Author: admin

ಮಲ್ಪೆ: ನಾಗರಹಾವು ಕಚ್ಚಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಿದಿಯೂರು ಗ್ರಾಮದ ಸುಧಾಕರ ಅಮೀನ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಧಾಕರ ಅಮೀನ್ (55) ಅವರಿಗೆ ಜೂ. 8ರಂದು ತಮ್ಮ ಮನೆಯ ಕೋಣೆಯಲ್ಲಿ ಕಪಾಟಿನ ಮೇಲೆ ಇಟ್ಟಿದ್ದ ಅಂಗಿಯನ್ನು ತೆಗೆಯಲು ಹೋದಾಗ ಕಪಾಟಿನ ಮೇಲೆ ಇದ್ದ ನಾಗರಹಾವು ಕಚ್ಚಿದೆ. ಕೂಡಲೇ ಸುಧಾಕರ ಅಮೀನ್ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜೂ. 13ರಂದು ಮಧ್ಯಾಹ್ನದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಅಕ್ಕ ವನಜ ಅಮೀನ್ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಪಾಲಕ್ಕಾಡ್: ಬಾತ್ ರೂಮ್ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಸ್ನಾನ ಮಾಡುತ್ತಿದ್ದ ಮಹಿಳೆ ಬೆಚ್ಚಿಬಿದ್ದಿದ್ದು,  ಮಹಿಳೆ ಕಿರುಚಿ ಕೊಂಡಾಗ ವ್ಯಕ್ತಿ ಸ್ಥಳದಿಂದ ಪರಾರಿಯಾಗಿರುವ ಘಟನೆ  ಕೇರಳದ  ಪಾಲಕ್ಕಾಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಕೇರಳ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಶಹಜಹಾನ್​ ಎಂದು ಗುರುತಿಸಲಾಗಿದೆ. ಈತ ಕೊಡುಂಬಾ ನಿವಾಸಿಯಾಗಿದ್ದು, ಸಿಪಿಎಂ ಪಕ್ಷದ ಮಾಜಿ ನಾಯಕನಾಗಿದ್ದಾನೆ ಎಂದು ತಿಳಿದು ಬಂದಿದೆ.  ಆರೋಪಿ ವಿರುದ್ಧ ಜಾಮೀನು ರಹಿತ ಕಾಯ್ದೆ ದಾಖಲಿಸಲಾಗಿದೆ. ಬಾತ್​  ರೂಮ್​ ಕಿಟಕಿಯ ಬಳಿ ನಿಂತು ಮಹಿಳೆಯ ಅಶ್ಲೀಲ ಚಿತ್ರ ವಿಡಿಯೋ ಮಾಡುತ್ತಿದ್ದ  ಶಹಜಹಾನ್ ನ ನೆರಳು  ನೋಡಿ ಮಹಿಳೆ ಕಿರುಚಿಕೊಂಡಿದ್ದು, ಈ ವೇಳೆ ಆರೋಪಿ ಗಾಬರಿಯಿಂದ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಪರಾರಿಯಾಗುತ್ತಿದ್ದ ವೇಳೆ  ಆತನ ಮೊಬೈಲ್​ ಮೈದಾನದ ಬಳಿ ಬಿದ್ದಿತ್ತು. ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದೇ  ಶಹಜಹಾನ್​ ಎಂದರಿಯದ ಮಹಿಳೆ ಸಹಾಯಕ್ಕಾಗಿ ಶಹಜಹಾನ್​ ನೆರವಿಗಾಗಿ ಕರೆ ಮಾಡಿದ್ದಾಳೆ. ಈ ವೇಳೆ ಮೈದಾನದಲ್ಲಿದ್ದ ಮೊಬೈಲ್ ರಿಂಗ್ ಆಗಿದ್ದು, ಇದರಿಂದಾಗಿ ಶಹಜಹಾನ್ ಮೇಲೆ ಅನುಮಾನ ಮೂಡಿತ್ತು. ಆ…

Read More

ಕೊರಟಗೆರೆ: ತನ್ನ ಅಕ್ಕನ ಮಗಳನ್ನು ಮದುವೆಯಾಗಿದ್ದ ವ್ಯಕಿಯೊಬ್ಬ, ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಇದ್ದುದರಿಂದ, ಹೆಂಡತಿಯು ತನ್ನ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿ ವಾಸವಿದ್ದಳು. ಇದರಿಂದ ಮನನೊಂದು ಗಂಡನು ಆತ್ಮಹತ್ಯೆ ಮಾಡಿಕೊಂಡ ದಾರುಣಾ ಘಟನೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದಲ್ಲಿ ಜರುಗಿದೆ. ಶಿವಪ್ರಸಾದ್  ಕುಮಾರ ಬಿನ್ ರಾಮನರಸಯ್ಯ(45) ವರ್ಷ ಮೃತಪಟ್ಟ ದುರ್ದೈವಿಯಾಗಿದ್ದಾನೆ.  ಮೃತ ಶಿವಪ್ರಸಾದ್ ಕುಮಾರ ರಾತ್ರಿ 9 ಗಂಟೆಗೆ ಊಟ ಮಾಡಿಕೊಂಡು ಮನೆಯಿಂದ ಹೊರ ಹೋಗಿ ಕಿರಣ್ ಕುಮಾರ್ ರವರ ಜಮೀನಿನ ತ್ಯಾಗದ ಮರಕ್ಕೆ ಪ್ಲಾಸ್ಟಿಕ್ ದಾರಗಳಿಂದ ನೇಣು ಹಾಕಿಕೊಂಡು ತನ್ಮೂಲಕ ತಾನೆ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಸಾವಿನಲ್ಲಿ ಯಾವುದೇ ಅನುಮಾನಗಳಿರುವುದಿಲ್ಲ ಎನ್ನಲಾಗಿದೆ. ಪಿರ್ಯಾದಿ ರಾಮಯ್ಯ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ ಐ ನಾಗರಾಜು, ಎಎಸ್ ಐ ಯೋಗೀಶ್, ಮುಖ್ಯಪೇದೆ ಜಯಪ್ರಕಾಶ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಚಿತ್ರದುರ್ಗ: ಹಿರಿಯೂರು ನಗರದ ಕಾರ್ಮಿಕರ ಇಲಾಖೆಯಲ್ಲಿ ನಕಲಿ ಲೇಬರ್ ಕಾರ್ಡ್ ಮಾಡಿಸಿಕೊಡುತ್ತಿರುವ ದ್ವಿದಸ ಸಹಾಯಕರಾದ ಜೋಗೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಹಿರಿಯೂರು ನಗರದ ಸಿರಿಗನ್ನಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಸಿರಿಗನ್ನಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ವತಿಯ ಮುಕುಂದ, ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿಯು ಸೌಲಭ್ಯಗಳನ್ನು ಪಡೆಯಲು ಕಾಮನ್ ಸರ್ವಿಸ್ ಸೆಂಟರ್ ನ ಆನ್ ಲೈನ್ ನ ಮುಖಾಂತರ , ಮಧ್ಯವರ್ತಿಗಳ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ನೋಂದಣಿಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹ ಇದರ ಬಗ್ಗೆ ತೀವ್ರವಾಗಿ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ. ಕಟ್ಟಡ ಕಾರ್ಮಿಕರ ಇಲಾಖೆ ದೊರೆಯುವ ಸೌಲಭ್ಯಗಳು ಯಾವುದು ಸಹ ನಿಜವಾದ ಕಟ್ಟಡ ಕಾರ್ಮಿಕರಿಗೆ ದೊರೆಯದ ರೀತಿಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚುತ್ತಿದೆ.…

Read More

ಶ್ರೀನಗರದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‍ನಲ್ಲಿ ಪಾಕಿಸ್ತಾನಿ ಪ್ರಜೆ ಸೇರಿದಂತೆ ಇಬ್ಬರು ಲಷ್ಕರ-ಎ-ತೊಯ್ಬಾ ಉಗ್ರರು ಹತರಾಗಿದ್ದಾರೆ. ಶ್ರೀನಗರ ನಗರದ ಬೆಮಿನಾ ಪ್ರದೇಶದಲ್ಲಿ ತಡರಾತ್ರಿ ನಿಷೇತ ಭಯೋತ್ಪಾದಕ ಸಂಘಟನೆ ಎಲ್ ಇಟಿಯ ಇಬ್ಬರು ಭಯೋತ್ಪಾದಕರು ಅಡಗಿರುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಬಲಿಯಾದರೆ ಒಬ್ಬ ಪೊಲೀಸ್ ಸಿಬ್ಬಂಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್ಕೌಂಟರ್ ಸ್ಥಳದಿಂದ ವಶಪಡಿಸಿಕೊಂಡ ದಾಖಲೆಗಳು ಮತ್ತು ಇತರ ದೋಷಾರೋಪಣೆ ಸಾಮಗ್ರಿಗಳ ಪ್ರಕಾರ, ಹತರಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಅಬ್ದುಲ್ಲಾ ಗೌಜ್ರಿ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. ಇದೇ ಭಯೋತ್ಪಾದಕರ ಗುಂಪು ಸೋಪೋರ್‍ನಲ್ಲಿ ತಪ್ಪಿಸಿಕೊಂಡಿದ್ದರು ನಾವು ಅವರ ಚಲನವಲನವನ್ನು ಪತ್ತೆಹಚ್ಚಿದ್ದೇವೆ ಎಂದು ಹೇಳಿದರು. ಹತ್ಯೆಗೀಡಾದ ಇನ್ನೊಬ್ಬ ಉಗ್ರನನ್ನು ಅನಂತನಾಗ್ ಜಿಲ್ಲಾಯ ನಿವಾಸಿ ಆದಿಲ್ ಹುಸೇನ್ ಮಿರ್ ಅಲಿಯಾಸ್ ಸುಫಿಯಾನ್ ಎಂದು ಗುರುತಿಸಲಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಈತ 2018 ರಲ್ಲಿ ವಾಘಾದಿಂದ…

Read More

ಜನತಾ ಜಲಧಾರೆ ಕಾರ್ಯಕ್ರಮದ ನಂತರ ಜೆಡಿಎಸ್ ಬೆಂಗಳೂರಿನಲ್ಲಿ ಜನತಾ ಮಿತ್ರ ಎಂಬ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ನಡೆಸಲು ನಿರ್ಧರಿಸಿದೆ. ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜೂ.22ರಂದು ಜನತಾ ಮಿತ್ರ ವಾಹನಗಳಿಗೆ ಚಾಲನೆ ನೀಡಲಾಗುತ್ತದೆ. 15 ವಾಹನಗಳು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ಜನರಿಗೆ ಯಾವ ರೀತಿಯ ಆಡಳಿತ ಬೇಕು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಅಲ್ಲದೆ, ಜೆಡಿಎಸ್ನ ಉದ್ದೇಶಿತ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ. ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಏಕೆ ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿರುವ ವಾಹನ ಪ್ರತಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಲ್ಲೂ ಸಂಚರಿಸಲಿವೆ. ಸಾರ್ವಜನಿಕರು ಮುಂದಿನ ಸರ್ಕಾರ ಹೀಗಿರಬೇಕು ಎಂಬ ಬಗ್ಗೆ ತಮ್ಮ ಸಲಹೆಯನ್ನು ಬರೆದು ಡ್ರಾಪ್ ಬಾಕ್ಸ್ನಲ್ಲಿ ಹಾಕಬಹುದು. ಅಲ್ಲದೆ,ಮೊಬೈಲ್ ನಲ್ಲಿ ಬಾರ್ಕೋಡ್ ಸ್ಕ್ಯಾನ್ ಮಾಡಿ ವೆಬ್ ಸೈಟ್ ಮೂಲಕವೂ ಅಭಿಪ್ರಾಯ ತಿಳಿಸಬಹುದು. ಪೋಡಿಯಂನಲ್ಲಿ ಟ್ಯಾಬ್ ಲಭ್ಯವಿದ್ದು, ಅದರಲ್ಲೂ ಕೂಡ ತಮ್ಮ ಸಲಹೆಗಳನ್ನು ಬರೆಯಬಹುದಾಗಿದೆ. ಒಂದು…

Read More

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ತುರ್ತುಸಭೆ ಕರೆಯಲಾಗಿದೆ. ಸಭೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಕಾರಿಗಳು, ಕೋವಿಡ್ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ವಾರದ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಳವಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊರೊನಾ ತಡೆಗಟ್ಟುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ, ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಕೇರಳ, ಮಹಾರಾಷ್ಟ್ರ, ತಮಿಳುನಾಡು ಗಡಿ ಭಾಗಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಿಸಿ ಪ್ರಯಾಣಿಕರ ಮೇಲೆ ನಿಗಾ ಇಡುವುದರ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚೆ ನಡೆಯಲಿದೆ. ಎರಡನೆ ಡೋಸ್ ವ್ಯಾಕ್ಸಿನ್ ಹಾಗೂ ಬೂಸ್ಟರ್ ಡೋಸ್ ಪಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಶಾಲಾ-ಕಾಲೇಜು ಮಟ್ಟದಲ್ಲಿ ಮೊದಲನೆ ಡೋಸ್ ಕಂಪ್ಲೀಟ್ ಮಾಡಲು ಆರೋಗ್ಯ ಇಲಾಖೆ ಅಕಾರಿಗಳಿಗೆ ಸೂಚನೆ ನೀಡುವುದು ಈ ಎಲ್ಲ…

Read More

ಒಡಿಶಾ ಮೂಲದ ಮಹಿಳೆಯನ್ನು ಲಾಡ್ಜ್‌ ಗೆ ಕರೆದುಕೊಂಡು ಬಂದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೀಪ ಪದನ್(37) ಕೊಲೆಯಾಗಿರುವ ಒಡಿಶಾ ಮೂಲದ ಮಹಿಳೆ. ಕೊಲೆ ಮಾಡಿ ಪರಾರಿಯಾಗಿರುವ ಆಕೆಯ ಸ್ನೇಹಿತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದೀಪ ಪದನ್ಳನ್ನು ಸ್ನೇಹಿತ ರೈಲ್ವೆ ನಿಲ್ದಾಣ ಸಮೀಪದ ಲಾಡ್ಜ್‌ ಗೆ ಕರೆದು ಕೊಂಡು ಬಂದಿದ್ದಾನೆ. ಜೂ.9ರಂದು ರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ದೀಪ ಅವರನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಜೂ.10ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಯಶವಂತಪುರ ಠಾಣೆ ಪೊಲೀಸರು ಲಾಡ್ಜ್‌ ಗೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಈ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಲಾಡ್ಜ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಸರಣಿ ಅಪಘಾತದಲ್ಲಿ ಆಟೋ ಚಾಲಕರೊಬ್ಬರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಶ್ರೀಗಂಧಕಾವಲು ನಿವಾಸಿ ಗಿರಿಸಾಗರ್(43) ಮೃತಪಟ್ಟ ಆಟೋ ಚಾಲಕ. ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣದ ಹೊರದ್ವಾರದ ಬಳಿ ಹೊಸಗುಡ್ಡದಹಳ್ಳಿ ಜಂಕ್ಷನ್ನಿಂದ ಬಾಪೂಜಿನಗರದ ಕಡೆಗೆ ಈಚರ್ ವಾಹನ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಈ ಕ್ಯಾಂಟರ್ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಕ್ಯಾಂಟರ್ ಹಾಗೂ ಬಿಎಂಟಿಸಿ ಬಸ್ ಮಧ್ಯೆ ಆಟೋ ಸಿಕ್ಕಿಕೊಂಡಿದೆ. ಡಿಕ್ಕಿಯ ರಭಸಕ್ಕೆ ಆಟೋ ಚಾಲಕ ಆಟೋದಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡರು. ತಕ್ಷಣ ಸ್ಥಳೀಯರು ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಚಾಲಕನನ್ನು ರಕ್ಷಿಸಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ…

Read More

ಎಐಸಿಸಿ ಪ್ರಮುಖ ನಾಯಕ ರಾಹುಲ್‍ಗಾಂಧಿ ಎರಡನೇ ದಿನವಾದ ಇಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ನಿನ್ನೆ ಸುದೀರ್ಘ 10 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಹಿವಾಟಿಗೆ ಸಂಬಂಸಿದಂತೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಅಂತಿಮವಾಗಿ ನಿನ್ನೆ ರಾಹುಲ್‍ಗಾಂಧಿ ತನಿಖಾ ಸಂಸ್ಥೆ ಮುಂದೆ ಹಾಜರಾದರು. ಅದಕ್ಕೂ ಮುನ್ನಾ ಎರಡು ಕಿಲೋ ಮೀಟರ್ ವರೆಗೂ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದ್ದರು. ರಾಹುಲ್‍ ಗಾಂಧಿಗೆ ಬೆಂಬಲ ವ್ಯಕ್ತ ಪಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರಿಂದ ಅಸ್ತವಸ್ತ ವಾತಾವರಣ ನಿರ್ಮಾಣವಾಗಿತ್ತು.ಮುಂಜಾಗೃತೆಯಾಗಿ ಪೊಲೀಸರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ್ದರು. ಭಾರೀ ಮೆರವಣಿಗೆಯೊಂದಿಗೆ ವಿಚಾರಣೆಗೆ ಹಾಜರಾದ ರಾಹುಲ್‍ಗಾಂಧಿಯನ್ನು ಜಾರಿ ನಿರ್ದೇಶನಾಲಯ 10 ಗಂಟೆಗಳ ಕಾಲ ಪ್ರಶ್ನಿಸಿತ್ತು. ರಾತ್ರಿ 9:30ರ ವೇಳೆಗೆ ರಾಹುಲ್ ಗಾಂಧಿ ಅವರ…

Read More