Subscribe to Updates
Get the latest creative news from FooBar about art, design and business.
- ತುಮಕೂರು: ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಬಸ್ ಟೈರ್, ಕಾಲು ಮುರಿತ
- ಸಚಿವ ಶಿವರಾಜ್ ತಂಗಡಗಿಗೆ ಹೃದಯ ಶಸ್ತ್ರಚಿಕಿತ್ಸೆ: ಯಶಸ್ವಿ ಸ್ಟಂಟ್ ಅಳವಡಿಕೆ
- ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ: ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ
- ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಗೋಪಾಲಕೃಷ್ಣ ನೇಮಕ; ಸಂಘಟನೆಯ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮದ ಎಚ್ಚರಿಕೆ
- ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
- ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಎಂ.ಪಿ.ಸೂರ್ಯ ಕುಮಾರ್
- ಸಮಾಜ ಕಲ್ಯಾಣ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ: ಪರಿಶೀಲನೆ ಮಾಡದೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದು: ಯಗಚಿ ಕಟ್ಟೆ ರಾಘವೇಂದ್ರ ಒತ್ತಾಯ
- ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ
Author: admin
ಹಿಮಾಲಯದ ರಮ್ಯತೆಯ ಒಡಲಲ್ಲಿ ನೂರಾರು ವರ್ಷಗಳಿಂದಲೂ ಜೀವಿಸಿ, ಮೋಕ್ಷ- ಮುಕ್ತಿ, ಆತ್ಮ ಸಾಕ್ಷತ್ಕಾರದ ಹಾದಿ ತೋರುತ್ತಿದ್ದಾರೆ ಎಂದು ನಂಬಲಾಗಿರುವ ಮಹಾವತಾರ್ ಬಾಬಾಜಿ ಅವರ ಶಿಷ್ಯರ ಸಮಾಗಮ ಇಂದು ಚೆನ್ನೈನ ರಜಿನಿಕಾಂತ್ ನಿವಾಸದಲ್ಲಾಗಿದೆ. ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಹಿಮಾಲಯದದ ಯೋಗಿ, ದಾರ್ಶನಿಕ ಶ್ರೀ ಎಂ ಇಬ್ಬರೂ ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಬಾಬಾಜಿ ಅವರ ಅನುಯಾಯಿ ಆಗಿರುವ ರಜಿನಿಕಾಂತ್ ಆಗಾಗ್ಗೆ ಹಿಮಾಲಯದ ಗುಹೆಗಳಲ್ಲಿ ಧ್ಯಾನಕ್ಕೆ ಕೂರುವುದು ಎಲ್ಲರಿಗೂ ತಿಳಿದಿದ್ದೇ ಆಗಿದ್ದು ಯೋಗಿಗಳೊಟ್ಟಿಗೆ ಸಮಾಧಿ ಸ್ಥಿತಿಯಲ್ಲಿ ರಜಿನಿಕಾಂತ್ ಮಾತನಾಡುತ್ತಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ, ಶ್ರೀ ಎಂ ಅವರು ಕೇರಳದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿ ಬಳಿಕ ಪೂರ್ವಜನ್ಮದ ಆಧ್ಯಾತ್ಮಿಕ ಹಾದಿಯನ್ನು ಮುಂದುವರೆಸಿ ಹಿಂದೂ ಯೋಗಿಯಾಗಿದ್ದಾರೆ. ” ‘ಹಿಮಾಲಯದ ಗುರುವಿನ ಗರಡಿಯಲ್ಲಿ’ ಎಂಬ ತಮ್ಮ ಆತ್ಮಕಥೆಯಲ್ಲಿ ಹಿಮಾಲಯದಲ್ಲಾದ ನೂರಾರು ರೋಮಾಂಚಕ ಘಟನೆಗಳು, ಉಯ್ಯಾಲೆ ಮೇಲೆ ಕುಳಿತು ಸಾಯಿ ಬಾಬಾ ದರ್ಶನ ಕೊಡುವುದನ್ನು ದಾಖಲಿಸಿದ್ದಾರೆ. ಶ್ರೀ ಎಂ ಹಾಗೂ ರಜಿನಿಕಾಂತ್…
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಮಚ್ಚೀಂದ್ರ ಹಾಕೆ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಉಡುಪಿ ಎಸ್ಪಿಯಾಗಿದ್ದ ಎನ್. ವಿಷ್ಣುವರ್ಧನ್ ಕಡತ ಹಾಗೂ ಲಾಠಿ ಹಸ್ತಾಂತರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು. 2015 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು 2011 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮೂಲತಃ ಮಹಾರಾಷ್ಟ್ರ ದ ನಾಸಿಕ್ ಜಿಲ್ಲೆಯವರು. ಕಳೆದ ಎರಡೂವರೆ ವರ್ಷಗಳಿಂದ ಚಿಕ್ಕಮಗಳೂರಿನ ಎಸ್ಪಿಯಾಗಿದ್ದ ಅಕ್ಷಯ್ ಈ ಹಿಂದೆ ಗುಲ್ಬರ್ಗಾ ದಲ್ಲಿ ಎಎಸ್ಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಡುಪಿ ಜಿಲ್ಲೆಯ ಬಗ್ಗೆ ಹೆಮ್ಮೆ ಇದೆ. ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಸಾಂಸ್ಕೃತಿಕವಾಗಿ ಹೆಸರುಗಳಿಸಿದೆ ಎಂದರು. ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು ಮೊದಲ ಆದ್ಯತೆ ಆಗಿದೆ ಎಂದರು. ಉಡುಪಿ ಜಿಲ್ಲೆಗೆ 25 ವರ್ಷ ತುಂಬುತ್ತಿರುವ ಈ ಕಾಲಘಟ್ಟದಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ನನಗೆ…
ಬೆಂಗಳೂರು : ಸಾಕಷ್ಟು ವಿವಾದಕ್ಕೆ ಕಾರಣವಾದ ಶಿವಾನಂದ ಸರ್ಕಲ್ ನ ಸ್ಟೀಲ್ ಬ್ರೀಡ್ಜ್, ಇದೀಗ ಕೆಲವೇ ದಿನಗಳಲ್ಲಿ ಓಪನ್ ಆಗಲಿದೆ. ಇದಕ್ಕೆ ಮೂಹೂರ್ತ ಕೂಡಿ ಬಂದಿದ್ದು ಇದೇ ತಿಂಗಳ 30ಕ್ಕೆ ಎರಡೂ ಕಡೆಯ ಸಂಚಾರ ಪ್ರಾರಂಭವಾಗಲಿದೆ. ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಫ್ಲೈ ಓವರ್ ಅಗಸ್ಟ್ 15 ರಂದು ಒನ್ ಸೈಡ್ ಓಪನ್ ಮಾಡಲಾಗಿದೆ. ಬಾಕಿಉಳಿದಿದ್ದ ಒಂದು ಪಥವೂ ಈ ತಿಂಗಳ ಅಂತ್ಯದೊಳಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ. ಕಳೆದ 5 ವರ್ಷಗಳಿಂದ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರೀಡ್ಜ್ ಕಾಮಗಾರಿ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು, ಮೂರು ಸಿಎಂಗಳು ಬಂದು ಹೋದರೂ. ಬ್ರಿಡ್ಜ್ ಮತ್ರ ಓಪನ್ ಅಗಿರಲ್ಲಿಲ್ಲ, ಕೆಲ ಕಾನೂನತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಆರಂಭವಾಗಿ ಅರ್ಧಕ್ಕೆ ನಿಂತಿತ್ತು. ಆದರೆ ಈಗ ನ್ಯಾಯಲಯದ ಅದೇಶದಂತೆ ಬ್ರೀಡ್ಜ್ ಗೆ ಮುಕ್ತಗೊಳಿಸಲಾಗಿದೆ. ಕಳೆದ ಸೋಮವಾರ ಒಂದು ಕಡೆ ಸಂಚಾರಕ್ಕೆ ಮೂಕ್ತಿ ನೀಡಲಾಗಿದೆ. ನಗರದ ನೆಹರು…
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಇತರ ಒಂಬತ್ತು ಸದಸ್ಯರೊಂದಿಗೆ ಬಿಜೆಪಿ ಪಕ್ಷವು ತನ್ನ ಸಂಸದೀಯ ಮಂಡಳಿಯನ್ನ ರಚಿಸಿದೆ. ನಿತಿನ್ ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಬುಧವಾರ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಿಂದ ಕೈಬಿಡಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಂಸದೀಯ ಮಂಡಳಿಯ ಸದಸ್ಯರ ಪಟ್ಟಿ ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷ) ನರೇಂದ್ರ ಮೋದಿ ರಾಜನಾಥ್ ಸಿಂಗ್ ಅಮಿತ್ ಶಾ ಬಿ.ಎಸ್. ಯಡಿಯೂರಪ್ಪ ಸರ್ಬಾನಂದ ಸೋನೊವಾಲ್ ಕೆ ಲಕ್ಷ್ಮಣ್ ಇಕ್ಬಾಲ್ ಸಿಂಗ್ ಲಾಲ್ ಪುರ ಸುಧಾ ಯಾದವ್ ಬಿ.ಎಲ್. ಸಂತೋಷ್ (ಕಾರ್ಯದರ್ಶಿ) ಕೇಂದ್ರ ಚುನಾವಣಾ ಸಮಿತಿಯ ಸದಸ್ಯರು ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷ) ನರೇಂದ್ರ ಮೋದಿ ರಾಜನಾಥ್ ಸಿಂಗ್ ಅಮಿತ್ ಶಾ ಬಿ.ಎಸ್. ಯಡಿಯೂರಪ್ಪ ಸರ್ಬಾನಂದ ಸೋನೊವಾಲ್ ಕೆ ಲಕ್ಷ್ಮಣ್ ಇಕ್ಬಾಲ್ ಸಿಂಗ್ ಲಾಲ್ ಪುರ ಸುಧಾ ಯಾದವ್ ಸತ್ಯನಾರಾಯಣ್ ಜತಿಯಾ ಭೂಪೇಂದ್ರ ಯಾದವ್ ದೇವೇಂದ್ರ ಫಡ್ನವೀಸ್ ಬಿ.ಎಲ್.…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾದಲ್ಲಿ ಧಾರುಣ ನಡೆದಿರುವುದು ಬೆಳಕಿಗೆ ಬಂದಿದೆ. ಹೌರಾ ನಗರದ ಉಲುಬೇರಿಯಾ ಮುನ್ಸಿಪಾಲಿಟಿಯ ಕಸದ ತೊಟ್ಟಿಯಲ್ಲಿ ಭ್ರೂಣಗಳು ಪತ್ತೆಯಾಗಿವೆ. ಸ್ಥಳೀಯರು ಕಸದಲ್ಲಿ ಭ್ರೂಣಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ 17 ಭ್ರೂಣಗಳನ್ನು ವಶಪಡಿಸಿಕೊಂಡಿದ್ದಾರೆ.ಅವುಗಳಲ್ಲಿ ಹತ್ತು ಹೆಣ್ಣು ಮತ್ತು ಏಳು ಗಂಡು ಎಂದು ತಿಳಿದುಬಂದಿದೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಲುಬೇರಿಯಾದಲ್ಲಿ 30 ಖಾಸಗಿ ನರ್ಸಿಂಗ್ ಹೋಂಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭ್ರೂಣಗಳನ್ನು ವೈದ್ಯಕೀಯ ತ್ಯಾಜ್ಯವಾಗಿ ಎಸೆಯಲಾಗಿದೆಯೇ ಅಥವಾ ಇನ್ನೇನಾದರೂ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರ ತಿಳಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅಸ್ಸಾಂ:ವ್ಯಕ್ತಿಯೊಬ್ಬ ಸಹ ಗ್ರಾಮಸ್ಥರೊಬ್ಬರ ತಲೆ ಕಡಿದ ಬಳಿಕ ಕತ್ತರಿಸಿದ ತಲೆಯನ್ನು ತೆಗೆದುಕೊಂಡು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಸೋನಿಪುರ ಜಿಲ್ಲೆಯಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಹೇಮ್ರಾಮ್ ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನದಂದು ಸ್ಥಳೀಯವಾಗಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ ಇಬ್ಬರು ಸ್ನೇಹಿತರು ಆ ಪಂದ್ಯದ ಮೇಲೆ ಹಣ ಮಿಲಾಯಿಸಿದರು. ಪಂದ್ಯದಲ್ಲಿ ಸೋತವರು ವಿಜೇತರಿಗೆ 500 ರೂ ಕೊಡಬೇಕು. ಈ ವೇಳೆ ಬೆಟ್ ಗೆದ್ದ ವ್ಯಕ್ತಿ ತನಗೆ 500 ಕೊಡುವಂತೆ ಕೇಳಿದನು. ಆದರೆ ಇನ್ನೊಬ್ಬ ವ್ಯಕ್ತಿ ಹಣ ನೀಡಲು ನಿರಾಕರಿಸಿದ್ದಾನೆ. ಆದರೆ ಪದೇ ಪದೇ ಬೆಟ್ಟಿಂಗ್ ಹಣ ಕೇಳಿದಾಗ ಕೋಪಗೊಂಡ ಆರೋಪಿಯು ತನ್ನ ಬಳಿಯಿದ್ದ ಮಚ್ಚಿನಿಂದ ಹೇಮ್ರಾಮ್ ಎಂಬ ವ್ಯಕ್ತಿಯ ತಲೆಯನ್ನು ಕಡೆದಿದ್ದಾನೆ. ತಲೆಯೊಂದಿಗೆ 25 ಕಿಲೋಮೀಟರ್ ನಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಚಿತ್ರ ನಟ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಮಾರ್ ಕುಟುಂಬದ ಸದಸ್ಯರು ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವರನಟ ಡಾ. ರಾಜ್ ಕುಮಾರ್ ಸಮಾಧಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಘವೇಂದ್ರ ರಾಜ್ ಕುಮಾರ್ ಅವರು ಸಿಎಂ ಜೊತೆ ಚರ್ಚೆ ನಡೆಸಿದರು. ಇದಕ್ಕೆ ಸಂಬಂಧಪಟ್ಟಂತೆ ಸಿದ್ಧಪಡಿಸಲಾಗಿರುವ ಯೋಜನೆಯ ಪಿಪಿಟಿಯನ್ನು ಸಿಎಂ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು. ಈ ಕುರಿತು ಸಿಎಂ ಸಂಬಂಧ ಪಟ್ಟ ಅಧಿಕಾರಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ರೌಡಿಶೀಟರ್ ನಿಂದ ಮಹಿಳಾ ಹೆಡ್ ಕಾನ್ಸ್ ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವಿನುತಾ(45) ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್. ಆರೋಪಿ ರೌಡಿಶೀಟರ್ ಶೇಕ್ ಶರೀಫ್(25) ಕೃತ್ಯವೆಸಗಿದ್ದಾನೆ. ಇತ್ತೀಚೆಗೆ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮತ್ತೆ ಕೊಲೆಗೆ ಸಂಚುರೂಪಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಆತನನ್ನು ಠಾಣೆಗೆ ಕರೆದುಕೊಂಡು ಬರಲು ಆಗಸ್ಟ್ 5 ರಂದು ಹೆಡ್ ಕಾನ್ಸ್ ಟೇಬಲ್ ವಿನುತಾ ಮತ್ತು ಸಿಬ್ಬಂದಿ ಹೋಗಿದ್ದಾರೆ. ಆತ ಜ್ಯೋತಿ ನಗರದಿಂದ ರೆಡ್ಡಿಪಾಳ್ಯಕ್ಕೆ ಹೋಗಿರುವ ಮಾಹಿತಿ ಸಿಕ್ಕಿದ್ದು, ರಾತ್ರಿ 9:30ಕ್ಕೆ ಠಾಣೆಗೆ ಕರೆದುಕೊಂಡು ಹೋಗಲು ಪೊಲೀಸ್ ಸಿಬ್ಬಂದಿ ಮುಂದಾದಾಗ ಡ್ರ್ಯಾಗರ್ ನಿಂದ ಇರಿದು ಪರಾರಿಗೆ ಯತ್ನಿಸಿದ್ದಾನೆ. ಸ್ಥಳೀಯರ ನೆರವಿನಿಂದ ಆರೋಪಿಯನ್ನು ಹಿಡಿದು ಪೋಲಿಸ್ ಠಾಣೆಗೆ ಕರೆ ತರಲಾಗಿದೆ. ಗಾಯಗೊಂಡ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, ಹೆಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಟರ್ಕಿ : ಟರ್ಕಿಯ ಕಾಂತಾರ್ ಹಳ್ಳಿಯಲ್ಲಿ ಲಿಟಲ್ ಎಸ್ಇ ಎಂಬ 2 ವರ್ಷದ ಬಾಲಕಿ ಮನೆಯ ಹಿಂದಿನ ವಾರಂಡದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲೇ ಇದ್ದ. ಹಾವು ಬಾಲಕಿಯನ್ನು ಕಚ್ಚಿದೆ. ಆಗ ಬಾಲಕಿ ಆ ಹಾವಿನ ಬಾಲವನ್ನು ತಿರುಗಿ ಕಚ್ಚುವ ಮೂಲಕ ಹಾವನ್ನು ಕೊಂದಿದ್ದಾಳೆ. ಬಾಲಕಿ ಹಾವವನ್ನು ಕಚ್ಚಿದ ನಂತರ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ತುಟಿ ಅಂಚಿನಲ್ಲಿ ಹಾವಿನ ರಕ್ತ ಮತ್ತು ಬಾಯಿಯಲ್ಲಿ ಹಾವಿನ ತುಂಡನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಕೂಡಲೇ ಬಾಲಕಿಯ ತಂದೆ-ತಾಯಿಯನ್ನು ಕರೆದಿದ್ದಾರೆ. ಬಾಲಕಿಯ ಅವಸ್ತೆ ಕಂಡು ತಂದೆ-ತಾಯಿ ಕೂಡ ಆಶ್ಚರ್ಯಗೊಂಡಿದ್ದಾರೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿಯನ್ನು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು ಎಂದು UNILAD ವರದಿ ತಿಳಿಸಿದೆ. ಬಾಲಕಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಬೆಳಗಾವಿ : ಶ್ರೀಶೈಲ ಯಮನಪ್ಪ ಹಿಕ್ಕಡಿ ಇವರು ವಿಜಯಪುರ ಹಾಲಿ ಮಾದಾಪಟ್ಟಣ, ಜಿಗಣ ಹೋಬಳಿ, ಆಣೆಕಲ್ಲ ತಾಲೂಕಿನ, ಜಿಲ್ಲಾ ಬೆಂಗಳೂರು ನಗರ ಇವರ ಮಗಳು ಜ್ಯೋತಿ ಶ್ರೀಶೈಲ ಹಿಕ್ಕಡಿ ಇವಳು ತಮ್ಮೂರಾದ ವಿಜಯಪುರದಿಂದ ಬೆಳಗಾವಿಗೆ ಬಂದು ಈಗ 15 ದಿವಸಗಳಿಂದ ಬೆಳಗಾವಿ ಜಿಲ್ಲೆ ಬೆಳಗಾವಿ ರಥಗಲ್ಲಿಯಲ್ಲಿರುವಹ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು, ಆಗಷ್ಟ 12 ರಂದು ಸಾಯಂಕಾಲ 5 ಗಂಟೆಗೆ ಮನೆಯಲ್ಲಿ ಏನೂ ಹೇಳದೇ, ಕೇಳದೇ ಮನೆಯಿಂದ ಹೊರಗೆ ಹೋಗಿ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. ವಯಸ್ಸು 20 ವರ್ಷ, 4 ಪೂಟ 8 ಇಂಚ ಎತ್ತರ, ದುಂಡು ಮುಖ, ನೆಟ್ಟನೆಮೂಗು, ಸಡಪಾತಳ ಮೈಕಟ್ಟು, ಗೋದಿಗೆಂಪು ಮೈಬಣ್ಣ, ನೇರಳೆ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿರುತ್ತಾಳೆ, ಪಿಯುಸಿ ದ್ವೀತಿಯ ವರ್ಷ ಶಿಕ್ಷಣವನ್ನು ಕಲಿತಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾಳೆ. ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ…