Subscribe to Updates
Get the latest creative news from FooBar about art, design and business.
- ತುಮಕೂರು: ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಬಸ್ ಟೈರ್, ಕಾಲು ಮುರಿತ
- ಸಚಿವ ಶಿವರಾಜ್ ತಂಗಡಗಿಗೆ ಹೃದಯ ಶಸ್ತ್ರಚಿಕಿತ್ಸೆ: ಯಶಸ್ವಿ ಸ್ಟಂಟ್ ಅಳವಡಿಕೆ
- ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ: ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ
- ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಗೋಪಾಲಕೃಷ್ಣ ನೇಮಕ; ಸಂಘಟನೆಯ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮದ ಎಚ್ಚರಿಕೆ
- ಯುಗಾದಿ– ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ, ನನ್ನಿಷ್ಟ: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
- ಓದುವ ಹವ್ಯಾಸ ಜೊತೆಯಲ್ಲಿ ಕ್ರೀಡೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ಎಂ.ಪಿ.ಸೂರ್ಯ ಕುಮಾರ್
- ಸಮಾಜ ಕಲ್ಯಾಣ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ: ಪರಿಶೀಲನೆ ಮಾಡದೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದು: ಯಗಚಿ ಕಟ್ಟೆ ರಾಘವೇಂದ್ರ ಒತ್ತಾಯ
- ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ
Author: admin
ನಾನು ಕಾಫಿ ನಾಡು ಚಂದು ಪುನೀತಣ್ಣನ್ ಶಿವಣ್ಣನ್ ಅಭಿಮಾನಿ ಅನ್ನುತ್ತಾ ಹಾಡು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಕಾಫಿ ನಾಡು ಚಂದುಗೆ ಬಿಗ್ ಬಾಸ್ ಗೆ ಎಂಟ್ರಿ ಸಿಕ್ಕಿಲ್ಲ. ಸಾಕಷ್ಟು ಜನರು ಕಾಫಿನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಅನ್ನೋ ನಿರೀಕ್ಷೆಯಿಟ್ಟಿದ್ದರು. ಆದ್ರೆ ಅವರ ನಿರೀಕ್ಷೆಗಳು ಸುಳ್ಳಾಗಿವೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ 16 ಸ್ಪರ್ಧಿಗಳಲ್ಲಿ ಕಾಫಿ ನಾಡು ಚಂದು ಕಾಣಿಸಿಕೊಳ್ಳದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹಾಡು ಹಾಗೂ ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿರುವ ಕಾಫಿನಾಡು ಚಂದುಗೆ ಬಿಗ್ ಬಾಸ್ ಪ್ರವೇಶ ಸಿಗೋದು ಖಚಿತ ಎಂದೇ ಹೇಳಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಅತ್ಯುತ್ತಮ ಮನರಂಜನೆ ನೀಡುತ್ತಿರುವ ಚಂದು ಬಿಗ್ ಬಾಸ್ ಗೆ ಸೂಕ್ತ ವ್ಯಕ್ತಿ. ಎಲ್ಲರೂ ಮನರಂಜನೆಯನ್ನು ಬಯಸಿ ಬಿಗ್ ಬಾಸ್ ನೋಡುತ್ತಾರೆ. ಇದೀಗ ಆಯ್ಕೆಯಾಗಿರುವ ಸ್ಪರ್ಧಿಗಳಿಗಿಂತ ಚಂದು ಅತ್ಯುತ್ತಮ ಎಂಟರ್ಟೈನರ್. ಹೀಗಾಗಿ ಕಾಫಿನಾಡು ಚಂದುಗೆ ಅವಕಾಶ ನೀಡಬೇಕಿತ್ತು ಎಂದು ಸಾಕಷ್ಟು ಜನರು…
ಕೊರಟಗೆರೆ: ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ ಯುವಕ ಜುಲೈ 29 ರಂದು ಕಾಣೆಯಾಗಿದ್ದಾನೆ. ಗ್ರಾಮದ ಮಂಜುಳ ಶ್ರೀ ಕಂಠಯ್ಯನವರ ಮೊದಲನೇಯ ಮಗ ನಂದೀಶ್(23) ಕಾಣೆಯಾದ ಯುವಕನಾಗಿದ್ದಾನೆ. ಜುಲೈ 29 ರ ಬೆಳಿಗ್ಗೆ ಕೊರಟಗೆರೆಯಲ್ಲಿ ತನ್ನ ತಂದೆ ನಡೆಸುತ್ತಿರುವ ಟೀ ಸ್ಟಾಲ್ ಗೆ ಹೋಗುವುದಾಗಿ ಹೇಳಿ, ತನ್ನ ತಂದೆಯ ಟೀ ಸ್ಟಾಲ್ ನಲ್ಲಿ ಟೀ ಕುಡಿದಿದ್ದಾನೆ. ಬಳಿಕ ಮನೆಗೆ ಹೋಗುವುದಾಗಿ ಹೇಳಿ ಹೋದ ಯುವಕ ಸಂಜೆಯಾದರು ಮನೆಗೆ ಹೊಂದಿರುವುದಿಲ್ಲ. ನಂದೀಶ್ ರವರ ಎಡಗೈಯಲ್ಲಿ “ಅಮ್ಮ”ಎಂದು ಹಚ್ಚೆ ಗುರುತು ಇರುತ್ತದೆ. 5ಅಡಿ 6ಅಂಗುಲ ಎತ್ತರ, ಎಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು,ಮಾತು ಬರುವುದಿಲ್ಲ ಮೂಕ ಹಾಗೂ ಕಿವುಡನಾಗಿರುತ್ತಾನೆ. ಕಾಣೆಯಾದ ದಿನ ಹಳದಿ ಬಣ್ಣದ ಕೆಂಪು ಗೀರಿನ ರೇಡಿಮೇಡ್ ಶರ್ಟ್ ಸಿಮೆಂಟ್ ಬಣ್ಣದ ಬರ್ಮುಡಾ ಧರಿಸಿರುತ್ತಾನೆ. ಈತನನ್ನು ಸಾರ್ವಜನಿಕ ಸ್ಥಳದಲ್ಲಿ ಹೋಟೆಲ್ ಗಳಲ್ಲಿ ಬಸ್ ಸ್ಟ್ಯಾಂಡ್ ಗಳಲ್ಲಿ ಅಥವಾ ಯಾವುದೇ ಟೀ ಸ್ಟಾಲ್ ಅಂಗಡಿಗಳ ಮುಂದೆ ನೋಡಿದವರು ಕೆಳಗಂಡ ನಂಬರ್ ಗಳಿಗೆ ಕರೆ ಮಾಡಿ ತಿಳಿಸಬೇಕೆಂದು ಅಥವಾ…
ತಿಪಟೂರು: ಬೈಪಾಸ್ ರಸ್ತೆಯ ನೀರಿನ ಚರಂಡಿಯ ಅವ್ಯವಸ್ಥೆಯಿಂದಾಗಿ R R ಆಗ್ರೋ ಪ್ರಾಡಕ್ಟ್ಸ್ ಫ್ಯಾಕ್ಟರಿಗೆ ನೀರು ನುಗ್ಗಿದ್ದು, ಫ್ಯಾಕ್ಟರಿಯಲ್ಲಿ ತಯಾರಿಸುವ ಲಕ್ಷಾಂತರ ರೂಪಾಯಿ ಮೌಲ್ಯದ ಕಾಯಿ ಪೌಡರ್ ಹಾಳಾಗಿ ಹೋಗಿದೆ. ಘಟನೆಯಲ್ಲಿ ಫ್ಯಾಕ್ಟರಿ ಮಾಲಿಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಸ್ತೆಯಿಂದ ನೇರವಾಗಿ ಫ್ಯಾಕ್ಟರಿ ಕಡೆಗೆ ನೀರು ಹರಿದಿದ್ದು, ಪರಿಣಾಮವಾಗಿ ಫ್ಯಾಕ್ಟರಿ ಮಾಲಿಕರಿಗೆ ತೀವ್ರ ನಷ್ಟವಾಗಿದೆ. ಇಂಜಿನಿಯರ್ ಗೆ ಈ ಬಗ್ಗೆ ಅನೇಕ ಬಾರಿ ಮಾಹಿತಿ ನೀಡಿದರೂ ಅವರು ನಮ್ಮ ಮಾತಿಗೆ ಬೆಲೆ ಕೊಡದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ರಸ್ತೆ ನೀರಿನಿಂದ ಇಲ್ಲಿನ ಸುತ್ತಮುತ್ತಲಿನ ಸಾಕಷ್ಟು ಪ್ರದೇಶಗಳ ಜನರಿಗೆ ತೊಂದರೆಯಾಗಿದ್ದು, ಯಾರ ಬಳಿ ಸಮಸ್ಯೆ ಹೇಳಬೇಕು ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಪಾವಗಡ: ಬಟ್ಟೆ ಒಗೆಯಲು ಹೋಗಿದ್ದ ವೇಳೆ ಮಹಿಳೆಯೊಬ್ಬರು ನೀರುಪಾಲಾದ ಘಟನೆ ಪಾವಗಡ ತಾಲೂಕಿನ ಬ್ಯಾಡನೂರು ನೀರಿನ ಹಳ್ಳದಲ್ಲಿ ನಡೆದಿದೆ. ಇಂದು ಬೆಳಗ್ಗೆ ಬಟ್ಟೆಗಳನ್ನು ತೊಳೆಯುವ ವೇಳೆ ನೀರಿನಲ್ಲಿ ಗ್ರಾಮದ ಗೋವಿಂದಪ್ಪ ಎನ್ನುವವರ ಪತ್ನಿ 35 ವರ್ಷದ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದೇವಿರಮ್ಮ ಅವರಿಗಾಗಿ ಇದೀಗ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದು, ಈವರೆಗೆ ಅವರ ಪತ್ತೆ ಸಾಧ್ಯವಾಗಿಲ್ಲ. ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮದಲ್ಲಿ ಇರುವಂತಹ ಶಂಕರಲಿಂಗನಕೆರೆ ಇತ್ತೀಚಿಗೆ ಕೋಡಿ ಬಿದ್ದಿತ್ತು. ಈ ಹಳ್ಳದ ನೀರು ಹರಿಯುವ ಸ್ಥಳದಲ್ಲಿ ದೇವಿರಮ್ಮ ಎನ್ನುವರು ಬಟ್ಟೆ ಸ್ವಚ್ಛಗೊಳಿಸಲು ಇಂದು ಬೆಳಗ್ಗೆ ತೆರಳಿದಾಗ ಈ ಘಟನೆ ಸಂಭವಿಸಿದೆ. ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ತಾಲೂಕು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಕಲಬುರ್ಗಿ: ಹುಡುಗಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪೊಂದು ಕಾಲೇಜು ಕ್ಯಾಂಟೀನ್ ನಲ್ಲಿ ಬಡಿದಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ವರದಿ ಪ್ರಕಾರ, ಒಂದು ಗುಂಪಿನ ಯುವತಿಯನ್ನು ಮತ್ತೊಂದು ಗುಂಪಿನ ಹುಡುಗರು ಚುಡಾಯಿಸಿದ್ದೇ ಹೊಡೆದಾಟಕ್ಕೆ ಕಾರಣ ಎನ್ನಲಾಗದೆ. ವಿದ್ಯಾರ್ಥಿ ಗ್ಯಾಂಗ್ ನ ಹೊಡೆದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರಳ, ಮಹಾರಾಷ್ಟ್ರ,ತೆಲಂಗಾಣ, ದೆಹಲಿ ಮೂಲದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದು, ಇದೀಗ ಕಾಲೇಜ್ ನಲ್ಲಿಯೇ ಹೊಡೆದಾಡಿಕೊಂಡಿರುವ ವಿಚಾರ ಭಾರಿ ಸುದ್ದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮಧುಗಿರಿ: ತಾಲೂಕಿನ ಐಡಿ ಹಳ್ಳಿ ಹೋಬಳಿಯ ಗ್ರಾಮದ ರೈತರು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾನಾ ಸಂಕಷ್ಟಕ್ಕೊಳಗಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟಿಸಿ, ಉಪತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ಕೆರೆ ಕೋಡಿ ಹರಿದು ರೈತರ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಕೃಷಿ ಮಾಡಲು ಅಡ್ಡಿಯಾಗಿದೆ. ರಾಜ ಕಾಲುವೆಗಳ ದುರಸ್ತಿ ಕಾರ್ಯ ನಡೆಯದೆ ರಾಜಕಾಲುವೆಗಳು ಮುಚ್ಚಿ ಹೋಗಿರುವ ಕಾರಣ ಕೃಷಿ ಭೂಮಿಯ ಮೇಲೆ ಕೆರೆ ಕೋಡಿ ಹರಿದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ನೀರು ಹರಿದ ಪರಿಣಾಮ ಸ್ಮಶಾನದಲ್ಲಿದ್ದ ಶವಗಳು ನೀರಿನಲ್ಲಿ ತೇಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ರೈತ ಹೋರಾಟಗಾರರು, ಪ್ರಗತಿಪರರು ಹಾಗೂ ವಿವಿಧ ಸಂಘಟನೆಗಳ ಹೋರಾಟಗಾರರು ಭಾಗವಹಿಸಿದ್ದರು. ಉಪತಹಶೀಲ್ದಾರ್ ಇನಾಯತ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು. R I ನಾರಾಯಣಪ್ಪ, ರೇಖಾ, ಪಲ್ಲವಿ, ಅಶೋಕ್ ರೆಡ್ಡಿ, ಬಾಲಕೃಷ್ಣ, ನರಸಿಂಹರೆಡ್ಡಿ, ಕೃಷ್ಣಾರೆಡ್ಡಿ, ನರೇಂದ್ರ, ಜನಾರ್ಧನ್ ರೆಡ್ಡಿ,…
ದಾವಣಗೆರೆ: ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು ವೀಕೆಂಡ್ ಪಾರ್ಟಿಯಲ್ಲಿ ತೊಡಗಿದ್ದ ಯುವಕ-ಯುವತಿಯರಿಗೆ ಶಾಕ್ ನೀಡಿದ ಘಟನೆ ದಾವಣಗೆರೆ ಜಿಲ್ಲೆಯ ಮಿಟ್ಲಕಟ್ಟೆ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ದಿ ಸ್ಟೇಜ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆನ್ನಾಲಾಗಿದೆ. ವರದಿಗಳ ಪ್ರಕಾರ, ದಿ ಸ್ಟೇಜ್ ಹೋಟೆಲ್ ನಲ್ಲಿ ವೀಕೆಂಡ್ ನಲ್ಲಿ ಶುಕ್ರವಾರ ರಾತ್ರಿಯಿಂದ ಭಾನುವಾರದ ವರೆಗೂ ಪ್ರತಿವಾರ ಡ್ರಿಂಕ್ಸ್ ಪಾರ್ಟಿ ನಡೆಯುತ್ತದೆ, ಕಪಲ್ಸ್ ಗಳಿಗೆ ಮಾತ್ರ ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಪಾರ್ಟಿಯಲ್ಲಿ ಡಿಜೆ ಸಾಂಗ್, ಡ್ರಿಂಕ್ಸ್ ಜತೆ ಮಾದಕ ವಸ್ತು ಸೇವನೆ ಕೂಡ ಮಾಡಲಾಗುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದ್ದು, ಘಟನೆಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುಮಕೂರು: ಹುಟ್ಟು ಹಬ್ಬ ಆಚರಣೆ ಮಾಡಿ ಎಂದು ಸಿದ್ದರಾಮಯ್ಯನವರು ಯಾರಿಗೂ ಹೇಳಿಲ್ಲ. ಅವರು ಯಾವ ವರ್ಷನೂ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡವರಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಬ್ಬ ಮಾಸ್ ಲೀಡರ್. 40 ವರ್ಷದ ರಾಜಕೀಯದಲ್ಲಿ ಇರುವುದರಿಂದ ಸ್ವಾಭಾವಿಕವಾಗಿ ಪ್ರೀತಿ ವಿಶ್ವಾಸದಿಂದ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಒಳ್ಳೆಯ ಅವಕಾಶ. ಇದರಿಂದ ನಮ್ಮ ಪಕ್ಷಕ್ಕೆ ಒಂದು ರೀತಿಯ ಬೆಂಬಲ ಸಿಕ್ಕಿದೆ ಎಂದು ಅವರು ಸಿದ್ದರಾಮೋತ್ಸವದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ರೇಡ್ ವಿಚಾರವಾಗಿ ಮಾತನಾಡಿದ ಅವರು, ಎಸಿಬಿಯವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ, ಪುನಃ ಪುನಃ ಮಾಹಿತಿ ಪಡೆಯಲು ರೇಡ್ ಮಾಡುತ್ತಿರಬಹುದು. ಈ ಬಗ್ಗೆ ನಮ್ಮ ಪಕ್ಷದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿದ್ದಾರೆ ಎಂದರು. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು…
ತುಮಕೂರು: ನಿಂತಿದ್ದ ಲಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರು-ಶಿರಾ ರಾಷ್ಟ್ರೀಯ ಹೆದ್ದಾರಿಯ ಜೋಗಿಹಳ್ಳಿಯಲ್ಲಿ ನಡೆದಿದೆ. ಬಳ್ಳಾರಿಯ ತಾವರಹಳ್ಳಿ ಮೂಲದ ನಾಗರಾಜ್ ಮೃತ ಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ತುಮಕೂರಿಂದ ಶಿರಾಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಕೊಣಾಜೆ: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜಗನ್ನಾಥ (44) ಎಂಬುವವರು ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಜಗನ್ನಾಥ ಅವರು ಕರ್ತವ್ಯದಲ್ಲಿದ್ದಾಗಲೇ ಅಸ್ವಸ್ಥರಾಗಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕೆತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪುತ್ತೂರು ತಾಲೂಕಿನ ಸವಣೂರು ಗ್ರಾಮದವರಾಗಿದ್ದು, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz