Subscribe to Updates
Get the latest creative news from FooBar about art, design and business.
- ಚಿಕ್ಕಬಳ್ಳಾಪುರ: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ; ನವವಿವಾಹಿತೆ ದುರ್ಮರಣ, ಪತಿಗೆ ಗಂಭೀರ ಗಾಯ
- ಯಾವ ಶಕ್ತಿಯಿಂದಲೂ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನ ವಾರ 24ನೇ ಕಂತಿನ ಹಣ ಬಿಡುಗಡೆ!
- ಕೊರಟಗೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ
- ಮೇಲನಹಳ್ಳಿ ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ತೀವ್ರ ವಿರೋಧ: ತಹಶೀಲ್ದಾರ್ ಭೇಟಿ
- ಕರ್ನಾಟಕ ಒಲಂಪಿಕ್ 2025: ಕ್ರೀಡಾಪಟುಗಳ ಬೆನ್ನಿಗೆ ನಿಂತ ಸರ್ಕಾರ; ಪದಕ ಗೆದ್ದರೆ ಕೋಟಿ ಕೋಟಿ ನಗದು ಸಂಭಾವನೆ
- ಪಾವಗಡ ತಾಲ್ಲೂಕಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನ: 17 ಸಾವಿರ ಮಕ್ಕಳಿಗೆ ಲಸಿಕೆ ಗುರಿ
- ಸಂತಪುರದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
Author: admin
ದಾವಣಗೆರೆ : ನಕಲಿ ಜಾತಿ ಪ್ರಮಾಣಪತ್ರ ಪಡೆದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್. ಚೇತನ ವಿರುದ್ಧ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಕೀಲ ಎ.ಹರಿರಾಮ್ ದೂರು ಸಲ್ಲಿಸಿದ್ದಾರೆ. ಕಲಂ 4(ಎಫ್) ಕರ್ನಾಟಕ ಎಸ್‍ಸಿ/ಎಸ್‍ಟಿ ಮತ್ತು ಓಬಿಸಿ (ರಿಸರ್ವೇಷನ್ ಆಫ್ ಆಪಾಯಿಂಟ್‍ಮೆಂಟ್ ಇತರೆ) ಕಾಯ್ದೆ 1990ರ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ. ಎ. ಹರಿರಾಂ ಅರ್ಜಿದಾರರಾಗಿದ್ದು, ಅವರ ಪರವಾಗಿ ವಕೀಲರಾದ ಆರ್. ಜಗನ್ನಾಥ, ದಾವಣಗೆರೆಯ ಅನೀಸ್ ಪಾಷ ರಿವಿಜನ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಶಾಸಕ ಎಂ.ಪಿ. ರೇಣುಕಾಚಾರ್ಯ ಲಿಂಗಾಯತ ಸಮುದಾಯಕ್ಕೆ ಸೇರಿದವರು. ತಪ್ಪು ಮಾಹಿತಿ ನೀಡಿ, ತಮ್ಮ ರಾಜಕೀಯ ಪ್ರಾಬಲ್ಯ ಬಳಸಿ, ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದು ಕಾನೂನು ಬಾಹಿರವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಯಾವುದೇ ಮೇಲ್ವರ್ಗದ ವ್ಯಕ್ತಿ ಮೋಸದಿಂದ ಎಸ್‍ಸಿ-ಎಸ್‍ಟಿ ಅಥವಾ ಓಬಿಸಿ ಎಂಬುದಾಗಿ ಸುಳ್ಳು ಹೇಳಿ ಪ್ರಮಾಣಪತ್ರ ಪಡೆದಲ್ಲಿ ಅದು ಶಿಕ್ಷಾರ್ಹ ಅಪರಾಧ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ತಿಪಟೂರು: ಇಲ್ಲಿನ ಬಿದರೆಗುಡಿ ಮಧ್ಯಭಾಗದಲ್ಲಿ ಮತ್ತಿಹಳ್ಳಿ ಗೇಟ್ ಬಳಿ ಸಂಜೆ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಬ್ಬಿ ತಾಲೂಕು ಸಿಎಸ್ ಪುರದ ರಾಜೇಶ್( 32) ಹಾಗೂ ಬೆಲವತ್ತದ ವೆಂಕಟಾಚಲ (41) ಸ್ಥಳದಲ್ಲೇ ಮೃತಪಟ್ಟವರು ಎನ್ನಲಾಗಿದೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಿಪಟೂರು ತಾಲೂಕು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಮಧುಗಿರಿ: ವಿಧಾನಸಭಾ ಕ್ಷೇತ್ರಕ್ಕೆ ಮಧುಗಿರಿ ಸ್ಧಳೀಯ ವ್ಯಕ್ತಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ನೀಡುವಂತೆ ಕುಮಾರಸ್ವಾಮಿ ಅವರಿಗೆ ಮಧುಗಿರಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಮಧುಗಿರಿ ತಾಲ್ಲೂಕಿನ ಸ್ಥಳೀಯರಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು ಅಷ್ಟೇ . ಉಳಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ಸ್ಥಳಿಯ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಮಧುಗಿರಿ ತಾಲ್ಲೂಕಿನ ಯಾವುದೇ ಅಭಿವೃದ್ಧಿ ಕೆಲಸಗಳು ನೇಡೆಯದೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದಿಂದ ಸ್ಥಳೀಯ ವ್ಯಕ್ತಿಗೆ ಕುಮಾರಸ್ವಾಮಿ ಅವರು ಅವಕಾಶ ಮಾಡಿಕೊಡಬೇಕು ಎಂದು ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಾರ್ವಜನಿಕರು ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮಧುಗಿರಿ ಕ್ಷೇತ್ರದಿಂದ ಸ್ಥಳೀಯ ವ್ಯಕ್ತಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಿದರೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ತುಮಕೂರು: ಕೋವಿಡ್19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ನೇಮಕ ಮಾಡಿಕೊಂಡಿರುವ ಆರೋಗ್ಯ ಇಲಾಖೆಯ 6,163 ನೌಕರರನ್ನು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಂಡು ಸೇವೆಯಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಕೊರೊನಾ ವಾರಿಯರ್ಸ್ ಪ್ರತಿಭಟನೆ ನಡೆಸಿದರು. ಕೋವಿಡ್ -19ರ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು (ಫಾರ್ಮಸಿ ಅಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ಸ್ಟಾಫ್ ನರ್ಸ್,ಪಿ ಎಚ್.ಸಿ ಓ, ಗ್ರೂಪ್ – ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರ ಸಿಬ್ಬಂದಿಗಳು) ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಾವು ನಮ್ಮ ಕುಟುಂಬ, ಮನೆ-ಮಠ ಬಿಟ್ಟು, ನಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಜೊತೆಯಲ್ಲಿಯೇ ಸೇರಿದ ಕೆಲವು ಆರೋಗ್ಯ ಸಿಬ್ಬಂದಿ ಪ್ರಾಣಭಯದಿಂದ ಹಾಗೂ ಕೊರೊನ ಮಹಾ ಮಾರಿಗೆ ಹೆದರಿ ಅರ್ಧದಲ್ಲೇ ಕೆಲಸವನ್ನು ಬಿಟ್ಟು ಹೋದರು. ಆದರೆ ನಮ್ಮಲ್ಲಿ ಹಲವರಿಗೆ ಹಲವು ಬಾರಿ ಕೊರೂನಾ ಪಾಸಿಟಿವ್ ಬಂದು ಸಾವಿನ ಕದ ತಟ್ಟಿದರೂ ಸೋಲು…
ತುಮಕೂರು: ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ಯುವತಿ ಇದೀಗ ತನ್ನ ಪತಿಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಮೆಟ್ಟಿಲೇರಿದ ಘಟನೆ ನಡೆದಿದೆ. ತುರುವೇಕೆರೆಯ ಮೊಬೈಲ್ ಶಾಪ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಚೈತ್ರಾ ಹಾಗೂ ಅದೇ ಮೊಬೈಲ್ ಶಾಪ್ ನಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಿಖಿಲ್ ನಡುವೆ ಪ್ರೀತಿ ಬೆಳೆದಿತ್ತು. ಬಳಿಕ ಚೈತ್ರಾ ಮನೆಯವರ ವಿರೋಧದ ನಡುವೆಯೂ ನಿಖಿಲ್ ನನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಜೊತೆಗೆ ಫೆಬ್ರವರಿ 7ರಂದು ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು. ಆದರೆ ಇದ್ದಕ್ಕಿದ್ದಂತೆ ನಿಖಿಲ್ ನಾಪತ್ತೆಯಾಗಿದ್ದು, ಇದರಿಂದ ಗಾಬರಿಗೊಂಡ ಚೈತ್ರಾ ನಿಖಿಲ್ ನನ್ನು ತಿಪಟೂರು ತಾಲೂಕಿನ ಪರವ ಗೊಂಡನಹಳ್ಳಿಯಲ್ಲಿರುವ ನಿಖಿಲ್ ಮನೆಗೆ ಹುಡುಕಿಕೊಂಡು ಹೋಗಿದ್ದು, ಈ ವೇಳೆ ಚೈತ್ರಾಳಿಗೆ ನಿಖಿಲ್ ತಂದೆ ಬಸವರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕಂಗಾಲಾಗಿರುವ ಚೈತ್ರಾ ನನ್ನ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಿಬ್ಬನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಎ.ಎನ್. ಪೀರ್, ತುಮಕೂರು…
ತುಮಕೂರು: ಬಾಬೂಜಿ ಎಂದೇ ಖ್ಯಾತರಾದ ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಸಮಾಜ ಸುಧಾರಕರು ಆಗಿದ್ದರು. ಬಿಹಾರದ ಚಮ್ಮಾರ್ ಕುಟುಂಬದಲ್ಲಿ ಜನಿಸಿದ ಇವರು, ನೆಹರು ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿ ಆಹಾರ ಸ್ವಾವಲಂಬನೆಗೆ ಕಾರಣೀಕರ್ತರಾಗಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು. ಇಂದು ನಗರವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಮ್ ಅವರು, ಮುರಾರ್ಜಿ ದೇಸಾಯಿ ಕಾಲದಲ್ಲಿ ಭಾರತದ ಉಪಪ್ರಧಾನಿಯಾಗಿ ರಕ್ಷಣಾ ಖಾತೆ ಜವಾಬ್ದಾರಿ ವಹಿಸಿಕೊಂಡು ದೇಶ ರಕ್ಷಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಸ್ಟೃಷ್ಯತಾ ನಿವಾರಣೆಯ ನಾಯಕತ್ವವನ್ನು ವಹಿಸಿದ್ದರು ಮತ್ತು ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಸ್ವಾತಂತ್ರ್ಯ ಭಾರತದ ಕಾರ್ಮಿಕ ಕಾಯ್ದೆಗಳ ಶಿಲ್ಪಿಯಾಗಿದ್ದರು ಎಂದರು. ಕಾರ್ಮಿಕ ಕಲ್ಯಾಣಕ್ಕಾಗಿ ದುಡಿದ ಉಜ್ವಲ ಯೋಧ, ನವಭಾರತದ ನಿರ್ಮಾತೃ ಬಾಬು ಜಗಜೀವನ್ ರಾಮ್ ಸ್ಮರಣೆಯನ್ನು ಇಂದು ಕಾರ್ಮಿಕ ಮಾಡಿಕೊಳ್ಳಬೇಕಿದೆ. ಕಾರ್ಮಿಕ ಸಚಿವರಾಗಿ ಅವರು…
ತುಮಕೂರು: ಜಿಲ್ಲಾ ಬಿ.ಜೆ.ಪಿ ಎಸ್.ಸಿ ಮೋರ್ಚಾದ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ 115 ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಡಾ.ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಜ್ಯೋತಿಗಣೇಶ್, ಬಾಬೂ ಜಗಜೀವನ್ ರಾಮ್ ರವರು ಹಸಿರು ಕ್ರಾಂತಿಯ ಹರಿಕಾರರೆಂದೇ ಪ್ರಖ್ಯಾತರಾದವರು, ದೇಶಕ್ಕೆ ಅಪಾರವಾದ ಕೊಡುಗೆ ನೀಡಿದವರು’ ಎಂದರು. ಎಸ್.ಸಿ.ಮೋರ್ಚ ಜಿಲ್ಲಾಧ್ಯಕ್ಷರಾದ ಓಂಕಾರ್ ಮಾತನಾಡಿ, ‘ದಲಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ ಮಹಾನಾಯಕರಾದ ಡಾ.ಬಾಬೂಜೀ ರವರ ಜಯಂತಿ ಆಚರಣೆಗಷ್ಟೆ ಸೀಮಿತವಾಗಬಾರದು, ಅವರ ಆದರ್ಶಗಳನ್ನು ನಮ್ಮ ಕಾರ್ಯಕರ್ತರು ಪಾಲಿಸಬೇಕು. ದಲಿತ ಸಮುದಾಯದ ಬಡ ವ್ಯಕ್ತಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು. ಬಾಬೂಜೀ ರವರು ರಾಷ್ಟçದ ಸಂಕಷ್ಟದ ಪರಿಸ್ಥಿತಿಗಳಲ್ಲಿ ರಕ್ಷಣಾ ಖಾತೆ, ಕೃಷಿ, ಕಾರ್ಮಿಕ ಅನೇಕ ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು, ಪ್ರಧಾನಿಯಾಗುವ ಎಲ್ಲಾ…
ತುಮಕೂರು: ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ಅವರ ಜಯಂತಿ ಉತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಡಾ.ಬಾಬು ಜಗಜೀವನ್ ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸುತ್ತಿದ್ದೇವೆ. ನಾವು ಕಚೇರಿಯಲ್ಲಿ ಜಯಂತಿ ಉತ್ಸವ ಆಚರಿಸಬೇಕಾದ ಪ್ರತಿ ಬಾರಿಯೂ ಒಂದೊಂದು ಹೊಸ ವಿಚಾರಗಳನ್ನು ನಾವು ಇಟ್ಟುಕೊಂಡು ಆಚರಣೆ ಮಾಡಬೇಕು ಮತ್ತು ಒಂದು ಹೊಸ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಜಯಂತಿ ಉತ್ಸವದ ಸದುದ್ದೇಶ ಎಂದರು. ಬಿಹಾರ ರಾಜ್ಯದಲ್ಲಿ ಜನಿಸಿದ ಡಾ.ಬಾಬು ಜಗಜೀವನ್ ಅವರು, ಬಾಲ್ಯದಲ್ಲಿ ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದರು. ವಿದ್ಯಾರ್ಥಿಗಳಿಗೆ ಮೂರು ಪಾತ್ರೆಗಳಲ್ಲಿ ಬೇರೆ ಬೇರೆ ನೀರನ್ನು ಇಟ್ಟಾಗ ಅದನ್ನು ಹೊಡೆದು ಹಾಕಿ ಒಂದು ಪಾತ್ರೆಯಲ್ಲಿ ಇಡಬೇಕು ಎಂದು ಸಮಾನತೆ ಸಾರಿದರು. ಅವರನ್ನು ಸಮಾನತೆಯ ಹರಿಕಾರ ಎಂದು ನಾವು ಅವರಿಗೆ ಕರೆಯುತ್ತೇವೆ ಎಂದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್ ಉದ್ಘಾಟಿಸಿದರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
ಗದಗ: ಭಾರತದಾದ್ಯಂತ ಕಾಂಗ್ರೆಸ್ ‘ಬೆಲೆ ಏರಿಕೆ ಮುಕ್ತ ಭಾರತ’ ಎಂಬ ಅಭಿಯಾನದಡಿಯಲ್ಲಿ ವಿನೂತನ ಹೋರಾಟವನ್ನು ನರಗುಂದ ತಾಲೂಕಿನ ಸೋಮಾಪೂರ ಓಣಿಯ ಐದು ಮತ್ತು ಹದಿನೆಂಟನೆಯ ವಾರ್ಡ್ ನ ಜನರು ಹಮ್ಮಿಕೊಂಡರು. ಎಐಸಿಸಿ ಮಾನವ ಹಕ್ಕುಗಳ ಘಟಕದಿಂದ ಅಧ್ಯಕ್ಷರಾದ ಶಿವಾನಂದ ಮಾಯಣ್ಣ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಬಿಜೆಪಿ ಸರಕಾರ ಹತ್ತೇದಿನದಲ್ಲಿ ಹನ್ನೊಂದು ಬಾರಿ ಪೆಟ್ರೊಲ್ ಬೆಲೆಯನ್ನು ಏರಿಕೆ ಮಾಡಿದೆ. ಇದೊಂದು ಸುಳಿಗೆ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ರಸಗೊಬ್ಬರಗಳ ವರ್ಷಕ್ಕೆ ಎರಡು ಕೋಟಿ ಇಪ್ಪತ್ತು ಲಕ್ಷ ಟನ್ ಅವಶ್ಯವಿದ್ದು, 2300ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ರೈತರಿಂದ ವಸೂಲಿ ಮಾಡಿದೆ. ಇದೊಂದು ಜನವಿರೋಧಿ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನರಗುಂದ ತಾಲೂಕಿನ ಸೋಮಾಪೂರ ಓಣಿಯ5 ಮತ್ತು 18ನೇಯ ವಾರ್ಡಿನ ಹಿರಿಯರಾದ ಬಸನಗೌಡ ಕ ಪಾಟೀಲ, ಚನ್ನಬಸುವ ಹುಲಜೋಗಿ, ಪಕ್ರುಸಾಬ ಬಿಳಗಿ, ವಿಠ್ಠಲ ಬಾರಕೇರ, ಶರಣಪ್ಪ ಹುಲಜೋಗಿ,…
ಸರಗೂರು: ತಾಲ್ಲೂಕಿನ ಕೆ ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಹುಂಡಿ ಗ್ರಾಮದಲ್ಲಿ ಸಾಲುಂಡಿ ಗ್ರಾಮದ ಚಿಕ್ಕಣ್ಣ ಎಂಬುವರು ಸರ್ಕಾರಿ ಜಾಗ ಗೋಮಾಳ ವನ್ನು ಒತ್ತುವರಿ ಮಾಡಿಕೊಂಡು ಅಲ್ಲಿಂದ ಮಣ್ಣು ಸಾಗಣಿಗೆ ಮಾಡಿರುವ ಆರೋಪ ಕೇಳಿ ಬಂದಿದೆ. ಚಿಕ್ಕಣ್ಣ ಅವರು ತನ್ನ ಜಮೀನು ಪಕ್ಕದಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು, ಅಲ್ಲಿದ ಗೋಮಾಳ ಜಾಗದ ಬೆಟ್ಟದಿಂದ ಅಕ್ರಮ ವಾಗಿ ಮಣ್ಣು ತೆಗೆದು ತಮ್ಮ ಜಮೀನಿಗೆ ತೆಗೆದುಕೊಂಡು ಬಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ವಿಚಾರವನ್ನು ಗ್ರಾಮಸ್ಥರು ಪ್ರಶ್ನಿಸಿದರೆ, ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.. ಚಿಕ್ಕಣ್ಣ ಪೋಲಿಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪ್ರಭಾವ ಬಳಸಿ ಅವರು ಈ ಕೆಲಸ ಮಾಡುತ್ತಿದ್ದಾರೆ. ಸರಗೂರು ತಾಲ್ಲೂಕಿನ ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಯವರು ಮತ್ತು ಚಿಕ್ಕಣ್ಣನ ಈ ವಿಚಾರಕ್ಕೆ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮಣ್ಣು ಅಕ್ರಮ ಗಣಿಗಾರಿಕೆ ನಡೆಸಿದರೂ ಕಂದಾಯ ಮತ್ತು ಅರಣ್ಯ…