Author: admin

ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ನಗರದಲ್ಲಿ, ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು. ಈ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.  ಈ ಮಹಾಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಗಳಾದ ಮಹಾಂತೇಶ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ, ನಾವು  ಸೊಸೈಟಿಯನ್ನು 2009 ರಲ್ಲಿ ಪ್ರಾರಂಭಿಸಿ, ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದ್ದೇವೆ. ಇದೇ ರೀತಿ ಇನ್ನು ಮುಂದೆಯೂ ಕೂಡ, ಮುಂದೆ ಆಯ್ಕೆಯಾಗುವ ಕಾರ್ಯಕಾರಿ ಮಂಡಳಿಯೂ ಸಹ ಯಾವುದೇ ಲೋಪ ದೋಷಗಳನ್ನು ತರದಂತೆ, ನಮ್ಮ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು, ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂದು ಹೇಳಿದರು. ಇಡೀ ಸಂದರ್ಭದಲ್ಲಿ ಕಾತ್ರಿಕೇಹಾಲ್ ಗೋವಿಂದರಾಜು ಮಾತನಾಡಿ, ನಾವು ಇನ್ನು ಮುಂದೆ ಈ ಸೊಸೈಟಿಯನ್ನು, ನಮ್ಮ ಜಿಲ್ಲೆಯಲ್ಲಿಯೇ ಒಂದು ಮಾದರಿ ಪತ್ತಿನ ಸಹಕಾರ ಸಂಘವನ್ನಾಗೀ ಮಾಡುವತ್ತ, ಎಲ್ಲಾ ನಿರ್ದೇಶಕರುಗಳು ಪಣತೊಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು. ಕಂಟಲಗೆರೆ ನಂಜುಂಡಯ್ಯನವರು ಮಾತನಾಡಿ, ಸಂಘದ ಬೆಳವಣಿಗೆಯ…

Read More

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆಲೋಚಿಸಿತ್ತು ಎಂದು ಕಾಂಗ್ರೆಸ್ ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಕಾರ್ಯಕ್ರಮ ‘ವಿಶ್ವಾರ್ಪಣಂ’ನಲ್ಲಿ ಮಾತನಾಡಿದ ಅವರು, ಉಡುಪಿಯ ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ನಿರ್ಧಾರದ ವಿರುದ್ಧ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ಅವರು ಇದೇ ವೇಳೆ ತಿಳಿಸಿದರು. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸ ಇದೆ. ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ, ಉಡುಪಿ ಜನರಿಗೊಂದು ಭಾಗ್ಯ. ನಮ್ಮದೇ ಸರ್ಕಾರ ಇದನ್ನು ವಶಪಡಿಸಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿ ಈ ವಿಚಾರಕ್ಕೆ ಫುಲ್ ಸ್ಟಾಪ್ ಹಾಕುವ ಮೂಲಕ ಶಾಸಕನಾಗಿ ಸಣ್ಣ ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಹುಬ್ಬಳ್ಳಿ: ನಗರದಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದ್ದಾರೆ. ಇಲ್ಲಿನ ಕೇಶ್ವಾಪುರದಲ್ಲಿ ಶುಕ್ರವಾರ ನಡೆದ ಕಾರ್ಯಕಾರಿಣಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ನಗರದಲ್ಲಿ ಕಾರ್ಯಕಾರಿಣಿ ನಡೆದಿತ್ತು. ಈಗ ಮತ್ತೊಂದು ಬಾರಿ ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿದ್ದು, ನಾವೆಲ್ಲರೂ ಅದರ ಯಶಸ್ಸಿಗೆ ಶ್ರಮಿಸಬೇಕು ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾರ್ಯಕಾರಿಣಿಗೆ ದುಂದು ವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸೇರಿದಂತೆ ಇತರ ಮುಖಂಡರು ಜ.10ರಂದು ಹುಬ್ಬಳ್ಳಿ-ಧಾರವಾಡ ಬೈಪಾಸ್ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಶಾಸಕ ಅರವಿಂದ ಬೆಲ್ಲದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ಅಶೋಕ ಕಾಟವೆ, ಸೀಮಾ ಮಸೂತಿ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ…

Read More

ತುಮಕೂರು: ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಡಿಸೆಂಬರ್ 26ರಂದು ವೈಭವದ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜ್ ಕುಮಾರ್ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಇಲ್ಲಿನ ಸರಸ್ವತಿ ಪುರಂನ ವಾಯು ವಿಹಾರ ಕೇಂದ್ರ, ಯೋಗ ಮಂದಿರದಲ್ಲಿ  ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರು ಭಾಗವಹಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ನುಡಿನಮನ  ಕಾರ್ಯಕ್ರಮವನ್ನು ಸಂತಶಿಶುನಾಳ ಶರೀಫ ಪ್ರಚಾರಕ ಡಾ.ಎಂ.ಸಿ.ನರಸಿಂಹಮೂರ್ತಿ ಅವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ದೇವರಾಜು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊಟ್ಟಿಗೆಹಾರ : ಬಸ್ ನಿರ್ವಾಹಕ‌ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಾರ್ಮಾಡಿ ಘಾಟ್ ನ ಮಲಯಮಾರುತ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ. ವಿಜಯ(43) ‌ಎನ್ನುವವರು ಮೃತ ಪಟ್ಟಿರುವ ನಿರ್ವಾಹಕ. ಚಿಕ್ಕಮಗಳೂರಿಂದ ಉಡುಪಿಗೆ ಹೋಗುತ್ತಿದ್ದ ಬಸ್ ನಲ್ಲಿ ಬೆಳಗ್ಗೆ 8.30 ಕ್ಕೆ ಹೃದಯಘಾತ ಸಂಭವಿಸಿದ್ದು, ಬಣಕಲ್ ಸಮಾಜ ಸೇವಕ ಆರಿಫ್ ಅವರ ಅಂಬುಲೆನ್ಸ್ ನಲ್ಲಿ ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಯಿತು. ಮೂಡಿಗೆರೆ ಆಸ್ಪತ್ರೆಯಲ್ಲಿ ನಿರ್ವಾಹಕ ವಿಜಯ್ ಸಾವನ್ನಪ್ಪಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚೆನೈ: ತಮಿಳು ಹಾಸ್ಯನಟ ವಡಿವೇಲು ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಯುಕೆಯಿಂದ ಹಿಂದಿರುಗಿದ ಅವರಿಗೆ, ಒಮಿಕ್ರಾನ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ವಡಿವೇಲು ತಮಿಳು ಚಿತ್ರರಂಗದ ಅತ್ಯುತ್ತಮ ಹಾಸ್ಯನಟರಲ್ಲಿ ಒಬ್ಬರು. ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ವೈಗೈ ಪುಯಲ್ ಎಂದು ಕರೆಯುತ್ತಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ವಡಿವೇಲು ನಟನೆಯಿಂದ ದೂರವಾಗಿದ್ದರು. ಅವರು ಈಗ ನಾಯಿ ಶೇಖರ್ ರಿಟರ್ನ್ಸ್ ಎಂಬ ಚಿತ್ರದೊಂದಿಗೆ ಪುನರಾಗಮನಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ, ವಡಿವೇಲು, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮತ್ತು ನಿರ್ದೇಶಕ ಸೂರಜ್ ನಾಯಿ ಶೇಖರ್ ರಿಟರ್ನ್ಸ್‌ನ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ಲಂಡನ್‌ಗೆ ಹೋಗಿದ್ದರು. ಲಂಡನ್‌ನಿಂದ ಹಿಂದಿರುಗಿದ ನಂತರ, ವಡಿವೇಲುಗೆ ಕೋವಿಡ್ ಸೋಂಕು ತಗುಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸಿರಾ: ನಗರ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ವಾರ್ಡ್ ಸಂಖ್ಯೆ 19ರಲ್ಲಿ ಬಿಜೆಪಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮನೆ ಮನೆಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು. ವಾರ್ಡ್ ಸಂಖ್ಯೆ 19 ಸೇರಿದಂತೆ ಹಲವಾರು ವಾರ್ಡ್ ಗಳಲ್ಲಿ  ಬಿಜೆಪಿ ಅಭ್ಯರ್ಥಿ ಪರ ರಾಜೇಶ್ ಪ್ರಚಾರ ನಡೆಸಿದ್ದು, ಈ ವೇಳೆ ಪಕ್ಷದ ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ….. ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜಗತ್ತಿಗೆ ಶಾಂತಿ ಪ್ರೀತಿ ಸೇವೆ ಎಂಬ ಮಹತ್ವದ ಮಾರ್ಗಗಳನ್ನು ಪರಿಣಾಮಕಾರಿಯಾಗಿ ಹೇಳಿದ ಜೀಸಸ್ ಜನ್ಮದಿನದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ ಮತಾಂತರ ನಿಷೇಧ ಕಾನೂನು ಜಾರಿ ಮಾಡಲಾಯಿತು ಮತ್ತು ಅದೂ ಬಹುತೇಕ ಕ್ರಿಶ್ಚಿಯನ್ ಧರ್ಮದ ಮೇಲಿನ ಆರೋಪಗಳಿಗೆ ಉತ್ತರ ಹಾಗು ಸವಾಲಿನ ರೂಪದಲ್ಲಿ… ಭಾರತದ ಮಟ್ಟಿಗೆ ಮತಾಂತರದ ಆರೋಪ ಹೆಚ್ಚಾಗಿ ಕೇಳಿಬರುತ್ತಿರುವುದು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆಯೇ… ಹಣ ಉದ್ಯೋಗ ಸಮಾನತೆ ಇತ್ಯಾದಿ ಇತ್ಯಾದಿ ಆಮಿಷಗಳಿಗೆ ಹಾಗು ಇದರ ಪರೋಕ್ಷ ಪರಿಣಾಮ ಕೆಲವು ಹಿಂದುಗಳ ತುಳಿತಕ್ಕೊಳಗಾದವರು ಸ್ವಯಂ ಪ್ರೇರಣೆಯಿಂದ ಮತಾಂತರವಾಗುತ್ತಿದ್ದಾರೆ. ಹೀಗೇ ಇದು ಮುಂದುವರಿದರೆ ಹಿಂದೂಗಳ ಜನಸಂಖ್ಯೆಗೆ ಅಪಾಯ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಒಂದು ಪ್ರಯತ್ನ ಎಂಬ ವಾದ. ಹಾಗೆಯೇ ಇದು ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯ. ಅದನ್ನು ವಿರೋಧಿಸುತ್ತೇವೆ ಎಂಬುದು ಮತ್ತೆ ಕೆಲವರ ಅಭಿಪ್ರಾಯ… ” ನಿಮ್ಮ ಶತ್ರುಗಳನ್ನು ಸಹ ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ, ಅಸಹಾಯಕರಿಗೆ…

Read More

ತಿಪಟೂರು: ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿಯಿರುವ ಚರ್ಚ್ ನಲ್ಲಿ ಸಕಲ ಶೃಂಗಾರದ ಸಿದ್ಧತೆಯೊಂದಿಗೆ ಕ್ರಿಸ್ಮಸ್ ಆಚರಣೆ ಭರದಿಂದ ಸಾಗುತ್ತಿದ್ದು ಪ್ರೀತಿ ಕಾರುಣ್ಯದ ಕ್ರಿಸ್ತನನ್ನು ಆಹ್ವಾನಿಸುವ ಕ್ರಿಸ್ಮಸ್ ಆಚರಣೆಗೆ ನಗರವು ಸಜ್ಜುಗೊಂಡಿದೆ. ಚರ್ಚ್ ಸಮುದಾಯದ ಶಾಲೆಗಳು ಹಾಗೂ ಕ್ರೈಸ್ತ ಸಮುದಾಯದ ಮನೆಗಳು ವಿದ್ಯುತ್ ದೀಪಗಳಿಂದ ಅಲಂಕಾರ ಗೊಂಡಿದೆ. ಇಂದು ಬೆಳಗ್ಗಿನಿಂದಲೇ ಯೇಸುಕ್ರಿಸ್ತನ ಜನ್ಮದಿನವನ್ನು ನೆನೆದು ಚರ್ಚುಗಳಲ್ಲಿ ಪ್ರಾರ್ಥನೆಯನ್ನು ಮಾಡಿ ಅನಂತರ ತಮ್ಮ ಗೆಳೆಯರ ಮತ್ತು ನೆರೆಮನೆಯವರ ಸಂಬಂಧಿಕರಿಗೆ ಮನೆಗಳಿಗೆ ತೆರಳಿ ಕೇಕ್ ಗಳನ್ನು ಕತ್ತರಿಸಿ ಹಬ್ಬದ ಶುಭಾಶಯಗಳನ್ನು ಕೋರಿ ಮಧ್ಯಾಹ್ನದ ಸಮಯ ಸಿಹಿತಿನಿಸುಗಳನ್ನು ಮನೆಗಳಲ್ಲಿ ಮಾಡಿ ಆಚರಣೆ ನಡೆಯುತ್ತದೆ. ವರದಿ: ಮಂಜು ಗುರುಗದಹಳ್ಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಜಿಲ್ಲೆಯ ಹೆಸರಾಂತ  ಮಹೇಶ್ ಪಿ.ಯು. ಕಾಲೇಜಿನ ಉಪನ್ಯಾಸಕ ಹರೀಶ್ ರವರು ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು. ತುರುವೇಕೆರೆ ಪಟ್ಟಣದ ಜೆ.ಪಿ.ಆಂಗ್ಲ ಪ್ರೌಢಶಾಲೆ, ಮಾದಿಹಳ್ಳಿ ಗ್ರಾಮದ ರಾಮಕೃಷ್ಣ ಮಠದ ಬದರಿಕಾಶ್ರಮ   ಮಾಯಸಂದ್ರ ಗ್ರಾಮದ ನೆಹರು ಬಾಲಿಕಾ ವಿದ್ಯಾಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕರಾದ ಹರೀಶ್ ರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು. ಇದೇ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ವಿನಿಮಯ ಮಾಡಿಕೊಂಡರು. ಮಹೇಶ್ ಪಿ.ಯು.ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ  ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಹಾಗೂ ಇನ್ನು ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲೇ ಉತ್ತಮ ಪ್ರಗತಿ ಸಾಧಿಸಿದ  ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು 2ರಿಂದ 3 ಶಾಖೆಗಳು ಇದೆ ಎಂದು ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ಆದರೆ ನಮ್ಮ ಸಂಸ್ಥೆ ತುಮಕೂರು ಜಿಲ್ಲೆಯಲ್ಲಿ ಒಂದು ಮಾತ್ರವೇ ಇದೆ. ನಮ್ಮ…

Read More