ತಿಪಟೂರು: ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಮನೆಯ ಮೇಲೆ ಎನ್.ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದಾಂದಲೇ ಮಾಡಿರುವ ಘಟನೆ ಖಂಡಿಸಿ ಬಿ.ಜೆಪಿ ಕಾರ್ಯಕರ್ತರು ತಿಪಟೂರು ನಗರ ಸಭಾ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷ ಹಾಗೂ ಎನ್.ಎಸ್.ಯು.ಐ. ಸಂಘಟನೆ ಬಗ್ಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಕುಮಾರ್, ಸಚಿವರ ಊರಿನಲ್ಲಿ ಇಲ್ಲದಿರುವ ವೇಳೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ. ಕಾರ್ಯಕರ್ತರು ಸಚಿವರ ಮನೆಮುಂದೆ ದಾಂಧಲೆ ನಡೆಸಿ ಬೆಂಕಿಹಚ್ಚಿರುವ ಘಟನೆ ತೀವ್ರ ಖಂಡನೀಯ ಎಂದರು.
ದೇಶದ ಇತಿಹಾಸವನ್ನ ಮಕ್ಕಳಿಗೆ ತಿಳಿಸುವ ವಿಚಾರದಲ್ಲಿ ಕಾಂಗ್ರೇಸ್ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಕಾಂಗ್ರೇಸ್ ಪಕ್ಷ ಗಲಾಟೆ ಗದ್ದಲ ಮಾಡುವ ತನ್ನ ಸಂಸ್ಕ್ರತಿ ಬಿಂಬಿಸಿದೆ ಯಾವುದೇ ಕಾರಣಕ್ಕೂ ನಮ್ಮ ಶಕ್ತಿಯನ್ನ ಹಗುರವಾಗಿ ಪರಿಗಣಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ, ಎನ್.ಎಸ್.ಯೂ.ಐ. ಕಾರ್ಯಕರ್ತರ ಕೃತ್ಯ ಪೂರ್ವನಿಯೋಜಿತವಾಗಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಬಂದ ಕಾರ್ಯಕರ್ತರು ಸ್ಥಳೀಯ ಕಾಂಗ್ರೇಸ್ ಮುಖಂಡರ ಕುಮ್ಮಕಿನಿಂದ ದಾಳಿನಡೆಸಿದ್ದು, ಅತ್ಯಂತ ಸೌಮ್ಯಸ್ವಾಭಾವದ ಸರಳ ವ್ಯಕ್ತಿ ಬಿ.ಸಿ.ನಾಗೇಶ್ ಮನೆ ಮೆಲೆ ನಡೆದಿರುವ ದಾಳಿ ಖಂಡನೀಯ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಬಿ ದಿವಾಕರ್.ಎಸ್.ಸಿ ಮೋರ್ಚ ಮುಖಂಡ ಗಂಗರಾಜು, ಬಿಜೆಪಿ ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ನಗರಾಧ್ಯಕ್ಷ ಗುಲಾಬಿಸುರೇಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿಸ್ಲೇಹಳ್ಳಿ ಜಗದೀಶ್, ನಗರಸಭಾ ಮುಖಂಡರಾದ ಪ್ರಸನ್ನಕುಮಾರ್, ಮುಂತಾದವರು ಉಪಸ್ಥಿತರಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5