ಚೆನೈ: ತಮಿಳು ಹಾಸ್ಯನಟ ವಡಿವೇಲು ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಯುಕೆಯಿಂದ ಹಿಂದಿರುಗಿದ ಅವರಿಗೆ, ಒಮಿಕ್ರಾನ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ವಡಿವೇಲು ತಮಿಳು ಚಿತ್ರರಂಗದ ಅತ್ಯುತ್ತಮ ಹಾಸ್ಯನಟರಲ್ಲಿ ಒಬ್ಬರು. ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ವೈಗೈ ಪುಯಲ್ ಎಂದು ಕರೆಯುತ್ತಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ವಡಿವೇಲು ನಟನೆಯಿಂದ ದೂರವಾಗಿದ್ದರು. ಅವರು ಈಗ ನಾಯಿ ಶೇಖರ್ ರಿಟರ್ನ್ಸ್ ಎಂಬ ಚಿತ್ರದೊಂದಿಗೆ ಪುನರಾಗಮನಕ್ಕೆ ಸಜ್ಜಾಗಿದ್ದಾರೆ.
ಇತ್ತೀಚೆಗೆ, ವಡಿವೇಲು, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮತ್ತು ನಿರ್ದೇಶಕ ಸೂರಜ್ ನಾಯಿ ಶೇಖರ್ ರಿಟರ್ನ್ಸ್‌ನ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ಲಂಡನ್‌ಗೆ ಹೋಗಿದ್ದರು. ಲಂಡನ್‌ನಿಂದ ಹಿಂದಿರುಗಿದ ನಂತರ, ವಡಿವೇಲುಗೆ ಕೋವಿಡ್ ಸೋಂಕು ತಗುಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy