Author: admin

ಆರ್‌ಎಸ್‌ಎಸ್‌ ಕಂಡರೆ ತಮಗೆ ಭಯವಿದೆ ಎಂದು ಒಪ್ಪಿಕೊಂಡಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅದಕ್ಕೆ ಸೂಕ್ತ ಸಮರ್ಥನೆ ಮೂಲಕ ಮತ್ತೆ ಸಂಘ ಪರಿವಾರದ ವಿರುದ್ಧ ಹರಿ ಹಾಯ್ದಿದ್ದಾರೆ. ಆರ್‌ಎಸ್‌ಎಸ್‌ ಕಂಡರೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್‌ಎಸ್‌ಎಸ್‌ ಕಂಡರೆ ಭಯ ಇದೆ. ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿ.ವಿ.ಸದಾನಂದಗೌಡರು ಯಾಕೆ ತನ್ನ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಆರ್‌ಎಸ್‌ಎಸ್‌ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂೀಧಿಜಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್‌ ಮೇಲೆ ದೇಶದ ಮೊದಲ ಗೃಹಸಚಿವ ವಲ್ಲಭಭಾಯಿ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ. ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ…

Read More

ತುಮಕೂರು: ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಯಾರ ಬಗ್ಗೆನೂ ದೋಷ ಪಡುವುದು ಬೇಕಾಗಿಲ್ಲ ಎಂದು ಮಾಜಿ ಪ್ರಧಾನಿ,  ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದರು.  ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನ ಬಳಗೆರೆ ಗ್ರಾಮದಲ್ಲಿ  ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು,  ಈ ವಿಚಾರದಲ್ಲಿ ಯಾರ ಬಗ್ಗೆನೂ ದೋಷ ಪಡುವುದು ಬೇಕಾಗಿಲ್ಲ. ಯಾರ್ಯಾರು ಏನೇನು ಮಾತಾಡುತ್ತಿದ್ದಾರೋ ನೀವು ನೋಡ್ತಾ ಇದ್ದೀರಾ. ನನಗೆ ಸ್ವಲ್ಪ ಗಂಟಲ ಬಾಧೆ ಇದೆ. ಈ ವಿಷಯದಲ್ಲಿ ನಾನು ಯಾರ ಬಗ್ಗೆನೂ ಟೀಕೆ ಮಾಡಲ್ಲ ಎಂದರು. ಎಲ್ಲವನ್ನೂ ತಾವುಗಳೇ ಜನತೆ ಮುಂದೆ ಪ್ರತಿಯೊಂದು ನಿಮಿಷಕ್ಕೂ ಸುದ್ದಿಯನ್ನ ಮುಟ್ಟಿಸುತ್ತಿದ್ದೀರಾ. ಎಲ್ಲ ವಿಷಯವನ್ನೂ ವಿಶ್ಲೇಷಣೆ ಮಾಡೋಕೆ ಆಗೋಲ್ಲ. ತಾವ್ಯಾರೂ ಬೇಸರ ಮಾಡ್ಕೋಬೇಡಿ. ನಾವು ಎರಡನೇ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಗೆ ಅವಕಾಶ ಕೊಡಬಾರದು ಅನ್ನೋದನ್ನ ಶ್ರೀಮಾನ್ ಖರ್ಗೆಯವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡ್ತಿದ್ದಾರೆ ಎಂದರು. ಯಾರನ್ನೂ ದೋಷ ಮಾಡೋಕೆ ಹೋಗಲ್ಲ. ಖರ್ಗೆ ಅವರ ವರ್ಕ್ ಪರಿಣಾಮ ಗೊತ್ತಿದೆ. ಒಂದೇ ಒಂದು…

Read More

ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾರನ್ನು ಕೇಂದ್ರ ತನಿಖಾ ಸಂಸ್ಥೆಗಳು ಶೀಘ್ರವೇ ಬಂಧಿಸಲಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುನ್ಸೂಚನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಮೊದಲು ಆರೋಗ್ಯ, ವಿದ್ಯುತ್, ಗೃಹ ಖಾತೆಗಳನ್ನು ಹೊಂದಿದ್ದ ಸತ್ಯೇಂದ್ರಜೈನ್ ಅವರನ್ನು ನಕಲಿ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಅವರ ಬಂಧನದ ಬಗ್ಗೆ ಈ ಮೊದಲು ನನಗೆ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿತು. ಈಗ ಅದೇ ಮೂಲಗಳು ಸಿಸೋಡಿಯ ಬಂಧನದ ಬಗ್ಗೆಯೂ ಸುಳಿವು ನೀಡಿವೆ ಎಂದರು. ಸಿಸೋಡಿಯಾ ದೆಹಲಿಯ ಶಿಕ್ಷಣ ಚಳವಳಿಯ ಪಿತಾಮಹಾ. ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಮಂತ್ರಿ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಭವಿಷ್ಯ ಸುಧಾರಣೆಗೆ ಕೆಲಸ ಮಾಡುತ್ತಿದ್ದಾರೆ. ದೆಹಲಿ ಮಾತ್ರವಲ್ಲದೆ ದೇಶಾದ್ಯಂತ ಇರುವ ಶಾಲೆಗಳಿಗೂ ಇದು ಸ್ಪೂರ್ತಿಯಾಗಿದೆ. ಅವರನ್ನು ಭ್ರಷ್ಟ ಎಂದು ಕರೆಯಲು ಸಾಧ್ಯವೆ ಎಂದು ಪ್ರಶ್ನಿಸಿದರು. ಅಮ್‍ಆದ್ಮಿ ಪಕ್ಷದ ಶಾಸಕರು, ಸಚಿವರನ್ನು ಒಬ್ಬೊಬ್ಬರಾಗಿ ಬಂಧಿಸುವ ಬದಲು ಒಮ್ಮೆಲೆ ಎಲ್ಲರನ್ನೂ ಬಂಧಿಸಿ ಬಿಡಿ ಎಂದು ಪ್ರಧಾನಮಂತ್ರಿಯವರ ಬಳಿ…

Read More

ಬಿಬಿಎಂಪಿ, ತಾಪಂ ಹಾಗೂ ಜಿಪಂಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಹೊರತಾಗಿ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ನಗರದ ಹೊರ ವಲಯದಲ್ಲಿ ನಡೆದ ನವಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಆಧರಿಸಿ ಈಗ ತರಾತುರಿಯಲ್ಲಿ ಚುನಾವಣೆ ನಡೆಸಬಹುದು. ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯನ್ನು ನಡೆಸಲಾಗಲೀ ಅಥವಾ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದಾಗಲಿ ಇಷ್ಟವಿಲ್ಲ ಎಂದರು. 2023ರ ಏಪ್ರಿಲ್ ಅಥವಾ ಮೇಗೆ ವಿಧಾನಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದು ನಮ್ಮ ಮುಂದಿರುವ ಸವಾಲು. ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ. ಆದ್ದರಿಂದ ನಾವು ಈ ಸವಾಲನ್ನು ಸ್ವೀಕಾರ ಮಾಡಬೇಕು. ಇವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ…

Read More

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ವಾದ-ವಿವಾದಗಳು ಜೋರಾಗಿಯೇ ಅಬ್ಬರಿಸುತ್ತಿವೆ. ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳ ಪಠ್ಯ ವಾಪಸ್ ಸಮರ ಶುರುವಾಗಿದ್ದು, ಸಾಹಿತಿಗಳು ಆತುರದ ನಡೆ ತೋರಿದ್ದಾರೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ತಮ್ಮ ಪಠ್ಯ ಪರಿಷ್ಕೃತ ಪುಸ್ತಕದಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳದ ಕೆಲವು ಸಾಹಿತಿಗಳು ಇಲ್ಲದೆ ಇರುವ ಪಠ್ಯವನ್ನು ಕೈ ಬಿಡುವಂತೆ ಪತ್ರ ಬರೆದು ಪೇಚಿಗೆ ಸಿಲುಕಿದಂತಾಗಿದೆ. ಪಠ್ಯ ಕೈಬಿಡಿ ಎಂದು ಪತ್ರ ಬರೆಯುವ ಮುನ್ನವೇ 7 ಸಾಹಿತಿಗಳ ಪಠ್ಯವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಕೈ ಬಿಟ್ಟಿತ್ತು. ಈ ಹಿಂದೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿ ಏಳು ಮಂದಿ ಹಿರಿಯ ಸಾಹಿತಿಗಳ ಪಠ್ಯ ಇತ್ತು. ತಮ್ಮ ಪಠ್ಯ ಕೈ ಬಿಟ್ಟಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಮುನ್ನವೇ ಪಠ್ಯ ವಾಪಸ್‍ ಗೆ ಸಮರ ಸಾರಿದ್ದರು. ತಮ್ಮ ಪಠ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಸಾಲು ಸಾಲು ಪತ್ರ ಬರೆದು ಪಠ್ಯ ವಾಪಸ್‍ ಗೆ ಆಗ್ರಹಿಸಿದ್ದೇಕೆ?…

Read More

ಗುಬ್ಬಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತಿಪಟೂರು ಮನೆ ಮೇಲೆ ಕಾಂಗ್ರೆಸ್ ಪಕ್ಷದ ಎನ್  ಎಸ್  ಯು ಐ ಘಟಕ ದಾಳಿ ಮಾಡಿ ಬೆಂಕಿ ಹಚ್ಚಲು ಮುಂದಾಗಿದ್ದು ಖಂಡನೀಯ. ಈ ಘಟನೆಗೆ ಕಾರಣರಾದ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕ  ಗುರುವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ಎನ್ ಎಸ್ ಯು ಐ ಘಟಕದ ದುರ್ವತನೆ ಖಂಡಿಸಿ ಧರಣಿ ನಡೆಸಿದರು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನ ಈ ಘಟಕ ಬೇರೆ ಜಿಲ್ಲೆಯಿಂದ ರೌಡಿಗಳನ್ನು ಕರೆಸಿ ಶಿಕ್ಷಣ ಸಚಿವರ ಮನೆಗೆ ಬೆಂಕಿ ಇಡುವ ಕುತಂತ್ರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ ಕೆಟ್ಟ ನಡವಳಿಕೆ ಎನಿಸಿದೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿದರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ ಮಾತನಾಡಿ ಧರಣಿ ಮಾಡುವ ನೆಪದಲ್ಲಿ ಸಚಿವರ ಮನೆ ಮೇಲೆ ದಾಳಿ ಮಾಡಿದ್ದು ಖಂಡನೀಯ.…

Read More

ಸರಗೂರು: ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಿರುವ ಆರೋಪ  ಕೇಳಿ ಬಂದಿದೆ. ಗುರುವಾರ ಈ ಘಟನೆ ನಡೆದಿದ್ದು, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ವಿನಾಯಕ ಪ್ರಸಾದ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಮುಖಂಡ ಹಾಗೂ ಪಟ್ಟಣ ಪಂಚಾಯತಿ ಸದಸ್ಯೆ ಉಮಾ ಪತಿ ರಾಮು ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಪಂಚಾಯತಿ ಮುಖ್ಯ ಅಧಿಕಾರಿ ಸತೀಶ್ ಅವರ ಹತ್ತಿರ ವಾರ್ಡ್ ಸಮಸ್ಯೆ ಬಗ್ಗೆ ರಾಮು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯ ಶಿವಕುಮಾರ್, ಅಧ್ಯಕ್ಷೆ ಪತಿ ಶ್ರೀನಾಥ್ ಎಂಬುವವರು ಏಕಾಏಕಿ ರಾಮು ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ  ಗಾಯಾಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಗಲಾಟೆ ಮಾಡಿಕೊಂಡ ಎಲ್ಲರೂ ಕೂಡ ಬಿಜೆಪಿ ಪಕ್ಷದವರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ವರದಿ: ಚಂದ್ರ ಹಾದನೂರು…

Read More

ಚಿತ್ರದುರ್ಗ: ಕಳೆದು ಹೋಗಿದ್ದ 30 ಸಾವಿರ ರೂಪಾಯಿ ಬೆಲೆಯ ಆಂಡ್ರಾಯ್ಡ್ ಮೊಬೈಲ್ ನ್ನು ಪೊಲೀಸರು  ಆಟೋ ಚಾಲಕನಿಗೆ ಹಿಂದಿರುಗಿಸಿದ ಘಟನೆ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ನಡೆದಿದೆ. ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಪಾಲವ್ವನಹಳ್ಳಿ ಗ್ರಾಮದ ವಾಸಿ ದಶರಥ ಎಂಬವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು ಕಷ್ಟಪಟ್ಟು ಸಂಪಾದಿಸಿದ 30 ಸಾವಿರ ರೂಪಾಯಿಯಲ್ಲಿ ಅಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದರು. ಆದರೆ, ಬುಧವಾರ ಚಿತ್ರದುರ್ಗ ದಿಂದ ಹಿರಿಯೂರು ನಗರಕ್ಕೆ ಬರುತ್ತಿದ್ದ ವೇಳೆ ಅವರ ಮೊಬೈಲ್ ಕಳೆದು ಹೋಗಿತ್ತು. ಈ ಸಂಬಂಧ ಅವರು ಹಿರಿಯೂರು ನಗರ ಪೋಲಿಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾರೆ. ಈ ವೇಳೆ ಅವರ ಮೊಬೈಲ್ ಪೊಲೀಸರ ವಶದಲ್ಲಿರುವುದು ತಿಳಿದು ಬಂದಿದೆ. ದಶರಥ ಅವರ ಮೊಬೈಲ್ ಮಹಿಳೆಯೊಬ್ಬರಿಗೆ ಬಿದ್ದು ಸಿಕ್ಕಿತ್ತು.  ಅದನ್ನು ಅವರು ಪೊಲೀಸರಿಗೆ  ಹಸ್ತಾಂತರಿಸಿದ್ದರು. ಇದರಿಂದಾಗಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಯುವಕ ನಿಟ್ಟುಸಿರು ಬಿಟ್ಟಿದ್ದು, ದೂರು ದಾಖಲಿಸಲು ಆಗಮಿಸುವ ವೇಳೆಯೇ ತನ್ನ ಮೊಬೈಲ್ ಕೈ ಸೇರಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ತಮ್ಮ…

Read More

ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ನಾಳೆ ವರದಿ ನೀಡಲಿದ್ದು, ವರದಿಯನ್ನಾಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಗಳಲ್ಲಿ ಅಳವಡಿಸಿರುವ ಕೆಲ ಪಾಠಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ, ಶಿಕ್ಷಣ ಸಚಿವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ನಾಳೆ ವರದಿ ನೀಡುವರು ಎಂದರು.ಕೆಲ ಸ್ವಾಮೀಜಿಗಳು, ಶಿಕ್ಷಣ ತಜ್ಞರೂ ಸಹ ತಮಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.ಕೆಲ ಸಾಹಿತಿಗಳು ತಮ್ಮ ಪಠ್ಯಗಳನ್ನು ಶಾಲಾ ಪಠ್ಯದಿಂದ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲದ್ದಕ್ಕೂ ಒಂದು ತೆರೆ ಬೀಳುತ್ತದೆ. ನಾಳೆಯೇ ಶಿಕ್ಷಣ ಸಚಿವರು ವರದಿ ನೀಡುತ್ತಾರೆ ಎಂದರು. ಹಿಜಾಬ್ ಮತ್ತು ಲವ್‌ಜಿಹಾದ್‌ಗಳಿಗೆ ತೆರೆ ಎಳೆಯಲು ಕಾನೂನುಗಳನ್ನು…

Read More

ಮಾದಕವಸ್ತು, ಅಫೀಮು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮನೊಬ್ಬನನ್ನು ಬಂಧಿಸಿರುವ ಮಲ್ಲೇಶ್ವರಂ ಪೊಲೀಸರು700 ಗ್ರಾಂ ಅಫೀಮು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಮುದ್ದನ ಪಾಳ್ಯದ ಚರಾಂ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ವಿನಾಯಕ್ ಜೋಷಿ ಅವರು ತಿಳಿಸಿದ್ದಾರೆ.ರಾಜಸ್ತಾನದಿಂದ ೫ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಆರೋಪಿಯು ಪೀಣ್ಯಾದ ಎಲೆಕ್ಟ್ರಿಕ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹೆಚ್ಚಿನ ಹಣದಾಸೆಗೆ ರಾಜಸ್ತಾನದಿಂದ ಅಫೀಮನ್ನು ರೈಲಿನಲ್ಲಿ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ಯಶವಂತಪುರ, ಮಲ್ಲೇಶ್ವರಂ ಸುತ್ತಮುತ್ತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ.ಮಲ್ಲೇಶ್ವರಂ ೧೮ನೇ ಕ್ರಾಸ್‌ನ ಆಟದ ಮೈದಾನದ ಬಳಿ ಆರೋಪಿಯು ಅಫೀಮು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಆರೋಪಿ ಬಳಿ 200ಗ್ರಾಂ ಅಫೀಮು ದೊರೆತ್ತಿದ್ದು, ಹೆಚ್ಚಿನ ವಿಚಾರಣೆಯಲ್ಲಿ ಆತ ಮುದ್ದನಪಾಳ್ಯದ ಮನೆಯಲ್ಲಿ500 ಗ್ರಾಂ ಅಫೀಮು ಬಚ್ಚಿಟ್ಟಿರುವ ಮಾಹಿತಿ ನೀಡಿದ್ದು, ಅದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು. ವರದಿ…

Read More