Subscribe to Updates
Get the latest creative news from FooBar about art, design and business.
- ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ
- ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣ ಮಾಡಲು ಸಿಎಂಗೆ ಮನವಿ: ಶಾಸಕ ಅನಿಲ್ ಚಿಕ್ಕಮಾದು
- ಚಿಪ್ಸ್ ಖರೀದಿಸಲು ಬಂದಿದ್ದ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ಕಿರುಕುಳ!
- ಭೂಸ್ವಾಧೀನ ವಿರುದ್ಧದ ಪ್ರತಿಭಟನೆಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
- ಪತಿಯಿಂದಲೇ ಮಹಿಳಾ ಕೌನ್ಸಿಲರ್ ಬರ್ಬರ ಹತ್ಯೆ!
- ತಿಪಟೂರು: ಆರ್ಥಿಕ ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ
- ಜುಲೈ 6ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
- ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
Author: admin
ಬೆಳಗಾವಿ: ಲ್ಯಾಪ್ ಟಾಪ್ ವಿತರಣೆ ಮಾಡುವಂತೆ ಒತ್ತಾಯಿಸಿ ಆರ್ ಸಿಯು ವಿದ್ಯಾರ್ಥಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದಲ್ಲಿ ಆರ್ ಸಿಯು ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಮುಖ್ಯಮಂತ್ರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರಾದ, ನಾಲ್ಕನೇ ಸೆಮಿಸ್ಟರ್ ನಲ್ಲಿರುವ ನಮಗೆ ಲ್ಯಾಪ್ ಟಾಪ್ ನೀಡಿಲ್ಲ. ನಾವು 316 ಮಂದಿ ಇದ್ದೇವೆ. ಕುಲಪತಿ, ಕುಲಸಚಿವರನ್ನು ಕೇಳಿದರೆ ಎಸ್ ಸಿಪಿ ಮತ್ತು ಟಿಎಸ್ಪಿ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಿಎಂ ಶೀಘ್ರವೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಬೆಂಗಳೂರು: ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದ , ಅವರು, ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜ ಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ ಎಂದು ಅವರು ಹೇಳಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ’ ಎಂದು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಮಾನ್ಯ ಸ್ಪೀಕರ್ ಅವರು…
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭೂಕಂಪನದ ಅನುಭವವಾಗಿದ್ದು, ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಉತ್ತರ, ಈಶಾನ್ಯ ಭಾಗದ 70 ಕಿ.ಮೀ. ದೂರದಲ್ಲಿ 11 ಕಿ.ಮೀ. ಆಳದಲ್ಲಿ ಭೂಕಂಪನ ಉಂಟಾಗಿದೆ’ ಎಂದು ಎನ್ಎಸ್ಸಿ ಟ್ವೀಟ್ ಮಾಡಿದೆ. ಇದಾಗಿ ಐದು ನಿಮಿಷದಲ್ಲಿಯೇ ಮತ್ತೊಮ್ಮೆ ಭೂಕಂಪನ ಉಂಟಾಗಿದ್ದು, ಈ ಬಾರಿ ತೀವ್ರತೆ ಕೊಂಚ ಹೆಚ್ಚಿತ್ತು. ಬೆಂಗಳೂರು ಉತ್ತರ- ಈಶಾನ್ಯ ಭಾಗದ 66 ಕಿ.ಮೀ. ದೂರದಲ್ಲಿ 23 ಕಿ.ಮೀ. ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ತುಮಕೂರು: ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು “ಅಂತಿಮ ಆಯ್ಕೆಪಟ್ಟಿ”ಯನ್ನು ಜರೂರಾಗಿ ಪ್ರಕಟಿಸುವ ಮೂಲಕ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡುವಂತೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಮನವಿ ಮಾಡಿಕೊಂಡಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ”ವು ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016ರಲ್ಲಿ ಚಿತ್ರಕಲಾ ಪದವೀಧರರಿಗೆ 230, ಚಿತ್ರಕಲಾ ಡಿಪ್ಲೋಮಾದವರಿಗೆ 230, ಒಟ್ಟು 460 ಚಿತ್ರಕಲಾ ಶಿಕ್ಷಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ ದ ಮೂಲಕ ಅರ್ಜಿ ಯನ್ನು ಕರೆಯಲಾಗಿತ್ತು. ಅರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ದಾಖಲೆಗಳನ್ನು ಪರಿಶೀಲಿಸಿದ ನಂತರ ದಿನಾಂಕ:27-10-2021 ರಂದು ಚಿತ್ರಕಲಾ ಶಿಕ್ಷಕರು ಪದವೀಧರ 230 ಹುದ್ದೆಗಳ “ತಾತ್ಕಾಲಿಕ ಆಯ್ಕೆ ಪಟ್ಟಿ”ಯನ್ನು ಮತ್ತು ದಿನಾಂಕ:25-11-2021 ರಂದು ಚಿತ್ರಕಲಾ…
ಅರೆರೇ ಅಲ್ನೋಡೋ ಏಲಿಯನ್ಸು! ಅಲ್ಲ ಕಣೋ ಅದು ರಾಕೆಟ್’ಗಳು! ಅದು ಅಲ್ಲ ಕಣೋ ಯಾವ್ದೋ ದೇಶದವ್ರು ಇನ್ನೊಂದ್ ದೇಶದ ಮೇಲೆ ಬಾಂಬ್ ಹಾಕ್ತವ್ರೆ ಕಣೋ! ಹಾಗಂತೆ, ಹೀಗಂತೆ ಎಂದು ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಜನತೆ ಡಿಸೆಂಬರ್ 20 ಸೋಮವಾರ ಸಂಜೆ ಈ ವಿದ್ಯಮಾನ ದ ಬಗ್ಗೆ ಏನೇನೋ ಮಾತುಕತೆಗಳು ಜನರ ಬಾಯಿಂದ ಬಾಯಿಗೆ ಹರಡಿತು. ಅಷ್ಟಲ್ಲದೇ ವಾಟ್ಸಪ್ ಫೇಸ್ಬುಕ್’ಗಳಲೆಲ್ಲಾ ಇದರ ಬಗ್ಗೆ ಬಾರಿ ಚರ್ಚೆಗಳಾಗಿತ್ತು. ಆದರೆ ವಾಸ್ತವವಾಗಿ ಇದು ಏಲಿಯನ್ಸ್ ಅಲ್ಲಾ, ರಾಕೆಟ್’ಗಳಲ್ಲ ಮತ್ತು ಬಾಂಬ್’ಗಳಂತೂ ಅಲ್ಲವೇ ಅಲ್ಲ. ಇವೆಲ್ಲಾ ಕೃತಕ ಉಪಗ್ರಹಗಳು. ಹೌದು ನೀವು ಕೇಳುತ್ತಿರುವುದು ನಿಜ. ಇವೆಲ್ಲಾ ಮಾನವ ನಿರ್ಮಿತ ಉಪಗ್ರಹಗಳು. ಐರನ್ ಮ್ಯಾನ್ ಎಂದೇ ಪ್ರಸಿದ್ಧಿಯಾಗಿರುವ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್’ನಿಂದ ಭೂಮಿಯ ಕೆಳ ಕಕ್ಷೆಯಲ್ಲಿ ಸುತ್ತುತ್ತಿರುವ ” ಸ್ಟಾರ್ ಲಿಂಕ್ ” ಉಪಗ್ರಹಗಳು . ಈ ಉಪಗ್ರಹಗಳಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲ್’ಗಳು ಸೂರ್ಯನ ಕಿರಣಗಳಿಗೆ ಪ್ರತಿಫಲನಗೊಂಡಾಗ ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ…
ತಿಪಟೂರು: ಕಿಬ್ಬನಹಳ್ಳಿ ಹೋಬಳಿಯ ಹಟ್ನಾ ಗ್ರಾಮದ ದೇವತೆಗಳ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವಕ್ಕೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಅವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಬಾರಿ ಹೆಚ್ಚು ಮಳೆಗಾಲವಾಗಿದ್ದು ಒಂದು ಕಡೆ ರಾಗಿ ಬೆಳೆದ ರೈತರು ನೆಲಕ್ಕುರುಳಿದ್ದಾರೆ. ಮುಂದಿನ ದಿನಗಳಲ್ಲಿ ದೇವರು ಒಳ್ಳೆಯ ಬೆಳೆ ಕೊಟ್ಟು ಅನ್ನದಾತರ ಕಷ್ಟ ಕಳೆಯಬೇಕಾಗಿದೆ ಎಂದು ದೇವರಲ್ಲಿ ಇದೇ ವೇಳೆ ಅವರು ಪ್ರಾರ್ಥನೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಗೊರಗೊಂಡನಹಳ್ಳಿ ಸುದರ್ಶನ್ ಸೇರಿದಂತೆ ಗ್ರಾಮಸ್ಥರು ಮುಖಂಡರು ಹಾಜರಿದ್ದರು. ವರದಿ: ಮಂಜು ಗುರುಗದಹಳ್ಳಿ
ಬೆಳಗಾವಿ: ಈ ಬಾರಿಯೂ ಹೊಸ ವರ್ಷಾಚರಣೆಗೆ ಕೊರೊನಾದ ಕರಿನೆರಳು ಬಿದ್ದಿದ್ದು, ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ಕೆಲವು ನಿರ್ಬಂಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೋವಿಡ್ ನಿಯಂತ್ರಣ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಕೊವಿಡ್ ಹರಡುವಿಕೆ ತಡೆಯಲು ಸರ್ಕಾರ ಹಲವು ನಿರ್ಬಂಧಗಳನ್ನು ಹೇರುವ ಬಗ್ಗೆ ತಿಳಿಸಿದ್ದಾರೆ. ಡಿಸೆಂಬರ್ 30ರಿಂದ ಜನವರಿ 2ರವರೆಗೂ ರಾಜ್ಯದಾದ್ಯಂತ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ ಒಟ್ಟು ಸಾಮರ್ಥ್ಯದ ಶೇಕಡ 50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು. ಅಲ್ಲಿನ ಎಲ್ಲ ಸಿಬ್ಬಂದಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಎಂದರು. ಬೆಂಗಳೂರಿನ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ಮಾದರಿಯ ಹೊಸ ವರ್ಷಾಚರಣೆಗೆ ರಾಜ್ಯದ ಯಾವುದೇ ಭಾಗದಲ್ಲೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಮಧುಗಿರಿ: ಬೆಳಗಾವಿಯಲ್ಲಿ ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿರುವ ಹಾಗೂ ಕನ್ನಡ ಬಾವುಟಕ್ಕೆ ಅಪಮಾನ ಮಾಡಿರುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ನಗರ ಅಧ್ಯಕ್ಷ ರಾಜು, ಮಹಿಳಾ ಘಟಕ ಅಧ್ಯಕ್ಷೆ ಲತಾ ಗೋವಿಂದರಾಜು, ಗೌರವಾಧ್ಯಕ್ಷರಾದ ಲತಾ ನಾರಾಯಣ್, ಮಂಜುಳ ನಾಗಭೂಷಣ್, ಅಲ್ಪಸಂಖ್ಯಾತರ ಘಟಕದ ದಾಧಪೀರ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಸತೀಷ್, ಶ್ರೀನಿವಾಸ್, ದಾದು, ಅಶೋಕ, ವೀಣಾ, ಸವಿತಾ, ಶಾರದ ಹಾಗು ಮುಂತಾದವರು ಇದ್ದರು. ವರದಿ: ಅಬಿದ್ ಮಧುಗಿರಿ
ಸರಗೂರು: ಶ್ರೀ ಭೀಮಭಾಯಿ ವಿಶೇಷ ಚೇತನರ ಸ್ವಸಹಾಯ ಸಂಘ ಮತ್ತು ಮಹಾಲಿಂಗೇಶ್ವರ ಸ್ವಸಹಾಯ ಸಂಘದ ನಾಮಫಲಕವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ಸಮುದಾಯದ ಸಹಕಾರದೊಂದಿಗೆ ಅನಾವರಣಗೊಳಿಸಲಾಯಿತು. ತಾಲ್ಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲಾಪುರ ಗ್ರಾಮದ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲೋಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಹೆಗ್ಗನೂರು ಗ್ರಾ.ಪಂ.ನ ಉಪಾಧ್ಯಕ್ಷ ನಾಗಮ್ಮ ನಾಗೇಂದ್ರ ಅವರು, ಭೀಮಭಾಯಿ ಅಂಬೇಡ್ಕರ್ ಫೋಟೋಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ಆಸ್ಪತ್ರೆಯ ದೇವರಾಜಸ್ವಾಮಿ, ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಗ್ರಾಮದ ಮುಖಂಡರು ಭಾಗಿಯಾಗಿದ್ದರು. ವರದಿ: ಚಂದ್ರಹಾದನೂರು
ತಿಪಟೂರು: ನೊಣವಿನಕೆರೆ ಹೋಬಳಿಯ ಬಜಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಳ್ಳೇಕೆರೆ ಗ್ರಾಮದಲ್ಲಿ ಇಂದು ‘ಮಹಾನಾಯಕ’ ಬ್ಯಾನರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಸ್ಥಾಪಿತ) ಸಂಘಟನೆಯ ತಾಲೂಕು ಅಧ್ಯಕ್ಷ ಅಶೋಕ್ ಗೌಡನಕಟ್ಟೆ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಕೊಟ್ಟಂತಹ ಸಂವಿಧಾನ ಬಡವರಿಗೆ ಅಸ್ಪಶ್ಯತರಿಗೆ ನಿರ್ಗತಿಕರಿಗೆ ಮಾತ್ರ ಕೊಟ್ಟಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೊಟ್ಟಿದ್ದು, ಅದನ್ನು ನಾವೆಲ್ಲರೂ ಅರ್ಥೈಸಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕಿದೆ ಎಂದು ಹೇಳಿದರು ತಾಲೂಕು ಉಪಾಧ್ಯಕ್ಷರಾದ ಮತಿಘಟ್ಟ ಶಿವಕುಮಾರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಡಾ.ಬಾಬು ಜಗಜೀವನರಾಮ್ ಎಲ್ಲರೂ ನಮ್ಮ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಮತ್ತು ನಮ್ಮ ದೇಶದ ಬಹುತೇಕ ಹಳ್ಳಿಗಳಲ್ಲಿ ಸವರ್ಣೀಯರಿಂದ ಶೋಷಿತವರ್ಗದ ಮೇಲೆ ಇನ್ನೂ ಅಸ್ಪೃಶ್ಯತೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಕಾರ್ಯದರ್ಶಿ ರಾಜು, ತಾಲೂಕು ಯುವ ಘಟಕ ಅಧ್ಯಕ್ಷರಾದ ಗುರುಗದಹಳ್ಳಿ ಮಂಜುನಾಥ್, ಪ್ರಸನ್ನ,…