Subscribe to Updates
Get the latest creative news from FooBar about art, design and business.
- ಗುರು ಪೂರ್ಣಿಮಾ: ಗುರು ಶಿಷ್ಯರ ಬಾಂಧವ್ಯ ಗೌರವದ ಆಚರಣೆ: ಮಹದೇವಸ್ವಾಮಿಗಳು
- ಶರಣ ಹಡಪದ ಅಪ್ಪಣ್ಣರನ್ನು ನಿಜಸುಖಿ ಎಂದು ಬಸವಣ್ಣ ಕರೆಯುತ್ತಿದ್ದರು: ವೈ.ಡಿ.ರಾಜಣ್ಣ
- ಪೊಲೀಸರು ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ನೀಡುವಲ್ಲಿ ಅಸಹಾಯಕರು: ಸಬ್ ಇನ್ಸ್ಪೆಕ್ಟರ್ ಆರ್. ಕಿರಣ್
- ಪಾವಗಡದಲ್ಲಿ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಮಹಾ ಮುಷ್ಕರದ ಅಂಗವಾಗಿ ರಸ್ತೆಗಿಳಿದ ಕಾರ್ಮಿಕರು
- ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ
- ಶಾಸಕ ಅನೀಲ್ ಚಿಕ್ಕಮಾಧು ವಿರುದ್ಧ ಅಪಪ್ರಚಾರಕ್ಕೆ ಮುಖಂಡ ಶ್ರೀನಿವಾಸ ತಿರುಗೇಟು!
- ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು: ಎಚ್.ಸಿ. ಶೋಭಾ
- ಸರಗೂರು: ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಹೆಗ್ಗನೂರು ಸುಧೀರ್ ಆಯ್ಕೆ
Author: admin
ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯ ದಲಿತ ಕಾಲೋನಿಯ ಹನುಮಂತರಾಯಪ್ಪ ಎಂಬ ಮೃತ ವ್ಯಕ್ತಿಯ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ತಹಸೀಲ್ದಾರ್ ನಹಿದಾ ಜಮ್ ಜಮ್ ಭೇಟಿ ನೀಡಿ ಸ್ಪಂದಿಸಿದ್ದಾರೆ. 100ಕ್ಕೂ ಅಧಿಕ ದಲಿತ ಕುಟುಂಬ ಇರುವಂತಹ ಬೈರೇನಹಳ್ಳಿಗೆ ಗ್ರಾಮದಲ್ಲಿ ಸ್ಮಶಾನವೇ ಮರೀಚಿಕೆಯಾಗಿದೆ. 50ಕ್ಕೂ ಹೆಚ್ಚು ಭಾರಿ ಅರ್ಜಿ ನೀಡಿದ್ದ ದಲಿತರಿಗೆ ಸ್ಮಶಾನದ ಜಾಗ ನಿಗದಿ ಪಡಿಸದೆ ಕೊರಟಗೆರೆ ತಾಲ್ಲೂಕು ಆಡಳಿತ ಜಾಣ ಮೌನವಹಿಸಿದೆ. 100ಕ್ಕೂ ಹೆಚ್ಚು ಜನ ದಲಿತ ಕುಟುಂಬ ವಾಸವಿರುವ ಬೈರೇನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ-ಕಟ್ಟೆ, ರಸ್ತೆಬದಿ, ಸರಕಾರಿ ಹಳ್ಳದಲ್ಲಿ ಮಣ್ಣು ಮಾಡಬೇಕಿದೆ ಮಾಡುವ ಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದು, ತಡರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ ಪರಿಶಿಷ್ಟ ಜಾತಿಯ ಸಮುದಾಯದ ಹನುಮಂತರಾಯಪ್ಪ(55) ಎಂಬವರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಬೈರೇನಹಳ್ಳಿ ಗ್ರಾಮದ ಲೇ.ತಿಮ್ಮಯ್ಯ ಎಂಬವರ ಮಗನಾದ ಹನುಮಂತರಾಯಪ್ಪಅನಾರೋಗ್ಯ ಹಿನ್ನಲೆ ಬುಧವಾರ ತಡರಾತ್ರಿ…
ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಅಳವಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಬೆಂಗಳೂರಿನ ಜೆ. ಜಗನ್ ಕುಮಾರ್, ವಿ. ಪರಮೇಶ್ ಎಂಬುವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನಷ್ಟೇ ವಿಚಾರಣೆಗೆ ದಿನಾಂಕ ನಿಗದಿಯಾಗಬೇಕಿದೆ. ದೇಶದ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿದ್ದವರು. ಸ್ವತಂತ್ರ ಭಾರತದ ಪ್ರಥಮ ಕೇಂದ್ರ ಕಾನೂನು ಸಚಿವರು. 1920ರಿಂದಲೂ ಸಂವಿಧಾನ ರಚನೆಯಲ್ಲಿ ಅವರು ನಿರ್ವಹಿಸುತ್ತಾ ಬಂದ ಪಾತ್ರ ಮಹತ್ತರವಾದದ್ದು. ಅವರ ಸಂಘಟನೆ ಮತ್ತು ನಾಯಕತ್ವದ ಕೌಶಲ್ಯಕ್ಕೆ ಸಾಟಿಯಿಲ್ಲ. 1990ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ ಗಾಂಧೀಜಿ ಅವರಿಗೆ ದೊರೆತ ಪ್ರಾಧಾನ್ಯತೆ ಅಂಬೇಡ್ಕರ್ ಅವರಿಗೆ ಲಭಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಂವಿಧಾನ ರಚಿಸಿದ ಅಂಬೇಡ್ಕರರ ಭಾವಚಿತ್ರ ಯಾವುದೇ ಕೋರ್ಟ್ ಹಾಲ್‌ನಲ್ಲಿ ಕಾಣಿಸದಿರುವುದು ದುರಾದೃಷ್ಟಕರ. ಈ ನಿಟ್ಟಿನಲ್ಲಿ ಅವರ…
ಬೆಂಗಳೂರು: ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು. ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ವರದಿ ಸಲ್ಲಿಸಲು ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು. ಅಲ್ಲದೇ ಈ ಸಂಸ್ಥೆಗಳ ಸಾಮರ್ಥ್ಯ ಗುರುತಿಸಿ, ಅವುಗಳ ದಕ್ಷ ಬಳಕೆಗೆ ಮಾರ್ಗೋಪಾಯಗಳನ್ನು ಶಿಫಾರಸು ಮಾಡುವಂತೆ ತಿಳಿಸಲಾಗಿದೆ. ಹಾಗೂ ಸಾರಿಗೆ ಸಂಸ್ಥೆಗಳ ಆಸ್ತಿಗಳಿಂದ ಆದಾಯೋತ್ಪನ್ನ, ಸಂಸ್ಥೆಯ ವರ್ಕ್ ಶಾಪ್ ಗಳ ಸದ್ಬಳಕೆ, ಮಾನವ ಸಂಪನ್ಮೂಲದ ದಕ್ಷ ಬಳಕೆ, ಸಂಸ್ಥೆಗಳ ಸೇವೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಬಳಕೆ ಮೊದಲಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಾವು ಕೈಗೊಂಡ ಕ್ರಮಗಳ ಕುರಿತು ಎಂ.ಆರ್. ಶ್ರೀನಿವಾಸಮೂರ್ತಿ ಮಾಹಿತಿ…
ಕೊಡಗು: ಇಬ್ಬರು ಮಹಿಳೆಯರುನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿರುವ ಘಟನೆ ಕೊಡುಗು ಜಿಲ್ಲೆಯ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ಸಹೋದರಿಯರಾದ 78 ವರ್ಷದ ಜಾನಕಿ ಮತ್ತು 68 ವರ್ಷದ ಅಮ್ಮಕ್ಕಿ ವಾಸವಿದ್ದರು. ಇವರ ಮನೆಗೆ ಸೋಮವಾರ ತಡರಾತ್ರಿ ನಾಲ್ವರು ಕಳ್ಳರು ನುಗ್ಗಿ ಇಬ್ಬರು ವಯೋವೃದ್ಧರನ್ನು ಮನೆಯೊಳಗೆ ಕಟ್ಟಿ ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ 2.5 ಲಕ್ಷ ರೂ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಂತರ ಕೈಗೆ ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡು ಬೆಂಗಳೂರಿನಲ್ಲಿರುವ ಸಹೋದರ, ನಿವೃತ್ತ ನ್ಯಾಯಧೀಶ ಬೋಪಯ್ಯ ಅವರಿಗೆ ಅಜ್ಜಿಯರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಬೋಪ್ಪಯ್ಯ ನಾಪೋಕ್ಲು ಪೊಲೀಸರಿ ತಿಳಸಲಾಗಿದ್ದು, ಘಟನೆಯಲ್ಲಿ ಸಹೋದರಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ನಾಪೋಕ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಆರೋಪಿಗಳು ಕೆಲವು ದಿನಗಳಿಂದ ಹೊಂಚು ಹಾಕಿ ಮನೆಯ ಬಗ್ಗೆ ಮಾಹಿತಿ…
ಬೆಂಗಳೂರು : ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ಸಂಕಷ್ಟ ತೀವ್ರವಾಗಿ ಕಾಡುತ್ತಿದೆ. ಮೇಲ್ನೋಟ ಎಲ್ಲವೂ ಓಕೆ ಓಕೆ ಎನ್ನುತ್ತಿರುವ ಬೊಮ್ಮಾಯಿ, ಸಚವಾಕಾಂಕ್ಷಿಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದಾರೆ. ಮಂತ್ರಿಗಿರಿ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದಿರುವಂತೆ ಕಾಣುತ್ತಿರುವ ಬೊಮ್ಮಾಯಿ, ಇಂದು ದೆಹಲಿ ದಂಡಯಾತ್ರೆ ಮಾಡಲು ನಿರ್ಧರಿಸಿದ್ದರಂತೆ. ಆದ್ರೆ ಕೆಲ ಸಂಸದರ ಸೂಚನೆ ಮೇರೆಗೆ ಸೋಮವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದಾರಂತೆ. ಸದ್ಯ ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಬಿಜೆಪಿ ಬಿಗ್ ಬಾಸ್ ಗಳು ಬೊಮ್ಮಾಯಿಗೆ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪಟ್ಟು ಬಿಡದ ಆಕಾಂಕ್ಷಿಗಳು.. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತತ್ವಕ್ಕೆ ಬಂದಾಗಿನಿಂದಲೂ ಸಚಿವಾಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಅದರಲ್ಲೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ, ಎಂ.ಪಿ.ರೇಣುಕಾಚಾರ್ಯ ಸರ್ಕಾರ ರಚನೆಯಾಗಿನಿಂದಲೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಲೇ ಇದ್ದಾರೆ. ಇನ್ನೇನು ರಾಜ್ಯದ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಈ ಸಂದರ್ಭದಲ್ಲಿ ರೇಣುಕಾಚಾರ್ಯ, ನನಗೆ ಮಂತ್ರಿ…
ಪಾವಗಡ: ತಾಲೂಕು ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗುಜ್ಜನಡು ಪಂಚಾಯಿತಿ ಸಿ.ಎಚ್.ಪಾಳ್ಯ ಚಿನ್ನಮ್ಮನ ಹಳ್ಳಿಯಿಂದ ಕಾಟಯ್ಯನ ಗುಂಡ್ಲು ರಸ್ತೆ ತೀವ್ರ ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆಗೀಡಾಗಿದ್ದಾರೆ. ವಾಜಪೇಯಿ ಕಾಲದ ಆಗಿರುವ ರಸ್ತೆ ಇದಾಗಿದ್ದು, ಆ ಬಳಿಕ ಯಾವ ಎಂಎಲ್ ಎ, ಎಂಪಿಗಳು ಅಥವಾ ಇತರ ಯಾವ ರಾಜಕಾರಣಗಳೂ ಗ್ರಾಮದ ಈ ರಸ್ತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ರಸ್ತೆಯಲ್ಲಿ ಕೆಲವೇ ಕೆಲವು ಬಸ್ ಗಳು ಸಂಚರಿಸುತ್ತವೆ. ಬಸ್ ಗಳು ಸಂಚರಿಸುತ್ತಿರುವ ವೇಳೆ ಇತರ ವಾಹನಗಳಿಗೆ ಸೈಡ್ ಬಿಡಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಗಳಿವೆ. ಈ ರಸ್ತೆಯಲ್ಲಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳಲು ಸಾಧ್ಯವಾಗದಂತಾಗಿದೆ ಎಂದು ಗ್ರಾಮಸ್ಥರಾದ ಜೈರಾಮ್, ರಘುನಾಥ್ ಸುನಿಲ್, ಕುಮಾರ್ ಅಳಲು ತೋಡಿಕೊಂಡಿದ್ದಾರೆ. ಈ ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಜನರು ಪೆಮ್ಮನಹಳ್ಳಿ ಮಾವಿನಮರ ಹಾದಿಯಾಗಿ ಪಾವಗಡಕ್ಕೆ ಹೋಗುವಂತಾಗಿದೆ. ರಸ್ತೆ ಸುಸ್ಥಿತಿಯಲ್ಲಿರದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕಾಮಗಾರಿ ನಡೆಸಬೇಕು ಎಂದು…
ಕನ್ನಡ ಚಿತ್ರರಂಗದಿಂದ ಕೆಲ ವರ್ಷಗಳ ಕಾಲ ಕಾಣೆಯಾಗಿದ್ದ ಶ್ರೀನಗರ ಕಿಟ್ಟಿ ಈಗ ಮತ್ತೊಮ್ಮೆ ಕಂಬ್ಯಾಕ್ ಮಾಡಿದ್ದಾರೆ. ಹಿಂದಿನಂತೆ ಲವರ್ ಬಾಯ್ ಅವತಾರವನ್ನ ತಾಳದೆ, ಭಯಾನಕ ಪಾತ್ರದಲ್ಲಿ ಈ ಭಾರಿ ಕಾಣಿಸಿಕೊಂಡಿದ್ದಾರೆ. 2017 ತೆರೆಕಂಡಿದ್ದ ಸಿಲಿಕಾನ್ ಸಿಟಿ ಚಿತ್ರದ ನಂತರ ಶ್ರೀನಗರ ಕಿಟ್ಟಿ ಕಣ್ಮರೆಯಾಗಿದ್ದರು, ಈಗ “ಗೌಳಿ” ಎನ್ನುವ ವಿಭಿನ್ನ ಸಿನಿಮಾ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಿಟ್ಟಿ ಅಭಿನಯದ ಹೊಸ ಚಿತ್ರ ಗೌಳಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ, ಸ್ನೇಹಿತರಾದ ಗೋಲ್ಡನ್ ಸ್ಟಾರ್ ಗಣೇಶ್ ದುನಿಯಾ ವಿಜಯ್ ನೆನಪಿರಲಿ ಪ್ರೇಮ್ ಹಾಗು ಹಲವರು ಟೀಸರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಗೌಳಿ ಚಿತ್ರವು ನೈಜ ಕಥೆ ಆಧಾರಿತ ಚಿತ್ರ ಎಂದು ಹೇಳಲಾಗುತ್ತಿದೆ. ಗೌಳಿ ಸಮುದಾಯವನ್ನ ಸ್ಪೂರ್ತಿಯಾಗಿ ಪಡೆದು ಚಿತ್ರ ನಿರ್ಮಿಸಿದ್ದಾರೆ ಎನ್ನುವುದು ಟೀಸರ್ ನಲ್ಲಿ ಕಾಣಬಹುದು. ಇಷ್ಟು ದಿನ ಮುದ್ದು ಮುಖ ಇಟ್ಟುಕೊಂಡು ನಟಿಸುತ್ತಿದ್ದ ಕಿಟ್ಟಿ ಈಗ ಗಡ್ಡ ಜಡೆ ಬಿಟ್ಟು ನೊಡುವವರಿಗೆ ಭಯವಾಗವಂತಹ ರೀತಿ ಕಾಣಿಸಿಕೊಂಡಿದ್ದಾರೆ. ರಾ ಅಂಡ್ ರಸ್ಟಿಕ್…
ಥಾಣೆ: ಪತಸಂಚಲನದ ವೇಳೆ ಕುಸಿದು ಬಿದ್ದು ಪೋಲಿಸ್ ಕಾನ್ ಸ್ಟೇಬಲ್ ಸಾವನ್ನಪ್ಪಿದ್ದಾರೆ ಘಟನೆ ಇಲ್ಲಿ ನಡೆದಿದೆ ನಡೆದಿದೆ. ನಗರ ಪೊಲೀಸ್ ಕ್ವಿಕ್ ರೆಸ್ಪಾನ್ಸ್ ಟೀಮ್ ನಲ್ಲಿ ಕಾರ್ಯನಿರ್ವಹಿಸುತ್ತದ್ದ ಮಹೇಶ ಮೋರೆ ಮೃತಪಟ್ಟ ಪೇದೆ. ಇಂದು ಬೆಳಗ್ಗೆ 7:30ರ ಸುಮಾರಿಗೆ ಪರೇಡ್ ನಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನ ಥಾಣೆ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ದಿನನಿತ್ಯ ಬೆಳಗಿನ ಪರೇಡ್ ನಡೆಯುವುದು ವಾಡಿಕೆ ಆದರಂತೆ ಇಂದು 7 ಗಂಟೆಗೆ ಸಿಬ್ಬಂ ಬಂದಿದ್ದರು. ಕೆಲ ಹೊತ್ತಿನಲ್ಲೇ ಈ ಘಟನೆ ನಡೆದಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ನಾಲ್ಕು ಡಿಜಿಟ್ ಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ರೇಷ್ಮೆಗೂಡಿನ ದರ ಏರಿಕೆಯಾಗುತ್ತಲ್ಲಿದ್ದು, ಒಂದು ಕೆಜಿ ರೇಷ್ಮೆಗೂಡಿನ ಒಂದು ಸಾವಿರ ರೂಪಾಯಿ ಗಡಿದಾಟಿದೆ. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ರೇಷ್ಮೆ ಗೂಡ ಹರಾಜಾಗಿದ್ದು, ಒಂದು ಕೆಜಿ ರೇಷ್ಮೆಗೂಡು ಬರೋಬ್ಬರಿ 1043 ರೂಪಾಯಿಗೆ ಮಾರಾಟವಾಗಿದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ, ಮಾರುಕಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ, ಇ- ಪೆಮೆಂಟ್ ವ್ಯವಸ್ಥೆ ಜಾರಿ ಸೇರಿದಂತೆ ಸಚಿವ ಡಾ.ನಾರಾಯಣಗೌಡ ಅವರು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳ ಪರಿಣಾಮವಾಗಿ ಇಂದು ದಾಖಲೆ ದರಕ್ಕೆ ರೇಷ್ಮೆ ಗೂಡು ಮಾರಾಟವಾಗುವ ಮೂಲಕ ರೈತರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ.ರೇಷ್ಮೆ…
ಮೈಸೂರು: ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅಗೌರವ ತೋರಿದ ರಾಯಚೂರು ಜಿಲ್ಲೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಮಾನಸಗಂಗೋತ್ರಿಯಲ್ಲಿರುವ ಶತಮಾನೋತ್ಸವ ಗಡಿಯಾರ ಆವರಣದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಗೌರವ ತೋರಿರುವುದು ಖಂಡನೀಯ. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮತ್ತು ಸೇವೆಯಿಂದ ವಜಾಗೊಳಿಸಬೇಕು ಎಂದು ಘೋಷಣೆ ಕೂಗಿದರು. ವಿವಿ ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಎಸ್.ಮರಿದೇವಯ್ಯ ಮಾತನಾಡಿ, ನ್ಯಾ ಮಲ್ಲಿಕಾರ್ಜುನ ಗೌಡ ಸಂವಿಧಾನ ವಿರೋಧಿ ಕೃತ್ಯ ಎಸಗಿದ್ದಾರೆ. ಅಂಬೇಡ್ಕರ್ ರವರ ಭಾವಚಿತ್ರವಿದ್ದಲ್ಲಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಉದ್ಥಟತನದಿಂದ ವರ್ತಿಸಿದ್ದಾನೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೋರಾಟ ನಿರತ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ದಾಳಿ ಮಾಡಿ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡಿರುವುದು ಖಂಡನೀಯ. ಪ್ರತಿಭಟನೆ…