ಹಿರಿಯೂರು: ತಾಲ್ಲೂಕಿನ ವಾರ್ಡ್ ನಂ 30 ಮತ್ತು 31ನೇ ವಾರ್ಡಿನ ಹರಿಶ್ಚಂದ್ರ ಘಾಟ್ ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
ಕಾಂಗ್ರೆಸ್ ನ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ತೆರಳಿದ್ದ ಇಲ್ಲಿನ ಕುಮಾರಿ ನಂದಿನಿ ಗೌಡ ಅವರು ಸದಸ್ಯತ್ವ ಮಾಡಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿಗಳು ನಂದಿನಿ ಅವರ ಮೇಲೆ ದಾಳಿ ಮಾಡಿದ್ದು, ಪರಿಣಾಮವಾಗಿ ಅವರು ಗಾಯಗೊಂಡಿದ್ದಾರೆ.
ಇನ್ನೂ “ಬೀದಿನಾಯಿಗಳು ನನ್ನ ಮೇಲೆ ದಾಳಿ ನಡೆಸಿದ ವೇಳೆ ಸ್ಥಳೀಯರು ನಾಯಿಯನ್ನು ಓಡಿಸಿ ನನ್ನ ಪ್ರಾಣ ರಕ್ಷಣೆ ಮಾಡಿದ್ದಾರೆ ಎಂದು ನಂದಿನಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಂದಿನಿ ಅವರ ತಂದೆ ಗೋಪಿ ಯಾದವ್, ಈ ವಾರ್ಡ್ ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳಿಗೆ ಮಹಿಳೆಯರಿಗೆ, ವೃದ್ಧರಿಗೆ ದಾರಿ ಹೋಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಇಷ್ಟಾದರೂ ಹಿರಿಯೂರು ನಗರ ಸಭೆ ಆಡಳಿತ ಕಂಡೂ ಕಾಣದಂತಿರುವುದು ಖಂಡನೀಯವಾಗಿದ್ದು, ತಕ್ಷಣವೇ ನಗರ ಸಭೆ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿರಿಯೂರು ನಗರ ಸಭೆ ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳದೇ ಹೋದರೆ, ನಗರ ಸಭೆಗೆ ಸಾರ್ವಜನಿಕರು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಗೋಪಿ ಯಾದವ್ ಇದೇ ವೇಳೆ ನಗರ ಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB