Author: admin

ಮುಂಬೈ: ಯಾರಾದರೂ ಒಬ್ಬರ ಅದೃಷ್ಟವನ್ನು ಒಬ್ಬ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡಾಗ, ಅವನ ಅವನತಿಯ ಕಡೆಗೆ ಪ್ರಯಾಣ ಪ್ರಾರಂಭವಾಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಉದ್ಧವ್ ಠಾಕ್ರೆ ಸಹೋದರ ಸಂಬಂಧಿ ರಾಜ್ ಠಾಕ್ರೆ ಕಾಲೆಳೆದಿದ್ದಾರೆ. ರಾಜ್ ಠಾಕ್ರೆ ಅವರು ಶಿವಸೇನೆ ವಿರುದ್ಧ ಬಂಡಾಯವೆದ್ದು , ಸುಮಾರು ಎರಡು ದಶಕಗಳ ಹಿಂದೆ ತಮ್ಮದೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದರು. ಇದೀಗ ತಮ್ಮ ಕಣ್ಣಮುಂದೆ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ತನ್ನದೇ ಶಾಸಕರ ಬಂಡಾಯದಿಂದ ಪತನವಾಗಿರುವುದಕ್ಕೆ ಸಂಭ್ರಮಿಸಿರುವ ಅವರು, ಉದ್ದವ್ ಠಾಕ್ರೆಯನ್ನು ಕೆಣಕಿದ್ದಾರೆ. ರಾಜ್ ಠಾಕ್ರೆಯವರ ತಂದೆ ಶ್ರೀಕಾಂತ್ ಠಾಕ್ರೆ, ಉದ್ಧವ್ ಠಾಕ್ರೆಯವರ ತಂದೆ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆಯವರ ಕಿರಿಯ ಸಹೋದರ. ಕಿಡಿ ಭಾಷಣಗಳು ಮತ್ತು ಆಕ್ರಮಣಕಾರಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ರಾಜ್ ಠಾಕ್ರೆ ಸೌಮ್ಯ ಸ್ವಭಾವದ ಉದ್ಧವ್ ಠಾಕ್ರೆಗೆ ವಿರುದ್ಧವಾಗಿ ನಿಂತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಸರಗೂರು: ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಸಭೆಯಿಂದ ಹೊರ ಹೋಗಿದ್ದಾರೆ. ಸರಗೂರು ತಾಲೂಕಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್  ಹಾಗೂ ಮುಖ್ಯಾಧಿಕಾರಿ ಸತೀಶ್ ಅವರ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿದ್ದು, 8 ಮಂದಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದಾರೆ. ಸ್ಥಾಯಿ ಸಮಿತಿ ಸಭೆಯ ಅಜೆಂಡದಲ್ಲಿ ಸದಸ್ಯರುಗಳ ವಾರ್ಡಿನ ಸಮಸ್ಯೆಗಳು, ಕಾಮಗಾರಿಯ ವಿಳಂಬ, ಪಟ್ಟಣದ ಅಭಿವೃದ್ಧಿಯ ವಿಚಾರಗಳು ಹಾಗೂ ಮುಖ್ಯವಾಗಿ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷರ ನೇಮಕದ ಕುರಿತ ವಿಷಯಗಳು ಇಲ್ಲದಿರುವ ಕಾರಣ ಪಟ್ಟಣ ಪಂಚಾಯಿತಿಯ 08 ಮಂದಿ ಸದಸ್ಯರು ಸಭೆಯನ್ನು ತಿರಸ್ಕರಿಸಿ ಹೊರ ನಡೆದಿದ್ದಾರೆ. ಕೇವಲ ಸ್ಥಾಯಿ ಸಮಿತಿ ಸಭೆಯ ಅಜೆಂಡಾದಲ್ಲಿ ಪ.ಪಂ ನಡೆಯುವ ಕಾರ್ಯಕ್ರಮಗಳ ವೆಚ್ಚವನ್ನೇ ಮಾತ್ರ ನಮೂದಿಸಿರುವ ಕಾರಣ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸದಸ್ಯರುಗಳು ಮುಖ್ಯಾಧಿಕಾರಿ ಹಾಗೂ ಪ.ಪಂ ಅಧ್ಯಕ್ಷೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ 10:30 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆಯು ಮಧ್ಯಾಹ್ನ 02 ಗಂಟೆಯಾದರೂ ಸದಸ್ಯರುಗಳು ಸಭೆಗೆ ಹಾಜರಾಗದ ಕಾರಣ…

Read More

ಬೆಂಗಳೂರು: ರಾಜಸ್ಥಾನದಲ್ಲಿ ನಡೆದ ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣವನ್ನು ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ, ಇಲ್ಲದಿದ್ದರೆ ಇದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಮುಸ್ಲಿಂ ಸಂಘಟನೆ, ಓವೈಸಿ ಸಂಘಟನೆಯವರು ಘಟನೆ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ಈ ಘಟನೆ ವಿರುದ್ಧ ಮುಸ್ಲಿಂ ಸಂಘಟನೆಗಳು ಹೊರಬಂದು ಮಾತನಾಡಬೇಕು. ಮುಸ್ಲಿಂ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಟ್ಟೆ ಹೊಲಿಯಲು ಕೊಡುತ್ತೀನಿ ಎಂದು ಚಾಕು ಹಾಕಿದ್ದಾರೆ. ಇವರಿಗೆ ದಮ್ ಇಲ್ಲ, ಇದನ್ನೆಲ್ಲ ಹೇಡಿಗಳು ಮಾಡುವ ಕೆಲಸ ಎಂದು  ಆರ್.ಅಶೋಕ್ ಆಕ್ರೋಶ ಹೊರ ಹಾಕಿದರು. ಭಯೋತ್ಪಾದನೆಯ ಮುಸ್ಲಿಂ ಸಂಘಟನೆ ಅವರು ಹೀಗೆ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಸಂಘಟನೆಗಳನ್ನ ಬ್ಯಾನ್ ಮಾಡಿದ್ದೇವೆ, ಬ್ಯಾನ್ ಮಾಡಿದರೆ ಇನ್ನೊಂದು ಹೆಸರಲ್ಲಿ ಬರ್ತಾ ಇದ್ದಾರೆ. ರಾಜಸ್ಥಾನ ಸರ್ಕಾರ ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಸರ್ಕಾರ ಉಳಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ…

Read More

ನವದೆಹಲಿ: ವಿಮಾನ ಪ್ರಯಾಣದ ಸಮಯದಲ್ಲಿ ಮಹಿಳೆಯೊಬ್ಬರ ವರ್ತನೆಯಿಂದ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪಾಲ್ ಸ್ಟೋಥಾರ್ಡ್ ಎಂಬ ವ್ಯಕ್ತಿ ಎಮಿರೇಟ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಪಕ್ಕದ ಸೀಟ್ ನಲ್ಲಿ ಕೂತಿದ್ದ ಮಹಿಳೆಯು ತನ್ನ ಮುಂಭಾಗದ ಸೀಟಿನ ಮೇಲೆ ತನ್ನ ಪಾದಗಳನ್ನು ಹಾಕಿ ವಿಶ್ರಮಿಸುತ್ತಿರುವುದನ್ನು ಗಮನಿಸಿ ಫೋಟೋ ಕ್ಲಿಕ್ಕಿಸಿದ್ದು, ತಮ್ಮ ಅಸಮಾಧಾನವನ್ನು ಟ್ವೀಟ್ ಮಾಡಿದ್ದಾರೆ. ನನ್ನ ವಿಮಾನದಲ್ಲಿ ನನ್ನ ಪಕ್ಕದಲ್ಲಿರುವ ವ್ಯಕ್ತಿ ಎಂಬ ಶೀರ್ಷಿಕೆಯೊಂದಿಗೆ ಅವರು ಮಹಿಳೆಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರು ಒಂದು ಜೊತೆ ಭಾರವಾದ ಬೂಟುಗಳನ್ನು ಧರಿಸಿ, ತನ್ನ ಪಾದಗಳನ್ನು ತನ್ನ ಮುಂಭಾಗದ ಸೀಟಿನ ಹೆಡ್ ರೆಸ್ಸ್ ನಲ್ಲಿ ವಿಶ್ರಾಂತಿ ಮಾಡುವುದು ಚಿತ್ರದಲ್ಲಿದೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಮುಂಬೈ: ಶಿವಸೇನಾ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಗುರುವಾರ ಸಂಜೆ 7.30ಕ್ಕೆ ಶಿಂಧೆ  ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಶಿಂಧೆ ಅವರು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ತಮ್ಮದೇ ಗುಂಪು ರಚಿಸಿಕೊಂಡಿದ್ದರು. ತಮ್ಮದೇ ನಿಜವಾದ ಶಿವಸೇನಾ ಎಂದು ಘೋಷಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯುಷ್ ಇಲಾಖೆ,  ಬೆಂಗಳೂರು ಜಿಲ್ಲಾ ಪಂಚಾಯಿತಿ,  ತುಮಕೂರು ಮತ್ತು ಜಿಲ್ಲಾ ಆಯುಷ್ ಕಚೇರಿ ಇವರ ವತಿಯಿಂದ ನುರಿತ ವೈದ್ಯರ ತಂಡದಿಂದ ಉಚಿತ ಆಯುಷ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಆರೋಗ್ಯ ಸಮಸ್ಯೆಗಳಾದ ರಕ್ತದೊತ್ತಡ, ಮಧುಮೇಹ, ಅಸ್ತಮಾ, ಕಿಡ್ನಿ ಸಮಸ್ಯೆ, ಥೈರಾಯ್ಡ್, ಶ್ವಾಸ ಸಂಬಂಧಿ ಹಾಗೂ ಹೃದಯ ಸಂಬಂಧಿ ಸಮಸ್ಯೆ ಇನ್ನು ಮುಂತಾದ ಕಾಯಿಲೆಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಹಾಗೂ ಸಲಹೆಗಳನ್ನು ತಿಳಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಯುಷ್ ಅಧಿಕಾರಿ ಡಾ. ಗುರುಪ್ರಸಾದ್, ಡಾ. ಜಯಶ್ರೀ, ಸಿ ಆರ್ ಪಿ ಮೋಹನ್ ಚಾರ್, ಪಿಡಿಓ ವಿಜಯ ಕುಮಾರಿ, ಮುಖ್ಯ ಶಿಕ್ಷಕಿ ಸರೋಜಾ ಬಾಯಿ, ಶಿಕ್ಷಕರಾದ ನರಸಿಂಹಮೂರ್ತಿ,ಎಸ್ ಡಿ ಎಂ ಸಿ ಅಧ್ಯಕ್ಷ ನಂಜಪ್ಪ,ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮ ಕುಮಾರ್, ಶ್ರೀನಿವಾಸ್,ಕಾಂಗ್ರೆಸ್ ಮುಖಂಡ ಅರವಿಂದ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹುಲಿರಾಮಯ್ಯ, ಮುದ್ದರಂಗಪ್ಪ.…

Read More

ತುಮಕೂರು: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಕಾರ್ಯಕರ್ತ ಕನ್ನಯ್ಯ ಲಾಲ್ ನನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ  ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ರಾಜಸ್ಥಾನದ ಉದಯಪುರ್ ನಲ್ಲಿ ಅಮಾನುಷವಾಗಿ ಕನ್ನಯ್ಯ ಲಾಲ್ ನನ್ನು ಹತ್ಯೆ ಮಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಅವರ ಪ್ರತಿಕೃತಿಗಳನ್ನು ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಪೋಸ್ಟ್ ಒಂದನ್ನು ರಾಜಸ್ಥಾನದ ದರ್ಜಿಗ ಕನ್ನಯ್ಯ ಲಾಲ್ ತನ್ನ ಸ್ಟೇಟಸ್ ನಲ್ಲಿ ಹಾಕಿದ್ದೇ ದೊಡ್ಡ ಅಪರಾಧವೆಂದು ಭಾವಿಸಿದ ದುಷ್ಕರ್ಮಿಗಳು ಅವರ ಕುತ್ತಿಗೆಯನ್ನು ಸೀಳಿ ಹತ್ಯೆಗೈದು ವಿಕೃತಿ ಮೆರೆದಿದ್ದಾರೆ. ಜೊತೆಗೆ ತಾವೇ ಕೊಲೆ ಮಾಡಿರುವ ವಿಡಿಯೋ ಸಹ…

Read More

ತುಮಕೂರು:  ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದ ಹಿಂದೂ ಮುಸ್ಲಿಂ ಹಾಗೂ ಜೈನ ಧರ್ಮಗಳ ಸೌಹಾರ್ದತೆ, ಸೋದರತೆಯ ಸಮಾನಮನಸ್ಕರ ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳ ವತಿಯಿಂದ ಜಾಮಿಯಾ ಸಮುದಾಯ ಭವನದಲ್ಲಿ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಉಪಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿ, ವಿಶ್ರಾಂತ ಜೀವನ ಸಾಗಿಸಿ ಇಹಲೋಕ ತ್ಯಜಿಸಿದ ಸ್ನೇಹಜೀವಿ ದಿವಂಗತ ಅಕ್ರಂ ಭಾಷಾ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ರಂ ಭಾಷಾ  ಅಗಲಿಕೆಗೆ ಕಂಬನಿ ಮಿಡಿದ ಮಿತ್ರರು, ತಮ್ಮ ಅಧಿಕಾರವಧಿಯಲ್ಲಿ ಮಾಯಸಂದ್ರದ ಬಸದಿ ಯಾತ್ರೆ ನಿವಾಸ ಜಾಮಿಯಾ ಸಮುದಾಯ ಭವನ ಹಾಗೂ ಊರಿನ ತುಂಬಾ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಅನುದಾನ ನೀಡಿದ್ದರು ಹಾಗೂ ಅನೇಕ ಜನರಿಗೆ ಸಹಾಯ ಸಹಕಾರ ನೀಡಿದ್ದರು ಎಂದು ನೆನಪಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಗಳ ಗೌರಮ್ಮ ಹೊನ್ನಪ್ಪ,  ಗ್ರಾಮ ಪಂಚಾಯತಿ ಸದಸ್ಯರಾದ ಅಜಿತ್  ಪ್ರಸಾದ್ ಜೈನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಆರ್ .ಜಯರಾಮ್ , ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮದನ್ ಕುಮಾರ್ ಜೈನ್ ,…

Read More

ತಿಪಟೂರು: ವಾಹನಗಳನ್ನು ಕಳವು ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು  ತಿಪಟೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಾಹನಗಳನ್ನು ಬೆಂಗಳೂರು, ಹೊಸದುರ್ಗ, ಶಿವಮೊಗ್ಗ ,ತರೀಕೆರೆ, ದಾವಣಗೆರೆ ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದೆ ಓಡಿಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು,  ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಬೈಕ್ ಕಳವು ಜಾಲದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಭದ್ರಾವತಿ, ಸಂಜಯ್, ಕಾರ್ತಿಕ್, ಉಮೇಶ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಿಂದ 10 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಸಿದ್ದಾರ್ಥ ಗೋಯಲ್ , ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀಶೈಲಮೂರ್ತಿ,  ಸಬ್ ಇನ್ಸ್ಪೆಕ್ಟರ್ ದ್ರಾಕ್ಷಾಯಿಣಿ ಕೆ.,  ಎಸ್ ಐ ನಿಶಾ,  ಅಹ್ಮದ್ ಎ.,  ಶ್ರೀರಾಮಣ್ ಪೇದೆಗಳಾದ…

Read More

ಬೆಂಗಳೂರು: ಬೇಡಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಲುವಾಗಿ ಹೋರಾಟ ಹಿನ್ನೆಲೆ ಬೆಂಗಳೂರಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ಶಿರಾ ಟೋಲ್ ಗೇಟ್ ಬಳಿ ಪೊಲೀಸರು ತಡೆದಿದ್ದಾರೆ. ಇಂದು  ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆಂದು ತೆರಳುತ್ತಿದ್ದವರನ್ನು ಪೊಲೀಸರು  ಶಿರಾ ಟೋಲ್ ಗೇಟ್ ಬಳಿ ತಡೆದಿದ್ದಾರೆ. ಪ್ರತಿಭಟನಾಕಾರರ ಪೈಕಿ ಮಠಾಧೀಶರು ಕೂಡ ಇದ್ದು, ಮಠಾಧೀಶರನ್ನೂ  ಪೊಲೀಸರು ತಡೆದು ನಿಲ್ಲಿಸಿದ್ದಾರೆ. ನೂರಾರು ವಾಹನಗಳ ಮೂಲಕ ಪ್ರತಿಭಟನಾಕಾರರು ಬೆಂಗಳೂರಿಗೆ ಹೊರಟಿದ್ದರು. ಪ್ರತಿಭಟನಾಕಾರರನ್ನು ತಡೆದಿದ್ದರಿಂದ ಆಕ್ರೋಶಗೊಂಡ ಸಾವಿರಾರು ಪ್ರತಿಭಟನಾಕಾರರು ಸ್ಥಳದಲ್ಲೇ ಧರಣಿ ನಡೆಸುವ ಮೂಲಕ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟವನ್ನು  ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More