Author: admin

ಆರ್ಥಿಕ ದಿವಾಳಿಯಿಂದ ಜರ್ಜರಿತಗೊಂಡಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅರಾಜಕತೆ, ದೊಂಬಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಇಂದು ದೇಶದಲ್ಲಿ ಹಠಾತ್ತಾನೆ ತುರ್ತು ಘೋಷಣೆ ಮಾಡಲಾಗಿದೆ. ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಂ ಸಿಂಘೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕ ಜೊತೆ ಮಾಲ್ಡೀವ್ಸ್‌ಗೆ ಪಲಾಯನ ಮಾಡಿರುವ ಸುದ್ಧಿ ತಿಳಿಯುತ್ತಿದ್ದಂತೆ ಜನಾಕ್ರೋಶ ಭುಗಿಲೆದ್ದಿದೆ. ಗೊಟಬಯ ರಾಜೀನಾಮೆಗೆ ಪಟ್ಟು ಹಿಡಿದು ಇಂದು ಸಾವಿರಾರು ಜನರು ರಾಜಧಾನಿ ಕೊಲಂಬೊ ನಗರದ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ರೊಚ್ಚಿಗೆದ್ದ ಗುಂಪು ಶ್ರೀಲಂಕಾ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭರ್ಜರಿ ಜಟಾಪಟಿ ನಡೆಯಿತು. ಏಕಾಏಕಿ ಆಕ್ರೋಶಗೊಂಡ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ಅಶ್ರುವಾಯು ಸಿಡಿಸಿದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ…

Read More

ಪುತ್ತೂರು: ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ(ರಿ) (BSI) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ‘ಧಮ್ಮ ಚಕ್ರ ಪ್ರವರ್ತನ’ ದಿನವಾದ ಆಷಾಡ ಹುಣ್ಣಿಮೆಯನ್ನು  (ಗುರು ಪೂರ್ಣಿಮೆ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಚರಿಸಲಾಯಿತು. ಸಮ್ಯಕ್ ಜ್ಞಾನವನ್ನು ಪಡೆದ ಭಗವಾನ್ ಬುದ್ಧರು ಧಮ್ಮವನ್ನು ಮೊಟ್ಟ ಮೊದಲ ಬಾರಿಗೆ ಸಾರನಾಥದಲ್ಲಿರುವ ಜಿಂಕೆವನದಲ್ಲಿ ( Deer park) ಐದು ಜನ ಭಿಕ್ಕುಗಳಿಗೆ ಬೋಧಿಸಿದ ಐತಿಹಾಸಿಕ ದಿನವೇ ಧಮ್ಮ ಚಕ್ರ ಪ್ರವರ್ತನ ದಿನ. ಇದು ಆಷಾಡ ಹುಣ್ಣಿಮೆಯಂದು ನಡೆದ ಘಟನೆಯಾಗಿದ್ದು ಭಗವಾನ್‌ ಬುದ್ಧರು ಧಮ್ಮ ಬೋಧನೆ ಮಾಡಿದ ಕುರುಹಾಗಿ ‘ಗುರು ಪೂರ್ಣಿಮೆ’ ಎಂದೂ ಈ ದಿನವನ್ನು ಸಂಭ್ರಮಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಬಿಎಸ್ ಐ(ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾದ ಆಯುಷ್ಮಾನ್ ದೇವಪ್ಪ ಕಾರೆಕ್ಕಾಡ್, ಉಪಾಧ್ಯಕ್ಷರಾದ ಆಯುಷ್ಮತಿ ಜಯಶ್ರೀ, ಖಚಾಂಚಿಗಳಾದ ಆಯುಷ್ಮಾನ್ ಮನೋಹರ್ ಪುತ್ತೂರು ಹಾಗೂ ಇನ್ನಿತರ ಬೌದ್ಧ ಉಪಾಸಕ, ಉಪಾಸಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಆಯುಷ್ಮಾನ್ ಭಾಸ್ಕರ್ ವಿಟ್ಲ…

Read More

ಅಮರಾವತಿ:  ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಕಾಲರಾದಿಂದ ಐದು ಜನರು ಸಾವನ್ನಪ್ಪಿದ್ದು, 181 ರೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು  ಮೃತಪಟ್ಟವರಾಗಿದ್ದು, ಈ ರೋಗಿಗಳಲ್ಲಿ ಮೂವರು 24 ರಿಂದ 40 ವರ್ಷ ವಯಸ್ಸಿನವರು ಮತ್ತು ಇಬ್ಬರು 70 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ. ಜುಲೈ 7 ರಂದು ಅಮರಾವತಿ ಜಿಲ್ಲೆಯ ಚಿಖಲ್ದಾರ ಮತ್ತು ಅಮರಾವತಿ ಬ್ಲಾಕ್ ಗಳಲ್ಲಿ ಏಕಾಏಕಿ ಕಾಲರ ಹರಡಿದೆ. ಸಾಂಕ್ರಾಮಿಕ ಪೀಡಿತ ಗ್ರಾಮಗಳಲ್ಲಿ ವೈದ್ಯಕೀಯ ತಂಡಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ನೀರಿನಲ್ಲಿ ಕಾಲರ ಹರಡುವ ಹಿನ್ನೆಲೆಯಲ್ಲಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ, ರೋಗಿಗಳ ಕಣ್ಗಾವಲು, ನಿರ್ವಹಣೆ ಮತ್ತು ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿಗೆ ಸಂಬಂಧಿಸಿದಂತೆ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ತುಮಕೂರು:  ಆರೋಪಗಳು ಶಿವ, ಬ್ರಹ್ಮ ಕೃಷ್ಣನನ್ನೇ ಬಿಟ್ಟಿಲ್ಲ, ಸಮಂತಕ ಮಣಿ‌ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು ಅಂತರದಲ್ಲಿ ಮೋದಿಯನ್ನು ಬಿಡ್ತಾರಾ? ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಪ್ರಶ್ನಿಸಿದರು. ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದಗಂಗಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುರುಪೂರ್ಣಿಮೆಯಂದು ಗುರುಗಳ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ಖುಷಿ ಅನಿಸಿದೆ ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದರು. ಈ ರಾಷ್ಟ್ರದ ಜನ‌ ಎದ್ದೆಯುಬ್ಬಿಸಿ ಹೇಳಬೇಕಾದದ್ದುದಂತಹ ಒಳ್ಳೇ ಧೀಮಂತ ನಾಯಕ ಸಿಕ್ಕಿದ್ದಾನೆ.  ಘರ್ಜಿಸುತ್ತಿರುವ ಆ ಸಿಂಹ ಆಯಪ್ಪನೇ ಮೋದಿ,  ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ,  ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ ಲಾಂಛನದ ಬಾಯಿ‌ ಮುಚ್ಚಿತ್ತು. ಈಗ‌ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೆ ಘರ್ಜನೆ ಮಾಡುತ್ತಿದೆ ಎಂದರು. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ. ಅವರನ್ನು ಆರಾಧಿಸುವವರ ಸಂಖ್ಯೆ 98% ಇದೆ.…

Read More

ಬೆಂಗಳೂರು: ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೀಪಾಂಜಲಿನಗರದ ಜಂಕ್ಷನ್ ಬಳಿ ನಡೆದಿದೆ. ಶಿಥಿಲಾವಸ್ಥೆಯಲ್ಲಿದ್ದ ತಡೆಗೋಡೆ ಇದಾಗಿದ್ದು, ಭಾರಿ ಮಳೆಯಿಂದಾಗಿ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೃತರನ್ನು ರಾಜಾಮಣಿ ಹಾಗೂ ಬಾಲು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹೆಸರು ಪ್ರವೀಣ್ ಕುಮಾರ್ ಇಮೇಜ್ ಒರಿಜಿನಲ್, ಫೋಟೋ ಫಿನಿಷ್ ವೈಟ್ ಶೀಟ್ ಹಿಸ್ಟರಿ ಇನ್ ಜೆಡಿಎಸ್ ಬ್ಯುಟಿಫುಲ್ ಲಾಂಗ್ವೇಜ್ ಸ್ಕಿಲ್ ಟಾಕ್ ವಂಡರ್ ಫುಲ್ ಮೋರ್ ಹಾನೆಸ್ಟ್ ಮೋರ್ ಹಂಬಲ್ ಮೋರ್ ಸಿಂಪಲ್… ಹೌದು. ಪ್ರವೀಣ್ ಕುಮಾರ್ ಅಂದರೆ ವ್ಯಕ್ತಿ ಅಪ್ಪಟ ಬಂಗಾರ ಅಂತ ಇಲ್ಲಿನ ಜನ ಹೇಳ್ತಾರೆ. ಪ್ರವೀಣ್ ಮೈಕ್ ಮುಂದೆ ನಿಂತಾಗ ಅವರನ್ನು ಯಾವ ಪರಿ ಸಂಘಟನಾ ಕೌಶಲ್ಯ ಆವರಿಸುತ್ತದೆ ಎಂದರೆ, ಕೇಳುಗರು ಬೆಕ್ಕಸ ಬೆರಗಾಗುವಂತೆ ಸುಲಿಲಿತವಾಗಿ ಸ್ಪಷ್ಟವಾಗಿ ಸಹಜ ಕನ್ನಡದಲ್ಲಿ ಅರಳು ಹುರಿದಂತೆ ಎಲ್ಲರಿಗೂ ಅರ್ಥವಾಗುವಂತೆ ಅಚ್ಚುಕಟ್ಟಾಗಿ ಏನೇನು ವಿಚಾರ ಮುಟ್ಟಿಸಬೇಕು ಅದನ್ನು ಅಚ್ಚಳಿಯದಂತೆ ಪ್ರಸ್ತುತಪಡಿಸುವ ಜಾಣ್ಮೆಯ ಕಲೆ ಇವರಿಗೆ ಸಿದ್ಧಿಸಿದೆ. ಪ್ರವೀಣ್ ಅದ್ಭುತ ಭಾಷಣಕಾರ ಮಾತ್ರ ಅಲ್ಲ, ಒಬ್ಬ ಅತ್ಯುತ್ತಮ ಸಂಘಟನಾಕಾರನೂ ಹೌದು. ಅಪ್ಪಟ ಹೋರಾಟಗಾರನೂ ಕೂಡ ಹೌದು. ಹೇಗೆಂದರೆ ಕೇವಲ ಭಾಷಣಕ್ಕೆ ಸೀಮೀತವಾಗದೆ ಅವರೊಂದಿಗೆ ಮಾತಿಗೆ ಕುಳಿತರೆ ಎಂತಹವರನ್ನೂ ಪ್ರಾದೇಶಿಕ ಪಕ್ಷದತ್ತ ಒಲವು ಮೂಡುವಂತಹ ಸೆಳೆಯುವಂತಹ ದಿವ್ಯಶಕ್ತಿ ಅವರಲ್ಲಿ ಅಡಗಿದೆ. ಇನ್ನೊಬ್ಬರನ್ನು ಉತ್ತೇಜಿಸುವ ಬೆಳೆಸುವ…

Read More

ತುಮಕೂರು: ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಎಸ್.ಡಿ ದಿಲೀಪ್ ಕುಮಾರ್ ಮಾಡಿರುವ ಆರೋಪಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ‌ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಕಲಿ ದಾಖಲೆ ಸೃಷ್ಟಿಸಿ 450 ಎಕರೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಶಾಸಕ ಶ್ರೀನಿವಾಸ್ ಎ1 ಆರೋಪಿ ಎಂದು ಬಿಜೆಪಿಯ ದಿಲೀಪ್ ಹೇಳಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದರು. 2004 ರಲ್ಲಿ ಕದ್ದು ಮೈನ್ಸ್ ಹೊಡೆದು ಅವರ 12 ಲಾರಿ ಹಾಗೂ ಹಿಟಾಚಿಯನ್ನು ಪೊಲೀಸರು ಸೀಜ್ ಮಾಡಿದ್ದರು.‌ ಅವರನ್ನು ಬರೀ ಚಡ್ಡಿಯಲ್ಲಿ‌ ಸ್ಟೇಷನ್ ನಲ್ಲಿ ಕೂರಿಸಿದ್ದರು. ಅವಾಗ ಸ್ಟೇಷನ್‌ ಗೆ ಹೋಗಿ ಬಿಡಿಸಿದ್ದು ನಾನು. ಆ ಮನುಷ್ಯ ಇವತ್ತು ಮಾತನಾಡ್ತಾನೆ ಎಂದು ಹಳೆಯದನ್ನು ಕೆದಕಿ ಕಿಡಿಕಾರಿದರು. ಇವಾಗ ಅರೆಸ್ಟ್ ಆಗಿರುವ ಆರೋಪಿ ಕರಿಯಣ್ಣ ಯಾರು? ನನ್ನ ಹಿಂದೆ ಇರುವವನಾ? ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಅಕ್ರಮ ಮಾಡಿರುವ ವಿಚಾರ…

Read More

ತುಮಕೂರು: ಆಂಜನೇಯಸ್ವಾಮಿ ಜಾತ್ರಾ ರಥೋತ್ಸವದಲ್ಲಿ ಹಿಂದೂ ಮುಸಲ್ಮಾನರ ಸಾಮರಸ್ಯ ಸಾರಿದರು.ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯಸ್ವಾಮಿ ಜಾತ್ರಾ ರಥೋತ್ಸವದಲ್ಲಿ ಈ ಘಟನೆ ನಡೆಯಿತು. ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಮಾರ್ಗಮಧ್ಯೆ ಸಿಕ್ಕ ಮಸೀದಿ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿ ಗೆ ವಿಶೇಷ ಅರ್ಚನೆ ಮಾಡಿಸುವ ಮೂಲಕ ಸಾಮರಸ್ಯ ಸಂದೇಶ ಸಾರಿದರು. ಮಸೀದಿ ಮುಂಭಾಗ ಆಂಜನೇಯ ಸ್ವಾಮಿ ರಥವನ್ನು ಹಿಂದೂ ಮುಸಲ್ಮಾನರು ಜೊತೆಯಾಗಿ ಎಳೆಯುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತ ದುರ್ದೈವಿಯನ್ನು ಎಸ್.ವೆಂಕಟಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ಮದುವೆಯಾಗಿದ್ದು, ಹಲವು ವರ್ಷಗಳ‌ ಹಿಂದೆಯೇ ಇವರನ್ನು ಬಿಟ್ಟು ಗಂಡ ಹೋಗಿದ್ದು, ಒಂಟಿಯಾಗಿ ನಾಯನಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ದುಷ್ಕರ್ಮಿಗಳು ನಿನ್ನೆ ಮನೆಗೆ ನುಗ್ಗಿ ಆಕೆಯನ್ನ ಕೊಂದು ಮನೆಯಲ್ಲಿ ಚಿನ್ನ-ನಗದು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ‌ ನೀಡಿದೆ. 2019ರ ಏಪ್ರಿಲ್ 13ರಂದು ‘ದೊಡ್ಡನೆಕ್ಕುಂದಿ ಗ್ರಾಮದ ಕೋದಂಡರಾಮ ಸರ್ಕಲ್ ದೇವಾಲಯದಲ್ಲಿ ನಡೆಯುತ್ತಿದ್ದ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದ ವೇಳೆ ಅನುಮತಿ ಪಡೆಯದೆ ರಿಜ್ವಾನ್ ಅರ್ಷದ್ ಚುನಾವಣಾ ಪ್ರಚಾರದ ಅಂಗವಾಗಿ ರೋಡ್ ಶೋ ನಡೆಸಿದರು’ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಮೆಯೊಹಾಲ್ ಕೋರ್ಟ್ ಸಂಖ್ಯೆ 43ರಲ್ಲಿ ದಾಖಲಾಗಿರುವ ಎಫ್‌ಐಆರ್ ಮಮತ್ತು ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಎಸ್.ಎ. ಅಹಮದ್ ಅವರು, ‘ಕಾನೂನುಬಾಹಿರವಾಗಿ ದಾಖಲಾಗಿರುವ ಈ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ…

Read More