Author: admin

ಕಲಬುರಗಿ: ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪತಿಯೊಬ್ಬ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ(22), ಖಾಜಪ್ಪ(23) ಹತ್ಯೆಗೀಡಾದವರಾಗಿದ್ದಾರೆ. ಆರೋಪಿ ಶ್ರೀಮಂತ ಕೊಲೆ ಮಾಡಿ, ಮಾದನಹಿಪ್ಪರಗಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. 2 ವರ್ಷಗಳ ಹಿಂದೆ ಸೃಷ್ಟಿಯು ಶ್ರೀಮಂತನನ್ನು ಮದುವೆಯಾಗಿದ್ದಳು. ಗುರುವಾರ ಊರಿಗೆ ತೆರಳಿದ್ದ ಶ್ರೀಮಂತ, ರಾತ್ರಿ ಮನೆಗೆ ಹಿಂದಿರುಗಿದ್ದ. ಮನೆಯಲ್ಲಿ ಪತ್ನಿಯು ಅದೇ ಗ್ರಾಮದ ಖಾಜಪ್ಪನ ಜೊತೆ ಇರುವುದನ್ನು ಕಣ್ಣಾರೆ ಕಂಡಿದ್ದಾನೆ. ಈ ವೇಳೆ ಕೋಪದಲ್ಲಿ ಮಾರಕಾಸ್ತ್ರಗಳಿಂದ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾದನ ಹಿಪ್ಪರಗಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————

Read More

ಬೆಂಗಳೂರು: ನಾವು ಭಾರತೀಯರು, ಹಿಂದೂಸ್ತಾನಿಗಳು. ಪಾಕಿಸ್ತಾನ ಎಂದಿಗೂ ನಮ್ಮ ಶತ್ರು. ಪ್ರಧಾನಮಂತ್ರಿ ನರೇಂದ್ರ, ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದ್ದೇ ಆದರೆ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ನಮಗೂ ಪಾಕಿಸ್ತಾನಕ್ಕೂ ಯಾವ ಸಂಬಂಧಾನೂ ಇಲ್ಲ. ಯುದ್ಧ ಮಾಡಬೇಕು ಎಂದರೆ ನಾನು ರೆಡಿ. ಮಂತ್ರಿಯಾಗಿ ನನ್ನನ್ನು ಕಳುಹಿಸುತ್ತಾರೆ ಎಂದರೆ ನಾನು ಸಿದ್ಧ. ಯುದ್ಧಕ್ಕೆ ನಾನು ಹೋಗುತ್ತೇನೆ. ದೇಶಕ್ಕಾಗಿ ಯುದ್ಧ ಮಾಡಲು ನಾನು ರೆಡಿ.. ನಡೀರಿ ಹೋಗಿ ಬಿಡೋಣ ಎಂದು ಹೇಳಿದರು. ಈ ದೇಶಕ್ಕೋಸ್ಕರ ನಾನು ಯುದ್ಧಕ್ಕೆ ಹೋಗುತ್ತೇನೆ. ನಾನು ತಮಾಷೆಗೆ, ಜೋಶ್ ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ ಹೋಗುತ್ತೇನೆ, ನರೇಂದ್ರ ಮೋದಿ, ಅಮಿತ್ ಶಾ ಅವ್ರು ಶಸ್ತ್ರಾಸ್ತ್ರವನ್ನು ನನ್ನ ಕೈಗೆ ಕೊಡಲಿ. ಅಲ್ಲಾ ಮೇಲೆ ಆಣೆ, ಶಸ್ತ್ರಾಸ್ತ್ರವನ್ನು ಬೆನ್ನಲ್ಲಿ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹೋಗುತ್ತೇನೆಂದರು.…

Read More

ಕೊರಟಗೆರೆ: ಉದ್ಭವ ದೇವರುಗಳ ಪುಣ್ಯ ಭೂಮಿ, 800 ವರ್ಷ ಇತಿಹಾಸವುಳ್ಳ ಶ್ರೀ ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ನೂತನ ದೇವಾಲಯ ಮತ್ತು ಮೂಲ ದೇವರ ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು. ಗ್ರಾಮ ದೇವತೆ ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮನವರ ಧಾರ್ಮಿಕ ಕಾರ್ಯಕ್ರಮವು ಕಟ್ಟಡ ಸಮಿತಿಯ ಸಂಪೂರ್ಣ ಸಿದ್ಧತೆಯಿಂದ ಏ.29ರಿಂದ ಮೇ 1ರವರೆಗೆ ನಡೆದ ಗ್ರಾಮ ದೇವತೆಗಳ ಪುನರ್ ಪ್ರತಿಷ್ಠಾಪನೆಯಿಂದ ಕೊರಟಗೆರೆ ನಗರ ಸೇರಿದಂತೆ ಸುತ್ತ ಮುತ್ತಲಿನ 16 ಗ್ರಾಮಗಳಲ್ಲಿ ಮೂರು ದಿನ ಹಬ್ಬದ ವಾತಾವರಣ ಸೃಷ್ಠಿಸಿತ್ತು. ಉದ್ಘಾಟನೆ ವೇಳೆ ನಡೆದ ಧಾರ್ಮಿಕ ಪೂಜೆಗಳು: 2 ಕೋಟಿ ವೆಚ್ಚದ ಗ್ರಾಮ ದೇವತೆಯ ಸಂಕಲ್ಪದಂತೆ ನೂತನ ದೇವಾಲಯ ನಿರ್ಮಾಣಗೊಂಡಿದೆ. ಮೂಲ ದೇವತೆಯ ಪುನರ್ ಪ್ರತಿಷ್ಠಾಪನೆಯಲ್ಲಿ ಗಂಗಾ ಪೂಜೆ, ಯಾಗಾಸಾಲ ಪ್ರವೇಶ, ಗಣಪತಿ ಪೂಜೆ, ಪುಣ್ಯ, ದೇವರುಗಳ ಪ್ರಧಾನ ಕಳಸ ಹೋಮ ಮತ್ತು ಪೂಜೆ, ನವಗ್ರಹ ಕಳಸಾ ಆರಾಧನೆ ಹೋಮ, ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಮೂಲ ದೇವರ ಪುನರ್…

Read More

ಪಾವಗಡ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್.ಎಸ್.ಎಲ್.ಸಿ. ಪರೀಕ್ಷೆ –01 ರ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ತಾಲ್ಲೂಕಿನ ಕೋಟಾಗುಡ್ಡ ಗ್ರಾಮದಲ್ಲಿ ಇರುವ ಸಹನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗೀತಾಲಕ್ಷ್ಮಿ ಪಿ. 619 ಅಂಕ ಪಡೆದು ತಾಲ್ಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಈ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಪೋಷಕರು  ಅಭಿನಂದನೆ ಸಲ್ಲಿಸಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ವಿಚಾರಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು  ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಜಿಹಾದಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ನಡೆಯಿತು. ನಗರದ ಟೌನ್ ಹಾರುತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ವಿಧಾನ ಪರಿಷತ್ ಮಾಜಿ ಸದಸ್ಯ ನೆ ಲ ನರೇಂದ್ರ ಬಾಬು ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:   ಎಸ್ ಎಸ್‌ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯ ಟಾಪರ್ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿ ಗಳು ಸೇರಿದ್ದಾರೆ. ತುಮಕೂರು‌ ಹಾಗೂ ಮಧುಗಿರಿ ಶೈಕ್ಷಣಿಕ‌ ಜಿಲ್ಲೆಯಿಂದ ತಲಾ ಒಬ್ಬರು ರಾಜ್ಯಕ್ಕೆ‌ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.  ತುಮಕೂರಿನ ಚೇತನ ವಿದ್ಯಾ ಮಂದಿರ ಶಾಲೆಯ ಮಹಮದ್ ಮಸ್ತೂರ್ ಅದಿಲ್ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ   8ನೇ ರ್ಯಾಂಕ್ ಪಡೆದಿದ್ದಾರೆ. ಇವರು ಮನ್ಸೂರ್ ಆದಿಲ್ ಹಾಗೂ ಅಫ್ರೋಜ್ ಜಹಾನ್ ದಂಪತಿಯ ಪುತ್ರ‌ರಾಗಿದ್ದಾರೆ. ಯಶ್ವಿತಾ ರೆಡ್ಡಿ : ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲೂ ರಾಜ್ಯದಲ್ಲೆ ವಿದ್ಯಾರ್ಥಿನಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಧುಗಿರಿಯ ಚಿರಾಕ್ ಪಬ್ಲಿಕ್‌ ಶಾಲೆಯ ಯಶ್ವಿತಾ ರೆಡ್ಡಿ ಕೆ.ಬಿ. ರಾಜ್ಯ ಟಾಪರ್ ಲಿಸ್ಟ್ ನಲ್ಲಿ 21 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು  ಕೆ.ವಿ.ಬಾಬು ರೆಡ್ಡಿ ಹಾಗೂ ಸಂದ್ಯಾ ರೆಡ್ಡಿ ಪುತ್ರಿಯಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕೂಡ 625 ಕ್ಕೆ 625 ಅಂಕ‌ಗಳಿಸಿ  ರಾಜ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ತುಮಕೂರು‌ ಜಿಲ್ಲೆಗೆ ಕೀರ್ತಿ‌ ತಂದಿದ್ದಾರೆ. ತುಮಕೂರು ಶೈಕ್ಷಣಿಕ…

Read More

ಬೆಂಗಳೂರು: 2024-2025ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ–1 ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.  ಈ ಬಾರಿ ಶೇ.66.14ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಸ್ವಲ್ಪ ಗೊಂದಲ ಇತ್ತು. ಪರೀಕ್ಷೆಯ ಪಾವಿತ್ರತ್ಯೆ ಕಾಪಾಡಬೇಕು ಅಂತ ವೆಬ್ ಕಾಸ್ಟಿಂಗ್ ಮಾಡಿದ್ದೇವೆ. ಕಳೆದ ವರ್ಷ 53% ಫಲಿತಾಂಶ ಬಂದಿತ್ತು. ನಾವು ಗ್ರೇಸ್ ಮಾರ್ಕ್ಸ್ ಕೊಟ್ಟ ಮೇಲೆ 73% ಗೆ ಬಂತು. ಸಿಎಂ ಸಿದ್ದರಾಮಯ್ಯ ಕೂಡ ಇದರ ಬಗ್ಗೆ ಮಾತನಾಡಿದ್ದರು. ಆದಾದ ಮೇಲೆ ಟಾರ್ಗೆಟ್ ಕೊಟ್ಟರು. ಇಲಾಖೆಯಿಂದ ಒಳ್ಳೆಯ ರಿಸಲ್ಟ್ ಬರುವ ರೀತಿಯಲ್ಲಿ ಮಾಡುವಂತೆ ಹೇಳಿದ್ದರು ಎಂದರು. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ(ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ(ಶೇ.89.96), ಉತ್ತರ ಕನ್ನಡ ಜಿಲ್ಲೆಗೆ…

Read More

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ ಗಡಿ ಭದ್ರತಾ ಪಡೆ ಕಾನ್ಸ್ಟೆಬಲ್ ಪಿಕೆ ಸಾಹು ಅವರ ಭವಿಷ್ಯ ಅತಂತ್ರವಾಗಿದೆ. ಬಿಎಸ್ ಎಫ್ ಅಧಿಕಾರಿಗಳು ಮತ್ತು ಪಾಕಿಸ್ತಾನ ರೇಂಜರ್ ಗಳ ನಡುವೆ ಇದುವರೆಗೆ ನಡೆದ ಸಭೆಗಳು ವಿಫಲವಾಗಿವೆ. ಕಳೆದ ಎಂಟು ದಿನಗಳಲ್ಲಿ, ಅವರ ಬಿಡುಗಡೆಗೆ ಸಂಬಂಧಿಸಿದಂತೆ ಎರಡೂ ಪಡೆಗಳ ಅಧಿಕಾರಿಗಳ ನಡುವೆ ಏಳು ಸಭೆಗಳು ನಡೆದಿವೆ. ಆದರೆ ಬಿಎಸ್ ಎಫ್ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಅವರ ಪಾಕಿಸ್ತಾನಿ ಸಹವರ್ತಿಗಳಿಂದ ಒಂದೇ ರೀತಿಯ ಉತ್ತರ ಬಂದ ಕಾರಣ ಚರ್ಚೆಗಳು ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ತಿಳಿದು ಬಂದಿದೆ. ಪಾಕಿಸ್ತಾನ ರೇಂಜರ್ ಗಳು ಈ ವಿಷಯದಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ, ತಮ್ಮ ಹಿರಿಯ ಅಧಿಕಾರಿಗಳಿಂದ ನಿರ್ದೇಶನದ ಕೊರತೆ ಜವಾನನನ್ನು ಭಾರತಕ್ಕೆ ಹಸ್ತಾಂತರಿಸದಿರಲು ಕಾರಣ ಎಂದು ಹೇಳುತ್ತಾರೆ. ಸುಮಾರು 15 ನಿಮಿಷಗಳ ಕಾಲ ನಡೆದ ಪ್ರತಿಯೊಂದು ಸಭೆಯಲ್ಲೂ, ರೇಂಜರ್ ಗಳ ಅಧಿಕೃತ ಸಂಧಾನಕಾರರು ತಮ್ಮ ಉನ್ನತ ಅಧಿಕಾರಿಗಳಿಂದ ಸೂಚನೆಗಳಿಗಾಗಿ ಇನ್ನೂ ಕಾಯುತ್ತಿದ್ದೇವೆ ಎಂದಿದ್ದಾರೆ…

Read More

ಮೈಸೂರು: ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈಕಾರ ಹಾಕುವವರನ್ನು ಗುಂಡಿಕ್ಕಿ ಕೊಲ್ಲಬೇಕು, ದೇಶದ್ರೋಹಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತ್ರು ರಾಷ್ಟ್ರದ ಪರ ಜೈಕಾರ ಕೂಗಿದವರನ್ನು ಸುಮ್ಮನೆ ಬಿಟ್ಟು ಕಳುಹಿಸುವುದು ಸರಿಯಲ್ಲ. ನಮ್ಮ ದೇಶದ ಅನ್ನ ತಿಂದು, ನಮ್ಮ ನೀರು ಕುಡಿದು ಶತ್ರುಗಳಿಗೆ ಜೈ ಎನ್ನುವವರನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಜನಗಣತಿ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ಎಲ್ಲಾ ಸಮುದಾಯಗಳ ನಾಯಕರು ಈ ಪ್ರಯತ್ನವನ್ನು ಬೆಂಬಲಿಸುವಂತೆ ಒತ್ತಾಯಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————

Read More

ರಾಮನಗರ: ತಾನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟಿದ್ದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ರಾಮನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲ್ಲೂಕಿನ ಇಲವಾಲದ ಪವಿತ್ರ ಬಂಧಿತ ಶಿಕ್ಷಕಿಯಾಗಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪವಿತ್ರ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಮೂಲದವರು. ಪತಿಯಿಂದ ವಿಚ್ಛೇದನ ಪಡೆದಿರುವ ಆಕೆ ಪ್ರತ್ಯೇಕವಾಗಿ ವಾಸವಾಗಿದ್ದರು. ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಚಿತ್ರಗಳನ್ನು ಎಡಿಟ್ ಮಾಡಿ ಸುರೇಶ್ ಚಿತ್ರದೊಂದಿಗೆ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ವಿಡಿಯೊ ಕೂಡ ಹರಿಬಿಟ್ಟಿದ್ದಳು. ಪವಿತ್ರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಮೈಸೂರಿಗೆ ತೆರಳಿ ಬಂಧಿಸಲಾಯಿತು. ಕೋರ್ಟ್ಗೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು ಎಂದು ಮೂಲಗಳು ಹೇಳಿವೆ. ಅಕ್ಕಪಕ್ಕದ ಮನೆಯವರ ಕಿರಿಕಿರಿ ಸಹಿಸಲಾರದೇ,ಅವರನ್ನು ಹೆದರಿಸಲು ಈ ರೀತಿಯಾಗಿ ಶಿಕ್ಷಕಿ ವಿಡಿಯೋ ಮಾಡಿ ಹರಿಯಬಿಟ್ಟಿರುವುದಾಗಿ ಹೇಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More