Author: admin

ವಿಜಯಪುರ: ಯಡಿಯೂರಪ್ಪ ರಾಜ್ಯಪ್ರವಾಸ ಮಾಡಿ 180 ಸೀಟು ಗೆದ್ದುಕೊಡುವುದಾದರೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಲೇವಡಿ ಮಾಡುವುದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಂದುವರಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಡಿಯೂರಪ್ಪ ರಾಜ್ಯಪ್ರವಾಸ ಮಾಡಿ 180 ಸೀಟು ಗೆದ್ದುಕೊಡುವುದಾದರೆ ಮಾಡಲಿ, ತನಗೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆ ಬಗ್ಗೆ ಕೇಳಿದಾಗ ಯತ್ನಾಳ್, ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟರನ್ನು ಬೀದಿಗೆ ತರುತ್ತೇನೆ ಅಂತ ಹೇಳಿದ್ದರು, ಅದರ ಫಲಶೃತಿಯಾಗಿಯೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರೆಲ್ಲ ರೋಡಿಗೆ ಬಂದಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಕೈಲಾಸ ಎಂಬ ಪ್ರತ್ಯೇಕ ನಾಡನ್ನು ನಿರ್ಮಿಸಿ ತನ್ನದೇ ಆದ ರಾಷ್ಟ್ರಧ್ವಜ, ಕರೆನ್ಸಿ, ಪಾಸ್ ಪೋರ್ಟ್ ವ್ಯವಸ್ಥೆ ಇತ್ಯಾದಿಗಳನ್ನು ರೂಪಿಸಿದ ಬಿಡದಿ ಸ್ವಾಮಿ ನಿತ್ಯಾನಂದ ಈಗ ಜಗತ್ತಿನ ಎಲ್ಲ ಗರ್ಭಿಣಿಯರಿಗೆ ಬರುವಂತೆ ಸಲಹೆ ನೀಡಿದ್ದಾನೆ. ವೀಡಿಯೋ ಕ್ಲಿಪ್‌ನ ಆರಂಭದಲ್ಲಿ, ಕೈಲಾಸದಲ್ಲಿ ಶೀಘ್ರದಲ್ಲೇ ಶಾಶ್ವತ ಕಾಸ್ಮಿಕ್ ವಿಮಾನ ನಿಲ್ದಾಣ ಮತ್ತು ಇಡೀ ವಿಶ್ವಕ್ಕೆ ಮೀಸಲಾದ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾನೆ. ಇಲ್ಲಿ ಹುಟ್ಟುವ ಪ್ರತಿ ಮಗುವಿಗೆ ಪ್ರೌಢ ಅಲೌಕಿಕ ಪ್ರಕಾಶಮಾನವಾದ ಶಕ್ತಿಯ ಡಿಎನ್‌ಎ ಅಳವಡಿಸಲಾಗಿದೆ. ಇದರ ಜೊತೆಗೆ, ಬ್ರಹ್ಮನಿಗೆ ಆನುವಂಶಿಕ ಸಂಕೇತವನ್ನು ನೀಡಲಾಗುತ್ತದೆ ಅಂತ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಪಠ್ಯ ಬೋಧನೆಯಿಂದ ಭಗತ್ ಸಿಂಗ್ ಕುರಿತಾದ ಪಠ್ಯಕ್ಕೂ ಕೈಬಿಡಲಾಗಿದೆ. ಸದ್ಯ ಭಗತ್ ಸಿಂಗ್ ಪಾಠವನ್ನೂ ಪಠ್ಯ ಭೋದನೆಯಿಂದ ಕೈಬಿಟ್ಟಿರುವುದು ವಿರೊಧಕ್ಕೆ ಕಾರಣವಾಗುತ್ತಿದೆ. ಶಿಕ್ಷಣ ಇಲಾಖೆ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿರೊದಕ್ಕೆ ಲೇಖಕರು ಹಾಗೂ ವಿದ್ಯಾರ್ಥಿಗಳ ಸಂಘಟನೆಗಳು ವಿರೋಧ ಹೊರ ಹಾಕುತ್ತಿವೆ. ಪಠ್ಯ ಪರಿಷ್ಕರಣೆ ವೇಳೆಯೇ ಭಗತ್ ಸಿಂಗ್ ಪಾಠ ಕೈಬಿಟ್ಟು ವಿರೋಧಕ್ಕೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವ್ಯಾಪಕ ವಿರೋಧದ ಬಳಿಕ ಪಾಠ ಕೈಬಿಟ್ಟಿಲ್ಲ ಅಂತಾ ನಾಟಕವಾಡಿತ್ತು. ಆದ್ರೆ ಈಗ ಲೇಖಕರು ವಿರೋಧ ಮಾಡಿದ್ದಾರೆ. ಅನ್ನೋ ಕಾರಣ ಮುಂದಿಟ್ಟು ಎಸ್ಎಸ್ಎಲ್ ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣವಾಗೀರೊ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿದೆ. ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಇಲಾಖೆಯ ಈ ನಡೆಗೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಆಸ್ಪತ್ರೆಯೆ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅವರು, ರೋಗಿಗಳು ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದರು. ಆಸ್ಪತ್ರೆಯಲ್ಲಿನ ಸೌಲಭ್ಯ, ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಈ ನಡುವೆ ಬಹುತೇಕ ವೈದ್ಯರು ರಜೆ ಹಾಕಿದ್ದ ಹಿನ್ನೆಲೆ ನ್ಯಾ.ಬಿ.ವೀರಪ್ಪ ಗರಂ ಆದರು. ಚರ್ಮ ವಿಭಾಗದಲ್ಲಿ 6 ವೈದ್ಯರ ಪೈಕಿ 5 ವೈದ್ಯರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ತರಾಟೆ ತೆಗೆದುಕೊಂಡ ನ್ಯಾ.ಬಿ.ವೀರಪ್ಪ, ಮೇಜರ್ ಆದ್ರೆ ಒಬ್ಬರು ಹೇಗೆ ಕೆಲಸ ಮಾಡುತ್ತೀರಿ ಎಂದು ವೈದ್ಯೆಗೆ ಪ್ರಶ್ನಿಸಿದರು. ಜಡ್ಜ್ ಪ್ರಶ್ನೆಗೆ ವೈದ್ಯೆ ಉತ್ತರ ನೀಡಲು ತಡಬಡಾಯಿಸಿದ ಘಟನೆ ನಡೆಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 7ನೇ‌ ದಿನಕ್ಕೆ ಕಾಲಿಟ್ಟಿದೆ. ತುಮಕೂರಿನ ತುರುವೆಕೆರೆಯ ಮಾಯಸಂದ್ರದಿಂದ ಇಂದು ಭಾರತ್ ಜೋಡೋ ಪಾದಯಾತ್ರೆ ಪ್ರಾರಂಭವಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ರಾಜ್ಯದ ನಾಯಕರು ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿ ಜೊತೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಕೆ‌ಸಿ ವೇಣುಗೋಪಾಲ್, ಶ್ರೀನಿವಾಸ್, ರಾಜಣ್ಣ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಹಲವರು ಹೆಜ್ಜೆ ಹಾಕುತ್ತಿದ್ದಾರೆ.ಪಾದಯಾತ್ರೆ ನಡುವೆ ಗಣೇಶ ದೇವಸ್ಥಾನದ ಅರ್ಚಕರು ರಾಹುಲ್‌ ಗಾಂಧಿಗೆ ತಿಲಕವಿಟ್ಟು ಆಶಿರ್ವಾದ ಮಾಡಿದರು. ಭಾರತ್ ಜೋಡೋ ಯಾತ್ರೆಯಲ್ಲಿ ಟಿಕೇಟ್ ಆಕಾಂಕ್ಷಿಗಳು, ಅಸಮಾಧಾನಿತ ನಾಯಕರು ಕೂಡ ಭಾಗಿಯಾಗಿದ್ದಾರೆ. ಪಾದಯಾತ್ರೆಯಲ್ಲಿ ಅಸಮಾಧಾನಿತ ನಾಯಕರು ಸಹ ಭಾಗಿಯಾಗಿದ್ದಾರೆ. ಎಸ್​.ಆರ್​.ಪಾಟೀಲ್ ನಿನ್ನೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಎಂ.ಆರ್​.ಸೀತಾರಾಮ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪಕ್ಷ ತೊರೆಯುವ ಬಗ್ಗೆ ಚರ್ಚಿಸಿದ್ದ ಸೀತಾರಾಮ್, S.R.ಪಾಟೀಲ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಯಶವಂತಪುರ ವೃತ್ತದಿಂದ ಮಲ್ಲೇಶ್ವರಂನ ಮಾರಮ್ಮನ ಗುಡಿ ಸರ್ಕಲ್‌ ವರೆಗೆ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಭರದಿಂದ ಸಾಗಿದ್ದು, ನ.1ರೊಳಗೆ ಮುಗಿಸಲು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ಬೆಳಿಗ್ಗೆ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ‘ನಗರದ ಅತ್ಯಂತ ವಾಹನದ ದಟ್ಟಣೆಯ ರಸ್ತೆಗಳಲ್ಲಿ ಇದೂ ಒಂದಾಗಿದ್ದು, ಮಾರಮ್ಮ ಸರ್ಕಲ್‌ ನಿಂದ ಯಶವಂತಪುರ ವೃತ್ತದವರೆಗೆ ಈಗಾಗಲೇ ಒಂದು ಬದಿಯ ವೈಟ್‌ ಟಾಪಿಂಗ್ ಕಾಮಗಾರಿ ಮುಗಿದು, ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ಈಗ ಇನ್ನೊಂದು ಬದಿಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ’ ಎಂದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 36, 37 ಮತ್ತು 41ರಲ್ಲಿ ಕುಡಿಯುವ ನೀರು ಪೂರೈಕೆಗೆ ಹೊಸದಾಗಿ 700 ಮಿಲಿ ಮೀಟರ್ ವ್ಯಾಪ್ತಿಯ ಕೊಳವೆಗಳನ್ನು ಹೊಸದಾಗಿ ಹಾಕಲಾಗುತ್ತಿದೆ. ಹಾಗೆಯೇ, ಬಿಇಎಲ್‌ ಗೆ ಸಂಪರ್ಕ ಕಲ್ಪಿಸುವ 300 ಮಿಲಿ ಮೀಟರ್ ವ್ಯಾಪ್ತಿಯ ಕೊಳವೆಗಳನ್ನು ಹಾಕಲಾಗುತ್ತಿದೆ. ಈ ಕಾಮಗಾರಿಗಳು ಕೂಡ ಕ್ಷಿಪ್ರಗತಿಯಲ್ಲಿ ಮುಗಿಯಲಿವೆ ಎಂದು ಅವರು ತಿಳಿಸಿದರು. ಕಾಮಗಾರಿ…

Read More

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಖಾಲಿ ಇರುವ ಸಚಿವ ಸ್ಥಾನವನ್ನ ಕೂಡಲೇ ಭರ್ತಿ ಮಾಡಿ. ಚುನಾವಣೆ ಹಿನ್ನಲೆ ಕೂಡಲೇ ಕ್ಯಾಬಿನೆಟ್ ವಿಸ್ತರಣೆ ಮಾಡಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಕುರುಬ ಸಮಾಜವನ್ನ ಎಸ್.ಟಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಕುಲಶಾಸ್ತ್ರ ಅಧ್ಯಯನ ಬಳಿಕ ತೀರ್ಮಾನ ಮಾಡಲಾಗುತ್ತದೆ. ಕುರುಬ ಸಮಾಜವನ್ನ ಎಸ್ ಟಿಗೆ ಸೇರ್ಪಡೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ತಿಂಗಳ ಹಿಂದೆ ಸುರಿದ ಮಳೆಯಿಂದ ಬೆಳೆ ಹಾನಿಯಾಗಿದ್ದು, ೀ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿತರಿಸುತ್ತಿರುವ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಭಾರೀ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹಾಗೂ ತಾಲ್ಲೂಕು ರೈತಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಆರೋಪಿಸಿದ್ದಾರೆ. ಜಿಲ್ಲೆಯ ಹಿರಿಯೂರು ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳೆ ಪರಿಹಾರ ವಿತರಿಸುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು  ವಿಫಲವಾಗಿವೆ  ಎಂದು ಆರೋಪಿಸಿದರು. ತಾಲ್ಲೂಕಿನ ದೇವರಕೊಟ್ಟ ಗ್ರಾಮದ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ 5 ಎಕರೆ ಶೇಂಗಾ ಬೆಳೆ ಹಾನಿಗೊಳಗಾಗಿದ್ದು, ಎಕರೆಗೆ 2 ಸಾವಿರದಂತೆ 10 ಸಾವಿರ ಪರಿಹಾರ ಬಂದಿದೆ. ಅದೇ ಮಸ್ಕಲ್ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ 5 ಎಕರೆ ಬೆಳೆಹಾನಿಗೆ ಕೇವಲ 2 ಸಾವಿರ ರೂಗಳ ಪರಿಹಾರ ಅವರ ಬ್ಯಾಂಕ್  ಖಾತೆಗೆ ಜಮಾ ಮಾಡಲಾಗಿದೆ ಎಂದರು. ಮಸ್ಕಲ್…

Read More

ಬೆಳಗಾವಿ: ಯಡಿಯೂರಪ್ಪರನ್ನು ಕರೆದುಕೊಂಡು ಓಡಾಡಿದರೆ ಬಿಜೆಪಿ ಲಗಾಟಿ ಹೊಡೆಯುತ್ತೆ ಎಂದು ಪಕ್ಷದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಮೂಡಲಗಿಯ ತಾಲೂಕಿನ ಕಲ್ಲೋಳಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೆ ಹೋದರೆ ರಾಜ್ಯದಲ್ಲಿ ಬಿಜೆಪಿಯನ್ನು ಲಗಾಟಿ ಹೊಡೆಸುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳದೇ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪನವರನ್ನು ಕರೆದುಕೊಂಡು ಹೋದರೆ ನೀವು ಕೂಡ ಲಾಗ ಹಾಕ್ತೀರಿ ಎಂದು ಹೇಳಿದ ಯತ್ನಾಳ್, ಯಡಿಯೂರಪ್ಪ ಪಂಚಮಸಾಲಿ ಸಮುದಾಯದ ವಿರೋಧಿಯಾಗಿಲ್ಲದಿದ್ದರೆ ಮೀಸಲಾತಿ ಜಾರಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ವಿದ್ಯುತ್ ತಗುಲಿ ಸುಟ್ಟು ಹೋದ ವ್ಯಕ್ತಿಯ ಅಸ್ಥಿಪಂಜರ ದೊರೆತ ಘಟನೆ ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಕಬ್ಬಿನ ತೋಟದಲ್ಲಿ ನಡೆದಿದೆ. ಅಸ್ಥಿಪಂಜರದ ಪಂಚನಾಮೆ ನಡೆಸಿದ ಪೊಲೀಸರು ಅದು 26 ದಿನಗಳ ಹಿಂದೆ ಕಾಣೆಯಾಗಿದ್ದ ಲಾಕ್ಕೆಬೈಲ್ ನಿವಾಸಿ 36 ವರ್ಷದ ರಾಮಚಂದ್ರ ಅಂದಾರೆ ಎಂಬವರದೆಂದು ಗುರುತಿಸಿದ್ದಾರೆ. ಅವರ ಅಸ್ಥಿಪಂಜರದ ಮೇಲೆ ಕಂಬದಿಂದ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಕಂಡು ವಿದ್ಯುತ್ ಹರಿದು ದೇಹ ಸುಟ್ಟು ಹೋಗಿದೆ ಎಂದು ಖಾನಾಪುರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ IPC ಸೆಕ್ಷನ್ 306 ರ ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ. ರಾಮಚಂದ್ರ ಅಂದಾರೆ ಅವರು ಕಾಣೆಯಾಗಿರುವ ಕುರಿತು ಕುಟುಂಬಸ್ಥರು 26 ದಿನಗಳ ಹಿಂದೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More