Author: admin

ತುಮಕೂರು: ಪಟ್ಟಣದ ಅಶೋಕ ನಗರದಲ್ಲಿರುವ ಮಹೇಶ್ ಪಿ.ಯು ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಹಾಗೂ ಸಂಭ್ರಮದಿಂದ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಆಚರಿಸಿದರು.  ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಪಾಟೀಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ಭಾರತದಲ್ಲಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂವಿಧಾನ ಜಾರಿಗೆ ಬಂದ ಈ ದಿನ ಬಹಳ ವಿಶೇಷವಾಗಿದ್ದು, ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಹಲವು ಪ್ರಮುಖ ನಾಯಕರನ್ನು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿದಂತಹ ಪ್ರತಿಯೊಬ್ಬರು ನಮಗೆ ಸ್ಪೂರ್ತಿಯಾಗಿದ್ದಾರೆ. ಈ ದಿನ ಪ್ರಾಂಶುಪಾಲರಾಗಿ ಧ್ವಜಾರೋಹಣ ಮಾಡಿದ ನನಗೆ ಹೆಮ್ಮೆಯಿದೆ ಎಂದರು. ಉಪನ್ಯಾಸಕ ಶ್ರೀನಿವಾಸ್ ಕಲ್ಲೂರು ಮಾತನಾಡಿ,  ಗಣರಾಜ್ಯೋತ್ಸವ ದಿನವನ್ನು ಭಾರತದ ಪ್ರತಿ ಸರ್ಕಾರಿ ಕಚೇರಿಗಳು, ಇಲಾಖೆಗಳು ಮತ್ತು ಸಂಸ್ಥೆಗಳು, ಹಾಗೂ  ಎಲ್ಲಾ ಶಾಲಾ, ಕಾಲೇಜುಗಳು ಸೇರಿದಂತೆ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ವಿಶೇಷವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಭಾರತದ ಸರ್ವ ಪ್ರಜೆಗೂ ಸಮಾನ ಶಿಕ್ಷಣ, ಸರ್ವರಿಗೂ ಹಕ್ಕುಗಳನ್ನು ನೀಡಿರುವ ಸಂವಿಧಾನ ಜಾರಿಗೆ ತಂದ ಈ ದಿನವನ್ನು…

Read More

ತಿಪಟೂರು:  ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸರಳ ಹಾಗೂ ಸಂಭ್ರಮದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ತಿಪಟೂರು ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ  ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಎನ್.ಸಿ.ಸಿ ತುಕ್ಕಡಿಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ  ಅವರು, ದೇಶದ ಸಮಗ್ರ ಅಭಿವೃದ್ದಿ ಹಾಗೂ ಐಕ್ಯತೆಯ ವಿಷಯದಲ್ಲಿ ಪ್ರತಿಯೊಬ್ಬ ಭಾರತೀಯನು ಸ್ವಾಭಿಮಾನ ಬೆಳಸಿಕೊಳ್ಳಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆಯುತ್ತಿದ್ದರೂ ನಮ್ಮ ನಡುವೆಯೇ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಎಂದರು. ಜಾತಿಯತೆ, ಮಾತಾಂಧತೆ, ಭಯೋತ್ವಾದನೆ, ಬಡತನದಂತೆ ಸಮಸ್ಯೆಗಳನ್ನು ದೇಶ  ಎದುರಿಸುತ್ತಿದ್ದು,  ಪ್ರತಿಯೊಬ್ಬ ಭಾರತೀಯ ತಮ್ಮ ಹಕ್ಕು ಕರ್ತವ್ಯಗಳ ಜವಾಬ್ದಾರಿ ಅರಿತು  ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು .ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದರು. ತಾಲ್ಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಡಿವೈಎಸ್ಪಿ ಸಿದ್ದಾರ್ಥ್ ಗೋಯಲ್, ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಪೌರಾಯುಕ್ತ ಉಮಾಕಾಂತ್, ಬಿಇಒ ಪ್ರಭುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೃಷಿ ಇಲಾಖೆಗಳಲ್ಲಿ ರೈತರು ಸ್ಪ್ಲಿಂಕ್ಲರ್ ( Splinkler ) ಸೆಟ್ ಆಗಲಿ ಮತ್ತೊಂದುಕ್ಕಾಗಲಿ ದಿನನಿತ್ಯ ಅನಾವಶ್ಯಕವಾಗಿ ರೈತರನ್ನು ಅಲೆದಾಡಿಸುತ್ತಿದ್ದು , ಸಂಬಂಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಯನ್ನು ವಿಚಾರಿಸಿದಾಗ ರೇಷ್ಮೆ ಇಲಾಖೆಯ ಅಧಿಕಾರಿ ಸರ್ವೇಶ್ ಬಾವಿ ಕಟ್ಟಿ ಮಾಹಿತಿ ನೀಡಿದರು. ಈಗಾಗಲೇ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಯವರಿಗೆ ನಾವು ಈಗಾಗಲೇ ಕೃಷಿ ಇಲಾಖೆಯಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಳ್ಳಲು ಬರುವಂತಹ ರೈತರ ಸಮಯವನ್ನು ವ್ಯರ್ಥ ಮಾಡಿಸಬೇಡಿ ಎಂದು ಹೇಳಿದ್ದೇವೆ ಎಂದು ಅವರು ಹೇಳಿದರು. ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ದೃಷ್ಟಿಯಿಂದ ರೈತರಿಗೆ ತಾವುಗಳು ಕೃಷಿ ಉಪಕರಣಗಳನ್ನು ನೀಡಬಹುದಾಗಿಯೂ ಸಹ ತಿಳಿಸಿದರು . ಹಾಗೂ ಅದಕ್ಕೆ ಸಂಬಂಧ ಪಟ್ಟಂತ ವಿತರಣ ನಿರಪೇಕ್ಷಣ ಪತ್ರವನ್ನು ಸಹ ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನೀಡಿದಾಗಿಯೂ ಸಹ ಸರ್ವೇಶ್ ಬಾವಿ ಕಟ್ಟಿ ಅವರು ತಿಳಿಸಿದ್ದಾರೆ. ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ)

Read More

1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ. ಅಂಬೇಡ್ಕರ್: ಭಾರತದಲ್ಲಿರುವ 18 ವರ್ಷ ತುಂಬಿದ ಗಂಡು ಮತ್ತು ಹೆಣ್ಣು, ಪ್ರತಿಯೊಬ್ಬರಿಗೆ ಓಟು ಹಾಕುವ ಹಕ್ಕು ಇರಲಿ. ಗಾಂಧೀಜಿ: ನಾನು ಒಪ್ಪುವುದಿಲ್ಲ. ಜಮೀನ್ದಾರರಿಗೆ, ಉದ್ಯಮಿದಾರರಿಗೆ, ಡಿಗ್ರಿ, ಎಂ ಎ ಓದಿರುವವರಿಗೆ ಗಿರಣಿ ಮಾಲಿಕರಿಗೆ, ಓಟ್ ಮಾಡುವ ಹಕ್ಕಿರಲಿ. ಅಸ್ಪೃಶ್ಯರಿಗೆ ಓಟ್ ಮಾಡುವ ತಿಳುವಳಿಕೆ ಇಲ್ಲಾ. ಅವರು ಅನಕ್ಷರಸ್ಥರು ಅವರಿಗೆ ಓಟ್ ಅಗತ್ಯವಿಲ್ಲ. ಬೇಕಾದರೆ ಅವರಿಗಾಗಿ ಶಾಲೆಗಳನ್ನ ತೆಗೆದು ಶಿಕ್ಷಣ ಕೊಡಿ ಮತ್ತು ಅಂಬೇಡ್ಕರ್, ಮಹಿಳೆಯರಿಗಾಗಿ ಓಟಿನಹಕ್ಕು ಕೇಳುತ್ತಿರುವುದು ಹಾಸ್ಯಾಸ್ಪದ. ನಾನು ಇದನ್ನ ಖಡಾಖಂಡಿತವಾಗಿ ವಿರೋಧಿಸುತ್ತೇನೆ. ಅಂಬೇಡ್ಕರ್ : ಓಟ್ ಹಾಕಲು ಸಾಮಾನ್ಯ ತಿಳಿವಳಿಕೆ ಇದ್ದರೆ ಸಾಕು. ಡಿಗ್ರಿ, ಎಂ.ಎ. ಓದಿರುವವರು ಇರಬೇಕೆಂದೆನಿಲ್ಲಾ. ಮೇಲಾಗಿ ಭಾರತದಲ್ಲಿ ಬಹುಸಂಖ್ಯಾತ ಎಸ್ ಸಿ, ಎಸ್ ಟಿ, ಮತ್ತು ಓ ಬಿ ಸಿ ಗಳು ಯಾರೂ ಶಿಕ್ಷಣ ಪಡೆದಿಲ್ಲ . ಇವರಿಗೆ ಧರ್ಮಶಾಸ್ತ್ರದ ಅನುಸಾರವಾಗಿ ಶಿಕ್ಷಣ ಮತ್ತು ಆಸ್ತಿ ಹೊಂದುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ.…

Read More

ಕೊರಟಗೆರೆ : ಯುಕ್ತ  ಕೌಶಲ್ಯ ತರಬೇತಿ ಕೇಂದ್ರದ ವತಿಯಿಂದ ಕೊರಟಗೆರೆ   ತಾಲ್ಲೂಕು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಮಧುಗಿರಿ  ದಿಲೀಪ್,  ಗ್ರಾಮೀಣ ಭಾಗದ ವಿದ್ಯಾರ್ಥಿಗಳು msyep (Multi skill youth empowerment programme) ಪಡೆಯುವ ಮೂಲಕ ಉದ್ಯೋಗಕ್ಕೆ ಸಹಕಾರಿಯಾಗಿದೆ ಎಂದು msyep ತರಬೇತಿಯ ಬಗ್ಗೆ ಅರಿವು ಮೂಡಿಸಿದರು. ತರಬೇತಿಯನ್ನು ಪಡೆದುಕೊಳ್ಳಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಒಂದು ಸುವರ್ಣ ಅವಕಾಶ. ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್ ರವರು ವಿದ್ಯಾರ್ಥಿಗಳಿಗೆ msyep ತರಬೇತಿಯನ್ನು ನಮ್ಮ ಕಾಲೇಜಿನಲ್ಲಿ ನೀಡಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ  ಮುಖ್ಯ ಕಾರ್ಯಕ್ರಮ ಅಯೋಜಕರಾದ ದೀಪಿಕಾ  ವೆಂಕಟೇಶ್ ರವರು ತರಬೇತಿ ಯ ಅವಧಿ ಮತ್ತು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಉಪವಿಭಾಗ ಆಯೋಜಕರು ತನುಜ, ಪೂಜಾ ಸಹನಾ, ಲೀಲಾವತಿ ಹಾಜರಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಂಘ ಸಹಕಾರ ಸಂಘದ ಅಧ್ಯಕ್ಷರಾದ…

Read More

ಕೊರಟಗೆರೆ: ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಹಶೀಲ್ದಾರ್ ನಾಹೀದ  ಜಮ್ ಜಮ್  ಮೊದಲ ಬಾರಿಗೆ ಮತ ಚಲಾಯಿಸುವ  18 ವರ್ಷ ತುಂಬಿದ ಮತದಾರರಿಗೆ  ಗುರುತಿನ ಚೀಟಿ ವಿತರಿಸಿದರು. ಬಳಿಕ  ಮಾತನಾಡಿದ ಅವರು,   ನಾಡಿನ ಭವಿಷ್ಯವೇ ವಿದ್ಯಾರ್ಥಿಗಳು, ನೀವು ಹಾಕುವ ಮತಕ್ಕೆ ಅಮೂಲ್ಯವಾದ ಭವಿಷ್ಯವಿದೆ. ಆದ್ದರಿಂದ ಯಾವ ಅಭ್ಯರ್ಥಿ ನಿಮಗೆ ಸೂಕ್ತ ಎಂಬುದನ್ನು ಯೋಚಿಸಿ ಮತ ನೀಡಿ,  ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವುದು ನಮ್ಮೆಲ್ಲರ ಗುರಿಯಾಗಿರಬೇಕು ಎಂದು ಅರಿವು ಮೂಡಿಸಿದರು. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸುಮಾರು 30 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ನೆರವಿಗೆ ಕೂಡಲೇ ಸರ್ಕಾರ ಧಾವಿಸಬೇಕು ಎಂದು ನಗರದ ಮಾಜಿ ಶಾಸಕ ರಫೀಕ್ ಅಹಮದ್ ಸರ್ಕಾರವನ್ನು ಆಗ್ರಹಿಸಿದರು. ನಗರದ ಜಿಲ್ಲಾಧಿಕಾರಿಗಳ ಎದುರು ಕಚೇರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಅತಿಥಿ ಉಪನ್ಯಾಸಕರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದು, ಕನಿಷ್ಠ ಮಟ್ಟದ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಸರ್ಕಾರಕ್ಕೆ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಹಾಗೂ ಸೇವಾ ವಿಲೀನಿಕರಣಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರೂ, ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳದೆ, ಅವರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದು, ಏಳೂವರೆ ಸಾವಿರ ಜನ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ಗಾದೆಯಂತೆ ಸರಕಾರ ಅತಿಥಿ ಉಪನ್ಯಾಸಕರ ಹಿತರಕ್ಷಣೆಯಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಕೂಡಲೇ ಸರ್ಕಾರ ಇವರಿಗೆ ಸೇವಾ…

Read More

ತುರುವೇಕೆರೆ: ಬೇರೆ ಬೇರೆ ಊರುಗಳಿಂದ  ಪಟ್ಟಣಕ್ಕೆ  ಬರುವ ಸೀಟ್ ಆಟೋಗಳ ಕಿರಿಕಿರಿ ತಪ್ಪಿಸುವಂತೆ  ಹಾಗೂ ಬಸ್ ಹತ್ತುವ ಪಾದಚಾರಿಗಳು ಅನುಭವಿಸುವ ತೊಂದರೆ ಮತ್ತು ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ತೊಂದರೆ ತಪ್ಪಿಸುವಂತೆ  ವಿವಿಧ ಸಂಘಟನೆಗಳು ಜಂಟಿಯಾಗಿ ಪಟ್ಟಣ ಪಂಚಾಯಿತಿ, ಅಧ್ಯಕ್ಷರಿಗೆ ಮನವಿ ಸಲ್ಲಿಸಿತು. ಕಾರ್ಮಿಕ ಸಂಘಟನೆಗಳು, ಬೀದಿಬದಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘ , ವ್ಯಾಪಾರಿಗಳ ಸಂಘ ನಿಯೋಗ ಪಟ್ಟಣದ ಮುಖ್ಯ ರಸ್ತೆಯಲ್ಲಿ  ಮೆರವಣಿಗೆ  ನಡೆಸಿ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಮಾಯಸಂದ್ರ ವೃತ್ತ, ದಬ್ಬೆಘಟ್ಟ ವೃತ್ತ ,ಬಾಣಸಂದ್ರ ರಸ್ತೆ, ತಿಪಟೂರು ರಸ್ತೆಯಲ್ಲಿ, ನಿರಂತರವಾಗಿ ಪೊಲೀಸರನ್ನು ನಿಯೋಜನೆ ಮಾಡಿಸಿಕೊಡುವಂತೆ  ಹಾಗೂ ಸಾಮಾನ್ಯ ಜನರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯೆಯೆ ನೀಡಿದ, ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಿದಾನಂದ್  ಈ ಬಗ್ಗೆ ಸಭೆ ಕರೆದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳು ವಂತೆ ಸೂಚನೆ  ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿ. ಐ. ಟಿ. ಯು.…

Read More

ಹೆಚ್.ಡಿ.ಕೋಟೆ/ಸರಗೂರು: ನೊಂದವರಿಗೆ ಶ್ರಮದಾನದ ಹಣದಿಂದ ಸಹಾಯ ಹಸ್ತ ಚಾಚುವ ಸರ್ವ ಧರ್ಮ ಸಮಾಜ ಸೇವೆ ಟ್ರಸ್ಟ್ ಜಿಲ್ಲೆ ಹಾಗೂ ರಾಜ್ಯದಲ್ಲೂ ಕಾರ್ಯಾಚರಿಸಲಿ ಎಂದು ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್  ಹಾರೈಸಿದರು. ಪಟ್ಟಣದ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಸರ್ವ ಧರ್ಮ ಸಮಾಜ ಸೇವಾ ಟ್ರಸ್ಟ್ ನ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಬಡವರಿಗೆ ನೆರವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು  ನನ್ನ ಕುಟುಂಬಕ್ಕೆಷ್ಟೇ ಸೀಮಿತ ಎಂಬ ಕಾಲದಲ್ಲಿ ಸರ್ವಧರ್ಮಿಯರನ್ನೂ ಒಗ್ಗೂಡಿಸಿ ರಚಿಸಿರುವ ಈ ಟ್ರಸ್ಟ್ , ನೊಂದವರಿಗೆ ಧ್ವನಿಯಾಗಿದೆ. ರಾಜಕೀಯ ರಹಿತವಾಗಿ ಜಾತ್ಯತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಬುದ್ಧ ಮಾತನಾಡಿ, ತಾಲ್ಲೂಕಿನಲ್ಲಿ ಎರಡು ವರ್ಷ ಕಾಲ ಸಮಾಜಮುಖಿಯಾಗಿರುವ ಟ್ರಸ್ಟ್ ಗೆ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಿ ಕೊಡಬೇಕು ಎಂದು ಕೋರಿದರು. ಟ್ರಸ್ಟ್  ಸಂಸ್ಥಾಪಕರಾದ ಕೃಷ್ಣರಾಜು ಹಳೆಹೆಗ್ಗುಡಿಲು ಅವರು  ಟ್ರಸ್ಟ್  ನ ಕಾರ್ಯನಿರ್ವಹಣೆ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ   ಗಾಂಜಾ ಮತ್ತು ಅಕ್ರಮ ಮದ್ಯ ದಂಧೆಗಳು ಎಗ್ಗಿಲ್ಲದೆ ಸಾಗುತ್ತಿದ್ದು ಎನ್ನುವ ಆರೋಪಗಳ ನಡುವೆಯೇ  ವಾರ್ಡ್ ನಂ 19 ರ ಎ.ಕೆ. ಕಾಲೋನಿ ರಸ್ತೆಯಲ್ಲಿನ ಬ್ರಹ್ಮಕುಮಾರಿ  ಈಶ್ವರಿ ವಿಶ್ವವಿದ್ಯಾಲಯ ಪಕ್ಕದಲ್ಲಿನ   ಸುಂದರ್ ರಾಜ್ ಅವರ ಪತ್ನಿ ಮಂಜುಳ ಅವರು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವಿಷಯವನ್ನು ಸ್ಥಳೀಯ ಸಾರ್ವಜನಿಕರು ನಗರದ ಹಿರಿಯೂರು ಪೋಲಿಸ್ ಠಾಣೆಗೆ  ಸುದ್ದಿಯನ್ನು ತಿಳಿಸಿದರು. ಸಾರ್ವಜನಿಕರ ದೂರನ್ನು ದಾಖಲಿಸಿಕೊಂಡ ನಗರ ಪೋಲಿಸ್ ಉಪನಿರೀಕ್ಷಕರು ( ಸರ್ಕಲ್ ಇನ್ಸ್‌ಪೆಕ್ಟರ್ ) ವಿ.ಎಸ್.ಶಿವಕುಮಾರ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಉಪನಿರೀಕ್ಷಕರು ವಿ.ಎಸ್.ಶಿವಕುಮಾರ್  ನೇತೃತ್ವದ ತಂಡ ದಾಳಿ ನಡೆಸಿದ ವೇಳೆ 3.6 ಲೀಟರ್ ಮದ್ಯ ಪತ್ತೆಯಾಗಿದ್ದು, ಮದ್ಯವನ್ನು ವಶ ಪಡಿಸಿಕೊಂಡಿರುವ ಪೊಲೀಸರು ಆರೋಪಿಯಾದ ಸುಂದರ್ ರಾಜ್ ಪತ್ನಿ‌ ಮಂಜುಳ ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ  ಕಲಂ…

Read More