Subscribe to Updates
Get the latest creative news from FooBar about art, design and business.
- ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ
- ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣ ಮಾಡಲು ಸಿಎಂಗೆ ಮನವಿ: ಶಾಸಕ ಅನಿಲ್ ಚಿಕ್ಕಮಾದು
- ಚಿಪ್ಸ್ ಖರೀದಿಸಲು ಬಂದಿದ್ದ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ಕಿರುಕುಳ!
- ಭೂಸ್ವಾಧೀನ ವಿರುದ್ಧದ ಪ್ರತಿಭಟನೆಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
- ಪತಿಯಿಂದಲೇ ಮಹಿಳಾ ಕೌನ್ಸಿಲರ್ ಬರ್ಬರ ಹತ್ಯೆ!
- ತಿಪಟೂರು: ಆರ್ಥಿಕ ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ
- ಜುಲೈ 6ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
- ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
Author: admin
ಕರ್ನಾಟಕ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ ಭಾಸ್ಕರ್ ರಾವ್ ಅವರ ಸ್ವಯಂ ನಿವೃತ್ತಿಗೆ ರಾಜ್ಯ ಸರ್ಕಾರ ಅನುಮೋದಿಸಿದೆ. ಡಿಸೆಂಬರ್ 31 ರಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹುದ್ದೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸ್ವಂ ಭಾಸ್ಕರ್ ರಾವ್ ಅವರೆ ಧೃಡಪಡಸಿದ್ದು ಸರ್ಕಾರ ಸ್ವಂ ನಿವೃತ್ತಿಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಹುದ್ಧೆಯನ್ನ ತ್ಯಜಿಸಿ ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ . ನಾನು ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನನ್ನ ಕುಟುಂಬದ ಜೊತೆ ಪ್ರಯಾಣಿಸಲು ಅವರ ಜೊತೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಎಂದು ಅವರು ಹೇಳಿದ್ದಾರೆ. 1990 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ರಾವ್ ಅವರು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅರ್ಜಿ ಸಲ್ಲಿಸಿದ್ದರು. ಕೂಡಲೇ ಒಪ್ಪಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅವರ ಕಡತ ಮುಖ್ಯಮಂತ್ರಿ ಬಳಿ ಬಾಕಿ ಉಳಿದಿದ್ದು, ಇತ್ತೀಚೆಗಷ್ಟೇ ಸಿ ಎಂ…
ಮಂಡ್ಯ : ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಅತಿಥಿ ಉಪನ್ಯಾಸಕರ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕಾಂಗ್ರೆಸ್ ಮುಖಂಡ ಮಧು ಜಿ. ಮಾದೇಗೌಡ ಬೆಂಬಲ ಸೂಚಿಸಿದ್ದಾರೆ. ರಾಜ್ಯಾದ್ಯಂತ ಉಪನ್ಯಾಸಕರು ಪ್ರತಿಭಟನೆ ನಡೆಸ್ತಿದ್ದಾರೆ. ಅವರ ಬೇಡಿಕೆಗಳನ್ನು ಪೂರೈಸಲು ಮುಂದಾಗಬೇಕು. ಸರ್ಕಾರ ಇನ್ನು ಕೂಡ ಕಣ್ಮುಚ್ಚಿಕುಳಿತಿದೆ.ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕು. ಅತಿಥಿ ಉಪನ್ಯಾಸಕರ ಜೊತೆ ನಾವು ಇರ್ತೇವೆ, ಸರ್ಕಾರ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಮಧು ಒತ್ತಾಯಿಸಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ವಿಧಾನ ಸಭಾ ಕ್ಷೇತ್ರದ ಹೊನ್ನವಳ್ಳಿ ಕ್ಷೇತ್ರದ ಗ್ರಾಮ ಪಂಚಾಯಿತಿ ಸಾರ್ವರ್ತಿಕ ಚುನಾವಣೆಯಲ್ಲಿ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್-11 ಬಿಜೆಪಿ-01 ಪಕ್ಷೇತರ-02 ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ: ವಿದ್ಯಾರ್ಥಿಗಳು ದೇಶದ ನಿಜವಾದ ಭವಿಷ್ಯ, ಅಬ್ದುಲ್ ಕಲಾಂ ಸೇರಿದಂತೆ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಗಳಿಸಿ ತುಮಕೂರು ಶ್ರೀ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಪಟ್ಟಣದ ಎಂ ಜಿ ಎಂ ಶಾಲೆಯಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ವತಿಯಿಂದ ಸರ್ಕಾರಿ ಶಾಲೆಗಳ ಉನ್ನತಿಕರಣ ಹಾಗೂ ಶಾಲಾ ಪೀಠೋಪಕರಣಗಳು ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆ ಜೀವನದ ಅತ್ಯಂತ ಶ್ರೇಷ್ಠ ಘಟ್ಟ. ಜೀವನದಲ್ಲಿ ಅರ್ಥಹೀನವಾಗಿ ಕಳೆದ ಸಮಯ ಅತ್ಯಮೂಲ್ಯ ಕಾಲಘಟ್ಟದ ನಷ್ಟ. ಸಮಯ ಎಲ್ಲಕ್ಕಿಂತ ಶ್ರೇಷ್ಠ. ದೇವರು ಎಲ್ಲರಿಗೂ ಕೊಟ್ಟ ಶ್ರೇಷ್ಠ ಸಂಪನ್ಮೂಲ ಸಮಯ. ಇಂದು ಒಂದು ಉತ್ತಮ ಶಾಲೆ ತೆರೆದರೆ ನಾಳೆ ನೂರು ಜೈಲುಗಳನ್ನು ಮುಚ್ಚಬಹುದು. ಶಿಕ್ಷಕರು ಮಕ್ಕಳಿಗೆ ನೈತಿಕತೆಯ ಚೌಕಟ್ಟಿನಲ್ಲಿ ಸುಂದರವಾದ ಪರಿಸರವನ್ನು ಪರಿಚಯಿಸಬೇಕಿದೆ ಎಂದರು. ರಾಷ್ಟ್ರ ಕವಿ ಕುವೆಂಪು ರಾಮಕೃಷ್ಣ ಆಶ್ರಮದ ಶಿಶು ಮತ್ತು ಹಳೇಯ ವಿದ್ಯಾರ್ಥಿ. ಅವರಿಗೆ ಜ್ಞಾನ ಪೀಠ ಪ್ರಶಸ್ತಿ…
ವಿವೇಕಾನಂದ ಹೆಚ್.ಕೆ. ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಬರವಣಿಗೆ – ಸಾಹಿತ್ಯ – ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ…… ( ಡಿಸೆಂಬರ್ 29 ) ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಎಂಬ ಭಾಷೆಯನ್ನು – ಸಂಸ್ಕೃತಿಯನ್ನು – ಕನ್ನಡ ಮಣ್ಣಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಗಿಲೆತ್ತರಕ್ಕೆ ಏರಿಸಿ ಅದರ ಗಡಿಯನ್ನು ವಿಸ್ತರಿಸಿ ಭಾಷೆಯ ಮಹತ್ವ ಸಾರಿದವರು. ಅಕ್ಷರಗಳಲ್ಲಿ ಕೇವಲ ಭಾವನೆಗಳನ್ನು ಮಾತ್ರ ತುಂಬದೆ ಒಂದು ನಾಡಿನ ಮನುಷ್ಯ ಪ್ರಜ್ಞೆಯನ್ನು ಚಿಂತನೆಯಾಗಿಸಿ ವಿಶ್ವ ಮಾನವತೆಗೆ ದಾರಿ ತೋರಿದ ಅದ್ಬುತ ಚಿಂತಕ. ಅವರ ನೆನಪಿನ ನೆಪದಲ್ಲಿ ಒಂದಷ್ಟು ಅಕ್ಷರಗಳ ಆತ್ಮಾವಲೋಕನ…… ಬರವಣಿಗೆ….. ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ ಕ್ರಿಯೆ ಅಥವಾ ಅಭಿಪ್ರಾಯ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ 2021-22 ನೇ ಗ್ರಾಮ ಪಂಚಾಯತಿ ಸದಸ್ಯರ ಚುನಾವಣೆಯಲ್ಲಿ ಐಮಂಗಲ ಹೋಬಳಿಯ ಹರ್ತಿಕೋಟೆ ಗ್ರಾಮ ಪಂಚಾಯತಿಯ ಬ್ಲಾಕ್ ನಂ 01ರಲ್ಲಿ , ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಚಂದ್ರಶೇಖರಯ್ಯ 445 ಮತಗಳನ್ನು ಪಡೆದಿದ್ದು , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ ಅವರು 546 ಮತಗಳನ್ನು ಪಡೆದು , ಚಂದ್ರಶೇಖರಯ್ಯವರಿಗಿಂತಲೂ 101 ರ ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಮಹೇಶ್ವರಿ ಗೋಡೆ ತಿಪ್ಪೇಸ್ವಾಮಿ ಅವರು, ಈ ನನ್ನ ಗ್ರಾಮದ ಗ್ರಾಮಸ್ಥರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಎಂದಿಗೂ ಸಹ ಚಿರ ಋಣಿ . ನನ್ನ ಗ್ರಾಮದ ಗ್ರಾಮಸ್ಥರಿಗೆ ನನ್ನ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು . ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಮಹಂತೇಶ್, ಪ್ರೇಮದಾಸ್, ಕೆಂಪಣ್ಣ , ಸೋಮು, ಬಾಲಶಂಕರ್, ಕಣುಮಯ್ಯ , ಪರಮಶಿವ , ಮಾಲತೇಶ್, ಮಹಸ್ವಾಮಿ, ಚಿಕ್ಕಣ್ಣ, ಸೂರಗೊಂಡನಹಳ್ಳಿ ಮಂಜುನಾಥ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,…
ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿಶ್ವಕರ್ಮ ಆಚಾರ್ಯ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡಮಿಯ 16 ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ 2 ಅಡಿ ಎತ್ತರದ ಕಲ್ಲಿನ ನಾಟ್ಯಗಣಪತಿ ಕಲಾಕೃತಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಚಿತ್ರಕಲೆ ಮತ್ತು ಶಿಲ್ಪಕಲೆಯ ಮುಖಾಂತರ ತಮ್ಮ ವಿಶಿಷ್ಟ ಸೇವೆಯ ಮುಖಾಂತರ ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಲಭಿಸಿದ್ದ ಇವರಿಗೆ , ಈ ಬಾರಿಯ ಶಿಲ್ಪಕಲಾ ಕ್ಷೇತ್ರದ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕನ್ನಡಭವನ ನಯನ ಸಭಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾದ ವೀರಣ್ಣ ಅರ್ಕಾಸಾಲಿ ಹಾಗೂ ಪ್ರೊ.ನಿರಂಜನ್ ವಾನಳ್ಳಿ ಮಾನ್ಯ ಕುಲಪತಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ , ಹಿರಿಯ ಶಿಲ್ಪಿ ಎಂ ರಾಮಮೂರ್ತಿ, ರಿಜಿಸ್ಟ್ರಾರ್ ಆರ್ ಚಂದ್ರಶೇಖರ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ವರದಿ: ಆನಂದ್ ತಿಪಟೂರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬ್ರೆಸಿಲಿಯಾ: ಈಶಾನ್ಯ ಬ್ರೆಜಿಲ್‍ನ ಬಹಿಯಾ ರಾಜ್ಯದ ಒಟ್ಟು 116 ನಗರಗಳಲ್ಲಿ ನವೆಂಬರ್ ಅಂತ್ಯದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ತುರ್ತುಸ್ಥಿತಿ ತಲೆದೋರಿದೆ. 21 ಮಂದಿ ಅಸುನೀಗಿ 358 ಮಂದಿ ಗಾಯಗೊಂಡಿದ್ದಾರೆ. ಬ್ರೆಜಿಲ್ ನ ಇತರ ನಾಲ್ಕು ಉತ್ತರ ಮತ್ತು ಆಗ್ನೇಯ ರಾಜ್ಯಗಳಲ್ಲಿ ಸಹ ಇತ್ತೀಚಿನ ದಿನಗಳಲ್ಲಿ ಪ್ರವಾಹ ಉಂಟಾಗಿದೆ. ಬಹಿಯಾದಲ್ಲಿ ಪ್ರವಾಹದಿಂದ 4,70,000 ಜನರು ಸಂಕಷ್ಟಪೀಡಿತರಾಗಿದ್ದಾರೆ. ಕನಿಷ್ಟ ಪಕ್ಷ 50 ನಗರಗಳಲ್ಲಿ ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಜನರು ತಮ್ಮ ವಸ್ತುಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ದಾವಿಸುವಂತೆ ಮಾಡಿದೆ.ರಾಜ್ಯ ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ, ಪ್ರವಾಹದಿಂದಾಗಿ 34,163 ಜನರು ನಿರ್ವಸತಿಗರಾಗಿದ್ದಾರೆ ಮತ್ತು ಬಹುತೇಕ 43,000 ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಇದು ಕಳೆದ 32 ವರ್ಷಗಳಲ್ಲಿ ಬ್ರೆಜಿಲ್‍ನ ಬಹಿಯಾದಲ್ಲಿ ಅತಿ ಹೆಚ್ಚು ಮಳೆ ಸುರಿದ ಅವಯಾಗಿದೆ. ಈ ವರ್ಷ ಇಲ್ಲಿ ವಾಡಿಕೆಗಿಂತ ಐದು ಪಟ್ಟು ಅಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ತುಮಕೂರು: ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ 2022ರ ಹೊಸ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್, ಗ್ರೇಡ್ -2 ತಹಸೀಲ್ದಾರ್ ಜಗನ್ನಾಥ್ , ಕಂದಾಯ ಇಲಾಖೆಯ ನೌಕರರ ಅಧ್ಯಕ್ಷರಾದ ಸಿ .ವಿ ರವಿಕುಮಾರ್, ಉಪಾಧ್ಯಕ್ಷರಾದ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ನಾಗಮಣಿ, ಖಜಾಂಚಿಗಳಾದ ಅಶೋಕ್, ಜಂಟಿ ಕಾರ್ಯದರ್ಶಿ ಪುನೀತ್, ನಿರ್ದೇಶಕರಾದ ನೀಲಕಂಠೇಶ್ ಹಾಗೂ ಕಂದಾಯ ಇಲಾಖೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ನಗರದ ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘ ನಿಯಮಿತದ 2021-2026 ರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಸ್.ಸೋಮಶೇಖರ್, ಉಪಾಧ್ಯಕ್ಷರಾಗಿ ಮಂಜುನಾಥ ಎಂ.ಸಿ., ನಿರ್ದೇಶಕರುಗಳಾಗಿ ರಾಜಶೇಖರ್ ಪಿ.ಎಸ್., ಶಂಕರಮೂರ್ತಿ ಹೆಚ್.ಎಸ್., ಸೋಮಶೇಖರಪ್ಪ ಎಂ.ಆರ್., ಶಶಿಕಿರಣ್ ಎಂ., ನಟರಾಜ್, ಶ್ರೀಮತಿ ಲಕ್ಷ್ಮಮ್ಮ,ಶ್ರೀಮತಿ ಗಿರಿಜಾ,ಗಿರೀಶ್ ಕುಮಾರ್. ಎಸ್,ರೇಣುಕಮೂರ್ತಿ.ಬಿ, ಕಾಂತರಾಜ್.ಆರ್, ಮತ್ತು ಸಂಜೀವಯ್ಯ.ಎಸ್ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾದ ಎಸ್. ಸೋಮಶೇಖರ್, ಉಪಾಧ್ಯಕ್ಷ ಮಂಜುನಾಥ್ ಮತ್ತು ರಿಟರ್ನಿಂಗ್ ಅಧಿಕಾರಿ ವಿ.ಎಸ್. ಗುರುರಾಜ್ ಮಾತನಾಡಿದರು. ಆಡಳಿತಾಧಿಕಾರಿ ಶ್ರೀಮತಿ ಬಬಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮತ್ತು ಸಿಬ್ಬಂದಿ ಕುಮಾರಸ್ವಾಮಿ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy