Author: admin

ಪಾವಗಡ:  ತಾಲ್ಲೂಕಿನಲ್ಲಿ  ದೀ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಅಂತರ್ಜಲ ಚೇತನ ಯೋಜನೆಯಿಂದ ಪಾವಗಡ ತಾಲ್ಲೂಕಿನ ಇ.ಓ  ಶಿವರಾಜಯ್ಯ. ಎ. ಡಿ  ರಂಗನಾಥ್ ಹಾಗೂ ಕರ್ನಾಟಕ ರಾಜ್ಯ ಸಂಯೋಜಕರಾದ ಕೃಷ್ಣ ನಾಯಕ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಕೃಷ್ಣಾನಾಯಕ್ ,  ನಮ್ಮ ತಾಲ್ಲೂಕಿನಲ್ಲಿ 70 ವರ್ಷಗಳಿಂದ ಸುಮಾರು 50 ಬಾರಿ ಬರಗಾಲ ಬಂದಿದ್ದರಿಂದ ದೀ ಆರ್ಟ್ ಆಫ್ ಲಿವಿಂಗ್ ಸಂಸ್ಥೆ  ನಮ್ಮ ಪಾವಗಡ ತಾಲೂಕನ್ನು ಪ್ರಥಮ ಭಾರಿಗೆ ಆಯ್ಕೆ ಮಾಡಿಕೊಂಡಿದೆ. ಅಂತರ್ಜಲ ಚೇತನ ಯೋಜನೆಯಿಂದ ಹಳ್ಳಗಳಲ್ಲಿ ಬೋರ್ಡರ್ ಚೆಕ್ ಮತ್ತು ರಿಚಾರ್ಜ್ ವೆಲ್ ಕಾಮಗಾರಿಗಳನ್ನು 2021ನೇ ಸಾಲಿನಲ್ಲಿ ತಾಲ್ಲೂಕಿನ ಎಲ್ಲ  ಗ್ರಾಮಪಂಚಾಯಿತಿಯಲ್ಲಿ ಸುಮಾರು 20ರಿಂದ 35 ಕಾಮಗಾರಿಗಳನ್ನು ಪೂರ್ಣಗೊಳಿಸಿದಾರೆ  ಎಂದರು. ಈ ಕಾಮಗಾರಿಗಳಿಂದ ರೈತರ ಕೊಳೆವೆ ಬಾವಿಗಳು 80% (ಪರ್ಸೆಂಟ್ ) ಸೀಪೆಜ್ ಅಥವಾ ರಿಚಾರ್ಜ್ ಆಗಿವೆ ಮತ್ತು ಅಂತರ್ಜಲ ಮಟ್ಟ ಹೆಚ್ಚಾಗಿದೆ ಇದರಿಂದ ರೈತರರಿಗೆ ಅನುಕೂಲವಾಗಿದೆ.  ಅದೇ ರೀತಿ ಈ ವರ್ಷದಲ್ಲಿ ಒಂದು ಗ್ರಾಮ ಪಂಚಾಯಿತಿಗೆ ಸುಮಾರು…

Read More

ಬೆಂಗಳೂರು: ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಮಸಿ ಬಳಿದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು, ರಾಷ್ಟ್ರ ಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಅವಮಾನಿಸಿದ ಬಗ್ಗೆ ಸ್ವಾಮೀಜಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ಆ ರೀತಿ ಹೇಳಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ಋಷಿ ಕುಮಾರಸ್ವಾಮಿ ಸಮರ್ಥನೆ ನೀಡಲು ಮುಂದಾಗಿದ್ದಾರೆ. ಇದಾದ ಬಳಿಕ  ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸ್ವಾಮೀಜಿ ಮುಖಕ್ಕೆ ಮಸಿ ಬಳಿದಿದ್ದಾರೆ. ನಾಡಗೀತೆಯನ್ನ ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆಂದು ಕಾಳಿ ಸ್ವಾಮೀಜಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸ್ವಾಮೀಜಿ ಮೇಲೆ ಮಸಿ ಬಳಿಯುವ ಮೂಲಕ ಹೇಳಿಕೆಯನ್ನು ಖಂಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಬೆಂಗಳೂರು: ಕರ್ನಾಟಕದ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಬಹುತೇಕ ಮೌಲ್ಯಮಾಪನ ಮುಗಿದಿದ್ದು, ಮೇ 19 ರಂದು ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇ 19ರಂದು ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಬಾರಿ 8,73,846 ವಿದ್ಯಾರ್ಥಿಗಳು SSLC ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು. ಕೆಲವರನ್ನು ಹೊರತುಪಡಿಸಿ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರ ಫಲಿತಾಂಶ ಪ್ರಕಟವಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ 22  ಮಂದಿ ಆರೋಪಿಗಳಿಗೆ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಜುಲೈ ತಿಂಗಳ 2021ರಲ್ಲಿ ಮದ್ರಸಾದಲ್ಲಿ 8 ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ. ಈ ಹಿನ್ನೆಲೆಯಲ್ಲಿ ಮುಸ್ಲಿಮರು ನಮ್ಮ ದೇವರನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಗಣೇಶ ಮಂದಿರವನ್ನು ಧ್ವಂಸಗೊಳಿಸಿದ್ದರು. ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 84 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎಲ್ಲರನ್ನು ವಿಚಾರಣೆ ನಡೆಸಿ 22 ಮಂದಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ನಾಸೀರ್ ಹುಸೇನ್ ತೀರ್ಪು ಪ್ರಕಟಿಸಿದ್ದಾರೆ. ಉಳಿದ 62 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಗಣೇಶ ಮಂದಿರದ ಮೇಲಿನ ದಾಳಿಯನ್ನು ಪಾಕಿಸ್ತಾನ ಖಂಡಿಸಿ ನಿರ್ಣಯ ಅಂಗೀಕರಿಸಿತ್ತು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲಿಸಿದರು. ಬೊಮ್ಮನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಗಾಳಿಗೆ ಟೆನ್ಸಲ್ ರೂಫ್ ಬಿದ್ದ ಪ್ರಕರಣ ಸಂಬಂಧ ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಗುತ್ತಿಗೆದಾರರಿಂದಲೇ ದುರಸ್ತಿ ಕಾರ್ಯವನ್ನು ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೇಗವಾಗಿ ಗಾಳಿ ಬಂದ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರೇಕ್ಷರ ಗ್ಯಾಲರಿಗೆ ಅಳವಡಿಸಿದ್ದ ಟೆನ್ಸಲ್ ರೂಫ್ ಬಿದ್ದಿದೆ. ಇದರ ಜೊತೆಗೆ ಇನ್ನೂ ಬಾಕಿಯಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ಇದೇ ವೇಳೆ ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಬಿಡಿಎ ಕಾಂಪ್ಲೆಕ್ಸ್ ಬ್ಲಾಕ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಅವರು,…

Read More

ನೀಟ್ ಸ್ನಾತಕೋತರ ಪರೀಕ್ಷೆಯ ದಿನಾಂಕ ಗಳನ್ನು ಮುಂದೂಡಬೇಕೆಂದು ಭಾರತೀಯ ವೈದ್ಯಕೀಯ ಒಕ್ಕೂಟ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರಿಗೆ ಮನವಿ ಮಾಡಿದೆ. ಈ ತಿಂಗಳ 21ರಂದು ಸ್ನಾತಕೋತರ – 2021ರ ಅಖಿಲ ಭಾರತ ಖೋಟಾ ಕೌನ್ಸಲಿಂಗ್ ತಡವಾ ಗುತ್ತಿರುವ ಕಾರಣ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಮಾಡಿದೆ. ಪಿಜಿ- 2022ರ ಪರೀಕ್ಷೆಯ ದಿನಾಂಕ ಮತ್ತು 2021ರ ಕೌನ್ಸಲಿಂಗ್ ದಿನಾಂಕ ಮತ್ತು 2021ರ ಕೌನ್ಸಲಿಂಗ್ ಮುಗಿಸಬೇಕಿರುವ ದಿನಾಂಕದ ನಡುವೆ ಅಂತರ ಕಡಿಮೆ ಇದೆ. ಆದ್ದರಿಂದ ಇಂತಹ ಕಠಿಣ ಪರೀಕ್ಷೆಗೆ ಸಿದ್ಧತೆ ಅಗತ್ಯವಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಮಯಾವಕಾಶ ಸಿಗುವುದಿಲ್ಲ ಎಂದು ಒಕ್ಕೂಟ ಹೇಳಿದೆ. ಕೋವಿಡ್ ಕಾರಣದಿಂದಾಗಿ 2021ರ ನೀಟ್ ಪಿಜಿ 5 ತಿಂಗಳು ತಡವಾಗಿ ಆರಂಭವಾಗಿತ್ತು. ಅ.25, 2021ರಂದು ನಡೆಯಬೇಕಿದ್ದ ಕೌನ್ಸಲಿಂಗ್ ಜನವರಿ ತಿಂಗಳಿನಲ್ಲಿ ಆರಂಭವಾಗಿದೆ. ಸೀಟುಗಳ ಮೀಸಲಾತಿ ಘೋಷಣೆ ಬಾಕಿ ಇದ್ದು, ಇದಕ್ಕೆ ಮುಖ್ಯ ಕಾರಣ ಮಾ.  31., 2022ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಕೌನ್ಸಲಿಂಗ್ ಮತ್ತಷ್ಟು ವಿಳಂಬವಾಯಿತು. ಕೊರೊನಾ ಸಂದರ್ಭದಲ್ಲಿ ಕೋವಿಡ್…

Read More

ನೊಯಿಡಾ(ಉತ್ತರಪ್ರದೇಶ), ಮೇ.೧೨- ಗ್ರೇಟರ್ ನೊಯಿಡಾ ದಲ್ಲಿರುವ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಇಂದು ಬೆಳಿಗ್ಗೆಮಹೀಂದ್ರ ಬೊಲೆರೊ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಒಬ್ಬರು ಮಹಾರಾಷ್ಟ್ರದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ. ‘ಏಳು ಜನರಿದ್ದ ಮಹೀಂದ್ರ ಬೊಲೆರೊ ಆಗ್ರಾದಿಂದನೋಯಿಡಾ ದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್ ವೊಂದಕ್ಕೆ ಜೆವರಾ ಟೋಲ್ ಬಳಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದೂ ಹೇಳಿದ್ದಾರೆ. ಯಮುನಾಎಕ್ಸ್‌ ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತದಿಂದ ಉಂಟಾದ ಪ್ರಾಣಹಾನಿಯಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಎಂದುಪ್ರಾರ್ಥಿಸಿ ರುವ ಅವರು, ಮೃತರಕುಟುಂಬದ ವರಿಗಾಗಿ ಸಂತಾಪ ಸೂಚಿಸಿದ್ದಾರೆ’ ಎಂದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ರಾಯಚೂರು:  ಪರೀಕ್ಷೆ ಕೆಲಸ ಮುಗಿಸಿ ಬರುತ್ತಿದ್ದ ಉಪನ್ಯಾಸರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ಸಮೀಪ ನಡೆದಿದೆ. ದೇವದುರ್ಗದ ಬಾಲಕಿಯರ ಕಾಲೇಜು ಉಪನ್ಯಾಸಕರಾಗಿದ್ದ 59 ವರ್ಷ ವಯಸ್ಸಿನ ಮಾನಪ್ಪ ಗೋಪಾಳಾಪುರ( ಪರೀಕ್ಷಾ ಕಾರ್ಯ ಮುಗಿಸಿಕೊಂಡು ಬರುತ್ತಿದ್ದ ವೇಳೆ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಮಾನಪ್ಪ ಅವರು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಐಯಾಳಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಗೆ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ. ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಇತ್ತೀಚೆಗೆ ಸಮಾಜಮುಖಿಯಾಗಿರುವ ಚಿತ್ರಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಶಿವಕುಮಾರ ಬಿ. ಜೇವರಗಿ ಅವರು ಹೊಸ ಪ್ರಯೋಗವೊಂದಕ್ಕೆ ಕೈಹಾಕಿದ್ದು, ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಿ, ನಟಿಸಿದ್ದು,  ಈ ಚಿತ್ರ ನಾಳೆ ತೆರೆಗೆ ಅಪ್ಪಳಿಸಲಿದೆ. ಕೌಟುಂಬಿಕ ಚಿತ್ರ “ಅತ್ಯುತ್ತಮ” ಮೇ 13ರಂದು ಬಿಡುಗಡೆಯಾಗಲಿದೆ. ಬಿ.ಎಂಎಸ್ ಸಿನಿ ಕ್ರಯೇಷನ್ಸ್ ಅರ್ಪಿಸುವ ಈ ಚಿತ್ರವು ಭಾರತೀಯ ಕೌಟುಂಬಿಕ ಸಂಬಂಧಗಳಲ್ಲಿ ಪರಿವರ್ತನೆ ತರುವಂತಹ ಚಿತ್ರವಾಗಿದೆ. ಇಂತಹವೊಂದು ಚಿತ್ರವನ್ನು ಸುನಿತಾ ಎಸ್.ಜೇವರಗಿ ಅವರು ನಿರ್ಮಾಣ ಮಾಡಿದ್ದು,  ಶಿವಕುಮಾರ ಬಿ. ಜೇವರಗಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡಿದ್ದಾರೆ. ನೃತ್ಯ ಮತ್ತು ಸಹ ನಿರ್ದೇಶನವನ್ನು ಎಂ.ಆರ್.ಕಪಿಲ್ ಮಾಡಿದ್ದಾರೆ. ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲುರು, ವೀಣಾ ಶ್ರೀನಿವಾಸ್ ಸಹ ನಿರ್ಮಾಪಕರಾಗಿದ್ದಾರೆ. ದಿನೇಶ್ ಕುಮಾರ್  ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿ.ನಾರಾಯಣ್ ಛಾಯಾಗ್ರಹಣ ನೀಡಿದ್ದಾರೆ. ಆರ್ ದೊರೈರಾಜ್ ಸಂಕಲ ಮಾಡಿದ್ದಾರೆ.  ಎಸ್.ಚಂದ್ರಶೇಖರ್ ಸೌಂಡ್ಸ್ ಎಫೆಕ್ಟ್ ನೀಡಿದ್ದಾರೆ. ನಿರ್ಮಾಣ ಮೇಲ್ವಿಚಾರಣೆಯಲ್ಲಿ ರಮೇಶ್ ಅವರು ನಿಭಾಯಿಸಿದರು.  ಪಿಆರ್ ಒ: ಲಿಂಗರಾಜು-ಬಾಬು, ಅನಂತು, ಮೋಹನ್ ಮೊದಲಾದವರು ಈ ಚಿತ್ರತಂಡದಲ್ಲಿ ಕೆಲಸ…

Read More

ತುಮಕೂರು:  ಜಿಲ್ಲೆಯ ಗುಬ್ಬಿ ತಾಲೂಕಿನ ದಲಿತ ಯುವಕರ ಜೋಡಿ ಕೊಲೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತುಮಕೂರು ಜಿಲ್ಲಾ ಶಾಖೆ ವತಿಯಿಂದ ತುಮಕೂರು ಚಲೋ ಬೃಹತ್ ಕಾಲ್ನಡಿಗೆ ಜಾಥಾ ಮೇ 23 ರಂದು ಆರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಗುಬ್ಬಿ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು  ಮರುದಿನ ಮೇ 24ರಂದು ಬೆಳಗ್ಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಇತ್ತೀಚೆಗೆ ಎಸ್ ಸಿ ಸಮುದಾಯದ  ಪೆದ್ದನಹಳ್ಳಿಯ ಎಂ.ಪಿ.ಗಿರೀಶ್ ಹಾಗೂ ನಾಯಕ ಸಮುದಾಯದ ಮಂಚಲದೊರೆಯ ಗಿರೀಶ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಈ ಘೋರ ಹತ್ಯೆಯನ್ನು ಉನ್ನತಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯದ ವಿವಿಧ ದಲಿತ ಸಂಘಟನೆಗಳು ಒತ್ತಾಯಿಸಿದ್ದು, ಇದೀಗ ತುಮಕೂರಿಗೆ ಸೀಮಿತವಾಗಿರುವ ಪ್ರತಿಭಟನೆ ಇತರ ಜಿಲ್ಲೆಗಳಿಗೂ ಹಬ್ಬುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More