ಬೆಂಗಳೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-RPI(ಅಠವಳೆ) ರಾಜ್ಯ ಮಹಿಳಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಆರ್ ಪಿಐ ರಾಜ್ಯಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್.ಪಿ.ಐ. ಮಹಿಳಾ ಘಟಕದ ಅಧ್ಯಕ್ಷರಾದ ಸುಧಾರಾಣಿ ಅವರು ಆಶಯ ನುಡಿಗಳನ್ನಾಡಿದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಾದ ಡಾ.ಮಂಜುಳ ಉಮೇಶ್, ಸುಧಾ ಕೆ., ಬಿ.ಎನ್.ಗೀತಾ ಪ್ರಭಾರೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ವೇಳೆ ಸಗಾಯಿ ಮೇರಿ, ಕುಮಾರಿ, ಅಶ್ವತ್ಥಮ್ಯ, ಧನಲಕ್ಷ್ಮೀ, ಕಾವ್ಯಾ ವೆಂಕಟೇಶ್, ಅಂಬಿಕಾ, ಟಿ.ರಾಧಾ, ಖುಷ್ಬು ಶಮ, ಭಾಗ್ಯ ರೇವಣ್ಣ, ನಾಗವೇಣಿ, ವನಿತಾ ಶಿವು, ಚೈತ್ರಾನಾಗ, ರಮ್ಯಾ, ದೇವಿ, ಪವಿತ್ರ, ಎಂ.ಕೆ.ಶಶಿಕಲಾ ಡಿ.ವಿ ಮತ್ತಿತರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB