Author: admin

ಪಾವಗಡ: ಮಹಿಳಾ ದಿನಾಚರಣೆಯು ಸಮಾಜದಲ್ಲಿ ಆಗುವ ಮತ್ತು ಆಗಿರುವ ಬದಲಾವಣೆಯ ಸಂಕೇತವಾಗಿದೆ ಎಂದು ಹೆಲ್ಪ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂದ್ಯಾ ಮಾನಂ ಶಶಿಕಿರಣ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರನ್ನು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ  ನೆನಪಿನ ಕಾಣಿಕೆ ನೀಡಿ ಗೌರವಿಸಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರ ಧರ್ಮಪತ್ನಿ ಸಂದ್ಯಾ ಮಾನಂ ಶಿಶಿಕಿರಣ್,  ಮಹಿಳೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ತನ್ನ ಕೌಟುಂಬಿಕ ಹೊಣೆಯನ್ನು ನಿಭಾಯಿಸಲೇ ಬೇಕಾಗುತ್ತದೆ. ಈಗಿನ ಕಾಲದಲ್ಲಿ ಪುರುಷರ ಎಲ್ಲಾ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ವನ್ನು ಮಹಿಳೆ ಪಡೆದಿದ್ದಾಳೆ ಆದರೆ ಅದರಿಂದ ಜವಾಬ್ದಾರಿಗಳು ಹೆಚ್ಚು, ಹೊಣೆಗಾರಿಕೆಯು ಹೆಚ್ಚು ಎಂದು ಬನ್ನಿಸಿದರು. ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಾದ ಆರೋಗ್ಯ ಇಲಾಖೆಯ ನಿವೃತ್ತ ಅರೋಗ್ಯ ಸಹಾಯಕಿ ಯಶೋದಮ್ಮ,ಸಮಾಜ ಸೇವಕಿ ಹಾಗೂ ವಾಲ್ಮೀಕಿ…

Read More

ದ್ವಿತೀಯ ಪಿ.ಯು ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ (PUC Final exam time table). ಏಪ್ರಿಲ್ 22 ರಿಂದ ಮೇ 18 ರವರೆಗೆ ಪಿಯು ದ್ವಿತೀಯ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಮುಂದಾಗಿದೆ. ದ್ವಿತೀಯ ಪಿ.ಯುಸಿ ಪರೀಕ್ಷೆಯ ಅಂತಿಮ ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದೆ (PUC Final exam time table). ಏಪ್ರಿಲ್ 22 ರಿಂದ ಪರೀಕ್ಷೆ ಆರಂಭವಾಗಲಿದೆ.  ಮೇ 18ರವರೆಗೆ ಪರೀಕ್ಷೆ ನಡೆಯಲಿದೆ. ಇದೀಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನು ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಸ್ಪಷ್ಟಪಡಿಸಿದೆ (PUC exam date). ದ್ವಿತೀಯ ಪಿ.ಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಈ ಮೊದಲು ಪ್ರಕಟಿಸಲಾಗಿದ್ದು, ಅದರಲ್ಲಿ ಏಪ್ರಿಲ್  22ರಿಂದ ಮೇ 11ರವರೆಗೆ ಪರೀಕ್ಷೆ ನಡೆಸುವುದಾಗಿ ಹೇಳಲಾಗಿತ್ತು. ಅಲ್ಲದೆ, ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್ 5ರ ಸಂಜೆ 5…

Read More

ಪಾವಗಡ: ಭಾರತೀಯ ಸೇನೆಯಲ್ಲಿ 20 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ರಾಜವಂತಿ ಗ್ರಾಮದ ಕೃಷ್ಣಪ್ಪ-ಗಂಗಮ್ಮ ಅವರ ಪುತ್ರ ಮೈಲಾರಲಿಂಗಪ್ಪ ಅವರಿಗೆ ರಾಜವಂತಿ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು. ಮೈಲಾರಲಿಂಗಪ್ಪನವರು ಜಮ್ಮುಕಾಶ್ಮೀರದಲ್ಲಿ ಒಂದು ವರ್ಷ, ಪಂಜಾಬ್ ನಲ್ಲಿ ಎರಡು ವರ್ಷ, ವಿಶ್ವಸಂಸ್ಥೆಯ  ಶಾಂತಿ ಪಾಲನಾ  ಪಡೆದ ಭಾಗವಾಗಿ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸಿ ಮತ್ತು 11ಪ್ರಸಸ್ತಿಗಳನ್ನು  ಪಡೆದುಕೊಂಡು  ಸತತವಾಗಿ ಕೆಲಸ ನಿರ್ವಹಿಸಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಇವರ ದೇಶ ಸೇವೆಯನ್ನು  ಗುರುತಿಸಿ ರಾಜವಂತಿ ಗ್ರಾಮಸ್ಥರು ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದರು. ಯಾದವ ಅಧ್ಯಕ್ಷರಾದ ನರಸಿಂಹಪ್ಪ,  R C ಅಂಜಿನಪ್ಪ,  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನಕಾರ್ಯದರ್ಶಿಗಳಾದ  ಮೈಲಾರರೆಡ್ಡಿ, ಪುರಸಭೆ ಸದಸ್ಯರಾದ ಕೋಳಿ ಬಾಲಾಜಿ,  ಗಿರೀಶ್,  K T ಹಳ್ಳಿ ಚಿಕ್ಕಣ್ಣ, ರಾಮಾಂಜಿನಪ್ಪ, ಪಾಂಡು ಯಾದವ್,  ಅನಿಲ್ ಯಾದವ್,  ಭರತ್ ಯಾದವ್,  ದಿವ್ಯತೇಜು ಯಾದವ್, ರಘುವೀರ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ: ದೇವರಹಟ್ಟಿ ನಾಗರಾಜ.  (ಕಸಬಾ ಹೋಬಳಿ ) ಪಾವಗಡ ನಮ್ಮತುಮಕೂರು.ಕಾಂನ ಕ್ಷಣ…

Read More

ಬೆಂಗಳೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-RPI(ಅಠವಳೆ) ರಾಜ್ಯ  ಮಹಿಳಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ  ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಆರ್ ಪಿಐ ರಾಜ್ಯಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಆರ್.ಪಿ.ಐ. ಮಹಿಳಾ ಘಟಕದ ಅಧ್ಯಕ್ಷರಾದ ಸುಧಾರಾಣಿ ಅವರು ಆಶಯ ನುಡಿಗಳನ್ನಾಡಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ  ಮಹಿಳಾ ಸಾಧಕಿಯರಾದ ಡಾ.ಮಂಜುಳ ಉಮೇಶ್, ಸುಧಾ ಕೆ., ಬಿ.ಎನ್.ಗೀತಾ ಪ್ರಭಾರೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ವೇಳೆ ಸಗಾಯಿ ಮೇರಿ, ಕುಮಾರಿ, ಅಶ್ವತ್ಥಮ್ಯ, ಧನಲಕ್ಷ್ಮೀ, ಕಾವ್ಯಾ ವೆಂಕಟೇಶ್, ಅಂಬಿಕಾ, ಟಿ.ರಾಧಾ, ಖುಷ್ಬು ಶಮ, ಭಾಗ್ಯ ರೇವಣ್ಣ, ನಾಗವೇಣಿ, ವನಿತಾ ಶಿವು, ಚೈತ್ರಾನಾಗ, ರಮ್ಯಾ, ದೇವಿ, ಪವಿತ್ರ, ಎಂ.ಕೆ.ಶಶಿಕಲಾ ಡಿ.ವಿ ಮತ್ತಿತರು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಮಧುಗಿರಿ: ಪಟ್ಟಣದ ಆರ್ ಎಂ ಸಿ  ಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಂತರಾಜು ಬಿನ್ ಲಕ್ಷ್ಮೀನಾರಾಯಣ ಅವರು ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡು ಅಸಹಾಯಕ ಜೀವನ ನಡೆಸುತ್ತಿದ್ದು, ಈ ವಿಚಾರ ತಿಳಿದ ಶಿಕ್ಷಕರೊಬ್ಬರು ಮಾನವೀಯತೆ ಮೆರೆದ ಘಟನೆ ನಡೆದಿದೆ. ಮುಂಜಾನೆ ವೇಳೆ ವಾಯು ವಿಹಾರಕ್ಕೆ ತೆರಳಿದ್ದ ಶಿಕ್ಷಕ ದಂಪತಿ ಫಣೀಂದ್ರನಾಧ್ ಹಾಗೂ ಇಂದ್ರಮ್ಮ ಅವರಿಗೆ  ಕಾಂತರಾಜು ಕಂಡಿದ್ದು, ಕಣ್ಣುಗಳನ್ನು ಕಳೆದುಕೊಂಡಿರುವ ಅವರನ್ನು ಶಿಕ್ಷರು ವಿಚಾರಿಸಿದ್ದಾರೆ. ಈ ವೇಳೆ ತಾನು ಮೊದಲಿಗೆ ಒಂದು ಕಣ್ಣು ಕಳೆದುಕೊಂಡು ಹಮಾಲಿ ವೃತ್ತಿ ಮಾಡಿಕೊಂಡು ಜೀವನಸಾಗಿಸುತ್ತಿದ್ದೆ ಆದರೆ, ಬಳಿಕ ಆಕಸ್ಮಿಕವಾಗಿ ಮತ್ತೊಂದು ಕಣ್ಣನ್ನು ಕಳೆದುಕೊಂಡಿರುವುದಾಗಿ ಕಾಂತರಾಜು ತಿಳಿಸಿದ್ದಾರೆ. ಕಾರ್ಮಿಕನ ನೋವು ಕೇಳಿ ಫಣೀಂದ್ರನಾಧ್ ಅವರ ಹೃದಯ ಕರಗಿದ್ದು, ಅವರು ಕಾರ್ಮಿಕ ಕಾಂತರಾಜುನನ್ನು ಕರೆದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಕಣ್ಣು ತಜ್ಞ ಡಾ.ಗಂಗಾಧರ್ ಅವರಿಗೆ ತೋರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು, ಇನ್ನೊಂದು ತಿಂಗಳಲ್ಲಿ ದೃಷ್ಟಿ ಮರಳಿ ಬರುತ್ತದೆ ಎಂದ ಭರವಸೆ ನೀಡಿದ್ದಾರೆ. ಇನ್ನೂ ಸದ್ಯ…

Read More

ತುಮಕೂರು: ಸಿರಾ ತಾಲ್ಲೂಕು  ಸಿರಾ ನಗರದ ಸಂತೆ ಪೇಟೆಯಲ್ಲಿರುವ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಆಶಾ ಕೆಎಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಈಶ್ವರಿ ವಿಶ್ವವಿದ್ಯಾನಿಲಯದ ಆಧ್ಯಾತ್ಮಿಕ ಚಿಂತಕರಾದ ಪಿ.ಎಚ್.ಮಹೇಂದ್ರಪ್ಪ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮಮತಾ ಎಂ., ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜಿನ ಡಾ.ರಾಮಕೃಷ್ಣ, ವಂಶವೃಕ್ಷ ಆಸ್ಪತ್ರೆಯ ಡಾ.ಮಾಲಿನಿ,  ಪ್ರಸೂತಿ ತಜ್ಞರಾದ ಡಾ.ನಿರ್ಮಲ, ವಕೀಲರ ಸಂಘದ ಅಧ್ಯಕ್ಷ ಎಚ್.ಪಿ. ಧರಣೇಶ್ ಗೌಡ, ಉಪಾಧ್ಯಕ್ಷರಾದ ವೈ.ಟಿ.ರಾಮಚಂದ್ರಪ್ಪ, ಕಾರ್ಯದರ್ಶಿ ಕಂಬದೂರಪ್ಪ, ಖಜಾಂಚಿ ಗುರುಮೂರ್ತಿ, ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ಸಿ.ಆರ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ  ಸದಾಶಿವ, ಗೋಪಾಲಕೃಷ್ಣ, ರಾಜಯೋಗಿನಿ ಬಿ.ಕೆ. ಶಾಂತ, ಡಾ.ಕಲಾ, ಮಂಜುಳಾ ಅನ್ನಪೂರ್ಣ ಅಂಗನವಾಡಿ ಕಾರ್ಯಕರ್ತರು ರಾಮಕೃಷ್ಣ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಕ್ರೇನ್ ನಿಂದ ಸಿರಾಕ್ಕೆ ಆಗಮಿಸಿದ ವೈದ್ಯಕೀಯ ವ್ಯಾಸಂಗದ ವಿದ್ಯಾರ್ಥಿ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು ವರದಿ:  ಎ.ಎನ್.ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ…

Read More

ಪಾವಗಡ: ಹೆಲ್ಪ್ ಸೊಸೈಟಿ  ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ದಿನ್ನಪ್ಪನಬಾವಿ ತಾಂಡಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕಗಳು ಹಾಗೂ ಅಂಗನವಾಡಿ ಕೇಂದ್ರಕ್ಕೆ ಟೇಬಲ್ ಹಾಗೂ ಅಂಗನವಾಡಿ ಮಕ್ಕಳಿಗೆ ಬ್ಯಾಗ್  ವಿತರಿಸಲಾಯಿತು.  ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್  ಕಲಿಕಾ ಸಾಮಗ್ರಿ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿಯ ಪದಾಧಿಕಾರಿಗಳಾದ ವೆಂಕಟೇಶ್ ನಾಯ್ಕ, ಗೌತಮ್, ಸಾಯಿ ಕುಮಾರ್, ಶ್ರೀಕಾಂತ್, ನರೇಶ್ ಹಾಗೂ  ಎಸ್ ಡಿಎಂಸಿ ಉಪಾಧ್ಯಕ್ಷರಾದ ಶಂಕರ್ ನಾಯ್ಕ,   ಸಮಾಜಸೇವಕರಾದ ಪ್ರಕಾಶ್,   ಮುಖ್ಯಶಿಕ್ಷಕ  ಗಂಗಾಧರ್,  ಸಹ ಶಿಕ್ಷಕ ಶಾರದಮ್ಮ, ಅಂಗನವಾಡಿ ಕಾರ್ಯಕರ್ತೆ  ಭಾಗ್ಯಮ್ಮ ಉಪಸ್ಥಿತರಿದ್ದರು. ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಕೊರಟಗೆರೆ: ಪಟ್ಟಣದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ಹಿಂದೆ ಇ -ಸೊತ್ತು ಆಂದೋಲನ ಕಾರ್ಯಕ್ರಮವನ್ನು ನಡೆಸಿದ್ದು, ಅದರಲ್ಲಿ ಮೂರನೇ ವಾರ್ಡಿನ 38 ಜನ ಸಾರ್ವಜನಿಕರು ತಮ್ಮ ಮನೆಯ ಇ-ಸ್ವತ್ತಿಗೆ ಅರ್ಜಿಯನ್ನು ಸಲ್ಲಿಸಿದ್ದರು ಅರ್ಜಿಗಳನ್ನು ಪರಿಶೀಲಿಸಿ ಇಂದು ಸಾರ್ವಜನಿಕರ ಮನೆ ಬಾಗಿಲಿಗೆ ಅಧ್ಯಕ್ಷರು ಸದಸ್ಯರು ಹಾಗೂ ಅಧಿಕಾರಿಗಳು ತೆರಳಿ ಸುತ್ತಿನ ಅಳತೆಗಳನ್ನು ಮಾಡಿ ಇ ಸೊತ್ತನ್ನು ಸಾರ್ವಜನಿಕರಿಗಿಡುತ್ತಿದ್ದಾರೆ. ಅಧ್ಯಕ್ಷರಾದ ಕಾವ್ಯಶ್ರೀ ರಮೇಶ್ ಮಾತನಾಡಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗಮನ ಹರಿಸಲಾಗಿದೆ ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್ ಗಳಲ್ಲೂ ಕೂಡ ಈ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಧ್ಯೇಯ ಎಂದು ತಿಳಿಸಿದರು . 13ನೇ ವಾರ್ಡಿನ ಸದಸ್ಯ ಒಬಳರಾಜು ಮಾತನಾಡಿ, ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಅವರ ಆಶಯದಂತೆ ತಾಲೂಕಿನ ಜನತೆಯು ಯಾವ ಕಚೇರಿಗೂ ಅಲೆದಾಡಬಾರದು ಅವರ ಕುಂದುಕೊರತೆಗಳನ್ನು ಆಯಾ ವಾರ್ಡಿನ ಸದಸ್ಯರೇ ಖುದ್ದಾಗಿ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು ಎಂದು…

Read More

ತಿಪಟೂರು: ತಾಲೂಕಿನ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲೂರಿನಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ 8 ಮನೆಗಳ ಗೃಹಿಣಿಯರು ಪರದಾಡುತ್ತಿದ್ದಾರೆ. ಗೌಡನಕಟ್ಟೆ ವಾಟರ್ ಮ್ಯಾನ್ ವಿಶ್ವನಾಥ್ ತಮಗೆ ಬೇಕಾದ ಮಿನಿ ವಾಟರ್ ಟ್ಯಾಂಕ್ ಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದ ಸುನಂದಾ ಎಂಬ ಮಹಿಳೆ ಮಾತನಾಡಿ ನಮಗೆ ಕುಡಿಯಲು ನೀರು ಸರಿಯಾಗಿ ಸಿಗದೆ ಎಂಟು ವರ್ಷಗಳೇ ಕಳೆದಿದೆ ಕುಡಿಯುವ ನೀರಿಗಾಗಿ ನಾವು ಸುಮಾರು 150 ಮೀಟರ್ ದೂರದ ಮಿನಿ ವಾಟರ್ ಟ್ಯಾಂಕು ಗಳಿಗೆ ಹೋಗಿ ನೀರನ್ನು ತರುವಂತಹ ಘಟನೆ ಗ್ರಾಮದ ವೃದ್ಧರಿಗೆ ಮತ್ತು ಮಹಿಳೆಯರಿಗೆ ಘಟನೆ ಎದುರಾಗಿದೆ ಎಂದರು. 8 ಮನೆಗಳಿಗೆ ನೀಡಿದಂತಹ ಮಿನಿ ವಾಟರ್ ಟ್ಯಾಂಕ್ ಸ್ವಚ್ಛತೆ ಕೂಡ ಆಗಿರುವುದಿಲ್ಲ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಪಾಳುಬಿದ್ದಿರುವ ಸ್ಥಿತಿಯಲ್ಲಿ ವಾಟರ್ ಟ್ಯಾಂಕ್ ಇದೆ. ಇದೆ ವಿಚಾರವೇ ಸುಮಾರು ಹತ್ತಾರು ಬಾರಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅದಲ್ಲದೆ…

Read More

ತುಮಕೂರು: ವಿದ್ಯಾರ್ಥಿಯೊಬ್ಬ ಬಸ್ ಹತ್ತುವ ವೇಳೆ ಅಚಾನಕ್ಕಾಗಿ ಬಸ್ಸಿನ ಗಾಜಿಗೆ ಕೈಹಾಕಿದ ಪರಿಣಾಮ ಬಸ್ಸಿನ ಗಾಜು ಆಕಸ್ಮಿಕವಾಗಿ ಒಡೆದಿದ್ದು, ಈ ವೇಳೆ  ಕೆಎಸ್ಸಾರ್ಟಿಸಿ ಸಿಬ್ಬಂದಿ ವಿದ್ಯಾರ್ಥಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ ಘಟನೆ ವರದಿಯಾಗಿದೆ. ಸೋಮವಾರ ಸಂಜೆ ಐದು ಮೂವತ್ತರ ಸಮಯದಲ್ಲಿ ತುಮಕೂರಿನ ಕೆಎಸ್ಸಾರ್ಟಿಸಿ  ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ಊರಿಗೆ ತೆರಳಲು ಸೀಟಿಗೆ ಬ್ಯಾಗನ್ನು ಹಾಕುವ ವೇಳೆ ಅಚಾನಕ್ಕಾಗಿ ಬಸ್ಸಿನ ಗಾಜಿಗೆ ಕೈ ತಾಗಿದ್ದು, ಈ ವೇಳೆ ಬಸ್ಸಿನ ಗಾಜು ಹೊಡೆದಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಕೆಎಸ್ಸಾರ್ಟಿಸಿ ಸಿಬ್ಬಂದಿ, ವಿದ್ಯಾರ್ಥಿಯನ್ನು ಕಳ್ಳನಂತೆ ಹಿಡಿದು ಎಳೆದಾಡಿದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಎಡೆಮಾಡಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲು ಮುಂದಾದ ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಕಾರ್ಯವೈಖರಿಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇನ್ನು ಹಳ್ಳಿ ಗಾಡಿಗೆ ತೆರಳುವ ವಿದ್ಯಾರ್ಥಿಗಳು ಕೆಎಸ್ಸಾರ್ಟಿಸಿ ಬಸ್ ಅನ್ನು  ಅವಲಂಬಿಸಿದ್ದಾರೆ. ಆದರೆ, ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬಸ್ ನಿಲ್ದಾಣ…

Read More