Author: admin

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್​ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಮೀಣ್ಯಂ ದಾಳಿಗೆ ಇಂದಿಗೆ ಬರೋಬ್ಬರಿ 30 ವರ್ಷವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತಿದೆ. ದಂತಚೋರ ವೀರಪ್ಪನ್​ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್​ಟಿಎಫ್​​ನಲ್ಲಿ ಕರ್ತವ್ಯ ಮಾಡಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಈ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್​​​ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್, ವೀರಪ್ಪನ್​ ಮರಮೋಸಕ್ಕೆ ಬಲಿಯಾಗಿದ್ದರು. ಆ ದಿನವನ್ನು ಅಂದು ಎಸ್​​ಟಿಎಫ್​​ನಲ್ಲಿದ್ದ ಹಲವು ಪೊಲೀಸರು ಈಗಲೂ ನೆನೆಯುತ್ತಾರೆ. ಎಸ್​ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದಿತ್ತು. ಆದರೆ ಆತ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್, ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್​​​​​ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಹಠಕ್ಕೆ ಬಿದ್ದಿದ್ದ ವೀರಪ್ಪನ್​, ಕಮಲ ನಾಯ್ಕ್ ಎಂಬುವವನ ಮೂಲಕ ದಾಳಿ…

Read More

ಧಾರವಾಡ: ಇಲ್ಲಿ‌ನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 183 ಪ್ರಕರಣಗಳನ್ನು 5,77,12,376 ರೂ.ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಹಿರಿಯ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಅವರ ಮಾರ್ಗದರ್ಶನದಲ್ಲಿ,ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್, ರವಿ ವಿ .ಹೊಸಮನಿ ಮತ್ತು ಅನಂತ ರಾಮನಾಥ ಹೆಗಡೆ ಹಾಗೂ ಲೋಕ ಅದಾಲತ್‌ನ ಸದಸ್ಯರುಗಳಾದ ಎಲ್ . ಟಿ .ಮಂಟಗಣಿ, ಎಸ್.ಎಸ್.ಬಾವಾಖಾನ,ಎಮ್.ಟಿ.ಬಂಗಿ ಮತ್ತು ಎಮ್.ಸಿ.ಹುಕ್ಕೇರಿ ಅವರನ್ನೊಳಗೊಂಡ 4 ಪೀಠಗಳಲ್ಲಿ ವ್ಯಾಜ್ಯಗಳ ರಾಜಿ ಸಂಧಾನ ನಡೆದವು. ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಹಾಗೂ ವಕೀಲರಾದ ಎಮ್.ಸಿ.ಹುಕ್ಕೇರಿ ಅವರ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ – ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿದ್ದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ ಎಂದು ಹೈಕೋರ್ಟ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಾಗವಿ (ಸಿದ್ದರಬೆಟ್ಟ)ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿರುವ ಧ್ವಜಸ್ತಂಭದಲ್ಲಿ ರಾತ್ರಿ 9.36 ಕೂಡ ರಾಷ್ಟ್ರ ಧ್ವಜವನ್ನು ಇಳಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್.,  ಸಿದ್ದರಬೆಟ್ಟ ಗ್ರಾಮ ಪಂಚಾಯಿತಿಯ ಕಚೇರಿ ಆವರಣದಲ್ಲಿರುವ ಧ್ವಜಸ್ತಂಭದಲ್ಲಿ ನೆನ್ನೆ ಬೆಳಗ್ಗೆ ಹಾರಿಸಿದ ತ್ರಿವರ್ಣ ಧ್ವಜವನ್ನು ರಾತ್ರಿ ಇಡೀ ತಿಳಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಕಾನೂನು ಉಲ್ಲಂಘನೆಯನ್ನು ಮಾಡಿರುವ ಘಟನೆ ನಡೆದಿದೆ.  ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವಿಜಯ ಕುಮಾರಿ ಹಾಗೂ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಮತ್ತು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ವಿನೋದ ನವೀನ್ ಕುಮಾರ್ ರವರನ್ನು ಒಳಗೊಂಡ ಆಡಳಿತ ಜನಪ್ರತಿನಿಧಿಗಳನ್ನು ಸರ್ಕಾರ ಈ ಕೂಡಲೇ ಅಮಾನತು ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಸದರಿ ವ್ಯಕ್ತಿಗಳ ವಿರುದ್ಧ ರಾಷ್ಟ್ರದ್ರೋಹದಡಿಯಲ್ಲಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಬೃಹತ್ ಮಟ್ಟದ…

Read More

ಬೆಂಗಳೂರು : ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರ ದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮವರೊಂದಿಗೆ ಮಾತನಾಡಿದರು.ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜುಲೈ 28 ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು.10 -15 ದಿನಗಳಿಂದ ಈ ಭಾಗದ ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರ ದಿಂದಲೇ ಜನೋತ್ಸವ ಪ್ರಾರಂಭವಾಗಬೇಕು.ಮೊದಲ ಹೆಜ್ಜೆ ಇಟ್ಟಿದ್ದೇವೆ.ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಆಗಲಿ ಎಂದು ನಮಗಿಂತಲೂ ಹೆಚ್ಚಿನ ಧೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.ಜನೋತ್ಸವದ ಬಗ್ಗೆ ಇಂದು ವರಿಷ್ಠ ರೊಂದಿಗೆ ಮಾತನಾಡಿ ತಿಳಿಸಲಾಗುವುದು ಎಂದರು. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಮಡಿಕೇರಿ: ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಪ್ರವಾಸಿತಾಣದಲ್ಲಿ ಅಡ್ಡಾಡುತ್ತಿರುವ ಕಂಡ ಪ್ರಿಯಕರ ಇಬ್ಬರಿಗೂ ಚಾಕುವಿನಿಂದ ಹಲ್ಲೆ‌ ಮಾಡಿದ ಘಟನೆ ಕುಶಾಲನಗರದ ಕಾವೇರಿ‌ ನಿಸರ್ಗಧಾಮದಲ್ಲಿ ಶನಿವಾರ ನಡೆದಿದೆ. ಕುಶಾಲನಗರ ಸರಕಾರಿ ಪ್ರಥಮ‌ ದರ್ಜೆ‌ ಕಾಲೇಜಿನ ವಿದ್ಯಾರ್ಥಿಗಳಾದ ಜೋಡಿ ಕಾವೇರಿ‌ ನಿಸರ್ಗಧಾಮಕ್ಕೆ ತೆರಳಿದೆ.ಈ ಪೈಕಿ ಮಾದಾಪಟ್ಟಣ ನಿವಾಸಿ ವಿದ್ಯಾರ್ಥಿನಿ ಪ್ರಿಯಕರ ಎನ್ನಲಾದ ಕುಶಾಲನಗರ ಹೋಟೆಲ್ ಸಿಬ್ಬಂದಿ ದೊಡ್ಡಹರವೆ ಗ್ರಾಮದ ವಿಜಯ್ (22) ಈ ಜೋಡಿಯನ್ನು ಹಿಂಬಾಲಿಸಿ ಚಾಕುವಿನಿಂದ ಇರಿಯಲು‌ ಮುಂದಾಗಿದ್ದಾನೆ. ಘಟನೆಯಿಂದ ಯುವತಿಯ ಭುಜ, ಕೈ, ಕುತ್ತಿಗೆ ಭಾಗದಲ್ಲಿ ಗಾಯ ಉಂಟಾಗಿದೆ. ತಡೆಯಲು ಬಂದ ಈಕೆಯ ಸಹಚರ ಹೆಬ್ಬಾಲೆಯ ಪ್ರವೀಣ್ ಎಂಬಾತನಿಗೂ‌ಕೂಡ ಎರಡು ಕೈಗಳಿಗೆ ಗಾಯ ಉಂಟಾಗಿದೆ. ಸ್ಥಳದಲ್ಲಿ ಇದ್ದ ಇತರೆ ಪ್ರವಾಸಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಾಲದಲ್ಲಿ‌ ಮದ್ಯ ಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಆರೋಪಿಯನ್ನು ವಶಕ್ಕೆ ಪಡೆದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಆಂಧ್ರಪ್ರದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ತಾಯಿ-ಮಗು ಮರಣ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಆರ್ ಐ ವೈದ್ಯರು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರವು ಪರಿಚಯಿಸಲಿರುವ ‘ಫ್ಯಾಮಿಲಿ ಡಾಕ್ಟರ್’ ಪರಿಕಲ್ಪನೆಯನ್ನು ಬೆಂಬಲಿಸಲು ರಾಜ್ಯದ ಹಲವಾರು ಅನಿವಾಸಿ ಭಾರತೀಯರು ಆಸಕ್ತಿ ತೋರಿದ್ದಾರೆ. ಆರೋಗ್ಯ ಇಲಾಖೆಯ ಎನ್‌ಆರ್‌ಐ ವೈದ್ಯಕೀಯ ವ್ಯವಹಾರಗಳ ಸಲಹೆಗಾರ ಡಾ. ವಾಸುದೇವ ಆರ್. ನಲಿಪಿರೆಡ್ಡಿ, ಅಮೆರಿಕನ್ ಅಸೋಸಿಯೇಷನ್ ​​ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ಸ್ (ಎಎಪಿಐ) ಗೌರವಾಧ್ಯಕ್ಷ ಡಾ. ಕೊಲ್ಲಿ ರವಿ, ನಿಯೋನಾಟಾಲಜಿಸ್ಟ್ ಡಾ. ಪ್ರಕಾಶ್ ಎಂ. ಕಬ್ಬೂರು, ಟ್ರೈನ್ ಅಂಡ್ ಹೆಲ್ಪ್ ಬೇಬೀಸ್ ನಿರ್ದೇಶಕ ಡಾ. ಸಿಂಗಂ ಹರಿಬಾಬು. ಮತ್ತು ಇತರರು ಶುಕ್ರವಾರ ಮಂಗಳಗಿರಿಯ ಆರೋಗ್ಯ ಇಲಾಖೆ ಕಚೇರಿಯಲ್ಲಿ ಆರೋಗ್ಯ, ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ವಿಡದಾಳ ರಜಿನಿ ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವಾಸುದೇವ, ಅನಿವಾಸಿ ಭಾರತೀಯ ವೈದ್ಯರ ತಂಡ ಕೆಲವು ಜಿಲ್ಲೆಗಳಲ್ಲಿ ತಾಯಿ ಮತ್ತು…

Read More

ಬೆಂಗಳೂರು : ಇತ್ತೀಚೆಗೆ ತಾಯಿಯೊಬ್ಬಳು ಸಿಲಿಕಾನ್ ಸಿಟಿಯ ಸಂಪಂಗಿರಾಮನಗರದಲ್ಲಿ 4ನೇಯ ಮಹಡಿಯಿಂದ ಬುದ್ಧಿಮಾಂದ್ಯ ಮಗುವನ್ನು ಎಸೆದು ತಾಯ್ತನಕ್ಕೆ ಅವಮಾನವಾಗುವ ಕೆಲಸ ಮಾಡಿದ್ಲು. ಆದರೆ ಈಗ ತಾಯಿಯ ಅಂತಃಕರಣ, ವಾತ್ಸಲ್ಯವನ್ನು ಎತ್ತಿ ಹಿಡಿಯುವ ಮನಮಿಡಿಯುವ ಪ್ರಸಂಗ ನಡೆದಿದೆ. ಚಿಕಿತ್ಸೆಗಾಗಿ ಕರೆತಂದಿದ್ದ ಬುದ್ಧಿಮಾಂದ್ಯ ಬಾಲಕ ನಾಪತ್ತೆಯಾಗಿದ್ದು, ಒರಿಸ್ಸಾ ಮೂಲದ ಪೋಷಕರ, ಗೋಳಾಟ ಅಲೆದಾಟ ಹೇಳತೀರದಾಗಿದೆ. ಅವರ ಕಣ್ಣೀರು ಎಂತಹ ಕಲ್ಲು ಹೃದಯದವರನ್ನೂ ಕರಗಿಸುವಂತಿದೆ. ಓರಿಸ್ಸಾ ಮೂಲದ ಪ್ರಸನ್ಜೀತ್ ದಾಸ್ (12) ಎನ್ನುವ ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ನಿಮಾನ್ಸ್ ನಲ್ಲಿ ಈತನ ಚಿಕಿತ್ಸೆಗಾಗಿ ಒರಿಸ್ಸಾದ ಬಾದ್ರಕ್ ನಿಂದ ಪೋಷಕರು ಆಗಸ್ಟ್ 9ರಂದು ಬೆಂಗಳೂರಿಗೆ ಬಂದಿದ್ದರು. ಸಿದ್ಧಾಪುರ ಠಾಣಾ ವ್ಯಾಪ್ತಿಯ ಎಸ್.ಎಸ್.ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ರೂಮ್ ನಿಂದ ಬಾಲಕ ಏಕಾಏಕಿ ತಪ್ಪಿಸಿಕೊಂಡಿದ್ದು, ಬಾಲಕನನ್ನು ಹುಡುಕಿ ಕೊಡುವಂತೆ ಪೋಷಕರು ಪೊಲೀಸ್ ಆಯುಕ್ತರ ಕಚೇರಿಗೂ ಬಂದು ಅಳಲು ತೋಡಿಕೊಂಡಿದ್ದಾರೆ‌. ಅಬ್ದುಲ್ ಎನ್ನುವ ಆಟೋ ಚಾಲಕನ ಸಹಾಯದಿಂದ ನಿನ್ನೆಯಿಂದ ಅಲೆಯುತ್ತಿದ್ದಾರೆ. ಬಾಲಕ ಯಾರಿಗಾದ್ರೂ ಕಂಡಲ್ಲಿ 8792559232 ನಂಬರಿಗೆ ಕರೆ…

Read More

ಬೆಂಗಳೂರು : ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ ಬೆನ್ನಲೇ ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ಕ್ರಿಮಿನಲ್ ಗಳು ಚುನಾವಣೆಗೆ ನಿಲ್ಲಲು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ನಿಲ್ಲಲು ಗುಪ್ತ ಸಿದ್ಧತೆಯಲ್ಲಿ ತೊಡಗಿರುವ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಸೂಚಿಸಿದ್ದಾರೆ. ಇದೇ ವರ್ಷ ಬಿಬಿಎಂಪಿ ಚುನಾವಣೆ‌ ನಡೆಯುವ ಸಾಧ್ಯತೆಯಿದೆ. ಇದಕ್ಕೆ‌ ಪೂರಕವಾಗಿ ಬಿಬಿಎಂಪಿಯು 198 ವಾರ್ಡ್ ಗಳಿಂದ 243 ವಾರ್ಡ್ ಗಳಿಗೆ ಏರಿಸಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ರೌಡಿಗಳು ಸಹ ರಾಜಕೀಯ ಪಕ್ಷಗಳ‌ ನಾಯಕರ ಮುಂದೆ ನಿಂತು ಗೆಲ್ಲುವ ಇರಾದೆಯಲ್ಲಿದ್ದಾರೆ. ಕೆಲ ರೌಡಿಗಳು ತಮ್ಮ ಕುಟುಂಬದ ಸದ್ಯಸರೊಬ್ಬರನ್ನ ಎಲೆಕ್ಷನ್ ಅಖಾಡಕ್ಕೆ ನಿಲ್ಲುವಂತೆ‌ ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಅಲ್ಲದೆ ತಮ್ಮ ಆಪ್ತರಿಗೂ ಚುನಾವಣಾ ಕಣದಲ್ಲಿ ನಿಂತರೆ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಚುನಾವಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ…

Read More

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ. ಮುಂದುವರೆದಿದ್ದು ಕೃಷ್ಣಾನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಪ್ರವಾಹ ತಲೆದೋರಿದೆ. ಕಳೆದ 15 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆಯಿಂದ ಹೈರಾಣಾಗಿದ್ದ ಉತ್ತರ ಕರ್ನಾಟಕದ ಜನ ಈಗ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಬೆಳಗಾವಿ, ಬಾಗಲಕೋಟೆ, ಗೋಕಾಕ್ ಸೇರಿದಂತೆ ವಿವಿಧೆಡೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಲಗದ್ದೆಗಳು ಜಲಾವೃತಗೊಂಡು ಮಾರುಕಟ್ಟೆಗಳಿಗೆ ನೀರು ನುಗ್ಗಿದೆ.ಕಳೆದ ಪ್ರವಾಹ ಸಂಕಷ್ಟದಿಂದ ಇನ್ನೂ ಜನ ಚೇತರಿಸಿಕೊಂಡಿಲ್ಲ. ಈಗ ಪ್ರವಾಹ ಎದುರಾಗುತ್ತಿರುವುದು ಜನರನ್ನು ಮತ್ತಷ್ಟು ಭೀತಿಗೆ ತಳ್ಳಿದೆ. ಯಾದಗಿರಿ ಜಿಲ್ಲೆಯ ಭೀಮಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭೀಮಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬ್ಯಾರೇಜ್‍ನಿಂದ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆಲಮಟ್ಟಿಯಲ್ಲಿರುವ ಅಣೆಕಟ್ಟಿಗೆ 1.86 ಲಕ್ಷ ಕ್ಯೂಸೆಕ್ಸ್ ನೀರು ಬರುತ್ತಿದ್ದು, 2.25 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಮಹಾರಾಷ್ಟ್ರದಿಂದ ಇನ್ನು ಹೆಚ್ಚಿನ ನೀರು ಬಂದರೆ ಬಹುತೇಕ ಗ್ರಾಮಗಳು ಮುಳುಗಡೆ ಎದುರಿಸಬೇಕಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ,…

Read More

ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಪ್ರತಿ ದಿನ ಬೆಳಗ್ಗೆ – ಸಂಜೆ ತಾಲೀಮು ನಡೆಸುವುದು ವಾಡಿಕೆ. ಅಂತೆಯೇ ಇಂದು ತಾಲೀಮು ಆರಂಭಕ್ಕೂ ಮುನ್ನ ಅರಮನೆ ಅವರಣದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅರಮನೆ ಆವರಣದಲ್ಲಿಯೇ ಆನೆಗಳ ತಾಲೀಮು ನಡೆಸಲಾಗಿತ್ತು. ಈ ಬಾರಿ ಎಂದಿನಂತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆಗಳು ವಾಯುವಿಹಾರಕ್ಕೆ ತೆರಳುತ್ತಿದೆ. ಇಂದಿನಿಂದ ದಸರಾ ಗಜಪಡೆ ತಾಲೀಮು ಆರಂಭವಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆಆರ್ ಸರ್ಕಲ್ ,ಸಯ್ಯಾಜಿರಾವ್ ರಸ್ತೆ,ಆಯುರ್ವೇದಿಕ್ ಸರ್ಕಲ್, ಬಂಬೂಬಜಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪುತ್ತದೆ. ಮತ್ತೆ ಬನ್ನಿ ಮಂಟಪದಿಂದ ಅರಮನೆಗೆ ವಾಪಾಸ್ ಆಗಲಿವೆ. ಅರಣ್ಯ ಅಧಿಕಾರಿ ಕರಿಕಾಳನ್ ಮಾತನಾಡಿ ದಸರಾ ಮಹೋತ್ಸವ ಹಿನ್ನಲೆ ಆನೆಗಳಿಗೆ ಇಂದಿನಿಂದ ತಾಲೀಮು ಪ್ರಾರಂಭ ಮಾಡಲಾಗಿದೆ. ಆನೆಗಳಿಗೆ ತೂಕ ಮಾಡಿಸಲಾಗಿದೆ. ಎಲ್ಲ ಆನೆಗಳು ಅರೋಗ್ಯವಾಗಿವೆ. ವಿಶೇಷವೆನೆಂದರೇ ನಗರ ವಾತಾವರಣಕ್ಕೆ ಆನೆಗಳು ಹೊಂದಿಕೊಂಡಿವೆ. ಒಂದು ವಾರದ ನಂತರ ಬಾರ ಹೊರುವ ತಾಲೀಮು ಪ್ರಾರಂಭ…

Read More