Subscribe to Updates
Get the latest creative news from FooBar about art, design and business.
- ತಿಪಟೂರು: ಆರ್ಥಿಕ ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ
- ಜುಲೈ 6ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
- ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
- ತುಮಕೂರು: ಬುಕ್ಕಪಟ್ಟಣ ಅಭಯಾರಣ್ಯದಲ್ಲಿ ಅತಿಕ್ರಮಣಗೊಂಡಿದ್ದ 300 ಎಕರೆ ಭೂಮಿ ವಶಕ್ಕೆ
- ಜು.7ರಂದು ಶ್ರೀ ವಡ್ಡುಗಲ್ಲು ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
- ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ
- ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ
- ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್
Author: admin
ತುಮಕೂರು: ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮದ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ” ನೂತನ ಅಧ್ಯಕ್ಷರಾಗಿ ಆಯ್ಕೆಯಾದ “ನಟರಾಜು.ಎಸ್” ರವರನ್ನು ಅಭಿನಂದಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವನ್ನು ನಟರಾಜು.ಎಸ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುವಂತಾಗಲಿ ಎಂದು ಇದೇ ವೇಳೆ ಹಾರೈಸಲಾಯಿತು. ಈ ವೇಳೆ ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹೇಶ್, ಎಸ್.ಡಿ.ಎಂ.ಸಿ(ಜಿ.ಎಚ್.ಪಿ.ಎಸ್)ಯ ಅಧ್ಯಕ್ಷರಾದ ಚಂದ್ರಶೇಖರಯ್ಯ.ಎಸ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರಂಜರ್ ಮೂರ್ತಿ, ಜೈ ಕರ್ನಾಟಕ ವಾಹನ ಮಾಲೀಕರು ಮತ್ತು ಚಾಲಕರ ಸಂಘ (ರಿ) ರಕ್ತ ದಾನ ಜೀವ ದಾನ ಸಂಘದ ತುಮಕೂರು ಘಟಕದ ಜಿಲ್ಲಾಧ್ಯಕ್ಷರಾದ ಸುಬ್ಬು ಎನ್ ಮೂರ್ತಿ ಹಾಗೂ ಊರಿನ ಪ್ರಮುಖರು ಮತ್ತು ಆಜುಬಾಜಿನ ಗ್ರಾಮಸ್ಥರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಊರಿನ ಯುವಕರು ಹಾಗೂ ಹಿರಿಯರೆಲ್ಲ ಸೇರಿ ಪಂಚಾಯ್ತಿ ವೃತ್ತದಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಅರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ಸಿಲ್ ವಿತರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನರು ಅನ್ನದಾನವನ್ನ ಸ್ವೀಕರಿಸಿದರು. ಎಸ್.ಎಲ್.ವಿ.ಪ್ರಾವಿಷನ್ ಸ್ಟೋರ್ ಮಾಲಿಕರಾದ ಎಂ.ಜಿ.ಕುಮಾರ್, ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಬೀರ್ ಹುಸೇನ್, ಉಪಾಧ್ಯಕ್ಷೆಯಾದ ಶಶಿಕಲಾ ಹನುಮೇಗೌಡ, ಸದಸ್ಯರಾದ ಸುರೇಶ್, ಕೆರೆವಳಗೆರೆ ಗ್ರಾಮದ ಸಂದೇಶ್, ಹೊಣಕೆರೆ ಗ್ರಾಮದ ಗೀತಾ ಅರುಣ್ , ಸೊರವನಹಳ್ಳಿ ಸುಶೀಲಮ್ಮ, ಶಿಕ್ಷಕರಾದ ಬಸವರಾಜು ಟಿ.ಬಿ.ಕ್ರಾಸ್ ಶಿವರಾಜು, ರಂಜಿತ್, ರವಿ, ವಿನಯ್ (ಗಾಟಿ) ಮಂಜುನಾಥ್ , ಹೆಚ್.ನಾರಾಯಣಪ್ಪ, ದಾಸಿಹಳ್ಳಿ ಪಾಳ್ಯದ ಯಲ್ಲೇಗೌಡ, ಸದಸ್ಯರಾದ ಜಿತೇಂದ್ರ, ನಾಗೇಶ್, ಟಿ.ಬಿ.ಕ್ರಾಸ್…
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯ ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು. ಮಾಯಸಂದ್ರ ವಲಯದ ಜಡೆಯ ಗ್ರಾಮ ಹಾಗೂ ಬೈತರಹೊಸಹಳ್ಳಿ ಗ್ರಾಮದಲ್ಲಿ ತಮ್ಮ ಸಂಸ್ಥೆಯ ಯೋಜನೆಯಾದ ವಾತ್ಸಲ್ಯ ಯೋಜನೆಯಲ್ಲಿ ಅರ್ಹ ಅಶಕ್ತ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಮಾಯಸಂದ್ರ ವಲಯದ ಮೇಲ್ವಿಚಾರಕಿಯರಾದ ಅಕ್ಷತಾ ಹಾಗೂ ವಲಯದ ಸೇವಾಪ್ರತಿನಿಧಿಗಳು ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು. ವರದಿ: ಸುರೇಶ್ ಬಾಬು. ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಲಂಡನ್: ಪಂಜಾಬ್ ನ ಅಮೃತ್ ಸರದ ಜಲಿಯನ್ ವಾಲಾಭಾಗ್ ನಲ್ಲಿ 1919ರಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ಬ್ರಿಟನ್ ರಾಣಿ ಎಲಿಜಬೆತ್ (95) ಅವರನ್ನು ಹತ್ಯೆ ಮಾಡಲು ಯತ್ನಿಸಿದ ಯುವಕನನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಈ ಯುವಕ ತಾನು ಭಾರತೀಯ. ಸಿಖ್ ಮತ್ತು ತನ್ನ ಹೆಸರು ಜಸ್ವಂತ್ ಸಿಂಗ್ ಬೋಯಲ್ ಎಂದು ಹೇಳಿಕೊಂಡಿದ್ದಾನೆ. ಆರೋಪಿ ಮುಖವಾಡ ಧರಿಸಿದ್ದು, ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ರಾಣಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾಗಿ ವಿಡಿಯೋ ಮೂಲಕ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈತನ ಮಾನಸಿಕ ಪರಿಸ್ಥಿತಿ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೋವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಕ್ರಿಸ್ ಮಸ್ ಆಚರಿಸಲು ರಾಣಿ ಎಲಿಜಬೆತ್ ವಿಂಡ್ಸರ್ ಕ್ಯಾಸೆಲ್ ಗೆ ಆಗಮಿಸಿದ್ದರು. ಆಗ ಸ್ಥಳಕ್ಕೆ ಹೋಗಿದ್ದ ಆರೋಪಿ ತನ್ನ ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಹಿಡಿದುಕೊಂಡಿದ್ದ. ರಾಣಿಯು ನಿವಾಸಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿ ಅವನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ನಾನು ಎಲಿಜಬೆತ್…
ತಿಪಟೂರು: ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಾಲಯದಲ್ಲಿ ಕಾಲಭೈರವ ಜನ್ಮಾಷ್ಟಮಿಯ ಪ್ರಯುಕ್ತ ಕಾಲಭೈರವ ಮೂರ್ತಿಯ ಉತ್ಸವವನ್ನು ಮಠದ ಕಾರ್ಯದರ್ಶಿ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಬಳಿಕ ಕಾಲಭೈರವಸ್ವಾಮಿ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು, ರುದ್ರಾಭಿಷೇಕ, ಗಂಧದ ಅಭಿಷೇಕ, ದೀಪಾರಾಧನೆಯನ್ನು ಕೈಗೊಂಡರು. ಈ ಸಂದರ್ಭದಲ್ಲಿ ದೇವಾಲಯದ ಗುಡಿಗೌಡರುಗಳಾದ ಹುಚ್ಚೇಗೌಡ, ಕೃಷ್ಣಸ್ವಾಮಿ, ಜಗದೀಶ್, ದೊರೆಸ್ವಾಮಿ, ಲಿಂಗರಾಜು, ಹೆಚ್.ವಿ.ಕುಮಾರಸ್ವಾಮಿ ಸೇರಿದಿಂತೆ ಭಕ್ತಾಧಿಗಳು ಇದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಜಿಲ್ಲಾ ಘಟಕ ವತಿಯಿಂದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮಿಲನಗೊಳಿಸಿ ಉದ್ಯೋಗ ಭದ್ರತೆ ನೀಡಿ ಹಾಗೂ ಆತ್ಮಹತ್ಯೆ ಮಾಡಿಕೊಂಡು ಅತಿಥಿ ಉಪನ್ಯಾಸಕ ಹರ್ಷ ಶಾನಭೋಗ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಜಾಥಾ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟಗಾರರು, ಅತಿಥಿ ಉಪನ್ಯಾಸಕರನ್ನು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳುವ ಮೂಲಕ ಸರ್ಕಾರ ಸರ್ಕಾರಿ ಜೀತ ಪದ್ಧತಿಯನ್ನು ಮುಂದುವರಿಸುತ್ತಿದೆ. ಪ್ರಜಾಪ್ರಭುತ್ವ ಮಾದರಿಯ ಕಲ್ಯಾಣ ಸರ್ಕಾರದ ನೀತಿಗೆ ಇದು ವಿರುದ್ಧವಾಗಿದೆ. ಯಾವುದೇ ಕಲ್ಯಾಣ ರಾಜ್ಯದಲ್ಲಿ ಹಸಿವು ಅಪಮಾನದಿಂದ ನೊಂದ ಯಾವುದೇ ವ್ಯಕ್ತಿ ಸಾಯಬಾರದು ಎಂಬುದು ಕಲ್ಯಾಣ ನೀತಿಗೆ ಒಳಪಟ್ಟ ಸರ್ಕಾರಗಳು ರಚನೆಗೊಂಡಿದೆ ಎಂದರು. ಕೊರೊನಾದಂತಹ ಹೆಮ್ಮಾರಿ ಸಂದರ್ಭದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಜನ ಸಾವಿಗೀಡಾದರು. ಉದ್ಯೋಗವಿಲ್ಲದೆ ಕೋಟ್ಯಾಂತರ ಯುವಕರು ತಾತ್ಕಾಲಿಕ ನೌಕರಿಯನ್ನೂ ಕಳೆದುಕೊಂಡು ಬೀದಿಗೆ ಬಂದು ಒಪ್ಪತ್ತಿನ ಗಂಜಿಗೂ ಪರದಾಡಿದರು. ಈ ಸಂದರ್ಭದಲ್ಲಿ…
ಮಧುಗಿರಿ: ವಿಶೇಷ ಚೇತನರ ಬಗ್ಗೆ ಸಹಾನುಭೂತಿ ಬೇಡ ಸಹಾಯ ಹಸ್ತ ಬೇಕಾಗಿದೆ ಎಂದು ಕೊಂಕಲ್ ಮಠದ ಶ್ರೀ ಶ್ರೀ ಓಂಕಾರ ಸ್ವಾಮೀಜಿ ತಿಳಿಸಿದ್ದಾರೆ. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೃಷ್ಠಿ ಟ್ರಸ್ಟ್ ಜಡೇಗೊಂಡನಹಳ್ಳಿ ಮತ್ತು ಆರುಣೋಧಯ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ನೇತ್ರದಾನ ಅರಿವು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಶೇಷ ಚೇತನರಿಗೆ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳು ನೆರವಿನ ಹಸ್ತ ನೀಡಬೇಕಾಗಿದೆ. ಅವರಿಗೆ ಸಿಗಬೇಕಾಗಿರುವ ಸವಲತ್ತುಗಳು ಅವರಿಗೆ ಸಿಗುತ್ತಿಲ್ಲ. ಅದು ಪ್ರತಿಯೊಬ್ಬ ವಿಕಲ ಚೇತನರಿಗೆ ಸಿಗುವಂತಾಗಲು ಸಂಘ ಸಂಸ್ಥೆಗಳು ಸಾರ್ವಜನಿಕರು ಕೈ ಜೋಡಿಸಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಧು ಎನ್. ಜೆ.ಡಿ.ಪಾಳ್ಯ ರಾಜ್ಯದಲ್ಲಿ ಅಂದಾಜು 15 ಲಕ್ಷ ಮಂದಿ ವಿಶೇಷ ಚೇತನರಿದ್ದಾರೆ ಅದು ಶಾಪವಲ್ಲ ಆಕಸ್ಮಿಕ. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಅಂಗವಿಲ ಎಂಬ ಮನೋಭಾವ ಮನಸ್ಸಿನಿಂದ ತೆಗೆದು…
ಮಧುಗಿರಿ: ತಾಲೂಕಿನ ಐ.ಡಿ.ಹಳ್ಳಿ ಗ್ರಾಮದ ಜಾಮಿಯಾ ಮಸೀದಿಯ ಆವರಣದಲ್ಲಿ ಕೆ.ಜಿ.ಎನ್. ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಮದರಸಾ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ರಿಯಾಜ್ ಅಹ್ಮದ್,ಮೌಲಾನ ಗಳಾದ ಚಾಂದ್ ಭಾಷಾ, ಮುನೀರ್ ಅಹ್ಮದ್, ಮಹಮ್ಮದ್ ಜಾವೀದ್, ಗ್ರಾಮ ಪಂಚಾಯಿತಿ ಸದಸ್ಯ ಜಿಲಾನ್, ಮುಖಂಡರಾದ ವಜೀರ್ ಭಾಷಾ, ಟ್ರಸ್ಟ್ ಅಧ್ಯಕ್ಷ ಜಲಾಲ್ ಬಾಷಾ, ಮದರಸಾ- ಎ- ತಾಲಿ ಮುಲ್- ಖುರಾನ್ ಮಕ್ಕಳು ಹಾಜರಿದ್ದರು. ವರದಿ: ಆಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಂಡ್ಯ : ‘ಮತಾಂತರ ನಿಷೇಧ ಕಾಯ್ದೆ RSS ಅಜೆಂಡಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆ RSS ಅಜೆಂಡಾ, RSS ಹೇಳಿದಂತೆ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದನ್ನ ನಾನು ಅಧಿಕಾರದಲ್ಲಿದ್ದಾಗ ತಂದಿದ್ದು ಅಂತಾರೆ. ಆ ಬಿಲ್ ನ ನನ್ನ ಮುಂದೆ ಇಟ್ಟಿದ್ದರು. ಅದನ್ನ ಬರೆದಿದ್ದ ಎಲ್ಲರೂ RSS ನವರಾಗಿದ್ದರು. ನಾನು ಆಗ ಆಂಜನೇಯನಿಗೆ ಅದನ್ನ ಮುಗಿಸಿಬಿಡು ಅಂತಾ ಹೇಳಿದ್ದೆ. ಅದರಂತೆ ಆಂಜನೇಯ ಅದನ್ನ ತಿರಸ್ಕರಿಸುವಂತೆ ಬರೆದಿದ್ದರು. ಆ ಬಿಲ್ ತಂದಿದ್ದು ಯಡಿಯೂರಪ್ಪ ಸರ್ಕಾರ ಇದ್ದಾಗ, ಅದನ್ನ ಸದನದಲ್ಲಿ ನಾನು ಯಡಿಯೂರಪ್ಪಗೆ ಹೇಳಿದೆ. ಯಡಿಯೂರಪ್ಪ ಅದನ್ನ ಒಪ್ಪಿಕೊಂಡರು ಎಂದು ಹೇಳಿದರು. ಇನ್ನು ಈಶ್ವರಪ್ಪ ಒಬ್ಬ ಪೆದ್ದ. ಇದು RSSನವರು ಮಾಡಿರೋದು ಅಂತಾ ಹೇಳಿದೆ. ಹೌದು ಅಂತಾ ಈಶ್ವರಪ್ಪ ಸದನದಲ್ಲಿ ಒಪ್ಪಿಕೊಂಡ. ಸಂವಿಧಾನದಲ್ಲೇ ಅವಕಾಶ ಇದೆ. ಪ್ರೀತಿಸಿ ಮದುವೆ ಆಗೋದನ್ನ ಪ್ರಶ್ನೆ ಮಾಡೋಕೆ ಅವನ್ಯಾರು ಎಂದು ಪ್ರಶ್ನಿಸಿದರು. ನಾವು…
ಹಾಸನ: ಇಂದಿನಿಂದ ರಾಜ್ಯಾದ್ಯಂತ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ಹಾಸನದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲೂ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಐದು ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಹೋಂಸ್ಟೇ, ರೆಸಾರ್ಟ್ ಗಳಲ್ಲಿ ರಾತ್ರಿ 10ರ ನಂತರ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದರು. ಇನ್ನು ಸರ್ಕಾರದ ಆದೇಶದಂತೆ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಬೇಕು. ರೆಸಾರ್ಟ್ ಮಾಲೀಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ನೀಡಿರುವ ಸೂಚನೆಯನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಅಂತಹ ರೆಸಾರ್ಟ್, ಹೋಂಸ್ಟೇ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅನಗತ್ಯ ಓಡಾಟ ತಪ್ಪಿಸಲು ಬ್ಯಾರೆಕೇಡ್ ಗಳನ್ನು ಹಾಕಲಾಗಿದೆ. ಚೆಕ್ ಫೋಸ್ಟ್ ಗಳಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಕಟ್ಟುನಿಟ್ಟಾಗಿ ಬಂದೋ ಬಸ್ತ್ ಮಾಡಲಾಗುವುದು. ಜನರು ಸಹಕರಿಸಬೇಕು, ಕಾರಣವಿಲ್ಲದೆ ಅನಗತ್ಯವಾಗಿ ಯಾರೂ ಓಡಾಟ…