Author: admin

ತುಮಕೂರು :  ಏಪ್ರಿಲ್ 10ರಂದು  ರಾಜ್ಯದ ಮಾಜಿ  ಉಪ ಮುಖ್ಯಮಂತ್ರಿಯಾದ  ಜಿ. ಪರಮೇಶ್ವರ್ ಅವರ ಸವ್ಯಸಾಚಿ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಅಖಿಲ ಕರ್ನಾಟಕ ಜಿ ಪರಮೇಶ್ವರ್ ಯುವ ಸಂಘದ ಪದಾಧಿಕಾರಿಗಳೆಲ್ಲರೂ ಭಾಗವಹಿಸುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ಮಧುಕರ್ ರಂಗನಾಥ್ ಮನವಿ ಮಾಡಿದರು. ಅಖಿಲ ಕರ್ನಾಟಕ ಪರಮೇಶ್ವರ್ ಸೇನೆ ರಾಜ್ಯಾದ್ಯಂತ ಇದೆ. ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಮತ್ತು ಸಾಮಾಜಿಕ ಜಾಲತಾಣ ಸದಸ್ಯರು .  ಪರಮೇಶ್ವರ್ ಸೈನ್ಯದ ಪದಾಧಿಕಾರಿಗಳು ಹತ್ತನೇ ತಾರೀಕು ಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆಯುವಂತಹ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಯಶಸ್ಸು ಗೊಳಿಸಬೇಕು ಎಂದರು. ರಾಜ್ಯ ಕಾರ್ಯದರ್ಶಿ ಎನ್  ಕೆ ರವಿಕುಮಾರ್  ಮಾತನಾಡಿ,  ಪರಮೇಶ್ವರ ರವರ ಗೌರವಗ್ರಂಥ ಸವ್ಯಸಾಚಿ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲ ಹಿರಿಯರು ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು, ವಿಚಾರವಂತರು ಕಾರ್ಯಕ್ರಮಕ್ಕೆ ಎಲ್ಲಾ ಜಾತ್ಯಾತೀತ ನಾಯಕರುಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ವರದಿ: ಎ.ಎನ್. ಪೀರ್  ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ತುರುವೇಕೆರೆ: ಮುನಿಯೂರು ಗ್ರಾಮದಲ್ಲಿ ನಡೆದ  “ದೇವರ ದಾಸಿಮಯ್ಯ ‘” ರವರ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ ಅವರಿಗೆ ಆಮಂತ್ರಣ, ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಜನಾಂಗದವರು ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸಿ ,ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕ ದಂಡಿನಶಿವರ ಆಕ್ರೋಶ ವ್ಯಕ್ತಪಡಿಸಿದರು. ತುರುವೇಕೆರೆ ಪಟ್ಟಣದ, ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ತಾಲ್ಲೂಕು ತಹಶೀಲ್ದಾರರು  ನೇರ ಹೊಣೆಗಾರರು. ಇವರು ಅನೇಕ ಬಾರಿ ದಲಿತ ವಿರೋಧಿ ನಡೆಯಲ್ಲೇ ಬಂದಿದ್ದಾರೆ.  ಆದ್ದರಿಂದ ತಹಸೀಲ್ದಾರರನ್ನು ಕೂಡಲೇ ವರ್ಗಾವಣೆ ಮಾಡಿ ಇವರ ಮೇಲೆ ,ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು. ಛಲವಾದಿ ,ಮಹಾ ಸಭಾದ ತಾಲ್ಲೂಕು ಅಧ್ಯಕ್ಷರಾದ  ಡೊಂಕಿಹಳ್ಳಿ ರಾಮಣ್ಣ ಮಾತನಾಡಿ,     ತಾಲ್ಲೂಕು  ತಹಸೀಲ್ದಾರ್ ನಯಿಮ್ ಉನ್ನಿಸ್ಸ  ಅಧಿಕಾರ ವಹಿಸಿಕೊಂಡ ತಕ್ಷಣ ದಲಿತರಿಗೆ ಸ್ಪಂದಿಸುತ್ತಿದ್ದರು. ಆದರೆ ಕಳೆದ ನಾಲ್ಕು…

Read More

ತುಮಕೂರು: ಆಮ್ ಆದ್ಮಿ ಪಕ್ಷದ ನಿಯೋಗವು ತುಮಕೂರಿನ ಮಾಜಿ ಶಾಸಕರಾದ ಹೆಚ್.ನಿಂಗಪ್ಪ ಮತ್ತು ಪಾಲಿಕೆ ವಿರೋಧ ಪಕ್ಷದ ನಾಯಕರಾದ ಜೆ.ಕುಮಾರ್ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದರು. ಮಾಜಿ ಶಾಸಕರಾದ ಹೆಚ್.ನಿಂಗಪ್ಪ ಅವರೊಂದಿಗೆ ಆಪ್ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಫೋನ್ ಕಾಲ್ ನಲ್ಲಿ ಮಾತನಾಡಿದ್ದು, ಅದರ ಮುಂದುವರೆದ ಭಾಗವಾಗಿ ಪಕ್ಷದ ಮುಖಂಡರು ನಿಂಗಪ್ಪ ಅವರ ಮನೆಗೆ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರೆ. ನಿಂಗಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಲು ಕೆಲವು ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಪ್ ಪಕ್ಷದ ಡಾ.ವಿಶ್ವನಾಥ್, ಪ್ರಭುಸ್ವಾಮಿ, ಮಾರುತಿ.ಕೆ.ಆರ್., ಡಾ.ವಿಮಲ್ ಪಾಂಡೆ, ಗೋವರ್ಧನ ರಾಜು , ಇತರರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುರುವೇಕೆರೆ:  ತಾಲೂಕಿನ ಮಾಯಸಂದ್ರ ಹೋಬಳಿಗೆ ಸೇರಿದ ಸೊರವನಹಳ್ಳಿ ಗ್ರಾಮ ಹಾಗೂ ಸೊರವನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ಸರಣಿ ಕಳ್ಳತನ  ನಡೆಸಲಾಗಿದೆ. ಬುಧವಾರ ತಡರಾತ್ರಿ ಸುಮಾರು  2 ರಿಂದ ಮೂರು ಗಂಟೆಯ ಸಮಯದಲ್ಲಿ  ಕಳ್ಳತನ ನಡೆದಿದ್ದು,  ಸೊರವನಹಳ್ಳಿ ಗ್ರಾಮದ ರೈತ  ತಮ್ಮಯ್ಯ ನವರಿಗೆ ಸೇರಿದ ಒಂದೇ ಮನೆಯಲ್ಲಿ 20 ಕುರಿಗಳು ಹಾಗೂ ದೊಡ್ದಯ್ಯ ಎಂಬವರಿಗೆ ಸೇರಿದ 5 ಮೇಕೆಗಳು  ಮತ್ತು ಸೊರವನಹಳ್ಳಿ  ಗೊಲ್ಲರ ಹಟ್ಟಿಯ ಧನಂಜಯ ರವರ ಮನೆಯಲ್ಲಿ 5 ಕುರಿಗಳು ಕಳ್ಳತನವಾಗಿವೆ. ಈ ಸರಣಿ ಕಳ್ಳತನದ ತಮ್ಮ ಕುರಿ ಮೇಕೆಗಳನ್ನು ಕಳೆದುಕೊಂಡ ಬಡ ರೈತರು  ಕಂಗಾಲಾಗಿದ್ದು, ಜೀವನಾಧಾರ ವಾಗಿದ್ದ ಸಾವಿರಾರು ರೂಪಾಯಿಯ ಬೆಲೆ ಬಾಳುವ  ಮಾಲುಗಳನ್ನು ಕಳೆದು ಕೊಂಡು, ಬೀದಿಗಿ ಬಿದ್ದಿದ್ದೇವೆ ಎಂದು ಮಾಧ್ಯಮದ ಬಳಿಯಲ್ಲಿ  ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ವರದಿ: ಸುರೇಶ್ ಬಾಬು  ಎಂ .ತುರುವೇಕೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಗುಬ್ಬಿ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ ,ಸುಪ್ರಭಾತಸೇವೆ ಪಂಚಾಮೃತ ಅಭಿಷೇಕ ನಡೆಯಿತ್ತು. ಬೆಳಿಗ್ಗೆ ಲಕ್ಷ್ಮೀರಂಗನಾಥಸ್ವಾಮಿಯ ಉತ್ಸವದೊಂದಿಗೆ ರಥೋತ್ಸವಕ್ಕೆ ಆಗಮಿಸಿತ್ತು. ರಥೋತ್ಸವ ಹತ್ತಿರ ಹೋಮ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ಒಂದು ಗಂಟೆಗೆ ರಥೋತ್ಸವದ ಸುತ್ತ ಗರುಡಸ್ವಾಮಿ ಪ್ರದಕ್ಷಣೆ ಹಾಕಿದ ನಂತರ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಭಕ್ತರ ನಡುವೆ ನಡೆಯಿತ್ತು. ಪ್ರತಿವರ್ಷವೂ ಕೂಢ ಗರುಡಸ್ವಾಮಿ ರಥೋತ್ಸವಕ್ಕೆ ಪ್ರದಕ್ಷಣೆ ಹಾಕುವುದರ ಮೂಲಕ ಭಕ್ತರ ಗಮನ ಸೆಳೆಯಿತು. ಒಂದು ಕಡೆ ರಥೋತ್ಸವದ ಸುತ್ತು ಗರುಡ ಪ್ರದಕ್ಷಣೆ ಹಾಕುತ್ತಿದ್ದಾರೆ, ಇನ್ನೊಂದು ಕಡೆ ರಥೋತ್ಸವಕ್ಕೆ ಆಗಮಿಸಿದ ಭಕ್ತರು ಜೈಕಾರ ಹಾಕುತ್ತಿದ್ದರು. ಜಿಲ್ಲೆಯಿಂದ ಆಗಮಿಸಿದ ಭಕ್ತರು ರಥೋತ್ಸವಲ್ಲಿ ಸಾಕ್ಷಿಯಾದರು. ಸುಡು ಮಿಸಿಲನ್ನು ಲೆಕ್ಕಿಸದೇ ಭಕ್ತರು ರಥವನ್ನು ಎಳೆದು ಪುನೀತರಾದರು. ಭಕ್ತರಿಗೆ ಅಲ್ಲಲ್ಲಿ ಪಾನಕ ಫಲಹಾರ ಮಜ್ಜಿಗೆಯನ್ನು ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು.…

Read More

ಸರಗೂರು: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿತ್ತು. ಹಾಗಾಗಿ ಈ ಬಾರಿ,  ಮುನ್ನೆಚ್ಚರಿಕೆ ಕ್ರಮವಹಿಸಿ ಯಾವುದೇ ಬೆಂಕಿ ಅನಾಹುತ ನಡೆಯದಂತೆ ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಅರಣ್ಯ ಮತ್ತು ಪರಿಸರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ವಿ.ಕತ್ತಿ ಸೂಚನೆ ನೀಡಿದರು. ಗುರುವಾರ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು, ಬಳಿಕ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸ್ಥಳೀಯ ಮನವಿಗಳನ್ನು ಆಲಿಸಿದರು. ಬಂಡೀಪುರ ಅರಣ್ಯವನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಈಗಾಗಲೇ ಸುಮಾರು 176 ಕಿ.ಮೀ.ನಷ್ಟು ಬ್ಯಾರಿಗೇಟ್ಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ಶೇ.50 ನಿರ್ಮಿಸಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿದ್ದರಿಂದ ಈ ಬಾರಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿತ್ತು. ಅದರಂತೆ ಇಲಾಖೆ…

Read More

ಕೊರಟಗೆರೆ : ತಾಲ್ಲೂಕಿನ ಇರಕಸಂದ್ರ ಕಾಲೊನಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಇಂತಹ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯ ಪಶು ವೈದ್ಯಾಧಿಕಾರಿ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಿಳಿಸಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೇವೈಟ್ ಲಿಮಿಟೆಡ್  ಕಂಪೆನಿಯ ಸಹಾಯ ಹಸ್ತದ ಮುಖೇನ  ಶಾಲಾ ಮಕ್ಕಳಿಗೆ ಸುಮಾರು 100 ಲೀಟರ್ ಫಿಲ್ಟರ್ ಮಾಡುವ ಫಿಲ್ಟರ್ ಘಟಕವನ್ನು ಉಚಿತವಾಗಿ ಶಾಲೆಗೆ ನೀಡಲಾಯಿತು. ಜನರಲ್ ಮ್ಯಾನೇಜರ್ ದಿಲೀಪ್ ಕುಮಾರ್ ಪುಣೆ  ಮಾತನಾಡಿ, ನಮ್ಮ ಕಂಪೆನಿಯ ಮುಖೇನ ಪಶುಗಳಿಗೆ ಉತ್ತಮ ಆರೋಗ್ಯಕ್ಕಾಗಿ ಹಲವು ಔಷಧಿಗಳನ್ನು ಕೊಡುತ್ತೇವೆ ಸಾಮಾಜಿಕ ಸೇವೆಗಳಲ್ಲೂ ಕೂಡ ಪಡಿಸಿಕೊಂಡಿದ್ದೇವೆ ಈ ಗ್ರಾಮದ ಪಶು ವೈದ್ಯರಾದ ಇವರು ನಮಗೆ ಇಲ್ಲಿನ ಶಾಲಾ ತಿಳಿಸಿದರು ನಾವು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನಮ್ಮ ಅಧಿಕಾರಿ ವರ್ಗದವರ ಜತೆ ಮಾತನಾಡಿದಾಗ ಒಂದು ಫಿಲ್ಟರ್ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ  ಅದರಂತೆ ಇಂದು ವಿಶ್ವ…

Read More

ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಭೂಮಿ ವಸತಿ ರಹಿತರು ನಡೆಸುತ್ತಿರುವ ಅಹೋರಾತ್ರಿ ಧರಣಿ 18ನೇ ದಿನಕ್ಕೆ ಕಾಲಿಟ್ಟಿದೆ. ಸಾಮಾಜಿಕ ಹೋರಾಟಗಾರ ನಾಗಭೂಷಣ್  ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಯನ್ನು 18ನೇ ದಿನ ಮುಂದುವರಿಸುತ್ತಿದ್ದೇವೆ. ನಾವು ಕಳೆದ ತಿಂಗಳು ಮಾರ್ಚ್ 21ನೇ ತಾರೀಕಿನಲ್ಲಿ ನಮ್ಮ ಧರಣಿಯನ್ನು ಪ್ರಾರಂಭ ಮಾಡಿದ್ದೇವೆ. ಮಾರ್ಚ್ 25ನೇ ತಾರೀಕು ಜಿಲ್ಲಾ ಪಂಚಾಯಿತಿ ಸಿಇಓ ರವರು ಮತ್ತು ಜಿಲ್ಲಾಧಿಕಾರಿಗಳು ಈ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಮತ್ತೊಮ್ಮೆ ಕೇಳಿ ತುರ್ತಾಗಿ ಹರಿಸಿ ಕೊಡುತ್ತೇವೆ ಎಂದು ಹೇಳಿ ಹೋದರು. ಆದರೆ ಇಲ್ಲಿಯವರೆಗೂ ಅವರು ಯಾವ ಕ್ರಮಕೈಗೊಂಡಿದ್ದಾರೆ ಎನ್ನುವ ಮಾಹಿತಿಯೇ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯುಗಾದಿ ಹಬ್ಬವನ್ನು ಕೂಡ ನಾವು ಇಲ್ಲಿ ಆಚರಿಸಿದ್ದೇವೆ. ನೆನ್ನೆ 17 ನೇ ದಿನಕ್ಕೆ ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ರವರು ಭೇಟಿಕೊಟ್ಟು, ನಿಮ್ಮ ಬೆಂಬಲವಾಗಿ ನಿಮ್ಮ ಸಮಸ್ಯೆಗಳಿಗೆ ನಾನಿರುತ್ತೇನೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಅವರು…

Read More

ದಾವಣಗೆರೆ: 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತಿಹೊಂದಿ ತಾಲೂಕಿಗೆ ಆಗಮಿಸಿದ ಹೆಮ್ಮೆಯ ವೀರಯೋಧ  ಬೈರನಾಯಕನಹಳ್ಳಿ ನಾಗರಾಜ್ ಅವರಿಗೆ ಜಗಳೂರು ತಾಲೂಕಿನ ಕನ್ನಡಪರ ಸಂಘಟನೆಗಳು ಅದ್ದೂರಿ ಸ್ವಾಗತ ನೀಡಿತು. ಜಿಲ್ಲೆಯ ಜಗಳೂರು ತಾಲ್ಲೂಕಿನ ಪಟ್ಟಣದ ಐ.ವಿ.ಯಿಂದ ತಾಲ್ಲೂಕು ಕಚೇರಿ ಮುಂಭಾಗದ ಕುವೆಂಪು ವೃತ್ತದವರೆಗೂ ಮೆರವಣಿಗೆ ಮೂಲಕ ತೆರಳಿ ವೀರ ಯೋಧ ನಾಗರಾಜ್ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ  ಜಗಳೂರು ತಾಲೂಕು ತಹಶೀಲ್ದಾರರಾದ ಸಂತೋಷ್,  ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಹೇಶ್,  ಪ್ರಗತಿಪರ ಹೋರಾಟಗಾರ ಆರ್.ಒಬಳೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ನವೀನ್ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ,  ತಾಲೂಕು ಅಧ್ಯಕ್ಷರಾದ  ಮಹಾಂತೇಶ್,  ಪಟ್ಟಣ ಪಂಚಾಯಿತಿ ಸದಸ್ಯ ಲುಕ್ಮಾನ್ ಉಲ್ಲಾ ಖಾನ್,  ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ಮಹಾಲಿಂಗಪ್ಪ ಜೆ.ಎಚ್.ಎಮ್. ಹೊಳೆ, ನಿವೃತ್ತ ಯೋಧರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ರೆಡ್ಡಿ, ಕರುನಾಡ ರಕ್ಷಣಾ ಪಡೆಯ ರಾಜ್ಯ ಕಾರ್ಮಿಕ ಘಟಕದ…

Read More