Author: admin

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಸೋಮವಾರ ನಡೆಯುವ ಸಾಧ್ಯತೆಯಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ. ರೇಸ್‍ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು. ದೆಹಲಿಯಿಂದ ವರಿಷ್ಠರ ಸಂದೇಶವನ್ನು ಹೊತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ ಸಂದರ್ಭದಲ್ಲೇ ಬೊಮ್ಮಾಯಿ ಅವರು ಪ್ರಮುಖರ ಜೊತೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮೂರ್ನಾಲ್ಕು ದಿನಗಳಲ್ಲಿ ಸಂದೇಶ ನೀಡಲಾಗುವುದು ಎಂದು ವರಿಷ್ಠರು ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಸಂದೇಶ ದೆಹಲಿ ನಾಯಕರಿಂದ ಬಾರದಿರುವುದು ಸಚಿವ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ. ಬೆಂಗಳೂರಿಗೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ದೆಹಲಿ ನಾಯಕರಿಂದ ಶುಭ ಸುದ್ದಿಯನ್ನೇ ತಂದೇ ತರುತ್ತಾರೆ ಎಂಬ ಅಚಲವಾದ ವಿಶ್ವಾಸ ಬಿಜೆಪಿ…

Read More

ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಭಾರತ ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತುಗಳನ್ನು ನಿಷೇಧಿಸಿದೆ. ಗೋಧಿ ರಫ್ತು ನೀತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಡಿಜಿಎಫ್‍ ಟಿ ತಿಳಿಸಿದೆ. ಭಾರತ ಸರ್ಕಾರವು ಇತರ ದೇಶಗಳಿಗೆ ಅವರ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಮತ್ತು ಆ ಸರ್ಕಾರಗಳ ಕೋರಿಕೆಯ ಮೇರೆಗೆ ನೀಡುವ ಅನುಮತಿಯನ್ನು ಆಧರಿಸಿ ಗೋಧಿ ರಫ್ತಿಗೆ ಅನುಮತಿಸಲಾಗುವುದು ಎಂದು ಸ್ಪಷ್ಟ ಪಡಿಸಲಾಗಿದೆ. ಪ್ರತ್ಯೇಕ ಅಧಿಸೂಚನೆಯಲ್ಲಿ ಈರುಳ್ಳಿ ಬೀಜಗಳ ರಫ್ತು ಷರತ್ತುಗಳನ್ನು ಸಡಿಲಿಸುವುದಾಗಿ ಡಿಜಿಎಫ್‍ಟಿ ತಿಳಿಸಿತ್ತು. ಈ ಹಿಂದೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು. ಈ ವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಹಣದುಬ್ಬರದಲ್ಲಿ ಏರಿಕೆ ಕಂಡುಬಂದಿದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‍ನಲ್ಲಿ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ತಿಳಿದು ಬಂದಿದೆ. ಆಹಾರಧಾನ್ಯದ ಪ್ರಮುಖ ರಫ್ತುದಾರರಾಗಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಜಾಗತಿಕ ಗೋ ಪೂರೈಕೆಯಲ್ಲಿ ಏರುಪೇರಾಗಿದೆ. 2021-22ರಲ್ಲಿ…

Read More

ಆರೋಪಿ ನಾಗೇಶನನ್ನು ಪೊಲೀಸರು ಬಂಧಿಸುವುದಕ್ಕಿಂತ ಶೂಟೌಟ್ ಮಾಡಬೇಕಿತ್ತು ಎಂದು ಸಂತ್ರಸ್ಥೆ ಯುವತಿಯ ತಂದೆ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ನಾಗೇಶನ ಒಂದು ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆಂದು ಗೊತ್ತಾಯಿತು. ಎರಡೂ ಕಾಲಿಗೂ ಹೊಡೆಯಬೇಕಿತ್ತು. ಆತನನ್ನು ಜೈಲಿಗೆ ಕಳುಹಿಸಿದರೆ ಪ್ರಯೋಜನವಾಗುವುದಿಲ್ಲ. ರಸ್ತೆಗೆ ಆತನನ್ನು ಬಿಟ್ಟರೆ ಜನ ಏನು ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಗುಡುಗಿದರು. ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ನಮಗೂ ಸಹ ಧೈರ್ಯ ತುಂಬಿದ್ದಾರೆ. ಮಗಳ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಜಣ್ಣ ಹೇಳಿದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಿಎಸ್‍ ಐ ಪರೀಕ್ಷಾ ಅಕ್ರಮ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆಯ ಸಹಯೋಗದಲ್ಲಿ ಸಿಐಡಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರೀಕ್ಷಾ ಅಕ್ರಮದಲ್ಲಿ ದೊಡ್ಡವರ ಹೆಸರುಗಳು ಕೇಳಿಬರುತ್ತಿವೆ. ನೇಮಕಾತಿ ವಿಭಾಗದ ಅಧಿಕಾರಿ ಶಾಂತಕುಮಾರ್ ವಿಚಾರಣೆ ಸಂದರ್ಭದಲ್ಲಿ ಅನೇಕ ಪ್ರಭಾವಿಗಳನ್ನು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಐಪಿಎಸ್ ಅಧಿಕಾರಿಗಳು, ರಾಜಕೀಯ ನಾಯಕರನ್ನು ಇನ್ನು ವಿಚಾರಣೆ ನಡೆಸಲಾಗುತ್ತಿಲ್ಲ. ಸಿಐಡಿ ತನಿಖೆ ಮೇಲೆ ಹೆಚ್ಚಿನ ಪ್ರಭಾವ ಮತ್ತು ಒತ್ತಡ ಇರುವುದರಿಂದ ಹಿರಿಯ ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿಲ್ಲ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆ ಸಹಯೋಗದಲ್ಲಿ ಮೇ 17ರಂದು ಸಿಐಡಿ ಕಚೇರಿ ಎದುರು ಪಾರದರ್ಶಕ ತನಿಖೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ…

Read More

ಶ್ರೀರಂಗಪಟ್ಟಣ: ಇಂದು ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣದಲ್ಲಿ ಉಗಮ ಚೇತನ ಟ್ರಸ್ಟ್,(ರಿ,) ಹಾಗೂ ಗಮ್ಯಶ್ರೀರಂಗಪಟ್ಟಣ ಇವರ ಸಹಯೋಗದೊಂದಿಗೆ ಸರಳವಾಗಿ ತಾಯಂದಿರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಶ್ರೀರಂಗಪಟ್ಟಣ  ಕೆ.ಹೆಚ್.ಬಿ. ಕಾಲೋನಿಯಲ್ಲಿ ಗಮ್ಯ ತಂಡದಿಂದ ನಡೆಯುತ್ತಿದ್ದ ಚಿಲಿಪಿಲಿ ಬೇಸಿಗೆ ಶಿಬಿರದಲ್ಲಿ ವಿಶ್ವ ತಾಯಂದಿರ ದಿನಾಚರಣೆಯನ್ನು ಇಂದು  ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೂತನ ವನಿತೆ ವ್ಯವಸ್ಥಾಪನಾ ನಿರ್ದೇಶಕರಾದ ಕನ್ನಿಕಾ ರವರು ವಹಿಸಿಕೊಂಡಿದ್ದರು. ಇದರ ಉದ್ಘಾಟನೆಯನ್ನು ಉಗಮ ಚೇತನ ಟ್ರಸ್ಟಿನ ಅಧ್ಯಕ್ಷರಾದ ಪ್ರಿಯಾ ರಮೇಶ್ ರವರು ವಹಿಸಿಕೊಂಡಿದ್ದರು. ನಂತರ ತಾಯಿಯ ಬಗ್ಗೆ ಶಿಬಿರದ ಮಕ್ಕಳು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಭಾಗವಾದ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವುದರ ಮೂಲಕ ತನ್ನ ತಾಯಿತನದ ಅನುಭವ ಹಾಗೂ ಮಕ್ಕಳಿಗೆ ಪ್ರೀತಿಯನ್ನು ನೀಡಿ ಕೈತುತ್ತು ನೀಡಿದರು. ಆನಂತರ ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಾ ಜೊತೆಯಲ್ಲಿ ಹಾಡಿ ಕುಣಿದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಗಮ್ಯ ತಂಡದ ನಾಯಕ ಹಾಗೂ ನಿರ್ದೇಶಕರಾದ ಆದಿತ್ಯ ಭಾರದ್ವಾಜ ಹಾಗೂ ಮನೋಜ್…

Read More

ಹೆಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಕಾಂತರಾಜು ಆಚಾರಿ ಎಂಬುವವರ ಉಳುಮೆ ಮಾಡುವ ಎತ್ತನ್ನು ಹುಲಿ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ನಡೆದಿದೆ. ಬೆಳಿಗ್ಗೆ ಬೆಳಿಗ್ಗೆ ಜನೀನಿನಲ್ಲಿ ಕಟ್ಟಲಾಗಿದ್ದ ಎತ್ತಿನ ಮೇಲೆ ಹುಲಿಯು ಬೇಟೆಯಾಡಿದೆ, ಇದನ್ನು  ಕಂಡು ಜಮೀನಿನಲ್ಲಿದ್ದ ಎಲ್ಲರೂ  ಗಾಬರಿಗೊಂಡಿದ್ದಾರೆ. ಘಟನೆಯಿಂದ ಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಹುಲಿಯನ್ನು ತಕ್ಷಣ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಇಲ್ಲವಾದರೆ  ಮನುಷ್ಯರ ಮೇಲೆ ಹುಲಿ  ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪ್ರತಿ ನಿತ್ಯವೂ ಜಾನುವಾರುಗಳ ಬಲಿ ನಡೆಯುತ್ತದೆ, ಆದರೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದು ವಕೀಲರಾದ ರಾಜಚಾರಿ ಆರೋಪಿಸಿದ್ದಾರೆ. ಹುಲಿ ಕಾಡಿನಿಂದ ಹೊರ ಬರುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ, ಈಗಾಗಲೇ ಜಾನುವಾರುಗಳ ಬಲಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕ್ಯಾಮರಾ ಟ್ರಾಪ್ ಅಳವಡಿಸಲಾಗಿದೆ. ತಕ್ಷಣವೇ ಬೋನು ಅಥವಾ ಯಾವ ರೀತಿ ಸೆರೆಹಿಡಿಯಬೇಕು ಎಂಬ…

Read More

ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಂಬಂಧ ಇಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಚರ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ವರಿಷ್ಠರಿಗೆ ಕಳುಹಿಸಿಕೊಡಲಾಗುವುದು. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೂ ಅಭ್ಯರ್ಥಿಗಳ ಹೆಸರನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಮಾಡುತ್ತೇವೆ ಎಂದರು. ಆಕಾಂಕ್ಷಿಗಳ ಪಟ್ಟಿ ಸಾಕಷ್ಟಿದ್ದರೂ ಅಂತಿಮವಾಗಿ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಪ್ರಮುಖರು ತೀರ್ಮಾನಿಸುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕಾಗುತ್ತದೆ ಎಂದು ಸಿಎಂ ಸೂಚಿಸಿದರು.ದಾವೋಸ್ ಪ್ರವಾಸ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು ಇಡೀ ದೇಶದಲ್ಲಿ ನನ್ನನ್ನು ಸೇರಿದಂತೆ…

Read More

ಬಿಜೆಪಿ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಾಡುವ ಮನಸ್ಸೇ ಇಲ್ಲ. ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುಪ್ರೀಂಕೋರ್ಟ್ ಆದೇಶದನ್ವಯ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ತಿಂಗಳು ಮೊದಲೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಚುನಾವಣೆ ಮಾಡುವುದಕ್ಕೆ ಸಿದ್ಧವಿಲ್ಲ. ಶೀಘ್ರ ಚುನಾವಣೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು. ಕಾನೂನು ಪ್ರಕಾರ ಆಯೋಗ ನಡೆದುಕೊಳ್ಳುತ್ತದೆ. ಹಿಂದೆಯೂ ಕೂಡ ಆಯೋಗ ಕೋರ್ಟ್‍ಗೆ ಹೋಗಿತ್ತು. ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಹಿಂದುಳಿದವರಿಗೆ ಮೀಸಲಾತಿ ಮಾಡಬೇಕು. ಕಾಂತರಾಜ್ ಆಯೋಗದ ಮಾಹಿತಿ ಸರ್ಕಾರದ ಬಳಿ ಇದೆ. ಅದನ್ನು ಪರಿಗಣಿಸದೆ ಬೇರೆಯವರನ್ನು ನೇಮಕ ಮಾಡಿ ಸಬೂಬು ಹೇಳಲು ಮುಂದಾಗಿದೆ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ರಮ್ಯಾ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸಣ್ಣ ವಿಚಾರ. ಯತ್ನಾಳ್ ಹೇಳಿಕೆ ಮುಂದೆ…

Read More

ಲಿಡ್ಕರ್ ಸಂಸ್ಥೆಯನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಾ.ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಮ ಕರಕುಶಲಕರ್ಮಿಗಳ ಸಮಾವೇಶ ಹಾಗೂ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 237 ಕೋಟಿ ಅನುದಾನ ನೀಡಲಾಗಿದ್ದು, 33 ಸಾವಿರ ಉದ್ಯಮಿಗಳಿಗೆ ನೆರವಾಗಿದೆ ಎಂದರು. ಉತ್ತಮ ವಿನ್ಯಾಸದ ಪೀಠೋಪಕರಣ ತಯಾರಿಸುತ್ತಿದ್ದು, ಬ್ರಾಂಡ್‍ನಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ದೊರೆಯಲಿದೆ. ಫರ್ನಿಚರ್ಸ್ ಎವಗ್ರೀನ್ ಉದ್ಯಮವಾಗಿದೆ. ಈ ಕಡೆ ಗಮನಹರಿಸಬೇಕು ಎಂದರು. ಈ ವರ್ಷ 25 ಕೋಟಿ ರೂ.ಅನುದಾನ ಒದಗಿಸಿದ್ದು, ಹೆಚ್ಚು ಜನರಿಗೆ ಉದ್ಯೋಗ ನೀಡುವುದಾದರೆ ಪೂರಕ ಅಂದಾಜಿನಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು ಎಂದರು. ತಾವು ಮಂಡಿಸಿದ 2.65ಕೋಟಿ ರೂ. ಮೊತ್ತದ ಬಜೆಟ್ ಪುಸ್ತಕ ಅತ್ಯಂತ ಸುರಕ್ಷಿತವಾಗಿದ್ದದ್ದು, ಲಿಡ್ಕರ್ ಸಂಸ್ಥೆಯ ತಯಾರಿಸಿದ ಬ್ಯಾಗ್‍ನಲ್ಲಿ ಎಂದು ಮೆಚ್ಚುಗೆ…

Read More

ಐಪಿಎಲ್ 15ರ ಆವೃತ್ತಿಯಲ್ಲಿ ಗಾಯಾಳುಗಳ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ, ಈಗಾಗಲೇ ಸನ್‍ರೈಸರ್ಸ್ ಹೈದ್ರಾಬಾದ್‍ನ ವಾಷಿಂಗ್ಟನ್ ಸುಂದರ್, ನಟರಾಜನ್ ಗಾಯಗೊಂಡು ಆಡುವ 11ರ ಬಳಗದಿಂದ ಹೊರಗುಳಿದಿದ್ದರೆ, ಸಿಎಸ್‍ಕೆಯ ಮಾಜಿ ನಾಯಕ ರವೀಂದ್ರಾಜಾಡೇಜಾ ಗಾಯದಿಂದಾಗಿ ಇಡೀ ಟೂರ್ನಿಯನ್ನು ತೊರೆದಿದ್ದಾರೆ, ಈಗ ಅವರ ಸಾಲಿಗೆ ಕೆಕೆಆರ್‍ನ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಸೇರ್ಪಡೆಯಾಗಿದ್ದಾರೆ. ಸೊಂಟದ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿಗಳು ತಮ್ಮ ಅಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದಾರೆ. ತಮ್ಮ ಅಲೌಂಡರ್ ಪ್ರದರ್ಶನದಿಂದ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ತಾನಾಡಿರುವ 5 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿರುವುದಲ್ಲದೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲೇ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಪ್ಯಾಟ್ ಕಮ್ಮಿನ್ಸ್ ಅವರು ಗಾಯಗೊಂಡಿರುವುದರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ವರದಿ ಆಂಟೋನಿ…

Read More