Author: admin

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರ ಅದನ್ನು ಮರೆತಿದೆ. ಇದರ ವಿರುದ್ಧ ಮಾ.28ರಂದು ಅನಿರ್ದಿಷ್ಟಾವ ಉಪವಾಸ ಸತ್ಯಾಗ್ರಹವನ್ನು ಬಳ್ಳಾರಿಯಲ್ಲಿ ಸಾರಿಗೆ ಸಚಿವರ ಮನೆ ಬಳಿ ಮಾಡಲಿದ್ದೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2020ರಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ಸರ್ಕಾರ ನೀಡಿದ 9 ಲಿಖಿತ ಭರವಸೆಗಳ ಪೈಕಿ ಅದರಲ್ಲೂ ಮುಖ್ಯವಾಗಿ ಸರ್ಕಾರಿ ನೌಕರರಿಗೆ ಚಾಲ್ತಿಯಲ್ಲಿರುವ ಆರನೇ ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೂ ವೇತನ ನಿಗದಿ ಮಾಡುವುದಾಗಿ ಮೂರು ತಿಂಗಳ ಕಾಲಾವಕಾಶ ಪಡೆಯಲಾಗಿತ್ತು. ಸರ್ಕಾರ ಕೊಟ್ಟ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದಾಗಿ ಮತ್ತೆ ಸಾರಿಗೆ ಮುಷ್ಕರ ಮಾಡಿದ್ದು, ಇದನ್ನೇ ನೆಪವಾಗಿಸಿಕೊಂಡ ಸರ್ಕಾರ ನಿಗಮಗಳಲ್ಲಿ ಸಾವಿರಾರು ನೌಕರ ರನ್ನು ವಜಾ ಮಾಡಿ, ಅನೇಕರನ್ನು ವರ್ಗಾವಣೆ ಮಾಡಲಾಯಿತು ಹಾಗೂ ಅಮಾನತಿನಂತಹ ಕ್ರೂರ ಶಿಕ್ಷೆಯನ್ನು ನೌಕರರಿಗೆ ಕೊಡಲಾಯಿತು. ಸುಳ್ಳು ಪ್ರಕರಣಗಳನ್ನು ದಾಖಲಿಸಿ ನೂರಾರು ಕುಟುಂಬಗಳಿಗೆ ತೊಂದರೆ ಕೊಡಲಾಯಿತು.…

Read More

ತಿಪಟೂರು: ಹೊನ್ನವಳ್ಳಿ ವೃತ್ತದ ಮತ್ತಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳು ನಿರ್ವಹಣೆ ಮಾಡಿದರು. ಶ್ರೀ ಬಸವೇಶ್ವರ ಸಂಜೀವಿನಿ ಸ್ತ್ರೀಶಕ್ತಿ ಗುಂಪಿನ ಪ್ರತಿನಿಧಿಯಾದ ಲತಾ ಜಿ.ಎಸ್. ಇವರು ಘನ ತ್ಯಾಜ್ಯ ಸಂಗ್ರಹಣ ವಾಹನದ ಚಾಲಕರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೌರವ ಹೆಚ್ಚಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆಯನ್ನು  ಶ್ರೀಬಸವೇಶ್ವರ ಸಂಜೀವಿನಿ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಮನುಜ, ಶ್ರೀ ತುಳಸಿ  ಸ್ತ್ರೀಶಕ್ತಿ ಸಂಘದ ಸದಸ್ಯರಾದ ನಾಗರತ್ನ, ಶ್ರೀ ಬಿದಿರಾಂಬಿಕ ಸ್ತ್ರೀಶಕ್ತಿ ಸಂಘದ ಸದಸ್ಯರಾದ ರೇಣುಕಾ ಇವರುಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರು ಯಾವ ಕೆಲಸಕ್ಕೂ ಸೈ ಎನಿಸಿಕೊಂಡಿದ್ದಾರೆ. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುರುವೇಕೆರೆ: ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಬ್ಬರು ಆಶಾ ಕಾರ್ಯಕರ್ತೆಯರಿಗೆ “ಉತ್ತಮ ಆಶಾ ಕಾರ್ಯಕರ್ತೆಯರು” ಪ್ರಶಸ್ತಿ ಪ್ರದಾನ ಮಾಡಲಾಯಿತು. ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಶಾರದಮ್ಮ ಹಾಗೂ ಎನ್.ಎಸ್.ವಿ ಆಪರೇಷನ್ ಮಾಡಿಸಿ ಸಾಧನೆ ಮೆರೆದಿದ್ದ ಲತಾ ಅವರನ್ನು  ಉತ್ತಮ ಆಶಾ ಕಾರ್ಯಕರ್ತೆಯರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 1 ರಲ್ಲಿನ ಬಿ ಎಲ್ ಗೌಡ ನಗರದ ವಾಣಿ ವಿಲಾಸ ಪುರ , ಹೊಸದುರ್ಗ ನಗರಕ್ಕೆ ತೆರಳುವ ಪ್ರಧಾನರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ, ಭಕ್ತರು ಹಾಗೂ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ಈ ದೇವಸ್ಥಾನಕ್ಕೆ ಬರುವಂತಹ ಆಂಜನೇಯ ಸ್ವಾಮಿ ಭಕ್ತರಿಗೆ ಇಲ್ಲಿ ಕೈ, ಕಾಲು, ಮುಖ ತೊಳೆಯಲು ಕೂಡ ಯಾವುದೇ ವ್ಯವಸ್ಥೆಗಳಿಲ್ಲ.ಸರ್ಕಾರದಡಿಯಲ್ಲಿರುವ ಈ ದೇವಸ್ಥಾನವನ್ನು ನಿರ್ವಹಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ ಇದೆ. ಆದರೆ ಇದು ಬಳಸಲು ಯೋಗ್ಯವಾಗಿಲ್ಲ. ಈ ಪ್ರದೇಶದಲ್ಲಿ ಕೊಳಚೆ ನೀರಿದ್ದು, ಹಂದಿಗಳ ವಾಸಸ್ಥಳವಾಗಿ ದುರ್ವಾಸನೆಯಿಂದ ಕೂಡಿದೆ. ಇಲ್ಲಿ ಜನರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕುಡಿಯುವ ನೀರಿಗೆ ಸೂಕ್ತವಾದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು. ಇಲ್ಲಿ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ, ಬೀದಿ ಬದಿ…

Read More

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೆ ಸರ್ಕಾರ ರಚಿಸಲು ಸಿದ್ಧತೆ ಆರಂಭಿಸಿದೆ. ಮಾರ್ಚ್ 25 ರಂದು ಸರ್ಕಾರ ರಚನೆಗಾಗಿ ‘ಪ್ರಮಾಣ ವಚನ ಸ್ವೀಕಾರ ಸಮಾರಂಭ’ ಆಯೋಜಿಸಲಾಗಿದೆ. ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆಯೊಳಗೆ ರಾಜ್ಯದ 27 ಸಾವಿರಕ್ಕೂ ಹೆಚ್ಚು ಶಕ್ತಿ ಕೇಂದ್ರದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಗುರುವಾರ ಸಂಜೆ ಬಿಜೆಪಿ(BJP) ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಕ್ಷಕರಾಗಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುವರ್ ದಾಸ್ ಸಹ ವೀಕ್ಷಕರಾಗಿ ಭಾಗವಹಿಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ವಿಧಿವಿಧಾನಗಳು ಸಭೆಯಲ್ಲಿ ಪೂರ್ಣಗೊಳ್ಳಲಿವೆ. ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಷಾ ಚರ್ಚೆ…

Read More

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಟೋಲ್ ಪ್ಲಾಜಾ ಬಳಿ ವಾಸಿಸುವ ಜನರಿಗೆ ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಿದೆ. ಆಧಾರ್ ಕಾರ್ಡ್ ಹೊಂದಿರುವ ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯ ಜನರಿಗೆ ಸರ್ಕಾರ ಪಾಸ್‌ ಗಳನ್ನು ನೀಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ 60 ಕಿಮೀ ಪ್ರದೇಶದಲ್ಲಿ ಕೇವಲ ಒಂದು ಟೋಲ್ ಪ್ಲಾಜಾ(Toll Plaza) ಇರುತ್ತದೆ ಎಂದು ಭರವಸೆ ನೀಡಿದರು. 60 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಎರಡನೇ ಟೋಲ್ ಪ್ಲಾಜಾ ಇದ್ದರೆ ಮುಂದಿನ ಮೂರು ತಿಂಗಳೊಳಗೆ ಅದನ್ನು ಮುಚ್ಚಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಯಾವ ಜನರು ಟೋಲ್ ಪ್ಲಾಜಾದಲ್ಲಿ ರಿಯಾಯಿತಿ ಸಿಗಲಿದೆ – ರಾಷ್ಟ್ರಪತಿ – ಉಪರಾಷ್ಟ್ರಪತಿ – ಪ್ರಧಾನ ಮಂತ್ರಿ – ಮುಖ್ಯಮಂತ್ರಿ – ಮಂತ್ರಿಗಳು – ಸಂಸತ್ತಿನ ಸದಸ್ಯ – ನ್ಯಾಯಾಧೀಶರು-ನ್ಯಾಯಾಧೀಶರು – ರಕ್ಷಣಾ ಸಚಿವಾಲಯಕ್ಕೆ ಸೇರಿದ ವಾಹನಗಳು – ಪೊಲೀಸ್…

Read More

ಮುಂಬೈನ ಥಾಣೆಯಲ್ಲಿರುವ ಪುಷ್ಪಕ್ ಗ್ರೂಪ್‌ನ ಘಟಕದ ಪುಷ್ಪಕ್ ಬುಲಿಯನ್‌ಗೆ ಸೇರಿದ ಸುಮಾರು 6.45 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನ ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ ಎಂದು ತಿಳಿಸಿದೆ. ಇವುಗಳಲ್ಲಿ ಥಾಣೆಯಲ್ಲಿರುವ ನೀಲಾಂಬರಿ ಯೋಜನೆಯಲ್ಲಿ 11 ಫ್ಲಾಟ್‌ಗಳು ಸೇರಿವೆ, ಇದು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ್ದು, ಇದು ಶ್ರೀಧರ್ ಮಾಧವ್ ಪಾಟಂಕರ್ ಅವರ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿದೆ. ಪಾಟಂಕರ್ ಮಹಾ ಸಿಎಂ ಉದ್ಧವ್ ಠಾಕ್ರೆ ಸೋದರ ಮಾವ 2017 ರ ಮಾರ್ಚ್‌ನಲ್ಲಿ ಪುಷ್ಪಕ್ ಬುಲಿಯನ್ ಮತ್ತು ಇತರ ಸಮೂಹ ಕಂಪನಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (PMLA ) ಅಡಿಯಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಇಡಿ ತಿಳಿಸಿದೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು ಮಹೇಶ್ ಪಟೇಲ್, ಚಂದ್ರಕಾಂತ್ ಪಟೇಲ್, ಅವರ ಕುಟುಂಬ ಸದಸ್ಯರು ಮತ್ತು ಅವರ ನಿಯಂತ್ರಣದಲ್ಲಿರುವ ಕಂಪನಿಗಳ ಒಡೆತನದ 21.46 ಕೋಟಿ ರೂಪಾಯಿ ಮೌಲ್ಯದ ಇತರ ಆಸ್ತಿಗಳನ್ನು ಜಪ್ತಿ…

Read More

ಬಿಬಿಎಂಪಿ(BBMP) ಖಾರ್ಯವೈಖರಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೊರೊನಾ 1, 2 ಮತ್ತು 3ನೇ ಅಲೆಯ ವೇಳೆ ಸೋಂಕಿತರ ಚಿಕಿತ್ಸೆ ನೀಡಲು ಆಯುಷ್ ಮತ್ತು ದಂತ ವೈದ್ಯರನ್ನು ನೇಮಕ ಮಾಡಿಕೊಂಡಿದ್ದ ಬಿಬಿಎಂಪಿ ಇದೀಗ ನಮಗೆ ನಿಮ್ಮ ಅಗತ್ಯವಿಲ್ಲವೆಂದು ಹೇಳಿದೆ. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್ ಮಾಡಿದ್ದು, ಬಿಬಿಎಂಪಿ ಅಧಿಕಾರಿಗಳನ್ನು(BBMP Officers) ತರಾಟೆಗೆ ತೆಗೆದುಕೊಂಡಿದ್ದಾರೆ.‘ಆಗತ್ಯ ಇದ್ದಾಗ ಕೆಲಸ ಮಾಡಿಸಿಕೊಂಡು, ಅಗತ್ಯ ಇಲ್ಲದಿದ್ದಾಗ ಮನೆಗೆ ಹೋಗಿ ಎನ್ನುವುದು ಯಾವ ನ್ಯಾಯ? ಕೋವಿಡ್(COVID-19) 1, 2 ಮತ್ತು 3ನೇ ಅಲೆಯ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್, ದಂತ ವೈದ್ಯರನ್ನು ಬಿಬಿಎಂಪಿ(BBMP) ನೇಮಕ ಮಾಡಿಕೊಂಡಿತ್ತು’ ಎಂದು ಟ್ವೀಟ್ ಮಾಡಿದ್ದಾರೆ. ‘2 ವರ್ಷ ರಾಜ್ಯಕ್ಕೆ ಕಷ್ಟವಿದ್ದಾಗ ಇವರ ಸೇವೆ ಪಡೆದು, ಈಗ ಎಕಾಏಕಿ ಬೇಡ ಎನ್ನುವುದು ಸರಿಯಲ್ಲ. ಆದಷ್ಟು ಇವರ ಸೇವೆಯನ್ನು ಮುಂದುವರೆಸಬೇಕು ಹಾಗೂ ಬಿಬಿಎಂಪಿ(BBMP) ವತಿಯಿಂದ ಬೆಂಗಳೂರಿನ ಎಲ್ಲಾ ವಾರ್ಡುಗಳಲ್ಲಿ ತೆರೆಯಲಿರುವ ನಮ್ಮ ಕ್ಲಿನಿಕ್ ಗಳಿಗೆ ಆದರೂ ಇವರ ಸೇವೆಯನ್ನು…

Read More

ಸರ್ಕಾರ ಮತ್ತೆ ಜನರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಪೆಟ್ರೋಲಿಯಂ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರ ಜಾರಿಯಾಗಲಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಕಂಡಿದೆ. ಮಂಗಳವಾರ ಡೀಸೆಲ್ 0.79 ಪೈಸೆ, ಪೆಟ್ರೋಲ್ 0.84 ಪೈಸೆ ಹೆಚ್ಚಳ ಆಗಿದ್ರೆ, ಬುಧವಾರ ಮತ್ತೆ ಪೆಟ್ರೋಲ್ ಬೆಲೆ 84 ಪೈಸೆ, ಡೀಸೆಲ್ ಬೆಲೆ 79 ಪೈಸೆ ಮತ್ತೆ ಏರಿಕೆಯಾಗಿದೆ. ಒಟ್ಟಿನಲ್ಲಿ ಎರಡು ದಿನದಲ್ಲಿ ಪೆಟ್ರೋಲ್ ಬೆಲೆ 1.68, ಡೀಸೆಲ್ ಬೆಲೆ 1.58 ಕ್ಕೆ ಏರಿಕೆಯಾದಂತಾಗಿದೆ. ಬುಧವಾರದಿಂದ ಪೆಟ್ರೋಲ್ ದರ (Petrol Price) 102.26, ಡೀಸೆಲ್ 86.59 ರೂಪಾಯಿ, ಹಾಗೂ ಸ್ಪೀಡ್ ಪೆಟ್ರೋಲ್ ಹೊಸ ದರ 106.67, ಗ್ರೀನ್ ಡೀಸೆಲ್ ದರ 90.08 ರೂ. ಇರಲಿದೆ. ನಿರಂತರವಾಗಿ ಏರಿಕೆಯಾಗ್ತಿರುವ ಇಂಧನ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅಗತ್ಯವಸ್ತುಗಳ…

Read More

ತುಮಕೂರು: ತೆಂಗಿನ ಕಾಯಿ ಕೀಳಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ. ತನ್ನ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ತೋಟದ ಮುಳ್ಳು ತಂತಿಯ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ವಿಚಾರ ತಿಳಿಯದೇ ವ್ಯಕ್ತಿಯು ತೆಂಗಿನ ಕಾಯಿ ತೆಗೆದುಕೊಳ್ಳಲು ಹೋಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ನಟರಾಜು ಮತ್ತು ಸಿಬ್ಬಂದಿ  ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವರದಿ: ಮಂಜುನಾಥ್ ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More