Author: admin

ಬೇಗೂರು: ಡಿಎಸ್ ಎಸ್ ಅಲ್ಪಸಂಖ್ಯಾತರ ಅಧ್ಯಕ್ಷರು ಬೆಂಗಳೂರು ಇವರ ನೇತೃತ್ವದಲ್ಲಿ  ರವಿ ಸಿಂಗ್ ಹಾಗೂ ನಿಧಿ ಆಹುಜ, ಜಗನ್, ವಾಹಿದ್, ಜಗನ್ ಹಾಗೂ ಶಾಲಾ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಹುಳಿಮಾವಿನ ಸಮರ್ಥನಂ ವಿಕಲಚೇತನ ಮಕ್ಕಳ ಶಾಲೆ’ಯಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಅಬ್ದುಲ್ ಬೇಗೂರು ಈಗಾಗಲೇ ಅನೇಕ ರೀತಿಯಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿದ್ದು, ಕೋವಿಡ್ ಸಮಯದಲ್ಲಿ  ಅನೇಕರಿಗೆ ನಾನಾ ವಿಧದಲ್ಲಿ ಸಹಾಯವನ್ನು ಮಾಡಿದ್ದಾರೆ. ಅಬ್ದುಲ್ ಬೇಗೂರು, ರವಿ ಸಿಂಗ್, ನಿಧಿ ಅಹುಜ ಈ ಮೂವರು ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ. ರವಿ ಸಿಂಗ್ ಅವರ ಧರ್ಮಪತ್ನಿ ನಿಧಿ ಆಹುಜ ಅವರು ಕೂಡ ಈ ಸಾಮಾಜಿಕ ಕೆಲಸಗಳಿಗೆ ಕೈ ಜೋಡಿಸಿದ್ದಾರೆ. ಎಲ್ಲರೂ ನಮ್ಮ ಹೊಟ್ಟೆ ತುಂಬಿದರೆ ಸಾಕು ಎಂದು ಸುಮ್ಮನಿರುತ್ತಾರೆ. ಆದರೆ ಈ ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ಕೈಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಂಗಳೂರು:  ಫ್ರೀಡಂಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸೂಕ್ತ ಪೋಲಿಸ್  ಬಂದೋಬಸ್ತ್ ನೀಡುವಂತೆ  ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಡಿಸಿಪಿ ಅವರಿಗೆ ಹಿರಿಯೂರು ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಮಾಡಲಾಯಿತು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾರ್ಚ್ 15ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಗೆ ಸೂಕ್ತ ಭದ್ರತೆ ಒದಗಿಸುವಂತೆ ಉಪ್ಪಾರ್ ಪೇಟೆ ಪೊಲೀಸ್ ಠಾಣೆ ಡಿಸಿಪಿಗೆ ಮನವಿ ಮಾಡಲಾಯಿತು. ಸಮಾಜ ಸೇವಾ ರತ್ನ ಡಾ.ಹೆಚ್.ಎಸ್. ಬಿರಾವರ್ ರವರ ನೇತೃತ್ವದಲ್ಲಿ ಹಿರಿಯೂರು ತಾಲ್ಲೂಕಿನ ಭಾರತೀಯ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು.  ಹಿರಿಯೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ರವಿ ಅವರು ಪ್ರಸ್ತುತ ಉಪ್ಪಾರ್ ಪೇಟೆ ಎಸಿಪಿ ಆಗಿದ್ದು, ಇದೇ ವೇಳೆ ರವಿ ಅವರಿಗೆ  ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ  ಸನ್ಮಾನಿಸಲಾಯಿತು. ವರದಿ: ಮುರುಳಿಧರನ್ ಆರ್.,  (  ಚಿತ್ರದುರ್ಗ-…

Read More

ನವದೆಹಲಿ: ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆ ಸಿದ್ಧತೆಗಾಗಿ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದಲೇ ರಾಜ್ಯಕ್ಕೆ ‘ ಚುನಾವಣಾ ಸಿದ್ಧತಾ ತಂಡ ಕಳುಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ನಾಯಕರಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು  ತಿಳಿದುಬಂದಿದೆ . ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಶಮನಗೊಳಿಸುವ ಹಾಗೂ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯ ಗತಾಯ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗುರುವಾರ ರಾಹುಲ್‌ ಗಾಂಧಿ ಅವರು ದೆಹಲಿಯ ತಮ ನಿವಾಸದಲ್ಲಿ ರಾಜ್ಯ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು . ಈ ವೇಳೆ ಮುಂಬರುವ ಚುನಾ ವಣೆ ದೃಷ್ಟಿಯಿಂದ ಅಧ್ಯಯನ ನಡೆಸಲು , ರಣತಂತ್ರ ರೂಪಿಸಲು ಹಾಗೂ ಚುನಾವಣೆಯಲ್ಲಿ ಗೆಲ್ಲಲು ಕೈಗೊ ಳ್ಳಬೇಕಾದ ಕ್ರಮಗಳ ಕುರಿತು ಕೆಪಿಸಿಸಿ , ಎಐಸಿಸಿಗೆ ಸಲಹೆ ನೀಡಲು ಅನುವಾಗುವಂತೆ ಚುನಾವಣಾ ಸಿದ್ಧತಾ ತಂಡ ರಚನೆಯಾಗಲಿದೆ . ಈ ತಂಡ ಕಾಲ ಕಾಲಕ್ಕೆ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಸರ್ಕಾರದ ವಿರುದ್ಧದ ಯಾವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಎಂಬ…

Read More

ಮಾಯಸಂದ್ರ: ಫೆಬ್ರವರಿ 27ರಂದು ರಾಜ್ಯದ ವಿವಿಧೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಇರುವುದರಿಂದ ಎಲ್ಲೆಡೆ ಇಂದು ಜಾಥ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ಆಶಾ ಕಾರ್ಯಕರ್ತರು ಮತ್ತು ಶಾಲಾ ಶಿಕ್ಷಕರು ಮಕ್ಕಳ ಜೊತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ  ಶ್ರೀ ಸಿದ್ದರಾಮಯ್ಯ ( CBS ) ,ಆಶಾ ಕಾರ್ಯಕರ್ತರಾದ  ಭಾಗ್ಯಮ್ಮನವರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ವೆಂಕಟೇಶ ಜೆ ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸಿರಾ:  ಕಾರು ಅಪಘಾತಗೊಂಡು ಕಾರಿನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಸಮೀಪ ಕಾರು ಮಗುಚಿ ಬಿದ್ದಿದ್ದು, ಈ ಘಟನೆಯನ್ನು ಗಮನಿಸಿದ ಕೆ.ಸಿ.ವೀರೇಂದ್ರ ಪಪ್ಪಿ ಅವರು ತಕ್ಷಣವೇ ವ್ಯಕ್ತಿಯನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನೂ ಕೆ.ಸಿ.ವೀರೇಂದ್ರ ಪಪ್ಪಿ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ – ದಾವಣಗೆರೆ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಸದನದ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ಹಾಗೂ ಹರ್ಷ ಹತ್ಯೆ ಖಂಡಿಸಿ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್,  ಕಾಂಗ್ರೆಸ್  ನವರು ಕೇವಲ ತಮ್ಮ ಒಂದು ಹುಳುಕನ್ನು ಮರೆಮಾಚಲು ಅಮೂಲ್ಯವಾದ ಕಾರ್ಯಕಲಾಪಗಳ ಸಮಯವನ್ನು ನುಂಗಿಹಾಕಿ ಮಂಗಳವಾರ ಮತ್ತು ಬುಧವಾರದಿಂದ ಗಲಾಟೆಯನ್ನು ಮಾಡಿ ಕಲಾಪವನ್ನು ಹಾಳುಮಾಡುತ್ತಿದ್ದಾರೆ. ದೇಶದ ರಾಜ್ಯದ ಮತ್ತು ಜನರ ಕಷ್ಟಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಕೊಡದೆ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ವಿರೋಧವಾಗಿ ಕಾಂಗ್ರೆಸ್ ವರ್ತಿಸುತ್ತಿದೆ. ಹಿಜಾಬಿನ  ವಿಚಾರವನ್ನು ಮರೆಮಾಚಲು ಕೋರ್ಟಿನ ಮಧ್ಯಾಂತರ ಆದೇಶ ಇದ್ದರೂ ಕೂಡ ಎಲ್ಲೋ ಒಂದು ಕಡೆ ರಿವರ್ಸ್ ಆಗುತ್ತದೆ ಎಂದು ಹೇಳಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಈಶ್ವರಪ್ಪನವರ ಹೇಳಿಕೆ ಇಟ್ಟುಕೊಂಡು ಐದಾರು ದಿವಸಗಳಿಂದ ಸದನವನ್ನು ಹಾಳುಮಾಡುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಯಾರು ಕೂಡ ಪಾಠ ಕಲಿಸಿ ಕೊಡಬೇಕಾಗಿಲ್ಲ.…

Read More

ಪಾವಗಡ: ಪಾವಗಡ ಪಟ್ಟಣದ ಅಪಘಾತಗಳ ಕೇಂದ್ರ ಬಿಂದುವಾದ ತುಮಕೂರು ರಸ್ತೆ ಇಂಡೇನ್ ಗ್ಯಾಸ್ ಗೌಡೌನ್ ಮುಂಭಾಗದ ರಸ್ತೆ ತಿರುವಿನಲ್ಲಿ ಕೆಂಪು ದೀಪ ಅಳವಡಿಸುವಂತೆ  ಹೆಲ್ಪ್ ಸೊಸೈಟಿ ಒತ್ತಾಯಿಸಿದೆ. ಈ  ಪ್ರದೇಶ ಆಕ್ಸಿಡೆಂಟ್ ಝೋನ್ ಆಗಿದ್ದು, ಇಲ್ಲಿ ಸರಣಿ ಅಪಘಾತಗಳು ನಡೆಯುತ್ತಿದೆ. ಈ ಸಂಬಂಧ ರಸ್ತೆ ನಿರ್ವಹಣೆ ಕೆ-ಶಿಪ್ ನವರು ಅಥವಾ ಪಿ. ಡಬ್ಲ್ಯೂ. ಡಿ ಅಧಿಕಾರಿಗಳು ಈ ಕೂಡಲೇ ರಸ್ತೆ ತಿರುವಿನಲ್ಲಿ ಕೆಂಪುದೀಪ ಅಳವಡಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಒತ್ತಾಯಿಸಿದರು. ಖಾಸಗಿ ಕಂಪನಿಯ ನಿರ್ಲಕ್ಷ ಹಾಗೂ ನೀರು ಸರಬರಾಜು ಕಂಪನಿಯ ಕಾಮಗಾರಿಯ ನಿರ್ಲಕ್ಷದಿಂದ ಇಂದು ಬೆಳ್ಳಂಬೆಳಗ್ಗೆ ತಾಲ್ಲೂಕು ಕಚೇರಿಯ ಅಧಿಕಾರಿಯೊಬ್ಬರಿಗೆ ಸದರಿ ಸ್ಥಳದಲ್ಲಿ ಅಪಘಾತವಾಗಿದ್ದು ಮತ್ತಷ್ಟು ಅಪಘಾತ, ಸಾವು, ನೋವು ಸಂಭವಿಸುವ ಅಪಾಯದ ಹಿಲ್ಲೆಯಲ್ಲಿ ಹೆಲ್ಪ್ ಸೊಸೈಟಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ವಿಚಾರವನ್ನು ತಂದಿದ್ದು,  ಕೂಡಲೇ ಕೆ -ಶಿಪ್ ಅಧಿಕಾರಿ ಹಾಗೂ ಪಿ. ಡಬ್ಲ್ಯೂ. ಡಿ ಅಧಿಕಾರಿಗಳಾದ ಅನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ಕೂಡಲೇ ಅಪಘಾತ ತಪ್ಪಿಸಲು…

Read More

ಗುಬ್ಬಿ:  ತಾಲ್ಲೂಕಿನ ಎಂ.ಎನ್. ಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಅಮಾನತು ಮಾಡುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮತ್ತು ಮುಖಂಡರು ಆಗ್ರಹಿಸಿದ್ದಾರೆ. ಎಂ.ಎನ್. ಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಹಾಗೂ ಇತರ ಸಹೋದ್ಯೋಗಿಗಳು ಮಾದಿಗ ಸಮಾಜದ ಆಹಾರ ಪದ್ಧತಿ ಮತ್ತು ಮಹಿಳಾ ಪಿ ಡಿ ಒ ಬಗ್ಗೆ ಅಗೌರವದಿಂದ ಮಾತನಾಡಿದ್ದು, ಮಹಿಳೆಯ ಬಗ್ಗೆ ತೇಜೋವಧೆ ಮಾಡಿದ್ದಾರೆ ಜೊತೆಗೆ ತಾಲೂಕು ಮಟ್ಟದ ಅಧಿಕಾರಿಯ ಬಗ್ಗೆ ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ದಲಿತ ಸಮುದಾಯಕ್ಕೆ ಅವಮಾನವಾಗಿದೆ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ತಾಲೂಕು ಕಚೇರಿಯ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಲಕ್ಕೇನಹಳ್ಳಿ ನರಸೀಯಪ್ಪ, ಚೇಳೂರು ಬಸವರಾಜು,  ಕುಂದುರನಹಳ್ಳಿ ನಟರಾಜ್, ಮಾರಶೆಟ್ಟಿಹಳ್ಳಿ ಬಸವರಾಜು,…

Read More

ತುಮಕೂರು: ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿದ್ದು, ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪಕ್ಷ  ಬೆಂಬಲವಾಗಿ ನಿಂತಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ಆರೋಪಿಗಳನ್ನು  ಬಂಧಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದರು. ಬಿಜೆಪಿ ಪಕ್ಷದ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಇಡೀ ಸದನವನ್ನು ಹಾಗೂ ಸದನದ ಕಾರ್ಯಕಲಾಪಗಳನ್ನು ನಡೆಯಲು ಬಿಡದೆ ತಮ್ಮ ಮೊಂಡುತನ ಪ್ರದರ್ಶನ ಮಾಡುವ ಮೂಲಕ ಇಡೀ ಅಧಿವೇಶನದ ಕಲಾಪವನ್ನು ಹಾಳುಮಾಡಿದ್ದಾರೆ .  ರಾಜ್ಯದ ಅಭಿವೃದ್ಧಿ ಪರವಾಗಿ ಸಾಕಷ್ಟು ವಿಚಾರಗಳನ್ನು ಚರ್ಚಿಸ ಬೇಕಿತ್ತು. ಆದರೆ ಕೇವಲ ಒಂದು ವಿಚಾರವನ್ನು ಇಟ್ಟುಕೊಂಡು ಅಧಿವೇಶನವನ್ನು ನಡೆಯಲು ಬಿಡದೆ ಧರಣಿ ನಡೆಸಿ ಅಧಿವೇಶನವನ್ನು…

Read More

ನಿಮ್ಮ ಸೇನಾ ಪಡೆಗಳನ್ನು ಹಿಂಪಡೆಯಿರಿ ಮತ್ತು ಯುದ್ಧವನ್ನು ನಿಲ್ಲಿಸಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಮನವಿ ಮಾಡಿದ್ದಾರೆ. ಯುದ್ಧ ಘೋಷಣೆಗೂ ಮುನ್ನಾ ಮಾತನಾಡಿರುವ ಅವರು, ರಷ್ಯಾ ಅಧ್ಯಕ್ಷರು ಕೂಡಲೇ ಮಾನವೀಯತೆ ಹೆಸರಿನಲ್ಲಿ ಯುದ್ಧವನ್ನು ನಿಲ್ಲಿಸಬೇಕು. ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಯುದ್ಧದಿಂದ ಉಕ್ರೇನ್ ಮೇಲೆ ಪರಿಣಾಮ ಬೀರಲಿದೆ ಮತ್ತು ಜಾಗತಿಕ ಆರ್ಥಿಕತೆ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ. ಯುದ್ಧದ ಪರಿಸ್ಥಿತಿಯನ್ನು ಅವಲೋಕಿಸಲು ಅವರು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More