Author: admin

ಲಖನೌ: ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್‌ ನ ಬೊಕ್ಕಸಕ್ಕೆ ಬರೋಬ್ಬರಿ 5,457 ಕೋಟಿ ರೂ. ಬಂದಿತ್ತು. ಆದರೆ ಅಖಿಲ ಭಾರತ ಮಟ್ಟದಲ್ಲಿ ದೇಣಿಗೆ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ತಂಡದ ತಾತ್ಕಾಲಿಕ ವರದಿಯು ಪ್ರಕಾರ 22 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿವೆ. ಮತ್ತೊಂದೆಡೆ, ಟ್ರಸ್ಟ್ ಖಾತೆಗಳ ಜಿಲ್ಲಾವಾರು ಲೆಕ್ಕಪರಿಶೋಧನೆ ನಡೆಯುತ್ತಿರುವುದರಿಂದ ಇದುವರೆಗೆ ಸಂಗ್ರಹಿಸಲಾದ ಒಟ್ಟು ಮೊತ್ತದ ಅಂಕಿಅಂಶವು ತಾತ್ಕಾಲಿಕವಾಗಿದೆ. ಟ್ರಸ್ಟ್ ಮೂಲಗಳ ಪ್ರಕಾರ, ಬೌನ್ಸ್ ಆಗಿರುವ ಚೆಕ್‌ಗಳನ್ನು ಪ್ರತ್ಯೇಕಿಸಿ ಹೊಸ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಇನ್ನು ಚೆಕ್‌ಗಳು ಬೌನ್ಸ್ ಆದ ಕಾರಣ ತಿಳಿದುಕೊಳ್ಳಲು ಪರಿಶೀಲಿಸಲಾಗುತ್ತಿದೆ. ‘ತಾಂತ್ರಿಕ ಕಾರಣಗಳಿಂದಾಗಿ ಬೌನ್ಸ್ ಆಗಿರುವ ಚೆಕ್‌ಗಳನ್ನು ಸಂಬಂಧಪಟ್ಟ ಬ್ಯಾಂಕ್‌ನ ಒಪ್ಪಿಗೆ ಪಡೆದ ನಂತರ ಮತ್ತೆ ಪ್ರತಿನಿಧಿಸಲಾಗುತ್ತದೆ’ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಬೆಂಗಳೂರು: ಮೋದಿ ಆಶೀರ್ವಾದವಿದ್ದರೆ ನವ ಕರ್ನಾಟಕದ ಕನಸು ನನಸಾಗುವುದರಲ್ಲಿ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೊಮ್ಮಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಅವರು  ನಾಡಗೀತೆ ಉಲ್ಲೇಖಿಸಿ ಮಾತನಾಡಿ, ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೇ  ಎಂಬ ವಾಕ್ಯದಲ್ಲಿ ನಾವು ನಂಬಿಕೆ ಹೊಂದಿದ್ದೇವೆ ಎಂದರು. ಪ್ರಧಾನಿಯವರ ನವಭಾರತದ ಕಲ್ಪನೆಗೆ ನವ ಕರ್ನಾಟಕ ನಿರ್ಮಾಣದ ಮೂಲಕ ನಾವು ಕೈ ಜೋಡಿಸುತ್ತಿದ್ದೇವೆ. ಮೋದಿಯವರ ಆಶೀರ್ವಾದ ಇದ್ದರೆ ನವ ಕರ್ನಾಟಕದ ಕನಸು ಈಡೇರುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಿಯವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಮುಂಬೈನ ನೇವಲ್ ಡಾಕ್‌ಯಾರ್ಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಜೂನ್ 18, 2022 ರಂದು ಜಾಬ್ ನ್ಯೂಸ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು 8ನೇ ಜುಲೈ 2022 ರೊಳಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 338 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದಕ್ಕಾಗಿ, ಐಟಿಐ ಅರ್ಹತೆ / ಫ್ರೆಶರ್ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಎಲೆಕ್ಟ್ರಿಷಿಯನ್, ಎಲೆಕ್ಟ್ರೋಪ್ಲೇಟರ್, ಮೆರೈನ್ ಎಂಜಿನ್ ಫಿಟ್ಟರ್, ಫೌಂಡ್ರಿ ಮ್ಯಾನ್, ಪ್ಯಾಟರ್ನ್ ಮೇಕರ್, ಮೆಕ್ಯಾನಿಕ್ ಡೀಸೆಲ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕ ಆನ್‌ ಲೈನ್ ಅರ್ಜಿಯ ಪ್ರಾರಂಭ ದಿನಾಂಕ – 21 ಜೂನ್ 2022 ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ – 8 ಜುಲೈ 2022 ಶೈಕ್ಷಣಿಕ ಅರ್ಹತೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ 10 ನೇ ಮತ್ತು ಐಟಿಐ…

Read More

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ನಂದಿಬೆಟ್ಟ ಒಂದು ಸುಂದರ ಪ್ರವಾಸಿ ತಾಣ. ಇಲ್ಲಿ ವೀಕೆಂಡ್ ಬಂದ್ರೆ ಸಾಕು ಪ್ರವಾಸಿಗರ ದಂಡೇ ಇರುತ್ತೆ. ಫ್ಯಾಮಿಲಿ, ಕಾಲೇಜು ಸ್ಟೂಡೆಂಟ್ಸ್, ವಿದೇಶೀಗರು ಇಲ್ಲಿಗೆ ಬರುತ್ತಾರೆ. ಇದೇ ರೀತಿ ಬೆಂಗಳೂರಿನಿಂದ ಯುವಕರಿಬ್ಬರು ನಂದಿಬೆಟ್ಟದಲ್ಲಿನ ಸನ್ ರೈಸ್ ನೋಡುವ ಆಸೆಯಿಂದ ಬಂದ್ರು. ಆದರೆ ಜಾಲಿ ರೈಡ್ ನೆಪದಲ್ಲಿ ಸನ್ ರೈಸ್ ನೋಡುವ ಆಸೆಯಿಂದ ಬಂದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿ ಆಗಿದೆ. ನಂದಿಬೆಟ್ಟದ ತುದಿಯಿಂದ ಸನ್ ರೈಸ್ ನೋಡುವ ಆಸೆಯಿಂದ ಮಧ್ಯರಾತ್ರಿಯಿಂದಲೇ ನಂದಿಬೆಟ್ಪಕ್ಕೆ ಯುವಕರು ಲಗ್ಗೆ ಇಡ್ತಾರೆ. ಇದೇ ಆಸೆಯಲ್ಲಿ ಬಂದ ಬೆಂಗಳೂರಿನ ಶ್ರೀನಗರದ ಯುವಕ ಬೈಕ್ ಅಪಘಾತದಲ್ಲಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಣಿವೇಪುರದಲ್ಲಿ ನಿನ್ನೆ ಮುಂಜಾನೆ 5:30ರ ಸಮಯದಲ್ಲಿ ನಡೆದ ಅಪಘಾತದಲ್ಲಿ 26 ವರ್ಷದ ರಾಕೇಶ್ ಸ್ಥಳದಲ್ಲೇ ಪ್ರಾಣ ಕಳೆದು ಕೊಂಡ್ರೆ, ಸುನಿಲ್ ಎಂಬ ಯುವಕ ಗಂಭೀರವಾಗಿ ಗಾಯಾಗೊಂಡು…

Read More

ಇಂದು ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಗರದ ಮೂರು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಇದೀಗ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರತಿಭಟನೆ ಭೀತಿ ಎದುರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಓಡಾಡುವ ರಸ್ತೆಯಲ್ಲಿ ಖಾಕಿ ಕಣ್ಗಾವಲು ಹಾಕಲಾಗಿದೆ. ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಿಗ್ಗೆ 11:15 ಕ್ಕೆ ಯಲಹಂಕ ವಾಯು ನೆಲೆಗೆ ಮೋದಿ ಬಂದಿಳಿಯಲಿದ್ದಾರೆ. ಮಲ್ಲೇಶ್ವರಂ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಗೆ ಆಗಮಿಸಲಿದ್ದಾರೆ. ಇದಾದ ನಂತರ ಜ್ಞಾನ ಭಾರತಿ ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ ಗೆ ಭೇಟಿ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ನಂತರ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ಪ್ರಧಾನ ಮಂತ್ರಿ ಮೈಸೂರಿಗೆ ತೆರಳಲಿದ್ದಾರೆ. ಪ್ರತಿಭಟನೆ ಭೀತಿ : ಆದರೆ ಪ್ರಧಾನಿ ನರೇಂದ್ರ ಮೋದಿ ಭೀತಿ ವೇಳೆ…

Read More

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಸಮೀಪ ಕೆಎಸ್‌ ಆರ್​ ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ತುಮಕೂರು-ಶಿವಮೊಗ್ಗ ನ್ಯಾಷನಲ್ ಹೆದ್ದಾರಿ 206ರಲ್ಲಿ ಘಟನೆ ಸಂಭವಿಸಿದೆ.  ನಿಟ್ಟೂರು ಕಡೆಯಿಂದ ತುಮಕೂರು ಕಡೆಗೆ ಕಾರು ಬರುತ್ತಿದ್ದರೆ, ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆಗೆ ಬಸ್ ಹೊರಟಿತ್ತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,ಕಾರಿನಲ್ಲಿದ್ದ ಗಿರೀಶ್​ (37), ಮಾನ್ಯ (17), ಮೃತ ದುರ್ದೈವಿಗಳು. ಬಸ್ಸಿನಲ್ಲಿದ್ದ ಗಾಯಾಳುಗಳನ್ನು ತಕ್ಷಣ  ಗುಬ್ಬಿ ಸರ್ಕಾರಿ ಆಸ್ಪತ್ರೆ ಹಾಗೂ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತೀವ್ರ ಹಸಿವಿನ ಸಂದರ್ಭದಲ್ಲಿ ಒಂದು ಖರ್ಜೂರ ಸೇವಿಸಿದರೆ, ಸಾಕು. ಮನುಷ್ಯನ ದೇಹದ ಅರ್ಧ ಆಯಾಸವನ್ನು ಹೋಗಲಾಡಿಸುವಷ್ಟು ಶಕ್ತಿ ಅದರಲ್ಲಿದೆ. ಸುಮಾರು 500ರಕ್ಕೂ ಹೆಚ್ಚು ವಿಧದ ವಿವಿಧ ಖರ್ಜೂರಗಳಿವೆ. ಈ ಖರ್ಜೂರಗಳಲ್ಲಿ ಮನುಷ್ಯನ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣದ ಅಂಶ ಸೇರಿದಂತೆ ವಿವಿಧ ಅಂಶಗಳಿವೆ. ಮಾಗಿದ ಖರ್ಜೂರವನ್ನು ನೀರಿನಲ್ಲಿ ಕುದಿಸಿದ ಬಳಿಕ ಅದನ್ನು ಒಣಗಿಸಿ, ದೀರ್ಘಕಾಲದ ವರೆಗೂ ಸಂರಕ್ಷಿಸಲಾಗುತ್ತದೆ. ಈ ಖರ್ಜೂರ್ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಕೂಡ ಉತ್ತಮವಾದ ಬೇಡಿಕೆ ಇದೆ. ಮುಖ್ಯವಾಗಿ ಖರ್ಜೂರ ನಮ್ಮ ದೇಹದಲ್ಲಿ ಚೈತನ್ಯವನ್ನು ತುಂಬುತ್ತದೆ. ನಮಗೆ ತೀವ್ರವಾದ ಹಸಿವಾಗುವ ಸಂದರ್ಭದಲ್ಲಿ ಒಂದೆರಡು ಖರ್ಜೂರದ ಹಣ್ಣು ತಿಂದು ನೀರು ಕುಡಿದರೆ ಸಾಕು, ಕೆಲವೇ ಕ್ಷಣಗಳಲ್ಲಿ ನಮ್ಮ ದೇಹ ಹಸಿವು ಮತ್ತು ಆಯಾಸದಿಂದ ಮುಕ್ತವಾಗುತ್ತದೆ. ಒಂದು ಲೋಟ ಹಾಲು ಮತ್ತು ಒಂದು ಖರ್ಜೂರದ ಹಣ್ಣು ಒಂದು ಹೊತ್ತಿನ ಹಸಿವನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಕಾರ್ಬೋಹೈಡ್ರೇಡ್ ಗಳು, ಪ್ರೋಟೀನ್, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ಸಲ್ಫರ್, ಕಬ್ಬಿಣ, ಪೊಟ್ಯಾಷಿಯಂ,…

Read More

ಕೊರಟಗೆರೆ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಗಾನಹಳ್ಳಿ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿದ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್  ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನೆಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕೋವಿಡ್-19  ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದರು. ಪಿಂಚಣಿಗಳ ಅದಾಲತ್  ಮೂಲಕ ವಿಶೇಷ ಚೇತನರಿಗೆ ವೃದ್ಧರಿಗೆ, ರೈತರ ಕುಟುಂಬಗಳಿಗೆ ಕೃಷಿ ಇಲಾಖೆ ಎಲ್ಲಾ ಸೇವೆಗಳನ್ನು ನೀಡುವಲ್ಲಿ ಜಿಲ್ಲೆಯಲ್ಲಿ ಕೊರಟಗೆರೆ ಪ್ರಮುಖ ಪಾತ್ರ ವಹಿಸಿದೆ ಎಂದರು. ಕೃಷಿ ಇಲಾಖೆಯ ಮೂಲಕ ಅನೇಕ ಪರಿಹಾರಗಳನ್ನು ನೀಡಲಾಗುತ್ತಿವೆ. ರೈತರ ಬಣವೆಗಳು ಬೆಂಕಿಹಾನಿಗೊಳಗಾದಾಗ ರೈತನಿಗೆ ಹಾವು ಕಡಿತದಿಂದ ,  ಆಕಸ್ಮಿಕವಾಗಿ  ಸಿಡಿಲು ಬಡಿತದಿಂದಾಗಿ ಜೀವ ಹಾನಿಗೊಳಗಾದಾಗ ತುರ್ತಾಗಿ ಪರಿಹರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಕಮಿಟಿ ರಚಿಸಲಾಗಿದೆ ಎಂದು ತಿಳಿಸಿದರು. ರೈತರಿಗೆ ಸಾವಯವ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ ಇಲಾಖೆಗಳಲ್ಲಿ ಜಿಂಕ್ ಗೊಬ್ಬರ ರಸಗೊಬ್ಬರಗಳನ್ನು ಕೃಷಿ ಅಧಿಕಾರಿಗಳ ಮೂಲಕ…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕು ಮಾಯಸಂದ್ರ ಗ್ರಾಮದಲ್ಲಿ, ಏರ್ಪಡಿಸಿದ್ದ ಕಂದಾಯ ಸಚಿವರ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ದಲಿತರ ಮನೆಯ , ರೊಟ್ಟಿ, ಉಪ್ಪಿಟ್ಟು, ಚಿತ್ರಾನ್ನ ಸವಿದರು. ರಾತ್ರಿ ಮಾಯಸಂದ್ರದ ಟಿ.ಬಿ.ಕ್ರಾಸ್ ನಲ್ಲಿರುವ ಶ್ರೀ ಆದಿ ಚುಂಚನಗಿರಿಯ ಮಠದ ಶಾಖಾಮಠ ಕಲ್ಪತರು ಆಶ್ರಮದಲ್ಲಿ ತಂಗಿದ ಅವರು , ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದರು. ಈ ವೇಳೆ ರಸ್ತೆ ಬದಿಯಲ್ಲಿನ ಟೀ ಅಂಗಡಿಯಲ್ಲಿ ಟೀ ಕುಡಿದು, 9:30ರ ವೇಳೆಗೆ ಮಾಯಸಂದ್ರದ ,ಬಡ ದಲಿತರಾದ ಜಯಮ್ಮ ಬಿನ್ ಲೇಟ್ ನಾರಾಯಣಪ್ಪ ಅವರ ಮಗ ವಿನೋದ್ ರವರ ಮನೆಗೆ ತೆರಳಿ ಅವರ ಉಭಯ ಕುಶಲೋಪರಿ ,ವಿಚಾರಿಸಿದರು. ಬಳಿಕ ಅವರ ಮನೆಯಲ್ಲಿ ಮಾಡಿದ್ದ ಅಕ್ಕಿ ರೊಟ್ಟಿ ,ಉಚ್ಛಳು ಚಟ್ನಿಯನ್ನು ಅವರ ಅಡುಗೆ ಕೋಣೆಯಿಂದ ಸಚಿವರು ತಾವೇ ,ಬಡಿಸಿಕೊಂಡು ಹಾಲ್ ನಲ್ಲಿ ಊಟಕ್ಕೆ ಕುಳಿತರು. ಉಪ್ಪಿಟ್ಟು, ಚಿತ್ರಾನ್ನ ಹಾಕಿಸಿಕೊಂಡು ಸವಿದರು. ಸಚಿವರಿಗೆ ಶಾಸಕ ಮಸಾಲ ಜಯರಾಮ್ , ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ದಲಿತ ಮುಖಂಡರಾದ ವಿ.ಟಿ.ವೆಂಕಟರಾಮ್, ಪಟ್ಟಣ ಪಂಚಾಯಿತಿ…

Read More

ಚಿತ್ರದುರ್ಗ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಚಿತ್ರದುರ್ಗ ಜಿಲ್ಲಾ ಯುವ ಘಟಕದ ವತಿಯಿಂದ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಚಿತ್ರದುರ್ಗ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಗೌತಮ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ರಾಮಚಂದ್ರ. ಕೆ. , ಸಂಘಟನೆ ಕೇವಲ ಐಡಿ ಕಾರ್ಡ್ ಗೆ ಮಾತ್ರ ಸೀಮಿತವಾಗಿರಬಾರದು. ಅಸ್ಪೃಶ್ಯತೆ, ಶೋಷಣೆ, ಅತ್ಯಾಚಾರಕ್ಕೊಳಗಾದವರ ಪರ ಹೋರಾಡಬೇಕು ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಭೇಂದ್ರ ಬಾಬುರವರ ಮಾತನಾಡಿ, ಬಾಬಾಸಾಹೇಬರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಾಬಾಸಾಹೇಬರ ವಿಚಾರಗಳನ್ನು ಕೈಗೆತ್ತಿಕೊಂಡು ಯುವಜನತೆ ನಮ್ಮ ದೇಶದ ಮಾದರಿಯಾಗಿ ಬೆಳೆಯಬೇಕು. ದಲಿತರ ಅಲ್ಪಸಂಖ್ಯಾತರ ಶೋಷಣೆಗೊಳಗಾದ ಪರವಾಗಿ ನಿಮ್ಮ ಹೋರಾಟಗಳು ನಡೆಯಬೇಕೆಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೃಷಭೇಂದ್ರ ಬಾಬು, ಬಿಎಸ್ ಜಿಲ್ಲಾಧ್ಯಕ್ಷರಾದ ರೇವಣಸಿದ್ದಪ್ಪ ಬಿ. ಕಲ್ಕುಂಟೆ, ಜಿಲ್ಲಾ ಕಾರ್ಯದರ್ಶಿಯಾದ ಹನುಮಂತು ಎಸ್., ಹಿರಿಯೂರು ತಾಲೂಕು ಕಾರ್ಯ ಅಧ್ಯಕ್ಷರಾದ…

Read More