿಸಿದ್ದರು. ಆಸ್ಟ್ರೇಲಿಯಾ ಸತತ 3 ಬಾರಿ ವಿಶ್ವಕಪ್ ಗೆಲ್ಲುವಲ್ಲಿಯೂ ವಾರ್ನ್ ಪಾತ್ರ ದೊಡ್ಡದಿತ್ತು.ಆದರೆ ದಿಢೀರ್ ಶೇನ್ ವಾರ್ನ್ ಸಾವಿನ ಸುದ್ದಿ ಕೇಳಿ ಕ್ರೀಡಾ ಜಗತ್ತು ತತ್ತರಿಸಿದೆ. ಈ ಕುರಿತು ತನಿಖೆ ಆರಂಭವಾಗಿದೆ. ವರದಿ:…