ತಿಪಟೂರು: ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿಯಿರುವ ಚರ್ಚ್ ನಲ್ಲಿ ಸಕಲ ಶೃಂಗಾರದ ಸಿದ್ಧತೆಯೊಂದಿಗೆ ಕ್ರಿಸ್ಮಸ್ ಆಚರಣೆ ಭರದಿಂದ ಸಾಗುತ್ತಿದ್ದು ಪ್ರೀತಿ ಕಾರುಣ್ಯದ ಕ್ರಿಸ್ತನನ್ನು ಆಹ್ವಾನಿಸುವ ಕ್ರಿಸ್ಮಸ್ ಆಚರಣೆಗೆ ನಗರವು ಸಜ್ಜುಗೊಂಡಿದೆ.
ಚರ್ಚ್ ಸಮುದಾಯದ ಶಾಲೆಗಳು ಹಾಗೂ ಕ್ರೈಸ್ತ ಸಮುದಾಯದ ಮನೆಗಳು ವಿದ್ಯುತ್ ದೀಪಗಳಿಂದ ಅಲಂಕಾರ ಗೊಂಡಿದೆ. ಇಂದು ಬೆಳಗ್ಗಿನಿಂದಲೇ ಯೇಸುಕ್ರಿಸ್ತನ ಜನ್ಮದಿನವನ್ನು ನೆನೆದು ಚರ್ಚುಗಳಲ್ಲಿ ಪ್ರಾರ್ಥನೆಯನ್ನು ಮಾಡಿ ಅನಂತರ ತಮ್ಮ ಗೆಳೆಯರ ಮತ್ತು ನೆರೆಮನೆಯವರ ಸಂಬಂಧಿಕರಿಗೆ ಮನೆಗಳಿಗೆ ತೆರಳಿ ಕೇಕ್ ಗಳನ್ನು ಕತ್ತರಿಸಿ ಹಬ್ಬದ ಶುಭಾಶಯಗಳನ್ನು ಕೋರಿ ಮಧ್ಯಾಹ್ನದ ಸಮಯ ಸಿಹಿತಿನಿಸುಗಳನ್ನು ಮನೆಗಳಲ್ಲಿ ಮಾಡಿ ಆಚರಣೆ ನಡೆಯುತ್ತದೆ.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy