Author: admin

ಹಿರಿಯೂರು: ಮಾಜಿ ಸಚಿವ, ಮಾಜಿ ಶಾಸಕರಾದ ಡಿ.ಸುಧಾಕರ್ ಅವರು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ  ತಾಲ್ಲೂಕಿನ ಸಮಸ್ತ  ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.  2022ರ ಈ ಮಕರ ಸಂಕ್ರಾಂತಿ ಹಬ್ಬವು ನಮ್ಮ ಹಿರಿಯೂರು ತಾಲ್ಲೂಕಿನ ಜನತೆಗೂ ಹಾಗೂ ನಾಡಿನ ಜನತೆಯ ಬಾಳಲಿ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ  ಹಾಗೂ ನಮ್ಮ ಹಿರಿಯೂರು ತಾಲ್ಲೂಕಿಗೆ ಇನ್ನು ಅತಿ ಹೆಚ್ಚು ಮಳೆ- ಬೆಳೆ ಆಗಿ ರೈತರ ಮುಖದಲ್ಲಿ ಎಂದೆಂದಿಗೂ ಸಂತೋಷ , ಮಂದಹಾಸ ತುಂಬಿರಲಿ ಎಂದು ಸುಧಾಕರ್ ಶುಭ ಹಾರೈಸಿದರು . ಸಾಂಕ್ರಾಮಿಕ ರೋಗವಾದ ಒಮಿಕ್ರೋನ್ ರೋಗವು ಬಹಳ ವೇಗವಾಗಿ ಹರಡುತ್ತಿದ್ದು,  ಈ ಹಿನ್ನೆಲೆಯಲ್ಲಿ  ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ನ್ನು ಬಳಸಿ ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಈ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತೆ ಅವರು ಸಲಹೆ ನೀಡಿದರು. ವರದಿ: ಮುರುಳಿಧರನ್ ಆರ್., ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಸರಗೂರು: ಜೆಡಿಎಸ್ ಯುವ ನಾಯಕರಾದ ಜೈ ಪ್ರಕಾಶ್, ಹೆಚ್.ಡಿ.ಕೋಟೆ ಸರಗೂರು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಶಾಸಕರಾಗಿ ಹೊರ ಹೊಮ್ಮಲಿದ್ದಾರೆ ಎಂದು ಪಡುವಲುಮಠದ ಶ್ರೀಗಳಾದ ಮಹದೇವಸ್ವಾಮಿ ಭವಿಷ್ಯ ನುಡಿದಿದ್ದಾರೆ. ಪಟ್ಟಣದ ಎರಡನೇಯ ಮುಖ್ಯ ರಸ್ತೆಯ ಬಸವಶ್ವೇರ ದೇವಸ್ಥಾನ ದ ಬಳಿ ಆಯೋಜಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸ್ವಾಮೀಜಿ ಈ ಭವಿಷ್ಯ ನುಡಿದರು.  ಇದೇ ವೇಳೆ ಹನುಮ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜೈ ಪ್ರಕಾಶ್,  ಕೊವಿಡ್  ತಡೆಗಟ್ಟಲು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಇದೇ ವೇಳೆ ಸ್ವಾಮೀಜಿಗೆ ಹೇಳಿದ ಭವಿಷ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭರತ್ ಜೋಯಿಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹಂಚಿಪುರ ಗುರುಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರು ದಿವ್ಯ ನವೀನ್ ಕುಮಾರ್, ಸುಮರಾಮಚಂದ್ರ, ಶಿವಕುಮಾರ್(ವಿರೇಶ್) ಮುಖಂಡರು ರವಿ ಜಯರಾಮ ಸೇರಿದಂತೆ  ಹಲವು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ಎಪಿಎಂಸಿ ಪ್ರಭಾರೆ ಅಧ್ಯಕ್ಷರಾಗಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ  ಸಚಿವರಾದ ಡಿ.ಸುಧಾಕರ್ ಬೆಂಬಲಿತರಾದ ಷಣ್ಮುಖರವರು  ಎಪಿಎಂಸಿ ಪ್ರಭಾರೆ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು . ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ. ರಮೇಶ್, ಕೆಪಿಸಿಸಿ ಸದಸ್ಯರಾದ ಎ.ಎಂ.ಅಮೃತೇಶ್ವರ ಸ್ವಾಮಿ ಸುರೇಶಬಾಬು,  ನಗರಸಭೆ ಅಧ್ಯಕ್ಷರಾದ ಶಂಶುನ್ನಿಸ ಎಪಿಎಂಸಿ ಮಾಜಿ ಅಧ್ಯಕ್ಷರಾದ ಇ.ಎಲ್.ಗೌಡ,  ವೇದಮೂರ್ತಿ,  ಮಲ್ಲನಾಯಕ ಮರಿ ಬಿ.ಎಲ್.ಗೌಡ,  ನಾಗಲಕ್ಷ್ಮಿ,  ಬಾಬು ಹುಚ್ಚಾವನಳ್ಳಿ,  ಡಾ.ಪ್ರಕಾಶ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಮಹಮದ್ ಪಕೃದ್ದಿನ,  ಪಾಪಣ್ಣ , ಜ್ಞಾನೇಶ್   ತಿಮ್ಮಣ್ಣ, ಸೇಠು ರಮೇಶಬಾಬು,  ಮಲ್ಲೇಶ್,  ರಾಜೇಶಗೌಡ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.  ವರದಿ:  ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy    

Read More

ಪಾವಗಡ:  ಸ್ವಾಮಿ ವಿವೇಕಾನಂದರು  ಯುಗ ಪುರುಷ  ಅಪ್ರತಿಮ ಆಧ್ಯಾತ್ಮಿಕ ಚಿಂತಕರಾಗಿದ್ದು, ಯುವಕರಿಗೆ ಸ್ಪೂರ್ತಿ ತುಂಬಿದ ವೀರ ಸನ್ಯಾಸಿ  ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ತಿಳಿಸಿದರು. ಹೆಲ್ಪ್ ಸೊಸೈಟಿ  ಹಮ್ಮಿಕೊಂಡಿದ್ದ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರು “ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಅಸಾಧಾರಣ ಮಾತುಗಳಿಂದ ಯುವಕರಿಗೆ ಸ್ಪೂರ್ತಿಯಾದವರು ಎಂದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸುರೇಂದ್ರ, ಅನಿಲ್ ಕುಮಾರ್, ಶ್ರೀನಿವಾಸ್, ಗೌತಮ್, ವೀರ, ವೆಂಕಟ್ ನಾಯ್ಡು, ಪತ್ರಕರ್ತರಾದ ಲೋಕೇಶ್, ಜಯ ಸಿಂಹ, ನಾಗೇಶ್, ಸಂತೋಷ್, ಇದ್ದರು ವರದಿ:  ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶೆಟ್ಟಿಗೊಂಡನಹಳ್ಳಿ: ಶೆಟ್ಟಿಗೊಂಡನ ಹಳ್ಳಿಯಲ್ಲಿ ಹಲವು ದಶಕಗಳಿಂದ ವಾಸವಿರುವ ಗ್ರಾಮಸ್ಥರ ಹರ್ಷೋದ್ಘಾರ ಮುಗಿಲುಮುಟ್ಟಿದೆ. ಗ್ರಾಮದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆಶೆಟ್ಟಿಗೊಂಡನಹಳ್ಳಿ ಕೆರೆಗೆ ಹೇಮಾವತಿ ನೀರನ್ನುಹರಿಸಲಾಗಿದ್ದು , ಸ್ವಗ್ರಾಮ ಮತ್ತು ಅಕ್ಕಪಕ್ಕದ ಹಳ್ಳಿಯ ಜನರಿಗೆ ಖುಷಿ ತಂದಿದೆ. ಕಳೆದ  2-3 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಚಾನೆಲ್ ನಿರ್ಮಾಣವಾಗಿದ್ದರೂ ಸಹ ಕೆರೆಗೆ ಹೇಮಾವತಿ ನೀರು ಬಂದಿರಲಿಲ್ಲ. ಆದರೆ ಕಳೆದ ವರ್ಷ ರಾಜ್ಯದಲ್ಲಿ ಸುರಿದ ಬಾರಿ ಮಳೆಯಿಂದಾಗಿ, ತುಮಕೂರಿನ ಬಹುತೇಕ ಎಲ್ಲಾ ಕೆರೆಗಳು ತುಂಬಿದ್ದವು. ಆದ ಕಾರಣ ಖಾಲಿ ಇದ್ದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಬಿಡಲಾಗಿದೆ. ಇಂದು ಈ ಕೆರೆಯೂ ತುಂಬಿ ಹರಿಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಸ್ಥರು ಧಾವಿಸುತ್ತಿದ್ದಾರೆ. ವರದಿ: ವೆಂಕಟೇಶಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ:  ದೇಶದ ಸಂಸ್ಕೃತಿ ಉಳಿಯಲು ಗ್ರಾಮೀಣ ಭಾಗದ ಕೊಡುಗೆ ಅಪಾರವಾಗಿದೆ ಎಂದು ಮಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಮಧು ತಿಳಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ತಮ್ಮ ಕಚೇರಿ ಮುಂಭಾಗದಲ್ಲಿ ಕ್ಷೇತ್ರದ ಜನತೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬು ಹಾಗೂ ಎಳ್ಳು-ಬೆಲ್ಲ ವಿತರಿಸುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರೀಕರಣ ಮತ್ತು ಆಧುನೀಕರಣದ ಜೀವನ ಶೈಲಿಯಿಂದ ಗ್ರಾಮೀಣ ಬದುಕಿನ ಹಳ್ಳಿಯ ಸೊಗಡು ಮಾಯವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಉಳಿಸುವ ಪಣ ತೊಡಬೇಕು. ಹೊಸ ವರುಷ ಎಲ್ಲರಿಗೂ ಹರುಷ ತರಲಿದ್ದು, ಕ್ಷೇತ್ರದ ಅಭಿವೃದ್ದಿಗೆ ಎಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದರು.   ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ಅವರ ಪ್ರೇರಣೆಯಿಂದ ಈ ಕಾರ್ಯ ಮಾಡುತ್ತಿದ್ದೇನೆ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಮುಂದೆ ಬರಬೇಕು ಎಂದ ಅವರು  ಸದಾ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು. ಈ ವೇಳೆ ಮಧು ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ನಾಗೇಶ್ ಬೈರೇಶ್ ಗೌಡ, ಮಂಜು, ಕೆಂಪೇಗೌಡ, ಚೇತನ್ ಗೌಡ,…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿರುವ  ಭಗವತಿ ಪೌದಿಯಮ್ಮನ ದೇವಸ್ಥಾನದಲ್ಲಿ  ಮಂಗಳವಾರ ಸಂಜೆ ಭಗವತಿ ಅಮ್ಮನವರ  3 ನೇ ವರ್ಷದ   ಕುಂಭಾಭಿಷೇಕ ಪ್ರಯುಕ್ತವಾಗಿ ಭಕ್ತಾದಿಗಳಿಂದ ವಿಶೇಷ ಪೂಜೆ , ದೇವಿಯ ಮೆರವಣಿಗೆ, ದೇವಿಗೆ ಭಜನೆಗಳು, ಸರಣಿ ಚಪ್ಪಾಳೆ  ಹಾಗೂ ಭಕ್ತಾಧಿಗಳಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ  ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಸಚಿವ  ಡಿ.ಸುಧಾಕರ್ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಖಾದಿ ರಮೇಶ್ , ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ವಿ ., ನಗರಸಭೆ ಉಪಾಧ್ಯಕ್ಷರಾದ ಪ್ರಕಾಶ್ ಬಿ .ಎನ್. , ಜ್ಞಾನೇಶ್  ಹಾಗೂ  ಎಸ್. .ಎಸ್. ಎ.ಟಿ. ಲಾರಿ ಟ್ರಾನ್ಸ್ ಪೋರ್ಟ್ ಮಾಲಿಕರಾದ ಸೆಲ್ವಂ  ಹಾಗೂ ಕುಟುಂಬಸ್ಥರು ,  ನಗರಸಭೆ ಸದಸ್ಯೆ ಸುರೇಖಾ ಮಣಿ ಹಾಗೂ ದೇವಸ್ಥಾನದ ಅರ್ಚಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು . ವರದಿ:  ಮುರುಳಿಧರನ್ ಆರ್.,  ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಗುಬ್ಬಿ: ಚೇಳೂರು ಹೋಬಳಿಯ ರಂಗನಹಳ್ಳಿ ಗ್ರಾಮದ ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತ ಕುಟುಂಬಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾದರೆ ಅಧಿಕಾರಿಗಳನ್ನು ರೈತರೇ ಕಟ್ಟಿಹಾಕಿ ಕೇಸು ದಾಖಲಿಸುತ್ತಾರೆ ಎಂದು ಬಗ್ಗೆ ಗುಬ್ಬಿ ಶಾಸಕ ಎಸ್. ಆರ್.ಶ್ರೀ ನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಭಾಗವಹಿಸಿ ಮಾತನಾಡಿದ ಶಾಸಕರು ಗುಬ್ಬಿ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 40ವರ್ಷಗಳಿಂದ ಜಮೀನಿನಲ್ಲಿ ಅನುಭವದಲ್ಲಿದ್ದು, ಕಂದಾಯ ಇಲಾಖೆ ವತಿಯಿಂದ ಸಾಗುವಳಿ ಪತ್ರ ಪಡೆದು ಲಕ್ಷಾಂತರ ರೂ. ಹಣ ವ್ಯಯಿಸಿ ಜಮೀನು ಅಭಿವೃದ್ಧಿ ಪಡಿಸಿ ಕೆಲ ಕುಟುಂಬದವರು ವಾಸದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಸ್ವತ್ತು ನಮಗೆ ಸೇರಿದ್ದು ಎಂದು ಅನುಭವದಲ್ಲಿರುವ ರೈತರನ್ನು ಸ್ಥಳ ಬೀಡುವಂತೆ ಮತ್ತು ಜಮೀನಿನಲ್ಲಿ ಬೆಳೆದ  ಬೆಳೆ ನಾಶಪಡಿಸುವುದು ಹಾಗೂ ಕೇಸು ದಾಖಲು ಮಾಡುವುದಾಗಿ ಹೆದರಿಸುವುದು ಸರಿಯಲ್ಲ, ಅರಣ್ಯ…

Read More

ಸರಗೂರು: ಕೊರೊನಾ ಮೂರನೇ ಅಲೆ ಹಾಗೂ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ ಹೀಗಾಗಿ ತಾಲ್ಲೂಕು ಆಡಳಿತ ಸೋಂಕಿತರ ಚಿಕಿತ್ಸೆ ಗಾಗಿ ಬೆಡ್ ಆಕ್ಸಿಜನ್ ಹಾಗೂ ಔಷಧ ಇನ್ನಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ,  ವೈದ್ಯರು ಸಾರ್ವಜನಿಕರ  ಚಿಕಿತ್ಸೆ ಗೆ ಸದಾ ಸಿದ್ದರಾಗಿರಬೇಕು ಎಂದು ಹೇಳಿದರು. ಸಾರ್ವಜನಿಕ ರು ಸರ್ಕಾರದ ಮಾರ್ಗ ಸೂಚಿಯನ್ನು ಉಲ್ಲಂಘಿಸದೇ ಮಾಸ್ಕ್  ಧರಿಸಬೇಕು. ಸ್ಯಾನಿಟೈಸರ್ ಬಳಸುವ ಮೂಲಕ ದೈಹಿಕ ಅಂತರ ಕಾಯ್ದು ಕೊಳ್ಳಬೇಕು. ಲಸಿಕೆ ಪಡೆಯದವರನ್ನು ಗುರುತಿಸಿ ತಾಲ್ಲೂಕು ಆಡಳಿತ ಪೋಲಿಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಲಸಿಕೆ ಕೊಡಿಸಬೇಕು. ಮಕ್ಕಳ  ಆರೋಗ್ಯ ದ ಹಿತದೃಷ್ಟಿಯಿಂದ  ಲಸಿಕೆ ಕೊಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಬೇಕು  ಎಂದು ಹೇಳಿದರು. ಇನ್ನೂ ರಾತ್ರಿ ವೇಳೆ…

Read More

ತಿಪಟೂರು:  ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಯುವ ಸೇನಾನಿ, ಸ್ವಾಮಿ ವಿವೇಕಾನಂದ ರವರ 159 ನೇ ಜನ್ಮದಿನೋತ್ಸವ ಆಚರಣೆಯು ತಿಪಟೂರು ನಗರದ ಹಾಸನ ವೃತ್ತದ ನಂದಿನಿ ಹಾಲಿನ ಮಳಿಗೆಯ ಆವರಣದಲ್ಲಿ  ನಡೆಯಿತು. ತುಮಕೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಹರ್ಷ, ಜಯಕರ್ನಾಟಕ ಜನಪರ ವೇದಿಕೆ  ತಾಲ್ಲೂಕು  ಅಧ್ಯಕ್ಷ ಬಿ.ಟಿ.ಕುಮಾರ್ ಮಾತನಾಡಿದರು. ನಗರ ಗೌರವಾಧ್ಯಕ್ಷ ಡಾ.ಭಾಸ್ಕರ್, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಬಿ.ಬಿ. ಬಸವರಾಜ್, ತಾಲ್ಲೂಕು ಉಪಾಧ್ಯಕ್ಷ ಸಿದ್ದೇಶ್, ನಿವೃತ್ತ ನೌಕರ ಜಯದೇವಪ್ಪ,ವಿದ್ಯಾರ್ಥಿ ಘಟಕದ ತರುಣ್, ಗಿರೀಶ್,  ಹರೀಶ್, ಮುಖಂಡರಾದ ಕೃಷ್ಣೋಜಿರಾವ್ ಮತ್ತು ರಮೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More