Author: admin

ನೆಲಮಂಗಲ: ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಸುಮಾರು 20 ಕಾರ್ಮಿಕರಿಗೆ ತೀವ್ರವಾದ ಗಾಯಗಳಾದ ಘಟನೆ ಇಲ್ಲಿನ ಚಿಕ್ಕ ಪಾಲನಹಳ್ಳಿ ಗೇಟ್ ಬಳಿ ಗುರುವಾರ ಸಂಜೆ  ನಡೆದಿದೆ. ತಾಲ್ಲೂಕಿನ ಮಾರತ್ಹಳ್ಳಿ ಬಳಿಯಿರುವ ಟೆಕ್ಸ್  ಪೋರ್ಟ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಣ್ಣುಮಕ್ಕಳು ಸಂಜೆ  ಕೆಲಸ ಮುಗಿಸಿ ತಮ್ಮ ಊರುಗಳಿಗೆ ಈ ಬಸ್ಸಿನಲ್ಲಿ ವಾಪಸ್  ಬರುತ್ತಿದ್ದರು ಎನ್ನಲಾಗಿದೆ. ಬಸ್ಸಿನ ಚಾಲಕ ಮದ್ಯದ ಅಮಲಿನಲ್ಲಿದ್ದು, ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದಾನೆ ಎನ್ನಲಾಗಿದೆ. ಚಿಕ್ಕ  ಪಾಲನಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಕಾರನ್ನು ತಪ್ಪಿಸುವ ಭರದಲ್ಲಿ ಈ ಅಪಘಾತ ಸಂಭವಿಸಿದ್ದು,  ಬಸ್ 3 ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 20ಕ್ಕೂ ಅಧಿಕ ಮಹಿಳೆಯರಿಗೆ ಗಾಯಳಾಗಿದ್ದು, ಕೆಲವು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ ಮಹಿಳೆಯರು ಎಷ್ಟೇ ಹೇಳಿದರೂ ಕೇಳದ ಚಾಲಕ, ನಿಮ್ಮೆಲ್ಲರ ಪ್ರಾಣ ನನ್ನ ಕೈಲಿದೆ ಎಂದು ಉಡಾಫೆ ಉತ್ತರವನ್ನು ನೀಡಿ,  ಕುಡಿದ ಅಮಲಿನಲ್ಲಿ ಅತಿ ವೇಗದಿಂದ ಚಾಲನೆ ಮಾಡಿದ್ದರಿಂದ ಈ ಅವಘಡ…

Read More

ಹಿರಿಯೂರು: ತಾಲ್ಲೂಕಿನ ವಾಣಿ ಸಕ್ಕರೆ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ, ಐ.ಕ್ಯೂ.ಎ.ಸಿ, ಎನ್.ಎಸ್.ಎಸ್., ಕ್ರೀಡೆ, ಯೂತ್ ರೆಡ್ ಕ್ರಾಸ್, ರೇಂಜರ್ಸ್ ಹಾಗೂ ರೋವರ್ಸ್ ಸಹಯೋಗದಲ್ಲಿ   ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ , ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಿ ಉಳಿಯದೇ,  ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ, ಗೌರವ ಹಾಗೂ ಸ್ವಾತಂತ್ರ್ಯ ಸಿಗುವಂತಾಗಬೇಕು  ಎಂದು ಹೇಳಿದರು. ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ತಮ್ಮದೇ ಆದ  ಸ್ಥಾನಮಾನ, ಗೌರವಗಳಿದ್ದು, ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ಗೌರವಪೂರ್ಣವಾಗಿ ಕಾಣಲಾಗುತ್ತಿದೆ. ಆದರೂ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇನ್ನು ಅನೇಕ ಮೂಢನಂಬಿಕೆ ಆಚರಣೆಗಳು, ಕಟ್ಟುಪಾಡುಗಳಿದ್ದು, ಈ ಎಲ್ಲಾ ಆಚರಣೆಗಳು ಹಾಗೂ ಕಟ್ಟುಪಾಡುಗಳಿಂದ ಮಹಿಳೆಯರು ಹೊರಬರಬೇಕು  ಎಂದು ಕರೆ ನೀಡಿದರು. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಒಂದು ಕುಟುಂಬಕ್ಕೆ ಎರಡು ಕಣ್ಣುಗಳಿದ್ದಂತೆ,  ಆದರೂ, ಕೆಲವು ಸಂದರ್ಭದಲ್ಲಿ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಮಹಿಳೆಯರ …

Read More

ಕೊರಟಗೆರೆ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಿಳಾ ಘಟಕದ ವತಿಯಿಂದ ಸರಿಗಮಪ ಖ್ಯಾತಿಯ ಮಧುಗಿರಿ ಮೂಲದ ರತ್ನಮ್ಮ ಮಂಜಮ್ಮ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು . ನಂತರ ರತ್ನಮ್ಮ ಜಯಮ್ಮ ರಿಂದ ಮಾದೇಶ್ವರನ ಗೀತೆಯನ್ನು ಹಾಡುವಂತೆ ಬಂದಿದ್ದ ಸಾರ್ವಜನಿಕರು ಕೇಳಿಕೊಂಡರು ಸಾರ್ವಜನಿಕರ ಬೇಡಿಕೆಯಂತೆ ರತ್ನಮ್ಮ ಮಂಜಮ್ಮ ಮಾದೇಶ್ವರನ ಗೀತೆಯನ್ನು ಹಾಡಿ ಬಂದಿದ್ದ ಸಾರ್ವಜನಿಕರಿಗೆ  ಮನರಂಜಿಸಿದರು . ನಂತರ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿ ಪ್ರತಿಯೊಬ್ಬ ಪುರುಷನ ಯಶಸ್ಸಿನ  ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಆ ಮಹಾತಾಯಿಯ ತಾಳ್ಮೆಗೆ ನಾವೆಲ್ಲರೂ ಶರಣಾಗಲೇಬೇಕು ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿ ನಮ್ಮದೊಂದು ಗುರಿಯತ್ತ ಮುಟ್ಟಿಸುವಲ್ಲಿ  ಹೆಣ್ಣಿನ ಮಹತ್ವ ಬಹು  ದೊಡ್ಡದು ಎಂದು ತಿಳಿಸಿದರು . ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ತಿಪಟೂರು: ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭಗೊಂಡಿದೆ ಆದರೆ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿ ಮನೆ ನಿವೇಶನ ಹಾಗೂ ಜಮೀನು ಕಳೆದುಕೊಂಡ ತಾಲೂಕಿನ ತಿಪ್ಪನಹಳ್ಳಿ ಗ್ರಾಮಸ್ಥರಿಗೆ ಇನ್ನೂ ಕೂಡ ಸೂಕ್ತ ಪರಿಹಾರ ನೀಡಿಲ್ಲ ಪರಿಹಾರ ನೀಡುವವರೆಗೂ ಶಾಂತಿಯುತವಾಗಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು. ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು,  ಕಿಬ್ಬನಹಳ್ಳಿ ಕ್ರಾಸ್ ನಲ್ಲಿ 125ಕ್ಕೂ ಹೆಚ್ಚು ನಿವೇಶನದ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಗಾಗಿ ಸಂತ್ರಸ್ತರು ಕಳೆದುಕೊಂಡಿದ್ದಾರೆ.  ಆದರೆ ಕಳೆದ ಆರು ವರ್ಷಗಳಿಂದ ಹೆದ್ದಾರಿ ಪ್ರಾಧಿಕಾರದವರು ನೋಟಿಸ್ ನೀಡಿದ್ದು ಬಿಟ್ಟರೆ, ಒಂದು ನಯಾ ಪೈಸೆ ಕೂಡ ಪರಿಹಾರದ ಹಣವನ್ನು ಇದುವರೆಗೂ ನೀಡಿರುವುದಿಲ್ಲ. ಭೂ ಕಾಯ್ದೆ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಒಂದು ವರ್ಷದ ಒಳಗೆ ಪರಿಹಾರ ನೀಡಬೇಕು. ಆದರೆ ಭೂಮಿ ಕಳೆದುಕೊಂಡು ಆರು ವರ್ಷ ಕಳೆದರೂ ಕೂಡ ಜಿಲ್ಲಾಡಳಿತ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ನಿವೇಶನ ಮನೆ ಜಮೀನು…

Read More

ಕೊರಟಗೆರೆ:   ಪಟ್ಟಣದ ಪತ್ರಕರ್ತರ ಭವನದಲ್ಲಿ  ಚುನಾಯಿತ ಪ್ರತಿನಿಧಿಗಳಿಗೆ ಅದ್ದೂರಿಯಿಂದ ಕೊರಟಗೆರೆಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ  ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷೆ ಕಾವ್ಯ ರಮೇಶ್, ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು,  ಅವರ ಸಂಘಟನೆ ಅವಶ್ಯಕವಾಗಿದೆ . ಸಮಾಜದ ಒಳಿತಿಗೆ ಶ್ರಮಿಸುವ ಮಾಧ್ಯಮದವರಿಗೆ ಅಗತ್ಯ ರೀತಿಯ ಸೌಕರ್ಯ ಮತ್ತು ಸವಲತ್ತುಗಳನ್ನು ನೀಡುವುದು ಸರ್ಕಾರಗಳ ಕರ್ತವ್ಯವಾಗಿದೆ.  ಗ್ರಾಮೀಣ ಭಾಗದ ಪತ್ರಕರ್ತರಿಗೆ ಯಾವುದೇ ಸಂಬಳ ಇರುವುದಿಲ್ಲ ಆದ್ದರಿಂದ ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೇರಬೇಕಾದ    ಸವಲತ್ತುಗಳನ್ನು ಆದಷ್ಟು ಬೇಗ ನೀಡಲಿ ಎಂಬುದೇ ನಮ್ಮ ಆಶಯ  ಎಂದರು. ನಿರ್ದೇಶಕರಾಗಿ ಆಯ್ಕೆಯಾಗಿರುವ ವಿಜೇತರಾಗಿರುವ ಟಿ.ಎಸ್. ಕೃಷ್ಣಮೂರ್ತಿ ಮಾತನಾಡಿ,  ಈ ಬಾರಿಯ ಜಿಲ್ಲಾ ಪತ್ರಕರ್ತರ ಚುನಾವಣೆಯಲ್ಲಿ ಅತಿ ಹೆಚ್ಚು ಗ್ರಾಮೀಣ ಭಾಗದ ಪತ್ರಕರ್ತರು ವಿಜೇತರಾಗಿದ್ದಾರೆ. ಇದು ಒಳ್ಳೆಯ ವಿಷಯವೇ ಎಲ್ಲಾ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಹಾಗೂ ಅಧಿಕಾರಿಗಳಿಂದ ಸಲ್ಲಬೇಕಾಗಿರುವ ಸೌಕರ್ಯಗಳನ್ನು  ಒದಗಿಸುವಲ್ಲಿ  ಈ ಬಾರಿ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮೀರಿ ಪ್ರಯತ್ನಿಸುತ್ತಿವೆ. ಹಾಗೆಯೇ ಪ್ರತಿ ಬಜೆಟ್…

Read More

ಹಿರಿಯೂರು: ತಾಲ್ಲೂಕಿನ  ವಾರ್ಡ್ ನಂ 30 ಮತ್ತು 31ನೇ ವಾರ್ಡಿನ ಹರಿಶ್ಚಂದ್ರ ಘಾಟ್ ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ಕಾಂಗ್ರೆಸ್ ನ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ತೆರಳಿದ್ದ ಇಲ್ಲಿನ ಕುಮಾರಿ ನಂದಿನಿ ಗೌಡ ಅವರು ಸದಸ್ಯತ್ವ ಮಾಡಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿಗಳು ನಂದಿನಿ ಅವರ ಮೇಲೆ ದಾಳಿ ಮಾಡಿದ್ದು, ಪರಿಣಾಮವಾಗಿ ಅವರು ಗಾಯಗೊಂಡಿದ್ದಾರೆ. ಇನ್ನೂ “ಬೀದಿನಾಯಿಗಳು ನನ್ನ ಮೇಲೆ ದಾಳಿ ನಡೆಸಿದ ವೇಳೆ ಸ್ಥಳೀಯರು ನಾಯಿಯನ್ನು ಓಡಿಸಿ ನನ್ನ ಪ್ರಾಣ ರಕ್ಷಣೆ ಮಾಡಿದ್ದಾರೆ ಎಂದು ನಂದಿನಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಂದಿನಿ ಅವರ ತಂದೆ ಗೋಪಿ ಯಾದವ್,  ಈ ವಾರ್ಡ್ ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳಿಗೆ ಮಹಿಳೆಯರಿಗೆ, ವೃದ್ಧರಿಗೆ ದಾರಿ ಹೋಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಇಷ್ಟಾದರೂ ಹಿರಿಯೂರು ನಗರ ಸಭೆ ಆಡಳಿತ ಕಂಡೂ ಕಾಣದಂತಿರುವುದು ಖಂಡನೀಯವಾಗಿದ್ದು, ತಕ್ಷಣವೇ ನಗರ…

Read More

ವರ್ಕಳದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ (fire accident five death). ದುರ್ಘಟನೆಯಲ್ಲಿ ಒಂದು ಪುಟ್ಟ ಮಗು ಕೂಡಾ ಸೇರಿದೆ. ಘಟನೆ ಇಂದು ಮುಂಜಾನೆ ಸಂಭವಿಸಿದೆ. ಪ್ರತಾಪ್ (62), ಶೆರ್ಲಿ (53), ಅಖಿಲ್ (29), ಅಭಿರಾಮಿ (25) ಮತ್ತು ನಿಖಿಲ್ ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗು ಸೇರಿದಂತೆ ಐದು ಜನರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ (fire accident five death). ಪ್ರತಾಪ್ ಅವರ ಹಿರಿಯ ಮಗ ನಿಖಿಲ್ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ (Fire accident). ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರತಾಪನ್ ತರಕಾರಿ ವ್ಯಾಪಾರಿಯಾಗಿದ್ದರು. ಎರಡು ಅಂತಸ್ತಿನ ಕಟ್ಟಡದ ಕಾರ್ ಗ್ಯಾರೇಜ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ತೀವ್ರವಾಗಿ ಹೊತ್ತಿ ಉರಿಯಲು ಆರಂಭವಾಯಿತು ಎಂದು ಪ್ರತ್ಯಕ್ಷದರ್ಶಿಗಳು…

Read More

ಭಾರತವು ಅನೇಕ ವಿಚಿತ್ರ ಮತ್ತು ನಿಗೂಢ ದೇವಾಲಯಗಳ ತವರೂರು. ಕೆಲ ದೇವಾಲಯಗಳಲ್ಲಿ ವಿಚಿತ್ರ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಜನರು ಈ ದೇವಾಲಯಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆಂದು ಅವರು ನಂಬಿದ್ದಾರೆ. ಹೀಗಾಗಿ ಚಿತ್ರ-ವಿಚಿತ್ರ ಸಂಪ್ರದಾಯಗಳನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಇಂದು ನಾವು ನಿಮಗೆ ಮಧ್ಯಪ್ರದೇಶ(Madhya Pradesh)ದ ಮಂದಸೌರ್‌ನಲ್ಲಿರುವ ಅಂತಹ ವಿಚಿತ್ರ ದೇವಾಲಯದ ಬಗ್ಗೆ ತಿಳಿಸುತ್ತೇವೆ. ಇದು ತುಂಬಾ ವಿಚಿತ್ರ ಸಂಪ್ರದಾಯ ಹೊಂದಿರುವ ದೇವಸ್ಥಾನವಾಗಿದೆ. ಏಕೆಂದರೆ ಈ ದೇವಾಲಯದಲ್ಲಿ ಯಾವುದೇ ದೇವತೆ ಅಥವಾ ಯಾವುದೇ ಪಂಡಿತ-ಪುರೋಹಿತರು ಕುಳಿತುಕೊಳ್ಳುವುದಿಲ್ಲ. ಆದರೂ ಜನರು ಇಲ್ಲಿಗೆ ಬಂದು ತಲೆಬಾಗಿ ನಮಿಸುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದೇವಾಲಯದ ಹೆಸರು ಸಾಗಸ್ ಬಾವ್ಜಿ ದೇವಾಲಯ(Sagas bavji Hindu Temple).ದಾರಿ ತಪ್ಪಿದ ಜನರಿಗೆ ದಾರಿ ತೋರುವ ದೇವರು ಸಾಗಸ್ ಬಾವ್ಜಿ(Sagas bavji) ಎಂದರೆ ಯಕ್ಷ. ಸಾಗಸ್ ಬಾವ್ಜಿಯನ್ನು ಧರ್ಮಗ್ರಂಥಗಳಲ್ಲಿ ಯಕ್ಷ ಎಂದು ಕರೆಯಲಾಗಿದೆ ಎಂದು ಸ್ಥಳೀಯ ಜನರು ನಂಬುತ್ತಾರೆ.…

Read More

ಬೆಂಗಳೂರು : ಮಳೆಗಾಲ ಬಂತೆಂದರೆ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿರುತ್ತದೆ. ಆದರೆ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ (Dengue), ಮಲೇರಿಯಾ, ಚಿಕುನ್ ಗುನ್ಯಾದಂಥಹ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಸೊಳ್ಳೆ ಕಚ್ಚಿದ ಸ್ಥಳದಲ್ಲಿ ತುರಿಕೆ ಕಾಣಿಸಿಕೊಂಡು ಚರ್ಮದ ಅಲರ್ಜಿ ಬಾದಿಸುತ್ತದೆ. ಮನೆಯ ಸುತ್ತ ಮುತ್ತ ಕೆಲವೊಂದು ಸಸ್ಯಗಳನ್ನು ನೆಡುವ ಮೂಲಕ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಮನೆ ಸುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ: ಸೊಳ್ಳೆಗಳ (Mosquito) ಕಾಟ ತಪ್ಪಿಸಲು ಲೋಷನ್ ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇದರಲ್ಲಿ ರಾಸಾಯನಿಕಗಳಿರುತ್ತವೆ. ಈ ಕಾರಣದಿಂದಾಗಿ ಇವೆಲ್ಲವೂ ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಸೊಳ್ಳೆಗಳ ಕಾಟವನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ. ಚೆಂಡು ಹೂವು : ಚೆಂಡು ಹೂವು ಎಲ್ಲಾ ಕಾಲದಲ್ಲೂ ಅರಳುತ್ತದೆ. ಈ ಹೂವಿನ ಸುವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಈ ಕಾರಣದಿಂದ ಸೊಳ್ಳೆಗಳು ಈ…

Read More

ರಾಜ್ಯದ 5 ವಲಯಗಳಲ್ಲಿ ಕೈಗಾರಿಕಾ ಟೌನ್‍ ಶಿಪ್‍ಗಳನ್ನು (Township) ಸ್ಥಾಪನೆ ಮಾಡುವ ಮೂಲಕ ಕೈಗಾರಿಕೆಗಳನ್ನು ಎರಡನೇ ಹಂತದ ನಗರಗಳಿಗೂ ವಿಸ್ತರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಜೆಡಿಎಸ್‍ನ ಸಿ.ಎನ್.ಮಂಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕಾ ಟೌನ್‍ಶಿಪ್‍ಗಳ ಬಳಿಯೇ ಜನವಸತಿ ಪ್ರದೇಶಗಳನ್ನು ನಿರ್ಮಾಣ ಮಾಡುವ ಮೂಲಕ ವಾಕ್ ಟು ವರ್ಕ್‍ಗೆ (Walk to work) ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಸೌಲಭ್ಯಗಳು ಮತ್ತು ರಿಯಾಯ್ತಿಗಳನ್ನು ನೀಡುವುದನ್ನು ಕಡಿಮೆ ಮಾಡಿದ್ದು, ರಾಜ್ಯದ 2ನೇ ಹಂತದ ನಗರಗಳಾದ ತುಮಕೂರು, ಕಲ್ಬುರ್ಗಿ, ಬೆಳಗಾವಿ ಸೇರಿದಂತೆ ವಿವಿಧ ನಗರಗಳಲ್ಲಿ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ, ನೆರವು, ರಿಯಾಯ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕನ್ನಡಿಗರಿಗೆ ಆದ್ಯತೆ: ಹೊಸ ಕೈಗಾರಿಕಾ ನೀತಿ-2020-25ರ…

Read More